ಖ್ಯಾತ ಚಿತ್ರ ನಿರ್ಮಾಪಕ ರಾಜ್ ಕುಮಾರ್ ಬರ್ಜಾತ್ಯ ನಿಧನ
'ಹಮ್ ಆಪ್ ಕೆ ಹೈ ಕೌನ್' ಚಿತ್ರದ ನಿರ್ಮಾಪಕ ರಾಜ್ ಕುಮಾರ್ ಬರ್ಜಾತ್ಯ ಇಂದು ವಿಧಿವಶರಾಗಿದ್ದಾರೆ. ಇಂದು ಬೆಳಗ್ಗೆ ಮುಂಬೈನ ಶ್ರೀ ಹೆಚ್ ಎನ್ ರಿಲಯನ್ಸ್ ಫೌಂಡೆಷನ್ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ.
ರಾಜ್ ಕುಮಾರ್ ಬರ್ಜಾತ್ಯ ನಿಧನ ವಾರ್ತೆಯನ್ನು ಬಾಲಿವುಡ್ ನ ಖ್ಯಾತ ವಿಮರ್ಶಕ ತರಣ್ ಆದರ್ಶ್ ಖಚಿತಪಡಿಸಿದ್ದು, ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಸಂತಾಪ ಸೂಚಿಸಿದ್ದಾರೆ.
ರಾಜ್ ಕುಮಾರ್ ಬರ್ಜಾತ್ಯ ಅವರ ಒಡೆತನದಲ್ಲಿ ರಾಜ್ ಶ್ರೀ ಪ್ರೊಡಕ್ಷನ್ಸ್ ಇತ್ತು. ಈ ಸಂಸ್ಥೆಯನ್ನು ಅವರ ತಂದೆ ತಾರಚಂದ್ ಬರ್ಜಾತ್ಯ ಶುರು ಮಾಡಿದ್ದರು. ಈ ನಿರ್ಮಾಣ ಸಂಸ್ಥೆ ಹೆಚ್ಚು ಕುಟುಂಬಿಕ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿತ್ತು. ರಾಜ್ ಕುಮಾರ್ ಬರ್ಜಾತ್ಯ ಅವರ ಪುತ್ರ ಸೂರಜ್ ಬರ್ಜಾತ್ಯ ಅವರು ಸಹ ಚಿತ್ರ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ತೊಡಗಿದ್ದರು.

ಅನೇಕ ವರ್ಷಗಳಿಂದ ಬಾಲಿವುಡ್ ನಲ್ಲಿ ಇದ್ದ ರಾಜ್ ಕುಮಾರ್ ಬರ್ಜಾತ್ಯ ಅನೇಕ ಸಿನಿಮಾಗಳನ್ನು ಮಾಡಿದ್ದಾರೆ. ಇವುಗಳಲ್ಲಿ ಸಲ್ಮಾನ್ ಖಾನ್ ನಟನೆಯ 'ಪ್ರೇಮ್ ರತನ್ ಧನ್ ಪಾಯೋ', 'ಹಮ್ ಆಪ್ ಕೆ ಹೈ ಕೌನ್', 'ವಿವಾಹ್' ಪ್ರಮುಖವಾಗಿವೆ. ಇವರ ನಿರ್ಮಾಣದ ಚಿತ್ರಗಳಿಗೆ ಫಿಲ್ಮ್ ಫೇರ್ ಪ್ರಶಸ್ತಿಗಳು ಸಹ ಬಂದಿವೆ.
ರಾಜ್ ಕುಮಾರ್ ಬರ್ಜಾತ್ಯ ತಮ್ಮ ಪತ್ನಿ ಸುಧಾ ಬರ್ಜಾತ್ಯ ಹಾಗೂ ಮಗ ಸೂರಜ್ ಬರ್ಜಾತ್ಯ ಅವರನ್ನು ಅಗಲಿದ್ದಾರೆ.


Click it and Unblock the Notifications











