40ನೇ ವಯಸ್ಸಿನಲ್ಲಿ ಹಸೆಮಣೆ ಏರಲು ಸಜ್ಜಾದ ಹುಮಾ ಖುರೇಷಿ ; 'ಟಾಕ್ಸಿಕ್' ನಟಿಯ ಕೈ ಹಿಡಿಯುತ್ತಿರುವ ಹುಡುಗ ಯಾರು?

ಪ್ರೀತಿ ಎನ್ನುವುದು ಕೇವಲ ಎರಡೇ ಎರಡು ಅಕ್ಷರಗಳ ಪದವಲ್ಲ. ಬದಲಿಗೆ ಪ್ರೀತಿ ಎಂಬ ಪದವು ಅನೇಕ ಅರ್ಥಗಳಿಂದ ಕೂಡಿದೆ. ಇದು ಅತಿ ಹೆಚ್ಚು ಪ್ರಭಾವಶಾಲಿ ಕೂಡ ಹೌದು. ಪ್ರೀತಿಯಿಂದ ಇಡೀ ಜಗತ್ತನ್ನೇ ಜಯಿಸಬಹುದಂತೆ. ಇನ್ನು ಪ್ರೀತಿ ಎಂದರೆ ಸಂತೋಷ ಅದರ ಮಾಯೆಯೇ ಅಂತಹದು ಎನ್ನುವುದು ಅನುಭವಿಸಿದವರ ಅಭಿಪ್ರಾಯ. ಪ್ರೀತಿಸುವ ವ್ಯಕ್ತಿಯನ್ನು ಅಳೆಯಲಾಗದಷ್ಟು, ಅಂತ್ಯ ಇಲ್ಲದಷ್ಟು ಪ್ರೀತಿಸುವ ಅನೇಕರು ಪ್ರೀತಿಯ ಸುಖದ ಕ್ಷಣಗಳನ್ನು ಗುನುಗುತ್ತಿರುತ್ತಾರೆ.

ಚಿತ್ರರಂಗದಲ್ಲಿ ಕೂಡ ಇವರ ಸಂಖ್ಯೆ ಹೆಚ್ಚಿದೆ.ಆ ಪೈಕಿ ಪ್ರೀತಿಯ ಅಮಲೇರಿಸಿಕೊಂಡವರಲ್ಲಿ ಬಾಲಿವುಡ್‌ನ ಬೆಡಗಿ ಹುಮಾ ಖುರೇಷಿ ಕೂಡ ಒಬ್ಬರು. ಹೌದು ಹುಮಾ ಖುರೇಷಿ.. ಹಿಂದಿ ಚಿತ್ರರಂಗದ ''ಮಹಾರಾಣಿ''.ಕಳೆದ 13 ವರ್ಷಗಳಿಂದ ಹತ್ತು ಹಲವು ಚಿತ್ರಗಳನ್ನು ಮಾಡಿರುವ ಹುಮಾ ಖುರೇಷಿ ಕೇವಲ ರೂಪವತಿ ಅಷ್ಟೇ ಅಲ್ಲ ಅಭಿನಯದ ವಿಚಾರದಲ್ಲಿ ಕೂಡ ಇವರದ್ದು ಎತ್ತಿದ ಕೈ. ''ಗ್ಯಾಂಗ್ಸ್ ಆಫ್ ವಾಸೇಪುರ್'', ''ಏಕ್ ಥಿ ಡಾಯನ್'', ''ಬದ್ಲಾಪುರ್''.. ಇದಕ್ಕೆ ಕೈಗನ್ನಡಿ.

huma-qureshi-and-rachit-singh-to-marry-in-october-inside-their-private-wedding-plans

ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ'' ಕಾಲಾ'' ಚಿತ್ರದ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಬಂದಿದ್ದ ಹುಮಾ ಖುರೇಷಿ ಜಗತ್ತಿನ ಗಮನ ಸೆಳೆಯುವ ನಿಟ್ಟಿನಲ್ಲಿ ಯಶ್ ನಿರ್ಮಾಣ ಮಾಡಿ ಅಭಿನಯಿಸುತ್ತಿರುವ ''ಟಾಕ್ಸಿಕ್'' ಚಿತ್ರದಲ್ಲಿ ಕೂಡ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಎಲಿಜಬೆತ್ ಪಾತ್ರವನ್ನು ನಿರ್ವಹಿಸಿದ್ದಾರೆ.

ಈ ಹಿಂದೆ ''ಹಾಲಿವುಡ್ ರಿಪೋರ್ಟ್‌ರ್‌''ಗೆ ನೀಡಿದ ಸಂದರ್ಶನದಲ್ಲಿ ಯಶ್ ಮತ್ತು ಟಾಕ್ಸಿಕ್ ಚಿತ್ರವನ್ನು ಬಾಯ್ತುಂಬ ಹೊಗಳಿದ್ದಾರೆ. ಇಂಥಾ ಹುಮಾ ಖುರೀಷಿ ಈಗ ತಮ್ಮ 40ನ ವಯಸ್ಸಿನಲ್ಲಿ ಮದುವೆಯ ಬಂಧನಕ್ಕೊಳಗಾಗಲು ಅಣಿಯಾಗಿದ್ದಾರೆ.

ಹೌದು, ''ಹಿಂದೂಸ್ತಾನ್ ಟೈಮ್ಸ್'' ವರದಿಯ ಪ್ರಕಾರ ಹುಮಾ ಖುರೇಶಿ ತಮ್ಮ ಬಹುಕಾಲದ ಗೆಳೆಯ ರಚಿತ್ ಸಿಂಗ್ ಜೊತೆ ಅಕ್ಟೋಬರ್ ಅಥವಾ ನವೆಂಬರ್ ನಲ್ಲಿ ಹೊಸ ಬದುಕಿಗೆ ಮುನ್ನುಡಿ ಬರೆಯಲಿದ್ದಾರೆ.

ಇವರ ಈ ಮದುವೆ ಸಮಾರಂಭ ತುಂಬಾನೇ ಆಪ್ತವಾಗಿ ನಡೆಯಲಿದ್ದು, ಮದುವೆಯಲ್ಲಿ ಕೇವಲ ಕುಟುಂಬದ ಸದಸ್ಯರು ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗವಹಿಸಲಿದ್ದಾರೆ. ಮದುವೆಯ ನಂತರ ಚಿತ್ರರಂಗದ ಸ್ನೇಹಿತರಿಗಾಗಿ ಮುಂಬೈನಲ್ಲಿ ಅದ್ದೂರಿ ರಿಸೆಪ್ಷನ್ ಹಮ್ಮಿಕೊಳ್ಳುವ ಯೋಚನೆಯಲ್ಲಿ ಹುಮಾ ಇದ್ದಾರೆ, ಮದುವೆಯ ಸಿದ್ದತೆ ಈಗಾಗಲೇ ಆರಂಭವಾಗಿದೆ ಎಂದು ''ಹಿಂದೂಸ್ತಾನ್ ಟೈಮ್ಸ್'' ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.

huma-qureshi-and-rachit-singh-to-marry-in-october-inside-their-private-wedding-plans

ಅಂದ್ಹಾಗೇ ಹುಮಾ ಖುರೇಷಿ ಹೃದಯ ಗೆದ್ದ ರಚಿತ್ ಸಿಂಗ್, ಫಿಟ್ನೆಸ್ ತರಬೇತುದಾರ. ಆಲಿಯಾ ಭಟ್, ರಣ್‌ವೀರ್ ಸಿಂಗ್ ಸೇರಿ ಹಲವು ತಾರೆಯರಿಗೆ ಜಿಮ್‌ನಲ್ಲಿ ಹೇಗೆ ಬೆವರಳಿಸಬೇಕು ಎನ್ನುವುದನ್ನು ಇವರು ಹೇಳಿ ಕೊಡುತ್ತಾರೆ. ಇಷ್ಟೇ ಅಲ್ಲದೇ ನಟನಾಗಿ ಕೂಡ ಚಿತ್ರರಂಗವನ್ನು ಪ್ರವೇಶಿಸಿರುವ ರಚಿತ್ ''ಕರ್ಮ ಕಾಲಿಂಗ್'' ಎಂಬ ಚಿತ್ರದಲ್ಲಿ ಕೂಡ ಅಭಿನಯಿಸಿದ್ದಾರೆ.

ಇನ್ನೂ ಹುಮಾ ಮತ್ತು ರಚಿತ್ ಮೊದಲ ಬಾರಿ ಭೇಟಿಯಾಗಿದ್ದೆಲ್ಲಿ..? ಇಬ್ಬರ ನಡುವೆ ಪ್ರೇಮಾಂಕುರ ಆಗಿದ್ಹೇಗೆ..? ಎನ್ನುವುದಕ್ಕೆ ಉತ್ತರ ಇಲ್ಲವಾದರು 2024ರಲ್ಲಿ ಮಾರ್ಚ್ 2024 ರಲ್ಲಿ ಹಾಲಿವುಡ್ ಸಿಂಗರ್ ಎಡ್ ಶೀರನ್‌ಗಾಗಿ ಶಾರುಖ್ ಮತ್ತು ಗೌರಿ ಖಾನ್ ಹಮ್ಮಿಕೊಂಡಿದ್ದ ಪಾರ್ಟಿಯಲ್ಲಿ ಇಬ್ಬರು ಜೊತೆಯಲ್ಲಿ ಕಾಣಿಸಿಕೊಂಡಿದ್ದರು. ಈ ಪಾರ್ಟಿಯಲ್ಲಿ ಇವರ ಆತ್ಮೀಯತೆ ಹಲವರಲ್ಲಿ ಅನುಮಾನವನ್ನು ಮೂಡಿಸಿತ್ತು. ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಭಾಲ್ ಮದುವೆಯಲ್ಲಿ ಕೂಡ ಇಬ್ಬರು ಭಾಗವಹಿಸಿದ್ದರು.

ಇನ್ನುಳಿದಂತೆ ರಚಿತ್ ಸಿಂಗ್ ಅವರಿಗಿಂತ ಮೊದಲು ಹುಮಾ ಖುರೇಷಿ ಹೆಸರು ನಿರ್ಮಾಪಕ ಮುದಸರ್ ಅಜೀಜ್ ಜೊತೆ ಥಳುಕು ಹಾಕಿಕೊಂಡಿತ್ತು. ಆದರೆ 2022ರಲ್ಲಿ ಸಂಬಂಧ ಮುರಿದು ಬಿತ್ತು. ಸದ್ಯ ರಚಿತ್ ಸಿಂಗ್ ಅವರ ಜೊತೆ ಹುಮಾ ಖುರೇಷಿ ಈ ವರ್ಷಾಂತ್ಯದಲ್ಲಿ ಮದುವೆಯ ಬಂಧನಕ್ಕೊಳಗಾಗಲಿದ್ಧಾರೆ ಎನ್ನುವ ಸುದ್ದಿ ಹಬ್ಬಿದ್ದು, ಹುಮಾ ಅಧಿಕೃತವಾಗಿ ತಮ್ಮ ಮದುವೆಯ ಸುದ್ದಿಯನ್ನು ಹಂಚಿಕೊಳ್ಳುತ್ತಾರಾ..? ಎನ್ನುವುದನ್ನು ಕಾದು ನೋಡಬೇಕಿದೆ.

English summary
It’s official! Huma Qureshi is set to tie the knot with Rachit Singh this October. We’ve got the scoop on their private wedding plans and the grand Mumbai reception. Don’t miss the deets!
Read more about: marriage actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X