For Quick Alerts
  ALLOW NOTIFICATIONS  
  For Daily Alerts

  ದೆಹಲಿಯಲ್ಲಿ 100 ಬೆಡ್‌ಗಳ ಆಸ್ಪತ್ರೆ ನಿರ್ಮಿಸಲು ಮುಂದಾದ ಹುಮಾ ಖುರೇಷಿ

  |

  ದೆಹಲಿಯಲ್ಲಿ ಕೊರೊನಾ ವೈರಸ್ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಬೆಡ್ ಸಮಸ್ಯೆ, ಅಕ್ಸಿಜನ್ ಸಮಸ್ಯೆಯಾಗದಂತೆ ಸರ್ಕಾರದ ಜೊತೆ ಹಲವು ಎನ್‌ಜಿಓ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ. ಇದೀಗ, ರಾಷ್ಟ್ರ ರಾಜಧಾನಿ ಜನರಿಗೆ ಸಹಾಯ ಮಾಡಲು ಬಾಲಿವುಡ್ ನಟಿ ಹುಮಾ ಖುರೇಶಿ ಮುಂದಾಗಿದ್ದಾರೆ.

  ಈ ಕುರಿತು ಸ್ವತಃ ಹುಮಾ ಖುರೇಶಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. 'ದೆಹಲಿಯಲ್ಲಿ ಕೊರೊನಾ ವೈರಸ್ ತಡೆಗಟ್ಟಲು ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಲು ನಾವು ಕೆಲಸ ಮಾಡುತ್ತಿದ್ದೇವೆ. 100 ಬೆಡ್‌ಗಳ ಜೊತೆಗೆ ಆಮ್ಲಜನಕ ಸಾಂದ್ರಕದ ವ್ಯವಸ್ಥೆ ಮಾಡಲಾಗುತ್ತದೆ. ದಯವಿಟ್ಟು ನಮಗೆ ಬೆಂಬಲ ನೀಡಿ' ಎಂದು ಮನವಿ ಮಾಡಿದ್ದಾರೆ.

  5 ದಿನದಲ್ಲಿ ಅನುಷ್ಕಾ-ಕೊಹ್ಲಿ ದಂಪತಿ ಸಂಗ್ರಹಿಸಿದ ದೇಣಿಗೆ ಎಷ್ಟು?5 ದಿನದಲ್ಲಿ ಅನುಷ್ಕಾ-ಕೊಹ್ಲಿ ದಂಪತಿ ಸಂಗ್ರಹಿಸಿದ ದೇಣಿಗೆ ಎಷ್ಟು?

  ಕೊರೊನಾ ವೈರಸ್ ಎರಡನೇ ಅಲೆಯಲ್ಲಿ ಬಹಳ ಸಾವು-ನೋವು ಉಂಟು ಮಾಡಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ನಟ ಸೋನು ಸೂದ್, ಪ್ರಿಯಾಂಕಾ ಚೋಪ್ರಾ, ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್, ವರುಣ್ ಧವನ್ ಸೇರಿದಂತೆ ಹಲವು ಸಾರ್ವಜನಿಕರಿಗೆ ಸಹಾಯ ಮಾಡುತ್ತಿದ್ದಾರೆ.

  ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಂಪತಿ ನಿಧಿ ಸಂಗ್ರಹ ಮಾಡುತ್ತಿದ್ದು, 5 ದಿನದಲ್ಲಿ ಐದು ಕೋಟಿ ಹಣ ಬಂದಿದೆ. ಈ ಹಣದಿಂದ ದೇಶಾದ್ಯಂತದ ಆಸ್ಪತ್ರೆಗಳಿಗೆ ಆಮ್ಲಜನಕ ಸಾಂದ್ರಕಗಳು ಒದಗಿಸುವ ಉದ್ದೇಶ ಹೊಂದಿದೆ.

  Ragini Dwivedi, Corona Vaccination ಹಾಕಿಸಿಕೊಂಡ್ಮೇಲೆ ಏನಾಗುತ್ತೆ?ಎಲ್ಲೆಲ್ಲಿ ಸಿಗುತ್ತೆ ವ್ಯಾಕ್ಸಿನೇಷನ್?

  ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, 'ಆರ್ಮಿ ಆಫ್ ದಿ ಡೆಡ್' ಪ್ರಾಜೆಕ್ಟ್ ಮೂಲಕ ಹುಮಾ ಖುರೇಷಿ ಶೀಘ್ರದಲ್ಲೇ ಹಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಅಕ್ಷಯ್ ಕುಮಾರ್ ಅಭಿನಯದ 'ಬೆಲ್ ಬಾಟಮ್' ಸಿನಿಮಾದಲ್ಲಿ ಹುಮಾ ಖುರೇಶಿ ನಟಿಸಿದ್ದಾರೆ.

  English summary
  Bollywood actress Huma Qureshi Planning to build a 100-bed hospital facility in Delhi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X