ಕ್ಯಾಮರಾ ಎದುರು ನಾನು ಯಾವತ್ತು ಬೆತ್ತಲಾಗಲಾರೆ ; ಟಾಕ್ಸಿಕ್ ಚೆಲುವೆಯ ಖಡಕ್ ಮಾತು
ಹೇಳಿ ಕೇಳಿ ಇದು ಕಲರ್‌ಫುಲ್ ಲೋಕ. ಈ ಲೋಕದಲ್ಲಿ ಎಲ್ಲವೂ ರಂಗು ರಂಗಾಗಿರಬೇಕು. ಇಂತಹ ಪ್ರಪಂಚದಲ್ಲಿ ಭದ್ರವಾಗಿ ನೆಲೆಯೂರಬೇಕು ಅಂದರೆ, ಸಾಧ್ಯವಾದಷ್ಟು ಕಡಿಮೆ ಬಟ್ಟೆಯನ್ನು ಧರಿಸಬೇಕು, ಮೈಮಾಟವನ್ನು ಪ್ರದರ್ಶನಕ್ಕೆ ಇಡಬೇಕು ಅನ್ನುವ ಕಲ್ಪನೆ ಅನೇಕ ನಾಯಕಿಯರಲ್ಲಿದೆ.
ಇನ್ನೂ ಇದು ಸೊಶಿಯಲ್ ಮೀಡಿಯಾ ಕಾಲ. ಈ ''5G'' ಕಾಲದಲ್ಲಿ ಅಂಗ ಪ್ರದರ್ಶನ ಮಾಡುವುದು.. ಫೋಟೊಗೆ ಪೋಸು ಕೊಡುವುದು.. ಈಗೀಗ ತೀರಾ ಕಾಮನ್ ಆಗಿ ಬಿಟ್ಟಿದೆ. ಎಲ್ಲವೂ ಶೀಘ್ರವಾಗಿಯೇ ಆಗಬೇಕೆಂಬ ಹುಂಬತನದಲ್ಲಿ, ಜನ ಕೂಡ ತಮ್ಮ ''ಬೆತ್ತಲೆ'' ರೂಪ ನೋಡಲು ಬಯಸುತ್ತಾರೆ ಎಂದು ತಪ್ಪು ತಿಳಿದುಕೊಳ್ಳುವ ಸಾಕಷ್ಟು ಮಂದಿ ಇಂತಹ ಕುಕೃತ್ಯಗಳನ್ನು ಎಗ್ಗಿಲ್ಲದೇ ಸಿಗ್ಗಿಲ್ಲದೇ ಮಾಡುತ್ತಲೇ ಇರುತ್ತಾರೆ.

ಮತ್ತೂ ಕೆಲವೊಮ್ಮೆ ಚಿತ್ರರಂಗದಲ್ಲಿಯೂ ಕೂಡ ನಾಯಕಿಯರ ಈ ಬೋಲ್ಡ್ ಥಿಂಕಿಂಗ್‌ನ್ನೇ ಎನ್‌ಕ್ಯಾಶ್ ಮಾಡಿಕೊಂಡು ಕ್ಯಾಶ್ ಎಣಿಸಲು ಹಲವರು ಮುಂದಾಗುತ್ತಾರೆ. ಚಿತ್ರಕ್ಕೆ ಪೂರಕವಾಗಿರಲಿ ಇಲ್ಲದಿರಲಿ ಚಿತ್ರದಲ್ಲಿ ಹಸಿ ಬಿಸಿ ದೃಶ್ಯಗಳನ್ನು ಸೇರಿಸುತ್ತಾರೆ. ಇನ್ನೂ ಕೆಲವೊಮ್ಮೆ ನಾಯಕಿಯರ ಅತಿರೇಕದ ಬೋಲ್ಡ್ ದೃಶ್ಯಗಳನ್ನು ಕೂಡ ತೋರಿಸುತ್ತಾರೆ.
ಆಗಲೇ ಹೇಳಿದಂತೆ ಹಲವು ಚೆಲುವೆಯರು ಇಂತಹ ಸನ್ನಿವೇಶಗಳನ್ನು ಯಾವುದೇ ಅಳುಕಿಲ್ಲದೇ ಮಾಡುತ್ತಾರೆ. ಹಣದ ದಾಹ, ಜನಪ್ರಿಯತೆಯ ಹುಚ್ಚಿಂದ ಎಲ್ಲದಕ್ಕೂ ತಲೆಯಾಡಿಸುತ್ತಾರೆ. ಹಾಗಂಥ ಎಲ್ಲರು ಈ ಸಾಲಿಗೆ ಸೇರುವುದಿಲ್ಲ. ಅಲ್ಲೊಬ್ಬರು.. ಇಲ್ಲೊಬ್ಬರು.. ಇದಕ್ಕೆ ತದ್ವಿರುದ್ದವಾಗಿರುತ್ತಾರೆ. ಹಣ, ಅವಕಾಶ ಮತ್ತು ಜನಪ್ರಿಯತೆಗಿಂತ ಇವರಿಗೆ ಆತ್ಮ ಗೌರವ ಹೆಚ್ಚಿರುತ್ತೆ. ಉದಾಹರಣೆಗೆ ಹುಮಾ ಖುರೇಶಿ.
ಹೌದು, ಹುಮಾ ಖುರೇಶಿ.. ಬಾಲಿವುಡ್‌ನ ರೂಪವತಿ. ಅಭಿನಯದ ವಿಚಾರದಲ್ಲಿ ಕೂಡ ಇವರದ್ದು ಎತ್ತಿದ ಕೈ. ''ಗ್ಯಾಂಗ್ಸ್ ಆಫ್ ವಾಸೇಪುರ್''.. ''ಏಕ್ ಥಿ ಡಾಯನ್''... ''ಬದ್ಲಾಪುರ್''.. ''ಮಹಾರಾಣಿ- 1-2 & 3'' ಎಂಬ ವೆಬ್ ಸರಣಿ ಇವರ ಅಭಿನಯ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ.
ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ''ಕಾಲಾ'' ಚಿತ್ರದ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಬಂದಿದ್ದ ಹುಮಾ ಖುರೇಶಿ ಸದ್ಯ ''ಟಾಕ್ಸಿಕ್'' ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಹೋದಲ್ಲಿ ಬಂದಲ್ಲಿ ಯಶ್ ಗುಣಗಾನ ಮಾಡುತ್ತಿದ್ದಾರೆ. ''ಟಾಕ್ಸಿಕ್'' ಕುರಿತು ತುಂಬಾನೇ ಆತ್ಮವಿಶ್ವಾಸದ ಮಾತುಗಳನ್ನು ಕೂಡ ಆಡುತ್ತಿದ್ದಾರೆ. ಇದೇ ಸಮಯದಲ್ಲಿ ನನಗೆ ನನ್ನದೇ ಆದ ಇತಿ ಮಿತಿಗಳಿವೆ. ಜವಾಬ್ಧಾರಿಗಳಿವೆ. ಕ್ಯಾಮರಾ ಎದುರು ನಾನು ಯಾವತ್ತು ಬೆತ್ತಲಾಗಲಾರೆ ಎಂದಿದ್ಧಾರೆ.

ಬೇಬಿ ಡು ಡೈ ಡು : ಹುಮಾ ಕನವರಿಕೆ
ಚಿತ್ರರಂಗದಲ್ಲಿ ಒಂದೊಂದೇ ಮೆಟ್ಟಿಲನ್ನೇರುತ್ತಾ ಬಂದಿರುವ ಹುಮಾ ಈಗ ಕೇವಲ ನಾಯಕಿ ಮಾತ್ರ ಅಲ್ಲ. ನಿರ್ಮಾಪಕಿ ಕೂಡ ಹೌದು. ಈಗಾಗಲೇ 'ಡಬಲ್ ಎಕ್ಸ್‌ಎಲ್'' ಚಿತ್ರವನ್ನು ನಿರ್ಮಾಣ ಮಾಡಿರುವ ಹುಮಾ ಖುರೇಶಿ ಸದ್ಯ ''ಬೇಬಿ ಡು ಡೈ ಡು'' ಚಿತ್ರಕ್ಕೆ ಕೂಡ ಹಣ ಹೂಡಿದ್ದಾರೆ. ಈ ಚಿತ್ರ ಕಳೆದ ವಾರ (ಜುಲೈ 3) ಬಿಡುಗಡೆಯಾಗಿದೆ. ಈ ಹಿನ್ನೆಲೆ ಚಿತ್ರದ ಪ್ರಚಾರವನ್ನು ಮಾಡುತ್ತಿರುವ ಹುಮಾ ಖುರೇಶಿ ಹಲವು ಕಡೆ ಸಂದರ್ಶನ ನೀಡುತ್ತಿದ್ದಾರೆ. ಹೀಗೆ ನೀಡಿದ ಸಂದರ್ಶನವೊಂದರಲ್ಲಿ ಕೇಳಲಾದ ''ಬೋಲ್ಡ್'' ಪ್ರಶ್ನೆಗೆ ಹುಮಾ ಉತ್ತರ ನೀಡಿದ್ದಾರೆ.
ಹುಮಾ ಹೇಳಿದ್ದೇನು..?
ಈ ಕುರಿತು ಮಾತನಾಡಿರುವ ಹುಮಾ ಖುರೇಶಿ, ನನ್ನ ವೃತ್ತಿ ಬದುಕಿನಲ್ಲಿ ನಾನು ಇಲ್ಲಿಯವರೆಗೆ ನ್ಯೂಡ್ ಸೀನ್ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ ಎಂದಿದ್ದಾರೆ.
ಮುಂದುವರೆದು ತಮ್ಮ ಈ ನಿರ್ಧಾರದ ಹಿಂದಿನ ಕಾರಣವನ್ನು ಕೂಡ ಹೇಳಿರುವ ಹುಮಾ ಖುರೇಶಿ, ನನಗೆ ನನ್ನದೇ ಆದ ಕುಟುಂಬ ಇದೆ. ತಂದೆ, ನನ್ನ ಸಹೋದರ, ನನ್ನ ಇಡೀ ಫ್ಯಾಮಿಲಿ ಇದೆ. ನನ್ನಿಂದ ಅವರಿಗೆ ಮುಜುಗರ ಆಗಬಾರದು, ಅಂತಹ ಕೆಲಸ ಮಾಡಲು ನನಗೆ ಇಷ್ಟ ಇಲ್ಲ ಎಂದು ಹೇಳಿರುವ ಹುಮಾ ಖುರೇಶಿ ನನಗೆ ನನ್ನ ಕುಟುಂಬದ ಮೌಲ್ಯ ಮುಖ್ಯ ಎಂದು ಹೇಳಿದ್ದಾರೆ. ಜವಾಬ್ಧಾರಿಯನ್ನು ಅರಿತು ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದ್ದಾರೆ.
ಬೇರೆಯವರ ಬಗ್ಗೆ ಗೌರವ ಇದೆ
ಇದೇ ಸಮಯದಲ್ಲಿ ಮತ್ತೊಂದು ವಿಚಾರವನ್ನು ಕೂಡ ಹುಮಾ ಖುರೇಶಿ ಸ್ಪಷ್ಟಪಡಿಸಿದ್ಧಾರೆ. ನ್ಯೂಡ್ ಸೀನ್ಸ್ ಮಾಡುವ ಕಲಾವಿದರ ನಿರ್ಧಾರವನ್ನು ನಾನು ಗೌರವಿಸುತ್ತೇನೆ ಎಂದು ಹೇಳಿರುವ ಹುಮಾ, ಈಗೀಗ ತುಂಬಾ ಜನ ಬೆತ್ತಲೆ ದೃಶ್ಯಗಳಲ್ಲಿ ಅಭಿನಯಿಸುತ್ತಾರೆ, ಆ ದೃಶ್ಯಗಳಲ್ಲಿ ಅವರು ಕಂಫರ್ಟಬಲ್ ಕೂಡ ಆಗಿರುತ್ತಾರೆ, ಎಲ್ಲವೂ ಅವರವರ ನಿರ್ಧಾರ, ಅವರ ನಿರ್ಧಾರವನ್ನು ನಾನು ಟೀಕೆ ಮಾಡುತ್ತಿಲ್ಲ ಎಂದು ಹೇಳಿದ್ಧಾರೆ. ಸದ್ಯ ಹುಮಾ ಖುರೇಶಿ ಅವರ ಈ ಸ್ಟ್ರೇಟ್ ಫಾರ್ವರ್ಡ್ ಆಟಿಟ್ಯೂಡ್‌ಗೆ ಹಲವರು ಫಿದಾ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಚರ್ಚೆ ಮಾಡುತ್ತಿದ್ದಾರೆ.


Click it and Unblock the Notifications