ಸನ್ನಿ ಲಿಯೋನ್ ಮಾನ ಕಾಪಾಡಿದ ಗಂಡನ ಸಮಯಪ್ರಜ್ಞೆ -ವಿಡಿಯೋ ವೈರಲ್

ಚಿತ್ರರಂಗದವರ ಸುತ್ತ ಮುತ್ತ ಕ್ಯಾಮರಾ ಕಣ್ಗಾವಲು ಇರುತ್ತೆ. ಈ ಹಿನ್ನೆಲೆ ಜನರೆದುರು ಬಂದಾಗ ಇವರ ಮೈಯೆಲ್ಲಾ ಕಣ್ಣಾಗಿರಬೇಕಾಗುತ್ತೆ. ಚೂರು ಯಾಮಾರಿದರೂ ಕಥೆ ಮುಗಿಯಿತು. ಕ್ಷಣಾರ್ಧದಲ್ಲಿ ವಿಡಿಯೋ ವೈರಲ್ ಆಗುತ್ತೆ. ಏನೋ ಮಾಡಲು ಹೋಗಿ ಅದು ಮತ್ತೇ ಇನ್ನೇನೋ ಆದ ಪರಿಣಾಮ ಪಬ್ಲಿಕ್‌ನಲ್ಲಿ ಮಾನಹರಣವಾಗುತ್ತೆ. ಸದ್ಯ ಇಂತಹದ್ದೇ ಒಂದು ಪ್ರಸಂಗದಿಂದ ಸನ್ನಿ ಲಿಯೋನ್ ಅವರನ್ನು ಅವರ ಗಂಡ ಡೇನಿಯಲ್ ವೆಬರ್ ಪಾರು ಮಾಡಿದ್ದಾರೆ.

ಹೌದು, ವಯಸ್ಕರ ಚಿತ್ರಗಳ ಮೂಲಕವೇ ಗುರುತಿಸಿಕೊಂಡು ಪಡ್ಡೆ ಹೈಕ್ಳಿಗೆ ತನ್ನ ಮೈಮಾಟದ ಸಿಹಿ ಹಂಚಿದ್ದ ಚೆಲುವೆ ಸನ್ನಿ ಲಿಯೋನ್. ನೀಲಿ ಜಗತ್ತನ್ನು ತೊರೆದು ಆ ನಂತರ ಬಣ್ಣದ ಪ್ರಪಂಚಕ್ಕೆ ಬಂದ ಸನ್ನಿ ಲಿಯೋನ್ ಒಂದು ಕಾಲದಲ್ಲಿ ಬೇಡಿಕೆಯಲ್ಲಿರುವ ಚೆಲುವೆಯರಿಗೆಲ್ಲ ಸೆಡ್ಡು ಹೊಡೆದು ಅನೇಕ ಅವಕಾಶಗಳನ್ನು ತಮ್ಮದಾಗಿಸಿಕೊಂಡರು. ಇವತ್ತು ಕೂಡ ಕೇವಲ ಬಾಲಿವುಡ್ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದಲ್ಲಿಯೇ ಸನ್ನಿ ಲಿಯೋನ್‌ಗೆ ಬೇಡಿಕೆ ಇದೆ. ದಕ್ಷಿಣದಿಂದ ಉತ್ತರದವರೆಗೆ ಅಭಿಮಾನಿ ಬಳಗ ಇದೆ.

husband-goals-daniel-weber-saves-sunny-leone-from-wardrobe-malfunction-in-heart-stopping-video

ಇಂಥಾ ಸನ್ನಿ ಲಿಯೋನ್ ಇತ್ತೀಚೆಗೆ ತಮ್ಮ ಪತಿ ಡೇನಿಯಲ್ ವೆಬರ್ ಜೊತೆ ಮುಂಬೈನಲ್ಲಿಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಕಂದು ಬಣ್ಣದ ಡೀಪ್-ನೆಕ್ ಉಡುಪಿನಲ್ಲಿ ಮಿಂಚುತ್ತಿದ್ದರು. ಅತ್ಯಂತ ಆಕರ್ಷಕವಾಗಿ ಕಾಣುತ್ತಿದ್ದರು.

ಆದರೆ,ರೆಡ್ ಕಾರ್ಪೆಟ್ ಮೇಲೆ ಪಾಪರಾಜಿಗಳ ಕ್ಯಾಮರಾ ಕಣ್ಣು ಇವರನ್ನು ಸೆರ ಹಿಡಿಯುತ್ತಿದ್ದಾಗ ಸನ್ನಿ ಲಿಯೋನ್ 'ಊಪ್ಸ್ ಮೊಮೆಂಟ್'ಗೆ ತುತ್ತಾದರು. ಸಾರ್ವಜನಿಕವಾಗಿ ನಡೆಯುವ ಇಂತಹ 'ಊಪ್ಸ್ ಮೂಮೆಂಟ್' ಕ್ಷಣಾರ್ಧದಲ್ಲಿ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಾವೆ. ವ್ಯಕ್ತಿಯ ಘನತೆಗೆ ಕೆಲ ಒಮ್ಮೆ ಧಕ್ಕೆಯನ್ನುಂಟು ಮಾಡುತ್ತಾವೆ.

ಅದೃಷ್ಟವಶಾತ್.. ಸನ್ನಿ ಲಿಯೋನ್ ಮುಜುಗರಕ್ಕೀಡಾಗುವ ಮೊದಲೇ ಅವರ ಪತಿ ಡೇನಿಯಲ್ ವೆಬರ್ ಎಚ್ಚೆತ್ತುಕೊಂಡರು. ಸನ್ನೆಯ ಮೂಲಕ ಸನ್ನಿಗೆ ಹೇಳಿದರು. ಡೇನಿಯಲ್ ವೆಬರ್ ಅವರ ಸಮಯ ಪ್ರಜ್ಞೆಯಿಂದ ಕ್ಯಾಮರಾಗಳ ಎದುರಿನಲ್ಲಿಯೇ ಎದೆಗುಂದದೆ ತಮ್ಮ ಬಟ್ಟೆಯನ್ನು ಸರಿ ಮಾಡಿಕೊಂಡರು.

ಸದ್ಯ ಈ ಸಂಪೂರ್ಣ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಲವರು ಸನ್ನಿ ಲಿಯೋನ್ ಅವರ ಪತಿ ಡೇನಿಯಲ್ ವೆಬರ್ ಅವರ ಸಮಯ ಪ್ರಜ್ಞೆಯನ್ನು ಮೆಚ್ಚಿಕೊಂಡಿದ್ದಾರೆ. ತಮ್ಮ ಪತ್ನಿಯ ಮೇಲೆ ಅವರಿಗೆ ಇರುವ ಕಾಳಜಿ ಮತ್ತು ಪ್ರೀತಿಗೆ ಮನ ಸೋಲುತ್ತಿದ್ದಾರೆ.

husband-goals-daniel-weber-saves-sunny-leone-from-wardrobe-malfunction-in-heart-stopping-video

ಅಂದ್ಹಾಗೇ ಸೆಲೆಬ್ರೇಟಿಗಳ ಫೋಟೊಗಳನ್ನು ಕ್ಲಿಕಿಸಲು ಮತ್ತು ವಿಡಿಯೋಗಳನ್ನು ಸೆರೆಹಿಡಿಯಲು ಕಾಯುವ ಪಾಪರಾಜಿಗಳ ಮುಂದೆ ಇಂತಹ ಘಟನೆ ನಡೆದಾಗ ಅದು ನಕಾರಾತ್ಮಕ ಸುದ್ದಿಯಾಗುವುದು ಹೆಚ್ಚು. ಆದರೆ ಸನ್ನಿ ಮತ್ತು ಡೇನಿಯಲ್ ಜೋಡಿಯ ನಡುವಿನ ಆ ಮೌನ ಸಂವಹನ ಮತ್ತು ಒಬ್ಬರ ಮೇಲೊಬ್ಬರಿಗೆ ಇರುವ ನಂಬಿಕೆಯನ್ನು ನೋಡಿದ ಹಲವರು ಜೋಡಿ ಅಂದರೆ ಹೀಗೆ ಇರಬೇಕು ಎಂದು ಹೇಳುತ್ತಿದ್ದಾರೆ. ಇಬ್ಬರ ನಡುವಿನ ಗಾಢವಾದ ಪ್ರೀತಿಗೆ ಹಿಡಿದ ಕೈಗನ್ನಡಿ ಇದು ಎನ್ನುತ್ತಿದ್ದಾರೆ.

ಇನ್ನೂ ಕೆಲವರು ಪ್ರತಿ ಹೆಣ್ಣಿಗೂ ಡೇನಿಯಲ್ ಅಂತಹ ಒಬ್ಬ ಗಂಡ ಇರಬೇಕು, ಇಂತಹ ಪತಿ ಸಿಗಬೇಕು ಎಂದು ವೈರಲ್ ಆದ ವಿಡಿಯೋಗೆ ಕಾಮೆಂಟ್ ಮಾಡುತ್ತಿದ್ದಾರೆ. ಇಂದಿನ ಕಾಲದಲ್ಲಿ ಸೆಲೆಬ್ರಿಟಿ ಜೋಡಿಗಳ ನಡುವೆ ವಿಚ್ಛೇದನ ಮತ್ತು ಕಲಹದ ಸುದ್ದಿಗಳೇ ಹೆಚ್ಚಾಗಿರುವಾಗ, ಸಾರ್ವಜನಿಕವಾಗಿ ಪತ್ನಿಗೆ ರಕ್ಷಣೆಯಾಗಿ ನಿಂತ ಡೇನಿಯಲ್ ಅವರ ಈ ನಡೆಯನ್ನು ಮೆಚ್ಚಿಕೊಳ್ಳುತ್ತಿದ್ದಾರೆ.

ಒಟ್ನಲ್ಲಿ ದುಬಾರಿ ವಸ್ತು ಅಥವಾ ಆಭರಣಕ್ಕಿಂತಲೂ ಸಂಬಂಧಗಳಲ್ಲಿ ಒಬ್ಬ ವ್ಯಕ್ತಿಗೆ ಸಿಗುವ 'ಗೌರವ' ಮತ್ತು 'ರಕ್ಷಣೆ' ಅತ್ಯಮೂಲ್ಯವಾದುದು. ಪರಸ್ಪರ ನಂಬಿಕೆ ಮುಖ್ಯವಾದದ್ದು. ಸನ್ನಿ ಲಿಯೋನ್ ಈ ಕಾರ್ಯಕ್ರಮಕ್ಕೆ ಬಂದಾಗ ಅಪ್ಸರೆಯಂತೆ ಕಾಣಿಸುತ್ತಿದ್ದರು. ಆದರೆ ಕಾರ್ಯಕ್ರಮ ಮುಗಿಸಿ ಹೊರಬರುವಾಗ ಒಬ್ಬ ಅದೃಷ್ಟವಂತ ಪತ್ನಿಯಂತೆ ಅಲ್ಲಿದ್ದ ಎಲ್ಲರಿಗೂ ಕಂಡರು.

More from Filmibeat

English summary
Daniel Weber is winning hearts online after saving wife Sunny Leone from a public wardrobe malfunction. Click to see how the couple handled the awkward moment with total grace and quick thinking.
Read more about: sunny leone viral video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X