twitter
    For Quick Alerts
    ALLOW NOTIFICATIONS  
    For Daily Alerts

    ಅಮಿತಾಬ್ ಬಚ್ಚನ್ ನಟನೆಯ ಸಿನಿಮಾದ ಮೇಲೆ ದೂರು ದಾಖಲು

    |

    ನಟ ಅಮಿತಾಬ್ ಬಚ್ಚನ್ ನಟನೆಯ ಸಿನಿಮಾ ಒಂದರ ಮೇಲೆ ಹೈದರಾಬಾದ್ ಮೂಲಕ ಸಿನಿಮಾ ಕರ್ಮಿಯೊಬ್ಬರು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.

    ಅಮಿತಾಬ್ ಬಚ್ಚನ್ ನಟನೆಯ 'ಜುಂಡ್' ಸಿನಿಮಾದ ವಿರುದ್ಧ ಪ್ರಕರಣ ದಾಖಲಾಗಿದೆ. ಸಿನಿಮಾವು ಹಕ್ಕುಸಾಮ್ಯ ಉಲ್ಲಂಘನೆ ಮಾಡಲಾಗಿದೆ ಎಂದು ಹೈದರಾಬಾದ್ ಮೂಲಕ ನಿರ್ದೇಶಕ ನಂದಿ ಚಿನ್ನಿ ಕುಮಾರ್ ದೂರು ದಾಖಲಿಸಿದ್ದಾರೆ.

    'ಜುಂಡ್' ಸಿನಿಮಾದ ನಿರ್ಮಾಪಕ ಸವಿತಾ ರಾಜು, ನಿರ್ದೇಶಕ ನಾಗರಾಜ್ ಮಂಜುಳೆ ಹಾಗೂ ಅಮೆಜಾನ್ ಪ್ರೈಂ ಮೇಲೆಯೂ ದೂರು ದಾಖಲಿಸಲಾಗಿದ್ದು, ಸಿನಿಮಾವನ್ನು ಬಿಡುಗಡೆ ಮಾಡದಂತೆ ತಡೆ ನೀಡುವಂತೆ ನಂದಿ ಚಿನ್ನಿ ಕುಮಾರ್ ಮನವಿ ಮಾಡಿದ್ದಾರೆ.

    ಸ್ಲಂ ಹುಡುಗರು ಫುಟ್‌ಬಾಲ್ ಆಡುವ ಕತೆ

    ಸ್ಲಂ ಹುಡುಗರು ಫುಟ್‌ಬಾಲ್ ಆಡುವ ಕತೆ

    ಜುಂಡ್ ಸಿನಿಮಾವು, ಸ್ಲಂ ಹುಡುಗರು ಸೇರಿ ಫುಟ್ಬಾಲ್ ಆಡುವ ಕತೆ ಉಳ್ಳದ್ದಾಗಿದೆ. ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಕೋಚ್ ನ ಪಾತ್ರ ನಿರ್ವಹಿಸಿದ್ದಾರೆ. ಈ ಸಿನಿಮಾವು ಫುಟ್‌ಬಾಲ್ ಆಟಗಾರ ಅಖಿಲೇಶ್ ಪೌಲ್ ಹಾಗೂ ಆತನ ಕೋಚ್ ವಿಜಯ್ ಬಾರ್ಸೆ ಜೀವನ ಆಧರಿಸಿದೆ.

    ಸ್ಲಂ ಸಾಕರ್ ಸಿನಿಮಾ ಮಾಡಲು ಹಕ್ಕು ಖರೀದಿ

    ಸ್ಲಂ ಸಾಕರ್ ಸಿನಿಮಾ ಮಾಡಲು ಹಕ್ಕು ಖರೀದಿ

    ಆದರೆ ನಂದಿ ಚಿನ್ನಿ ಕುಮಾರ್ ಹೇಳಿರುವಂತೆ, ಅವರು ಅಖಿಲೇಶ್ ಪೌಲ್ ಅವರಿಂದ ಅವರ ಜೀವನ ಕತೆಯನ್ನು 'ಸ್ಲಂ ಸಾಕರ್' ಹೆಸರಿನ ಸಿನಿಮಾ ಮಾಡಲು ಹಕ್ಕುಗಳನ್ನು ಖರೀದಿಸಿದ್ದರಂತೆ. ಅಷ್ಟೇ ಅಲ್ಲದೆ, ಅಖಿಲೇಶ್ ಪೌಲ್ ಬಳಿ ಕೆಲವು ಎನ್‌ಒಸಿಗಳಿಗೆ ಸಹ ಸಹಿ ತೆಗೆದುಕೊಂಡಿದ್ದರಂತೆ. ಆದರೆ ಈಗ ಅದೇ ಕತೆಯನ್ನು ನಾಗರಾಜ್ ಮಂಜುಳೆ ನಿರ್ದೇಶಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

    ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ತಂಡ

    ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ತಂಡ

    ಸ್ಥಳೀಯ ನ್ಯಾಯಾಲಯಕ್ಕೆ ಕುಮಾರ್ ದೂರು ಸಲ್ಲಿಸಿದ್ದು, ನವೆಂಬರ್ 9 ರ ಒಳಗಾಗಿ ಪ್ರತಿಕ್ರಿಯೆಯನ್ನು ನೀಡಬೇಕೆಂದು ನ್ಯಾಯಾಲಯವು ಜುಂಡ್ ಸಿನಿಮಾದ ನಿರ್ಮಾಪಕರು, ನಿರ್ದೇಶಕರಿಗೆ ಸೂಚನೆ ನೀಡಿದೆ. ಆದರೆ ಈ ನಡುವೆ ನಾಗರಾಜ್ ಮಂಜುಳೆ ಮತ್ತು ನಿರ್ಮಾಪಕರು ಸುಪ್ರೀಂಕೋರ್ಟ್‌ನಲ್ಲಿ ಎಸ್‌ಪಿಎಲ್‌ (ಸ್ಪೆಷಲ್ ಲೀವ್ ಪಿಟಿಷನ್‌) ಗೆ ಅರ್ಜಿ ಸಲ್ಲಿಸಿದ್ದಾರೆ. ಅದು ವಿಚಾರಣೆ ನಡೆದರೆ ಸಿನಿಮಾಕ್ಕೆ ಯಾವುದೇ ಆತಂಕ ಇರುವುದಿಲ್ಲ ಎನ್ನಲಾಗಿದೆ.

    Recommended Video

    ದರ್ಶನ್ ಜೊತೆ ತೇಜಸ್ವಿ ಸೂರ್ಯಗೂ ದಂಡ | Filmibeat Kannada
    ನಾಗರಾಜ್ ಮಂಜುಳೆಯ ಮೊದಲ ಬಾಲಿವುಡ್ ಸಿನಿಮಾ

    ನಾಗರಾಜ್ ಮಂಜುಳೆಯ ಮೊದಲ ಬಾಲಿವುಡ್ ಸಿನಿಮಾ

    ನಾಗರಾಜ್ ಮಂಜುಳೆ ಯ ಮೊದಲ ಬಾಲಿವುಡ್ ಸಿನಿಮಾ 'ಜುಂಡ್'. ಈ ಮೊದಲು ಅವರು ಮರಾಠಿಯ ಸೂಪರ್ ಹಿಟ್ ಸಿನಿಮಾ 'ಸೈರಾಟ್' ನಿರ್ದೇಶಿಸಿದ್ದರು. ಅದಕ್ಕೂ ಮುನ್ನಾ ಪ್ರಶಸ್ತಿ ವಿಜೇತ ಫಂಡ್ರಿ ಸಿನಿಮಾ ನಿರ್ದೇಶಿಸಿದ್ದರು.

    English summary
    Hyderabad movie maker Nandi Chinni Kumar complaint against Amitabh Bachchan movie Jhund. Alleging copyrights violation.
    Tuesday, November 10, 2020, 12:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X