For Quick Alerts
  ALLOW NOTIFICATIONS  
  For Daily Alerts

  'ನಾನು ಮುಸ್ಲಿಂ..ನನ್ನ ಪತ್ನಿ ಹಿಂದೂ..ನನ್ನ ಮಕ್ಕಳು ಹಿಂದೂಸ್ತಾನ್': ಶಾರುಖ್ ಖಾನ್

  |

  ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಸದ್ಯ ಸಿನಿಮಾಗಳಿಂದ ಕೊಂಚ ಬ್ರೇಕ್ ಪಡೆದಿದ್ದಾರೆ. ಝೀರೋ ಸಿನಿಮಾದ ನಂತರ ಶಾರುಖ್ ಯಾವುದೆ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಬ್ಯಾಕ್ ಟು ಬ್ಯಾಕ್ ಸೋಲಿನಿಂದ ಕಂಗೆಟ್ಟಿರುವ ಶಾರುಖ್ ಈಗ ಯಾವುದೆ ಸಿನಿಮಾಗಳಿಗೂ ಗ್ರೀನ್ ಸಿಗ್ನಲ್ ನೀಡುತ್ತಿಲ್ಲ. ಶಾರುಖ್ ಮುಂದಿನ ಸಿನಿಮಾ ಯಾವುದು ಎನ್ನುವ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

  ಖಾನ್ ತ್ರಯರು ಒಂದೆ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಸಲ್ಮಾನ್ ಖಾನ್ಖಾನ್ ತ್ರಯರು ಒಂದೆ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಸಲ್ಮಾನ್ ಖಾನ್

  ಈ ನಡುವೆ ಶಾರುಖ್ ಇತ್ತೀಚಿಗೆ ಕಿರುತೆರೆಯ ಡ್ಯಾನ್ಸ್ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದರು. ಗಣರಾಜ್ಯ ದಿನದ ವಿಶೇಷವಾಗಿ ಶಾರುಖ್ ಗೆಸ್ಟ್ ಆಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಕಿಂಗ್ ಖಾನ್ ಆಡಿರುವ ಮಾತುಗಳು ಸಖತ್ ವೈರಲ್ ಆಗಿವೆ. ಧರ್ಮದ ಬಗ್ಗೆ ಮಾತನಾಡಿರುವ ಶಾರುಖ್ "ನಮ್ಮ ಮನೆಯಲ್ಲಿ ಧರ್ಮದ ಬಗ್ಗೆ ಚರ್ಚಿಯಾಗುವುದಿಲ್ಲ. ನನ್ನ ಮಕ್ಕಳು ಧರ್ಮವನ್ನು 'ಇಂಡಿಯನ್' ಎಂದು ಬಳಸುತ್ತಾರೆ" ಎಂದು ಮತ್ತೆ ಹೇಳಿದ್ದಾರೆ.

  ನನ್ನ ಮಕ್ಕಳು ಹಿಂದೂಸ್ತಾನ್

  ನನ್ನ ಮಕ್ಕಳು ಹಿಂದೂಸ್ತಾನ್

  "ನಾವು ಯಾವತ್ತು ಹಿಂದೂ- ಮುಸ್ಲಿಂ ಬಗ್ಗೆ ಮಾತನಾಡುವುದಿಲ್ಲ. ನಾನು ಮುಸ್ಲಿಂ..ನನ್ನ ಪತ್ನಿ ಹಿಂದೂ..ಮತ್ತು ನನ್ನ ಮಕ್ಕಳು ಹಿಂದೂಸ್ತಾನ್" ಎಂದು ಹೇಳಿದ್ದಾರೆ. ಶಾರುಖ್ ಈ ಮಾತು ಹೇಳುತ್ತಿದ್ದಂತೆ ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿದ್ದಾರೆ.

  ಶಾರುಖ್ ಖಾನ್ ಮತ್ತೆ ಸಿನಿಮಾ ಮಾಡುವಂತೆ ಅಭಿಮಾನಿಗಳ ಅಭಿಯಾನಶಾರುಖ್ ಖಾನ್ ಮತ್ತೆ ಸಿನಿಮಾ ಮಾಡುವಂತೆ ಅಭಿಮಾನಿಗಳ ಅಭಿಯಾನ

  ಮಕ್ಕಳಿಗೆ ಧರ್ಮದ ಬಗ್ಗೆ ಶಾರುಖ್ ಪಾಠ

  ಮಕ್ಕಳಿಗೆ ಧರ್ಮದ ಬಗ್ಗೆ ಶಾರುಖ್ ಪಾಠ

  "ನನ್ನ ಮಕ್ಕಳು ಶಾಲೆಗೆ ಹೋದಾಗ ಅವರು ಧರ್ಮವನ್ನು ಬರೆಯ ಬೇಕಿತ್ತು. ನನ್ನ ಮಗಳು ಒಮ್ಮೆ ನನ್ನ ಬಳಿ ಬಂದು 'ನಮ್ಮ ಧರ್ಮ ಯಾವುದು?' ಎಂದು ಕೇಳಿದಳು. ನಾನು ಆಗ ನಾವು ಭಾರತೀಯರು, ನಮಗೆ ಧರ್ಮವಿಲ್ಲ ಎಂದು ಬರೆದು ಹೇಳಿದೆ" ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಶಾರುಖ್ ಈ ಮಾತು ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

  ಎಲ್ಲಾ ಹಬ್ಬವನ್ನು ಆಚರಿಸುತ್ತಾರೆ

  ಎಲ್ಲಾ ಹಬ್ಬವನ್ನು ಆಚರಿಸುತ್ತಾರೆ

  ಶಾರುಖ್ ಮನೆಯಲ್ಲಿ ಎಲ್ಲಾ ಧರ್ಮದ ಹಬ್ಬವನ್ನು ಆಚರಿಸುತ್ತಾರೆ. ಮತ್ತೆ ಮನೆಯಲ್ಲಿ ಧರ್ಮವನ್ನು ಹೇರುವುದಿಲ್ಲ ಎಂದು ಶಾರುಖ್ ಯಾವಾಗಲು ಹೇಳುತ್ತಿರುತ್ತಾರೆ. ಮಕ್ಕಳ ಬಗ್ಗೆ ಮಾತನಾಡಿದ ಶಾರುಖ್ "ನನ್ನ ಮಗಳು ಮತ್ತು ಮಗನ ಹೆಸರನ್ನು ಆರ್ಯನ್ ಮತ್ತು ಸುಹಾನಾ ಎಂದು ಇಟ್ಟಿದ್ದೇವೆ. ಖಾನ್ ಎನ್ನುವುದು ನನ್ನಿಂದ ಬಂದ ಹೆಸರು ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

  ಸಿನಿರಂಗದಲ್ಲಿ 27 ವರ್ಷ ಪೂರೈಸಿದ ಶಾರುಖ್ : ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಕಿಂಗ್ ಖಾನ್ಸಿನಿರಂಗದಲ್ಲಿ 27 ವರ್ಷ ಪೂರೈಸಿದ ಶಾರುಖ್ : ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಕಿಂಗ್ ಖಾನ್

  ಇಸ್ಲಾಂ ಬಗ್ಗೆ ಕಿಂಗ್ ಖಾನ್ ಹೇಳಿದ್ದೇನು?

  ಇಸ್ಲಾಂ ಬಗ್ಗೆ ಕಿಂಗ್ ಖಾನ್ ಹೇಳಿದ್ದೇನು?

  ತನ್ನ ಧರ್ಮದ ಬಗ್ಗೆ ಮಾತನಾಡಿದ ಶಾರುಖ್ "ನಮಾಜ್ ಐದು ಬಾರಿ ಓದಿದ ಮಾತ್ರಕ್ಕೆ ನಾನು ಧಾರ್ಮಿಕನಲ್ಲ. ಆದರೆ ನಾನು ಇಸ್ಲಾಮಿಕ್. ನಾನು ಇಸ್ಲಾಂ ಧರ್ಮದ ಸಿದ್ಧಾಂತಗಳನ್ನು ನಂಬುತ್ತೇನೆ. ಇದು ಒಳ್ಳೆಯ ಧರ್ಮ ಮತ್ತು ಶಿಸ್ತು ಎಂದು ನಂಬುತ್ತೇನೆ"

  English summary
  Bollywood actor Shah Rukh Khan said at a dance show that 'I am a Muslim, my Wife is Hindu and my children are Hindustan'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X