For Quick Alerts
  ALLOW NOTIFICATIONS  
  For Daily Alerts

  ಕರಿಷ್ಮಾ ಕಪೂರ್ 'ಸ್ಟಾರ್' ಆಗಿದ್ದು ನನ್ನಿಂದಾಗಿ ಎಂದ ಜೂಹಿ ಚಾವ್ಲಾ

  |

  'ಖಯಾಮತ್ ಸೇ ಖಯಾಮತ್' ಚಿತ್ರದಲ್ಲಿ ಅಮೀರ್ ಖಾನ್ ಜತೆಗೆ ಬಣ್ಣ ಹಚ್ಚಿದ್ದ ಜೂಹಿ ಚಾವ್ಲಾ 1988ರಲ್ಲಿ ಹಿಂದಿ ಚಿತ್ರರಂಗಕ್ಕೆ ಪರಿಚಿತರಾದರು. ಅಲ್ಲಿಂದ ಮುಂದೆ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿ ಸ್ಟಾರ್ ಕೂಡ ಆದರು. 'ದರ್', 'ಹಮ್ ಹೈ ರಾಹಿ ಪ್ಯಾರ್ ಕೆ' ಮುಂತಾದ ಚಿತ್ರಗಳಲ್ಲಿ ನಟಿಸಿದ ಜೂಹಿ ಚಾವ್ಲಾ, 90ರ ದಶಕದಲ್ಲಿನ ಮುಂಚೂಣಿ ನಾಯಕಿಯರ ಸಾಲಿನಲ್ಲಿ ಸೇರಿಕೊಂಡರು.

  ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ಪುನೀತ್ ರಾಜ್ ಕುಮಾರ್ | Puneeth Rajkumar | Birthday | Filmibeat Kannada

  ಆದರೆ ತಮ್ಮ ಸಿನಿಮಾ ಜೀವನದ ಖ್ಯಾತಿಯ ಉತ್ತುಂಗದಲ್ಲಿದ್ದಾಗ ಜೂಹಿ ಅನೇಕ ಸಿನಿಮಾಗಳನ್ನು ತಿರಸ್ಕರಿಸಿದ್ದರು. ಅವುಗಳಲ್ಲಿ ಕೆಲವು ಸಿನಿಮಾಗಳು ಬಹುದೊಡ್ಡ ಹಿಟ್ ಆಗಿದ್ದವು. ಇದಕ್ಕೆ ಕಾರಣ ಏನು ಎಂಬುದನ್ನು ಜೂಹಿ ವಿವರಿಸಿದ್ದಾರೆ. ಬಾಲಿವುಡ್‌ನಲ್ಲಿ ತಮ್ಮ ಯಶಸ್ಸಿನ ಓಟದ ನಡುವೆ ಸಂತೃಪ್ತಿ ಸಿಕ್ಕಿತ್ತು, ಹಾಗೆಯೇ ತಮ್ಮ ಅಹಮ್ಮಿಕೆಯ ಕಾರಣದಿಂದಾಗಿ ತಿರಸ್ಕರಿಸಿದ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಭಾರಿ ಹಣ ಗಳಿಸಿದವು ಎಂದು ತಿಳಿಸಿದ್ದಾರೆ.

  ಚಿತ್ರರಂಗವೇ ನಿಂತುಹೋಗುತ್ತದೆ ಎಂದುಕೊಂಡಿದ್ದೆ

  ಚಿತ್ರರಂಗವೇ ನಿಂತುಹೋಗುತ್ತದೆ ಎಂದುಕೊಂಡಿದ್ದೆ

  'ನನ್ನಲ್ಲಿ ಅಹಂಕಾರ ನೆತ್ತಿಗೇರಿತ್ತು. ನಾನು ಕೆಲಸ ಮಾಡದೆ ಇದ್ದರೆ ಚಿತ್ರರಂಗವೇ ನಿಂತುಹೋಗುತ್ತದೆ ಎಂದು ಇದ್ದಕ್ಕಿದ್ದಂತೆ ಭಾವಿಸುವ ಮಟ್ಟಕ್ಕೆ ಬೆಳೆದಿದ್ದೆ. ಸಿನಿಮಾಗಳಲ್ಲಿ ನಟಿಸುವ ಕೆಲವು ವಿಸ್ಮಯಕಾರಿ ಅವಕಾಶಗಳನ್ನು ನಾನು ಪಡೆದುಕೊಂಡೆ. ಆದರೆ ನನ್ನ ದಾರಿಯಲ್ಲಿ 'ಇಗೋ' ಕೂಡ ಬಂತು' ಎಂದಿದ್ದಾರೆ.

  ಅಬ್ಬಾ ಆ ಕಿಸ್ಸಿಂಗ್ ಸೀನ್ ಸಾಕಾಗೋಗಿತ್ತು: ಅಮೀರ್ ಖಾನ್‌ ಚುಂಬನದ ದೃಶ್ಯ ನೆನೆದು ನಡುಗಿದ ಕರಿಷ್ಮಾಅಬ್ಬಾ ಆ ಕಿಸ್ಸಿಂಗ್ ಸೀನ್ ಸಾಕಾಗೋಗಿತ್ತು: ಅಮೀರ್ ಖಾನ್‌ ಚುಂಬನದ ದೃಶ್ಯ ನೆನೆದು ನಡುಗಿದ ಕರಿಷ್ಮಾ

  ನನಗೆ ಸುಲಭದ ಕೆಲಸ ಬೇಕಿತ್ತು

  ನನಗೆ ಸುಲಭದ ಕೆಲಸ ಬೇಕಿತ್ತು

  'ನಾನು ಕೆಲವು ಸಿನಿಮಾಗಳನ್ನು ಮಾಡಲಿಲ್ಲ. ಅವುಗಳಲ್ಲಿ ನಾನು ನಟಿಸಬಹುದಾಗಿತ್ತು. ಅವುಗಳು ನನ್ನಿಂದ ಇನ್ನಷ್ಟು ಕಠಿಣ ಶ್ರಮ ಬಯಸಿದ್ದವು ಮತ್ತು ಹೆಚ್ಚು ಸ್ಪರ್ಧಾತ್ಮಕವಾಗಿದ್ದವು. ಆದರೆ ನಾನು ಅವುಗಳನ್ನು ಒಪ್ಪಿಕೊಳ್ಳಲಿಲ್ಲ. ಏಕೆಂದರೆ ನನಗೆ ಸುಲಭದ ಕೆಲಸಗಳು ಬೇಕಿದ್ದವು. ನನಗೆ ಯಾರು ಹಿತಕರ ಎನಿಸುತ್ತಾರೋ ಅಂತಹ ವ್ಯಕ್ತಿಗಳ ಜತೆಗೆ ಕೆಲಸ ಮಾಡಲು ಬಯಸಿದ್ದೆ. ನಾನು ನನ್ನ ಎದುರಿನ ಗೋಡೆಗಳನ್ನು ಒಡೆದು ಸಾಗುವ ಕೆಲಸ ಮಾಡಲಿಲ್ಲ' ಎಂದು ತಿಳಿಸಿದ್ದಾರೆ.

  ಕರಿಷ್ಮಾಗೆ ಒಲಿದ ಅವಕಾಶ

  ಕರಿಷ್ಮಾಗೆ ಒಲಿದ ಅವಕಾಶ

  ಆಸಕ್ತಿಕರ ಸಂಗತಿಯೆಂದರೆ 'ರಾಜಾ ಹಿಂದೂಸ್ತಾನಿ' ಮತ್ತು 'ದಿಲ್ ತೋ ಪಾಗಲ್ ಹೈ' ಚಿತ್ರಗಳಿಗೆ ಕರಿಷ್ಮಾ ಕಪೂರ್‌ಗೂ ಮೊದಲು ಆಯ್ಕೆಯಾಗಿದ್ದವರು ಜೂಹಿ ಚಾವ್ಲಾ. ಈ ಎರಡೂ ಸಿನಿಮಾಗಳನ್ನು ಜೂಹಿ ತಿರಸ್ಕರಿಸಿದ್ದರು. ಮುಂದಿನದ್ದು ಈಗ ಇತಿಹಾಸ.

  ನಟಿ ಜೂಹಿ ಚಾವ್ಲಾ ಮಗನ ಮಾನವೀಯತೆ ಗುಣಕ್ಕೆ ಭೇಷ್ ಎನ್ನಲೇಬೇಕುನಟಿ ಜೂಹಿ ಚಾವ್ಲಾ ಮಗನ ಮಾನವೀಯತೆ ಗುಣಕ್ಕೆ ಭೇಷ್ ಎನ್ನಲೇಬೇಕು

  ಪ್ರಶಸ್ತಿ ಪಡೆದ ಕರಿಷ್ಮಾ

  ಪ್ರಶಸ್ತಿ ಪಡೆದ ಕರಿಷ್ಮಾ

  ಈ ಎರಡು ಸಿನಿಮಾಗಳನ್ನು ತಿರಸ್ಕರಿಸುವ ಮೂಲಕ ನಾನು ಬೇರೆ ನಟಿಯರನ್ನು ಸ್ಟಾರ್‌ಗಳನ್ನಾಗಿ ಮಾಡಿದೆ ಎಂದು ಜೂಹಿ ತಿಳಿಸಿದ್ದಾರೆ. 'ದಿಲ್ ತೋ ಪಾಗಲ್ ಹೈ' ಮತ್ತು 'ರಾಜಾ ಹಿಂದೂಸ್ತಾನಿ' ಎರಡೂ ಸಿನಿಮಾಗಳ ನಟನೆಗೆ ಕರಿಷ್ಮಾ ಕಪೂರ್ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡರು. ಈ ಎರಡೂ ಸಿನಿಮಾಗಳು ಅವರ ಸಿನಿಮಾ ಬದುಕಿನಲ್ಲಿ ಅತಿ ದೊಡ್ಡ ಹಿಟ್ ಎನಿಸಿದವು.

  ನಾನೇ ಹೊಣೆಗಾರಳು

  ನಾನೇ ಹೊಣೆಗಾರಳು

  ತಮಗೆ ಬಂದಿದ್ದ ಎರಡು ಸಿನಿಮಾಗಳ ಅವಕಾಶಗಳನ್ನು ತಿರಸ್ಕರಿದ್ದನ್ನು ಕರಿಷ್ಮಾ ಬಾಚಿಕೊಂಡರು. ಇದರಿಂದ ಕರಿಷ್ಮಾ ವೃತ್ತಿ ಬದುಕು ಶುರುವಾಯಿತು. ನಿಜಕ್ಕೂ ಆಕೆಯ ಸ್ಟಾರ್‌ಡಮ್‌ಗೆ ನಾನೇ ಹೊಣೆಗಾರಳು ಎಂದು ಜೂಹಿ ತಮಾಷೆಯಾಗಿ ಹೇಳಿದ್ದಾರೆ.

  English summary
  Actress Juhi Chawla said, she was the responsible for Karisma Kapoor's stardom, as she rejected two major movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X