For Quick Alerts
  ALLOW NOTIFICATIONS  
  For Daily Alerts

  ಆರೋಗ್ಯ ಸೀಕ್ರೆಟ್ ಬಿಚ್ಚಿಟ್ಟು ಅಭಿಮಾನಿಗಳಿಗೆ ಶಾಕ್ ಕೊಟ್ಟ ಬಿಗ್ ಬಿ

  By Suneetha
  |

  ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು, ಅವರ ಜೀವನದ ಅತ್ಯಂತ ಒಂದು ವಿಸ್ಮಯಕರ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಅದೇನಪ್ಪಾ ಅಂದ್ರೆ, ಬಿಗ್ ಬಿ ಅವರು ಮಾರಕ ರೋಗ ಹೆಪಟೈಟಿಸ್ ಬಿ ನಿಂದ ಶೇ.75 ರಷ್ಟು ಭಾಗ ತಮ್ಮ ಪಿತ್ತಜನಕಾಂಗವನ್ನು ಕಳೆದುಕೊಂಡಿದ್ದು, ಇದೀಗ ಕೇವಲ ಶೇ. 25ರಷ್ಟು ಭಾಗ ಮಾತ್ರ ಉಳಿದುಕೊಂಡಿದೆಯಂತೆ.

  ಮಾರಕ ರೋಗ ಹೆಪಟೈಟಿಸ್ ಬಿ ಬಗ್ಗೆ ಜಾಗೃತಿ ಮೂಡಿಸಲು ಮಾಧ್ಯಮ ಕೈಗೊಂಡ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಈ ವಿಷಯವನ್ನು ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ಯಾವುದೇ ಮುಚ್ಚು ಮರೆ ಇಲ್ಲದೇ ಹೇಳಿಕೊಂಡಿದ್ದು, ತಾವು ಆ ರೋಗಕ್ಕೆ ಹೇಗೆ ತುತ್ತಾದರು ಎಂಬ ವಿಷಯವನ್ನು ಹೇಳಿಕೊಂಡಿದ್ದಾರೆ.[ನನಗೂ ಮ್ಯಾಗಿಗೂ ಯಾವುದೇ ಸಂಬಂಧವಿಲ್ಲ : ಬಚ್ಚನ್]

  'ಹೆಪಟೈಟಿಸ್ ಬಿ' ನನಗೆ ಆಕಸ್ಮಿಕವಾಗಿ ಬಂದಿದೆ. ಇದಕ್ಕೆ ನಾನು ಹಲವು ವರ್ಷಗಳಿಂದ ನಿರಂತರ ಚಿಕಿತ್ಸೆ ಪಡೆಯುತ್ತಿದ್ದೇನೆ. 'ಕೂಲಿ' ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ನನ್ನ ಹೊಟ್ಟೆಗೆ ಪೆಟ್ಟಾಗಿ ತೀವ್ರ ಗಾಯವಾಗಿತ್ತು'.[ಸಾವು, ತೆರಿಗೆಯನ್ನು ತಪ್ಪಿಸಿಕೊಳ್ಳಲಾಗದು: ಬಿಗ್ ಬಿ]

  'ಈ ಸಂದರ್ಭದಲ್ಲಿ ನನಗೆ ತುರ್ತಾಗಿ ರಕ್ತದ ಅವಶ್ಯಕತೆಯಿದ್ದು, ಸುಮಾರು 200 ಜನರು ನನಗೆ ರಕ್ತದಾನ ಮಾಡಿದ್ದು, ಒಟ್ಟು 60 ಬಾಟಲ್ ರಕ್ತವನ್ನು ನನ್ನ ದೇಹಕ್ಕೆ ನೀಡಲಾಯಿತು. ಆ ಸಂದರ್ಭದಲ್ಲಿ 'ಹೆಪಟೈಟಿಸ್ ಬಿ' ರೋಗಿಯ ರಕ್ತವನ್ನು ನನಗೆ ಕೊಟ್ಟಿದ್ದರಿಂದ ನನಗೆ ಈ ರೋಗ ಅಂಟಿಕೊಂಡು ನನ್ನ ಪಿತ್ತಜನಕಾಂಗ ಹಾಳಾಗಿದೆ'.

  '2000ರ ವರೆಗೆ ಚೆನ್ನಾಗಿ ಕೆಲಸ ನಿರ್ವಹಿಸುತ್ತಿದ್ದ ತನಗೆ ವೈದ್ಯಕೀಯ ಪರೀಕ್ಷೆಯಲ್ಲಿ ನನ್ನ ಪಿತ್ತಜನಕಾಂಗ ಶೇ.75 ರಷ್ಟು ಕೆಟ್ಟುಹೋಗಿರುವ ವಿಷಯ ತಿಳಿಯಿತು. ಸದ್ಯಕ್ಕೆ ನನ್ನ ಪಿತ್ತಜನಕಾಂಗ ಶೇ.75 ರಷ್ಟು ಹಾಳಾಗಿದ್ದು, ಶೇ,25 ರಷ್ಟು ಚೆನ್ನಾಗಿರುವ ಪಿತ್ತಜನಕಾಂಗದಿಂದ ನಾನು ಜೀವಂತವಾಗಿದ್ದೇನೆ ಎಂದು ಬಾಲಿವುಡ್ ನ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ತಮ್ಮ ಆರೋಗ್ಯದ ಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

  English summary
  Bollywood megastar Amitabh Bachchan made a startling revelation about surviving only on 25 per cent of his liver today having lost the rest 75 percent to the deadly Hepatitis B virus. Speaking at the launch of media campaign for on Hepatitis, Amitabh Bachchan recollected how he contracted the disease.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X