ಕೆಲಸ ಇಲ್ಲದೆ ಕುಡುಕನಾಗಿದ್ದೆ, ಮಕ್ಕಳೇ ನನ್ನ ಬಗ್ಗೆ ಪ್ರಶ್ನೆ ಮಾಡುತ್ತಿದ್ದರು: ಬಾಲಿವುಡ್ ನಟ

ಸಿನಿಮಾ ಉದ್ಯಮದಲ್ಲಿ ಖ್ಯಾತಿ, ಸಂಪಾದನೆ ಎಂಬುದು ದೊಡ್ಡ ಚಕ್ರದಂತೆ. ಈಗ ಮೇಲಿದ್ದರೆ ಮತ್ತದು ಕೆಳಕ್ಕೆ ಇಳಿದೇ ಇಳಿಯುತ್ತದೆ. ಬಹುತೇಕರ ಪ್ರಕರಣದಲ್ಲಿ ಇದು ಸತ್ಯವಾಗಿದೆ.

ಅಂಥಹವರಲ್ಲಿ ಖ್ಯಾತ ಬಾಲಿವುಡ್ ನಟ ಬಾಬಿ ಡಿಯೋಲ್ ಸಹ ಒಬ್ಬರು. ಖ್ಯಾತ ನಟ, ಬಾಲಿವುಡ್ ದಿಗ್ಗಜ ಧರ್ಮೇಂದ್ರ ಮಗ ಬಾಬಿ ಡಿಯೋಲ್ ತಮ್ಮ ಸಿನಿಪಯಣದ ಆರಂಭದ ದಿನಗಳಲ್ಲಿ ಒಂದರ ಹಿಂದೆ ಒಂದು ಹಿಟ್ ನೀಡಿದವರು.

ಆದರೆ ಅದೇನಾಯಿತೋ ಏನೋ ಒಮ್ಮೆಲೆ ಆಕಾಶದಿಂದ ನೆಲಕ್ಕೆ ಕುಸಿದು ಬಿಟ್ಟರು. ಸಿನಿಮಾಗಳ ಅವಕಾಶವೇ ನಿಂತು ಹೋಯಿತು ಬಾಬಿ ಡಿಯೋಲ್‌ಗೆ. ಆ ನಂತರ ಕಳೆದ ಒಂದು ವರ್ಷದ ಹಿಂದೆಯಿಂದಷ್ಟೆ ಅವರು ನಟನೆಗೆ ಮರಳಿದ್ದಾರೆ. ಆದೆರ ತಮ್ಮ ಕೆಟ್ಟ ಗಳಿಕೆ ಅದೆಷ್ಟು ಕೆಟ್ಟದಾಗಿತ್ತೆಂದು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.

ಒಳ್ಳೆಯ ಸಿನಿಮಾಗಳು ನನಗೆ ಸಿಗುತ್ತಿರಲಿಲ್ಲ: ಬಾಬಿ ಡಿಯೋಲ್

ಒಳ್ಳೆಯ ಸಿನಿಮಾಗಳು ನನಗೆ ಸಿಗುತ್ತಿರಲಿಲ್ಲ: ಬಾಬಿ ಡಿಯೋಲ್

ನನಗೆ ಅವಕಾಶ ಸಿಗುತ್ತಿದ್ದವು ಆದರೆ ಅವೆಲ್ಲ ಒಳ್ಳೆಯ ಸಿನಿಮಾಗಳಾಗಿರಲಿಲ್ಲ. ನಾನೂ ಸಹ ಒಂದೇ ಮಾದರಿಯ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೆ. ಆ ಸಿನಿಮಾಗಳು ಚೆನ್ನಾಗಿ ಓಡುತ್ತಿರಲಿಲ್ಲ, ನನ್ನ ವೃತ್ತಿಜೀವನವನ್ನು ಆ ಸಿನಿಮಾಗಳು ಇನ್ನಷ್ಟು ಹಿಂದೆ ತಳ್ಳಿದವು ಎಂದಿದ್ದಾರೆ ಬಾಬಿ ಡಿಯೋಲ್.

ಅಪ್ಪ ಕೆಲಸಕ್ಕೆ ಏಕೆ ಹೋಗುತ್ತಿಲ್ಲ: ಬಾಬಿ ಮಕ್ಕಳ ಪ್ರಶ್ನೆ

ಅಪ್ಪ ಕೆಲಸಕ್ಕೆ ಏಕೆ ಹೋಗುತ್ತಿಲ್ಲ: ಬಾಬಿ ಮಕ್ಕಳ ಪ್ರಶ್ನೆ

'ನನ್ನ ವೃತ್ತಿ ಜೀವನ ಹಳ್ಳ ಹಿಡಿಯುತ್ತಿದೆ ಎಂದು ಗೊತ್ತಾದಾಗ ನಾನು ಕುಡಿತದ ದಾಸನಾದೆ. ನನ್ನ ಕುಟುಂಬದವರೆಲ್ಲಾ ನನ್ನನ್ನು ಕರುಣೆ ಭರಿತ ಕಣ್ಣುಗಳಿಂದ ನೋಡಲು ಆರಂಭಿಸಿದರು. ನನ್ನ ಮಕ್ಕಳು ಸಹ ನನ್ನ ಪತ್ನಿಯ ಬಳಿ 'ಅಪ್ಪ ಏಕೆ ಕೆಲಸಕ್ಕೆ ಹೋಗುತ್ತಿಲ್ಲ' ಎಂದು ಕೇಳಲಾರಂಭಿಸಿದರು' ಎಂದಿದ್ದಾರೆ ಡಿಯೋಲ್.

ಮಕ್ಕಳು ಕೇಳಿದ ಪ್ರಶ್ನೆ ಬಾಬಿ ಎದೆಗೆ ನಾಟಿತು

ಮಕ್ಕಳು ಕೇಳಿದ ಪ್ರಶ್ನೆ ಬಾಬಿ ಎದೆಗೆ ನಾಟಿತು

ನನ್ನ ಮಕ್ಕಳು ನನ್ನ ಬಗ್ಗೆ ಪ್ರಶ್ನೆ ಕೇಳಲು ಆರಂಭಿಸಿದ ಮೇಲೆ ನನಗೆ ಮನವರಿಕೆ ಆಯಿತು, ಕೂಡಲೇ ನಾನು ನಿರ್ಮಾಪಕರನ್ನು ಭೇಟಿಯಾಗಲು ಪ್ರಾರಂಭಿಸಿದೆ. ಆದರೆ ಅವರು ನನ್ನಲ್ಲಿನ ನಟನೆಯ ಹಸಿವನ್ನು ನೋಡಲಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಬಾಬಿ ಡಿಯೋಲ್.

ಸಲ್ಮಾನ್ ಖಾನ್ ಸಲಹೆ ಸನ್ನಿಯನ್ನು ಕಾಪಾಡಿತು

ಸಲ್ಮಾನ್ ಖಾನ್ ಸಲಹೆ ಸನ್ನಿಯನ್ನು ಕಾಪಾಡಿತು

ಆದರೆ ನನ್ನ ಕಷ್ಟದ ಸಮಯದಲ್ಲಿ ಸಲ್ಮಾನ್ ಖಾನ್ ನೀಡಿದ ಸಲಹೆ ನನಗೆ ಸಾಕಷ್ಟು ಸಹಾಯ ಮಾಡಿತು. ಆತ ಹೇಳಿದ 'ನೀನು ಬೇರೆ ನಟರೊಬ್ಬರ ಜೊತೆಗೆ ಸೇರಿ ಸಿನಿಮಾ ಮಾಡು, ಯಶಸ್ಸಿನಲ್ಲಿ ಪಾಲು ಪಡೆದುಕೊ ಎಂದು ನಾನು ಹಾಗೆಯೇ ಮಾಡಿದೆ' ಎಂದಿದ್ದಾರೆ ಬಾಬಿ ಡಿಯೋಲ್.

More from Filmibeat

English summary
Bobby Deol said he became alcoholic when did not get acting work and his movies keep failing in box office.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X