ಗಣೇಶ್ ನಾಯಕಿಯ ಬ್ರೈನ್ ವಾಶ್ ಮಾಡಿ ಮದುವೆಯಾದರಾ ಮುಸ್ಲಿಂ ಧರ್ಮ ಗುರು ? ಚಿತ್ರರಂಗದಿಂದ ದೂರವಾಗಿದ್ದೇಕೆ ?

ಪ್ರೀತಿಗೆ ಎಲ್ಲರನ್ನು ಎಲ್ಲವನ್ನೂ ಜಯಿಸುವಂತಹ ನಿಗೂಢವಾದ ಶಕ್ತಿ ಇದೆ. ಪ್ರತಿಯೊಂದು ಧರ್ಮದಲ್ಲಿಯೂ ಈ ಪ್ರೀತಿಯ ಪರಿಕಲ್ಪನೆಗೆ ಅಪಾರವಾದ ಆದ್ಯತೆ ಇದೆ. ಇನ್ನು ನಿಜವಾದ ಪ್ರೀತಿಯ ಆಳಕ್ಕೆ ಇಳಿದು ನೋಡಿದಾಗ ಅದರ ಅರ್ಥ ಹುಡುಕುತ್ತಾ ಹೋದಾಗ ಪ್ರೀತಿ ಎನ್ನುವುದು ಮನಸಿಂದ ಬರಬೇಕೆ ಹೊರತು ಆ ಪ್ರೀತಿ ಒತ್ತಾಯಪೂರ್ವಕವಾಗಿರಬಾರದು ಎಂಬ ವಿಚಾರದ ಅರಿವು ಆಗುತ್ತೆ. ಹೀಗೆ ಅರಿತುಕೊಂಡು...

ಪ್ರೀತಿಯನ್ನು ಅರ್ಥ ಮಾಡಿಕೊಂಡು ಪ್ರೀತಿಗೋಸ್ಕರ ತನ್ನ ವೃತ್ತಿಯನ್ನೇ ತ್ಯಾಗ ಮಾಡಿ ಮುಸ್ಲಿಂ ಧರ್ಮಗುರುವಿನ ಕೈಯನ್ನು ಹಿಡಿದವರು ಸನಾ ಖಾನ್. 2020ರ ಆಸು ಪಾಸು ಮಾನವೀಯತೆ ಮೇಲೆ ಕೆಲಸ ಮಾಡಿಕೊಂಡು, ಸೃಷ್ಟಿದಾತ ಹೇಳಿದ ನಿಯಮಗಳನ್ನು ಪಾಲಿಸುತ್ತೇನೆ. ನನಗೆ ಚಿತ್ರೋದ್ಯಮ ಹೆಸರು, ಹಣ, ಗೌರವ ಎಲ್ಲವನ್ನು ನೀಡಿದೆ. ಆದರೆ ಮನುಷ್ಯ ಹೆಸರು, ಹಣ ಮಾಡಲು ಭೂಮಿಗೆ ಬರುವುದಾ? ನನಗೆ ಇದು ಗೊತ್ತಾಯ್ತು. ಹೆಸರು, ಹಣಕ್ಕೋಸ್ಕರ ಇಡೀ ಜೀವನವನ್ನು ಕಳೆಯುವುದಲ್ಲ. ಹೀಗಾಗಿ ನಾನು ಬಣ್ಣದಲೋಕದಿಂದ ದೂರ ಹೋಗುವೆ ಎಂದು ಹೇಳಿ ಮೇಕಪ್ ಕಳಚಿದರು ಕನ್ನಡದಲ್ಲಿ ''ಕೂಲ್‌'' ಚಿತ್ರದಲ್ಲಿ ಗಣೇಶ್‌ಗೆ ನಾಯಕಿಯಾಗಿದ್ದ ಸನಾ.

I Chose Peace Over Power Sana Khan Shatters Claims That Husband Brainwashed Her to Quit Showbiz

ಆ ನಂತರ ನವೆಂಬರ್ 21-2020ರಂದು ಮುಸ್ಲಿಂ ಧರ್ಮ ಗುರು ಮುಫ್ತಿ ಅನಾಸ್ ಸೈಯದ್ ಜೊತೆ ಸೂರತ್‌ನಲ್ಲಿ ಮದುವೆಯಾದರು. ಅಲ್ಲಾರಿಂದ ಇಬ್ಬರೂ ಪ್ರೀತಿಸಿದೆವು, ಅಲ್ಲಾರಿಂದಾಗಿ ಮದುವೆಯಾದೆವು, ಈ ಜಗತ್ತಿನಲ್ಲಿ ಅಲ್ಲಾ ನಮ್ಮಿಬ್ಬರನ್ನು ಒಟ್ಟಾಗಿ ಇಡಲಿ ಎಂದು ಪ್ರಾರ್ಥಿಸಿದ್ದರು. ನಾನು ಅನೇಕ ವರ್ಷಗಳ ಕಾಲ ಪ್ರಾರ್ಥಿಸಿದ ಫಲವಾಗಿ ಇಂತಹ ಗಂಡ ಸಿಕ್ಕಿದ್ದಾನೆ ಎಂದು ಹೇಳಿದ್ದರು. ಜುಲೈ 5-2023ರಲ್ಲಿ ತಮ್ಮ ಮೊದಲ ಮಗುವಿಗೆ ಜನ್ಮವನ್ನು ನೀಡಿದ್ದರು. ಕಳೆದ ವರ್ಷದ ಆರಂಭದಲ್ಲಿ ಮತ್ತೊಂದು ಗಂಡು ಮಗುಗೆ ಕೂಡ ಜನ್ಮ ನೀಡಿದರು.

ಇಂಥಾ ಸನಾ ಖಾನ್ ಮದುವೆಯಾಗಿ ಆರು ವರ್ಷಗಳಾಗಿವೆ. ಆದರೂ ಕೂಡ ಏಕಾಏಕಿ ಚಿತ್ರರಂಗಕ್ಕೆ ಸನಾ ವಿದಾಯ ಹೇಳಿದ್ದೇಕೆ ಎನ್ನುವ ಪ್ರಶ್ನೆ ಹಲವರಲ್ಲಿದೆ. ಚಿತ್ರರಂಗದಿಂದ ದೂರ ಸರಿಯುವಂತೆ ಸನಾ ಖಾನ್ ಅವರಿಗೆ ಅವರ ಪತಿ ಮತ್ತು ಧರ್ಮಗುರು ಮುಫ್ತಿ ಅನಾಸ್ ಸೈಯದ್ ಬ್ರೈನ್ ವಾಶ್ ಮಾಡಿ ಚಿತ್ರರಂಗದಿಂದ ದೂರ ಸರಿಯುವಂತೆ ಮಾಡಿದ್ದಾರೆ, ಧರ್ಮದ ಹಾದಿಯಲ್ಲಿ ನಡೆಯುವಂತೆ ಮಾಡಿದ್ದಾರೆ ಎನ್ನುವ ಅನುಮಾನ ಇದೆ. ಈ ಅನುಮಾನವನ್ನು ಈಗ ಸನಾ ಖಾನ್ ದೂರ ಮಾಡಿದ್ದಾರೆ.

I Chose Peace Over Power Sana Khan Shatters Claims That Husband Brainwashed Her to Quit Showbiz

ಹೌದು, ಹಿಂದಿ ''ಬಿಗ್ ಬಾಸ್ 13''ರ ಸ್ಫರ್ಧಿ ರಶ್ಮಿ ದೇಸಾಯಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸನಾ ಖಾನ್ ಯಾರಿಂದಲೂ ಯಾರ ಬ್ರೈನ್ ವಾಶ್ ಮಾಡಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ. ಒಬ್ಬ ವ್ಯಕ್ತಿಗೆ ಕೇವಲ ಹಣ, ಹೆಸರು, ಕೀರ್ತಿ ಮತ್ತು ಗೌರವ ಮಾತ್ರ ಮುಖ್ಯ ಅಲ್ಲ ಮನದ ನೆಮ್ಮದಿ ಕೂಡ ಮುಖ್ಯ ಎಂದು ಹೇಳಿರುವ ಸನಾ ಹೀಗಾಗಿಯೇ ಹಣವಂತರು ನೆಮ್ಮದಿಯನ್ನು ಹುಡುಕುತ್ತಿರುತ್ತಾರೆ ಎಂದು ಹೇಳಿದ್ದಾರೆ.

ನಮ್ಮ ಸುತ್ತ ಮುತ್ತಲಿನ ಪರಿಸರ ಸರಿ ಇಲ್ಲದಿದ್ದಾಗ ನಮ್ಮ ನಿರ್ಧಾರಗಳು ತಪ್ಪಾಗಿರುತ್ತವೆ ಎಂದು ಹೇಳಿರುವ ಸನಾ ಖಾನ್ ಸಮಯ ಉರುಳಿದಂತೆ ನಾನು ಕೆಲ ವಿಷಯಗಳನ್ನು ಕಲಿತೆ ಹೀಗಾಗಿಯೇ ನಾನು ನನ್ನ ಪತಿಯ ಜೊತೆಗಿನ ಸಂಬಂಧಕ್ಕೆ ಮಹತ್ವ ನೀಡುತ್ತೇನೆ, ಗೌರವಿಸುತ್ತೇನೆ ಎಂದು ಹೇಳಿದ್ದಾರೆ. ನನ್ನ ಪತಿಗಿಂತ ಅತ್ಯುತ್ತಮರನ್ನು ಹುಡಕಲು ನನ್ನಿಂದ ಸಾಧ್ಯ ಇಲ್ಲ ಎಂದು ಹೇಳಿದ್ದಾರೆ.

ಮದುವೆಯ ಮುಂಚೆಯೇ ಚಿತ್ರರಂಗದಿಂದ ದೂರವಾಗುವ ಯೋಚನೆ ಇತ್ತು ಎಂದು ಹೇಳಿರುವ ಸನಾ ನನ್ನಲ್ಲಿ ಬದಲಾವಣೆಗಳಾಗುತ್ತಿದ್ದವು, ನಾನು ಅಕ್ಷರಶಃ ಬೇರೆ ವ್ಯಕ್ತಿಯಾಗಿ ರೂಪಾಂತರಗೊಳ್ಳುತ್ತಿದ್ದೆ ಎಂದು ಹೇಳಿರುವ ಸನಾ, ಇದರ ಹಿಂದೆ ನನ್ನ ಪತಿಯ ಕೈವಾಡ ಇಲ್ಲ, ನಾನೇ ಬಯಸಿದ್ದು ಎಂದು ಹೇಳಿದ್ದಾರೆ. ಆ ದಿಕ್ಕಿನಲ್ಲಿ ಹೆಜ್ಜೆ ಇಡಲು ಸರಿಯಾದ ಮಾರ್ಗದರ್ಶನವನ್ನು ನನ್ನ ಪತಿ ನೀಡಿದ್ದಾರೆ ಎಂದು ಹೇಳಿದ್ದಾರೆ.

More from Filmibeat

English summary
"I wanted peace." Sana Khan opens up about her journey from showbiz to spirituality and why she credits her husband for guidance, not "brainwashing."
Read more about: sana khan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X