ಮೊದಲ ಪತಿಯಿಂದ ದೂರ ಆಗಲು ಬಯಸಿರಲಿಲ್ಲ: 3 ಮದುವೆಯಾದ ಶಾಹಿದ್ ಕಪೂರ್ ತಾಯಿಯ ಮಾತು

ಬಾಲಿವುಡ್ ನ ಹ್ಯಾಂಡ್ ಸಮ್ ಹಂಕ್ ಶಾಹಿದ್ ಕಪೂರ್ ತಾಯಿ ನೀಲಿಮಾ ಅಝೀಮ್ 3 ಮದುವೆಯಾದ ಬಗ್ಗೆ ಮಾತನಾಡಿದ್ದಾರೆ. ಶಾಹಿದ್ ಕಪೂರ್ ತಾಯಿ, ಭಾರತೀಯ ಚಿತ್ರರಂಗದ ಖ್ಯಾತ ನಟಿ ನೀಲಿಮಾ ಅಝೀಮ್ ಮತ್ತು ಪಂಕಜ್ ಕಪೂರ್ ಅವರ ಪ್ರೇಮಕಥೆ ದುಃಖದಲ್ಲಿ ಅಂತ್ಯವಾಗಿದೆ. ಇಬ್ಬರು ಪ್ರೀತಿಸಿ ಮದುವೆಯಾದರು ಕೆಲವೇ ಕೆಲವು ವರ್ಷದಲ್ಲಿಯೆ ಮೊದಲ ಪತಿಯಿಂದ ದೂರ ಆಗುತ್ತಾರೆ.

Recommended Video

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕ್ಷಣಗಣನೆ | Bangalore International Film Festival

ಶಾಹಿದ್ ಕಪೂರ್ ಗೆ ಜನ್ಮ ನೀಡಿದ ನಂತರ ನೀಲಿಮಾ, ಪತಿ ಪಂಕಜ್ ಕಪೂರ್ ಅವರಿಂದ ದೂರ ಆಗುತ್ತಾರೆ. ಈ ಬಗ್ಗೆ ಈಗ ಮಾತನಾಡಿರುವ ನೀಲಿಮಾ, ಮೊದಲ ಪತಿ ಪಂಕಜ್ ಅವರಿಂದ ದೂರ ಆಗಲು ಬಯಸಿರಲಿಲ್ಲ ಎಂದು ಹೇಳಿದ್ದಾರೆ. ಇತ್ತೀಚಿಗೆ ಆಂಗ್ಲ ಪೋರ್ಟಲ್ ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ನೀಲಿಮಾ, ಶಾಹಿದ್ ನನ್ನ ಜೀವನದ ದೊಡ್ಡ ಶಕ್ತಿ ಎಂದಿದ್ದಾರೆ. ಮುಂದೆ ಓದಿ...

ನೀಲಿಮಾ ಮೊದಲ ಪತಿ ಪಂಕಜ್ ಕಪೂರ್

ನೀಲಿಮಾ ಮೊದಲ ಪತಿ ಪಂಕಜ್ ಕಪೂರ್

61 ವರ್ಷದ ನೀಲಿಮಾ ಅಝೀಮ್ ಮೂರು ಮದುವೆಯಾಗಿದ್ದಾರೆ. 3 ಮದುವೆಯಾದರು ನೀಲಿಮಾ ಈಗ ಸಿಂಗಲ್ ಆಗಿಯೇ ಜೀವಿಸುತ್ತಿದ್ದಾರೆ. ನೀಲಿಮಾ ಮೊದಲು ಪತಿ ಪಂಕಜ್ ಕಪೂರ್. 1979ರಲ್ಲಿ ಪಂಕಜ್ ಅವರನ್ನು ಮದುವೆಯಾಗುತ್ತಾರೆ. ಕೇವಲ 5 ವರ್ಷದಲ್ಲಿಯೇ ಅಂದರೆ 1984ರಲ್ಲಿ ಇಬ್ಬರು ಬೇರೆ ಬೇರೆ ಆಗುತ್ತಾರೆ. ಪಂಕಜ್ ಮತ್ತು ನೀಲಿಮಾ ದಂಪತಿಯ ಮಗ ಶಾಹಿದ್ ಕಪೂರ್. ಅಪ್ಪ-ಅಮ್ಮ ಬೇರೆ ಬೇರೆ ಆದ ನಂತರ ಶಾಹಿದ್ ಅಜ್ಜಿಯ ಆಸರೆಯಲ್ಲಿ ಬೆಳೆಯುತ್ತಾರೆ.

1990ರಲ್ಲಿ ರಾಜೇಶ್ ಕಟ್ಟರ್ ಜೊತೆ ಎರಡನೇ ಮದುವೆ

1990ರಲ್ಲಿ ರಾಜೇಶ್ ಕಟ್ಟರ್ ಜೊತೆ ಎರಡನೇ ಮದುವೆ

ನೀಲಿಮಾ ಮೊದಲ ಪತಿ ಪಂಕಜ್ ಯಿಂದ ವಿಚ್ಛೇದನ ಪಡೆದ ಬಳಿಕ 1990ರಲ್ಲಿ ರಾಜೇಶ್ ಕಟ್ಟರ್ ಜೊತೆ ಎರಡನೇ ಮದುವೆ ಆಗುತ್ತಾರೆ. ಆದರೆ ಎರಡನೇ ಸಂಸಾರವು ಸುಖಕರವಾಗಿರುವುದಿಲ್ಲ. ರಾಜೇಶ್ ಮತ್ತು ನೀಲಿಮಾ ದಾಂಪತ್ಯಕ್ಕೆ ಇಶಾನ್ ಕಟ್ಟರ್ ಮಗನಿದ್ದಾರೆ. ಇಶಾನ್ ಗೆ ಜನ್ಮ ನೀಡಿದ ನಂತರ ನೀಲಿಮಾ 2001ರಲ್ಲಿ ರಾಜೇಶ್ ಕಟ್ಟರ್ ಅವರಿಂದ ವಿಚ್ಛೇದನ ಪಡೆದು ಪ್ರತ್ಯೇಕವಾಗುತ್ತಾರೆ.

ಉಸ್ತಾದ್ ರಾಜ್ ಅಲಿ ಖಾನ್ ಜೊತೆ ಮೂರನೆ ಮದುವೆ?

ಉಸ್ತಾದ್ ರಾಜ್ ಅಲಿ ಖಾನ್ ಜೊತೆ ಮೂರನೆ ಮದುವೆ?

ನೀಲಿಮಾ ರಾಜೇಶ್ ಕಟ್ಟರ್ ಯಿಂದ ದೂರ ಆದ ಬಳಿಕ ಖ್ಯಾತ ಸಂಗೀತಗಾರ ಉಸ್ತಾದ್ ರಾಜ್ ಅಲಿ ಖಾನ್ ಅವರನ್ನು ಮದುವೆ ಆಗಿದ್ದಾರೆ ಎಂದು ಹೇಳಲಾಗುತ್ತೆ. ಇನ್ನು ಕೆಲವರು ಇಬ್ಬರು ಲಿವಿಂಗ್ ರಿಲೇಶನ್ ಫಿಪ್ ನಲ್ಲಿ ಇದ್ದರು ಎನ್ನುತ್ತಾರೆ. ಆದರೆ ಸದ್ಯ ನೀಲಿಮಾ, ಉಸ್ತಾದ್ ಜೊತೆಯು ವಾಸಿಸುತ್ತಿಲ್ಲ. ಇಬ್ಬರು ಬೇರೆ ಬೇರೆ ಆಗಿ ವರ್ಷವೆ ಆಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಮಕ್ಕಳ ಜೊತೆ ಉತ್ತಮ ಬಾಂಧವ್ಯ

ಮಕ್ಕಳ ಜೊತೆ ಉತ್ತಮ ಬಾಂಧವ್ಯ

ನೀಲಿಮಾ ಮೂರು ಮದುವೆಯಾದರು ಈಗ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾರೆ. ಆದರೆ ಇಬ್ಬರು ಮುದ್ದು ಮಕ್ಕಳಾದ ಶಾಹಿದ್ ಮತ್ತು ಇಶಾನ್ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಇಬ್ಬರು ಮಕ್ಕಳು ಬಾಲಿವುಡ್ ನಲ್ಲಿ ಉತ್ತಮ ನಟರಾಗಿ ಗುರುತಿಸಿಕೊಂಡಿದ್ದಾರೆ. ಇಶಾನ್ ಸದ್ಯ ಉದಯೋನ್ಮುಕ ನಟನಾಗಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಪಂಕಜ್ ಕಪೂರ್ ಬಗ್ಗೆ ನೀಲಿಮಾ ಮಾತು

ಪಂಕಜ್ ಕಪೂರ್ ಬಗ್ಗೆ ನೀಲಿಮಾ ಮಾತು

ಇತ್ತೀಚಿಗೆ ಸಂದರ್ಶನವಂದರಲ್ಲಿ ನೀಲಿಮಾ ಪಂಕಜ್ ಕಪೂರ್ ಬಗ್ಗೆ ಮಾತನಾಡಿದ್ದಾರೆ. ನಾನು ಪಂಕಜ್ ಅವರಿಂದ ಬೇರೆ ಆಗಲು ನಿರ್ಧರಿಸಿರಲಿಲ್ಲ. ಇದು ನಿಜ. ಅವರು ಆಗಲೆ ಬೇರೆ ಆಗಲು ನಿರ್ಧರಿಸಿ ತುಂಬ ದೂರ ಹೋಗಿದ್ದರು. ಇದು ನನಗೆ ಅರಗಿಸಿಕೊಳ್ಳಲು ತುಂಬಾ ಕಷ್ಟವಾಗಿತ್ತು. ಆದರೆ ಅವರಿಗೆ ಅವರದ್ದೇ ಆದ ಕಾರಣಗಳಿದ್ದವು. ನಾವಿಬ್ಬರು ಬಹಳ ಸಮಯದ ಸ್ನೇಹಿತರು. ನಾನು 15 ವರ್ಷದವಳಾಗಿದ್ದಾಗಲೆ ಇಬ್ಬರು ಸ್ನೇಹಿತರಾಗಿದ್ದೆವು" ಎಂದು ಹೇಳಿದ್ದಾರೆ.

ಅವರು ಚೆನ್ನಾಗಿ ಇರುವುದನ್ನು ಬಯಸುತ್ತೇನೆ

ಅವರು ಚೆನ್ನಾಗಿ ಇರುವುದನ್ನು ಬಯಸುತ್ತೇನೆ

"ಬೇರೆ ಆಗಲು ಅವರ ಬಳಿ ಸಾಕಷ್ಟು ಕಾರಣಗಳಿದ್ದವು. ಅದನ್ನು ಅರ್ಥಮಾಡಿಕೊಂಡೆ. ಆದರೆ ವಿಚ್ಛೇದನ ಎನ್ನುವುದು ಇಬ್ಬರಿಗೂ ತುಂಬ ನೋವೊಂಟು ಮಾಡಿತ್ತು. ಇಬ್ಬರ ನಡುವೆ ಸಾಕಷ್ಟು ಬಾಂಧವ್ಯ ಮತ್ತು ಸ್ನೇಹವಿತ್ತು. ಆದರೆ ಹೃದಯ ಛಿದ್ರವಾಗಿತ್ತು. ಆದರೆ ಪರವಾಗಿಲ್ಲ. ಅವರು ಈಗ ಅವರ ಕುಟುಂಬದ ಜೊತೆ ತುಂಬಾ ಚೆನ್ನಾಗಿ ಇದ್ದಾರೆ. ನಾನು ಅವರು ಚೆನ್ನಾಗಿ ಇರುವುದನ್ನು ಬಯಸುತ್ತೇನೆ" ಎಂದು ಹೇಳಿದ್ದಾರೆ.

More from Filmibeat

English summary
Actress Neelima Azeem opens up about divorce with Pankaj Kapoor. I Didn't Decide To Separate with Pankaj Kapoor, said Neelima Azeem.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X