ನನಗೆ ಗಂಡಸಿನ ಅವಶ್ಯಕತೆ ಇಲ್ಲ- ಮಲೈಕಾ ಅರೋರಾ

ಊಹಾಪೋಹಗಳು, ಗಾಳಿಸುದ್ದಿಗಳು ಗ್ಲಾಮರ್ ಜಗತ್ತಿನಲ್ಲಿ ಮತ್ತು ಸೆಲೆಬ್ರೆಟಿಗಳ ಜೀವನದಲ್ಲಿ ಕಾಮನ್ನೋ ಕಾಮನ್ನು. ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಒಂದು ಬೊಂಬೆಯ ಜತೆಗೆ ಆಟವಾಡಿದರೂ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಬಹುದು. ಟ್ರೋಲಿಗರ ಹಸಿವಿಗೆ ಆಹಾರವೂ ಆಗಬಹುದು.

ಕುಂತರು ನಿಂತರು ಇವರ ಕುರಿತು ನಿರಂತರವಾಗಿ ಚರ್ಚೆಯಾಗುತ್ತಲೇ ಇರುತ್ತೆ. ವ್ಯೆಯಕ್ತಿಕ ಜೀವನದ ಕುರಿತು ಸುದ್ದಿಯಾಗುತ್ತಲೇ ಇರುತ್ತೆ. ವಿಭಿನ್ನ ರೀತಿಯಲ್ಲಿ ಕಮೆಂಟ್‌ ಹಾಕೋದು, ಕೆಲವು ಸಲ ಅವಹೇಳನ ಮಾಡಿ ಕೂಡ ಮಾತನಾಡಲಾಗುತ್ತೆ.ಹಾಗಂತ ಅನ್ನೋದನ್ನೆಲ್ಲಾ ಸಹಿಸಿಕೊಳ್ಳಬೇಕು ಅಂತೇನು ನಿಯಮ ಇಲ್ಲವಲ್ಲಾ? ವಿಪರೀತವಾಗಿ ರೇಗಿಸಿ, ತೆಪ್ಪಗಿದ್ದವರನ್ನು ಪದೇ ಪದೇ ಕೆರೆದರೆ ಎಂತವರಿಗಾದರೂ ಪಿತ್ತ ನೆತ್ತಿಗೇರದೇ ಇರೋದಿಲ್ಲ. ಇದಕ್ಕೆ ಮಲೈಕಾ ಅರೋರಾ ಸದ್ಯದ ಉದಾಹರಣೆ.

I Don t Need A Man Malaika Arora Shuts Down Irritating Dating Rumours

ಹೌದು, ಅರ್ಬಾಜ್ ಖಾನ್ ಅವರಿಂದ ಮಲೈಕಾ ದೂರವಾಗಿದ್ದೇ ದೂರವಾಗಿದ್ದು. ಇವರ ವೈಯಕ್ತಿಕ ಜೀವನ ಹಲವರ ಬಾಯಿಗೆ ಆಹಾರವಾಗಿದೆ. ಮಲೈಕಾ ಯಾರೇ ಹುಡುಗನ ಜೊತೆ ಕಾಣಿಸಿಕೊಂಡರು ಸಾಕು ನಾನಾ ರೀತಿಯ ಮಾತುಗಳನ್ನೂ ಹಲವರು ಆಡುತ್ತಿದ್ದಾರೆ. ಟ್ರೋಲ್ ಮಾಡುತ್ತಿದ್ದಾರೆ.

ಇದಕ್ಕೆ ಕೈಗನ್ನಡಿ ಎಂಬಂತೆ ಕೆಲ ದಿನಗಳ ಹಿಂದೆಯಷ್ಟೇ 33 ವರ್ಷದ ವಜ್ರದ ವ್ಯಾಪಾರಿಯಾದ ಹರ್ಷ್ ಮೆಹ್ತಾಗೆ 52 ವರ್ಷದ ಮಲೈಕಾ ಅರೋರಾ ಮನ ಸೋತಿದ್ದಾರೆ ಎಂಬ ಸುದ್ದಿ ಸದ್ದು ಮಾಡಿತ್ತು.

ರೋಮ್‌ನಲ್ಲಿನ ಇವರಿಬ್ಬರ ಕೆಲ ರೊಮ್ಯಾಂಟಿಕ್ ಫೋಟೊಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದ್ದವು. ಇದಕ್ಕೂ ಮುನ್ನ ಕೂಡ ಹಲವು ಬಾರಿ ಇಬ್ಬರು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದರು. ಈ ಹಿನ್ನೆಲೆ ಮನಮೋಹಕ ಚೆಲುವೆ ಮಲೈಕಾ ವಜ್ರದ ವ್ಯಾಪಾರಿಯ ಪಾಲಾದರು ಎಂದು ಹಲವರು ಅಂದುಕೊಂಡಿದ್ದರು. ಇಬ್ಬರ ನಡುವೆ ಇರುವ ಏಜ್ ಗ್ಯಾಪ್‌ನ ಪ್ರಶ್ನೆ ಮಾಡಿ ಹಲವರು ಕೆಂಡ ಕೂಡ ಕಾರಿದ್ದರು.

ಹೀಗಿರುವಾಗ ಮಲೈಕಾ ಅರೋರಾ ''MTV ಸ್ಪ್ಲಿಟ್ಸ್‌ವಿಲ್ಲಾ'' ಸೀಸನ್ 16ರ ಮೂಲಕ ಬೆಳಕಿಗೆ ಬಂದ ಪ್ರತಿಭೆ ಸೋರಬ್ ಬೇಡಿಯ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು. ಇಬ್ಬರಲ್ಲಿನ ಆತ್ಮೀಯತೆ ಕಂಡು ವಜ್ರದ ವ್ಯಾಪಾರಿ ಹರ್ಷ್ ಮೆಹ್ತಾ ಅವರಿಂದ ಬಹುಬೇಗನೇ ಬೋರಾದ ಮಲೈಕಾ ಅರೋರಾ ಈಗ ಸೋರಬ್ ಬೇಡಿ ತೆಕ್ಕೆಗೆ ಬಿದ್ದಿದ್ದಾರೆ ಎನ್ನುವ ಸುದ್ದಿ ಹರಿದಾಡಲು ಶುರುವಾಯ್ತು. ಮಲೈಕಾ ಅವರನ್ನು ಟ್ರೋಲ್ ಕೂಡ ಮಾಡಲಾಯ್ತು. ಸದ್ಯ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಾಕ್ಷಾತ್ ಮಲೈಕಾ ಅರೋರಾ ಮಾತನಾಡಿದ್ಧಾರೆ. ನನಗೆ ಗಂಡಸಿನ ಅವಶ್ಯಕತೆ ಇಲ್ಲ ಎಂದು ಹೇಳಿದ್ಧಾರೆ.

I Don t Need A Man Malaika Arora Shuts Down Irritating Dating Rumours

''ಕರ್ಲಿ ಟೇಲ್ಸ್''ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಮಲೈಕಾ ಅರೋರಾ, ಈಗೀಗ ಈ ಅಂತೆ-ಕಂತೆಯ ಸುದ್ದಿಗಳಿಂದ ಕಿರಿಕಿರಿಯಾಗುತ್ತಿದೆ ಎಂದು ಹೇಳಿದ್ಧಾರೆ. ಕಿರಿಕಿರಿಯಾದರೂ ಕೂಡ ನಾನು ಮತ್ತು ನನ್ನ ಮಗ ಅರ್ಹಾನ್ ನನ್ನ ಕುರಿತ ಈ ಸುದ್ದಿಗಳನ್ನು ನೋಡಿ, ಓದಿ ನಗುತ್ತೇವೆ ಎಂದು ಹೇಳಿರುವ ಮಲೈಕಾ ನಾವು ಯಾವುದನ್ನೂ ಪ್ಲಾನ್ ಮಾಡಲು ಸಾಧ್ಯ ಇಲ್ಲ ಆಗಬೇಕಾದದ್ದು ಆಗುತ್ತೆ ಎಂದು ಹೇಳಿದ್ಧಾರೆ. ಸದ್ಯಕ್ಕೆ ನಾನು ನನ್ನ ಜೀವನವನ್ನು ಎಕ್ಸ್‌ಪ್ಲೋರ್ ಮಾಡುತ್ತಾ ಖುಷಿಯಾಗಿದ್ದೇನೆ ಎಂದಿದ್ದಾರೆ.

ಇದೇ ವೇಳೆ ಬದುಕಿನ ಸಂಗಾತಿಯ ಕುರಿತು ಕೂಡ ಮಾತನಾಡಿರುವ ಮಲೈಕಾ ಅರೋರಾ, ಸೂಕ್ತ ಸಂಗಾತಿಯ ಅವಶ್ಯಕತೆ ಎಲ್ಲರಿಗೆ ಇರುತ್ತಾದರೂ ಕೂಡ ನಾನು ನನಗೊಬ್ಬ ಗಂಡು ಬೇಕು ಎಂದು ತಲೆ ಕೆಡಿಸಿಕೊಂಡು ಹುಡುಕುತ್ತಾ ಕುಂತಿಲ್ಲ ಎಂದು ಹೇಳಿದ್ದಾರೆ.

ನಾನು ಸ್ವತಂತ್ಯ್ರ ಮಹಿಳೆ ಎನ್ನುವುದರ ಕುರಿತು ನನಗೆ ಹೆಮ್ಮೆ ಇದೆ ಎಂದು ಹೇಳಿರುವ ಮಲೈಕಾ ನನ್ನನ್ನೂ ಪೂರ್ಣಗೊಳಿಸಲು ಅಥವಾ ಗುರುತಿಸಿಕೊಳ್ಳಲು ನನಗೆ ಪುರುಷನ ಅವಶ್ಯಕತೆ ಇಲ್ಲ, ಅಗತ್ಯ ಇಲ್ಲ ಎಂದು ಹೇಳಿದ್ದಾರೆ. ನಾನು ಯಾರೊಂದಿಗಾದರೂ ಇರಬೇಕಿದ್ದರೆ, ನನ್ನದೇ ಷರತ್ತುಗಳ ಮೇಲೆ ಇರುತ್ತೇನೆ ಎಂದು ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಮಲೈಕಾ ಅರೋರಾ ಅವರ ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿವೆ.

More from Filmibeat

English summary
Tired of the rumors? Malaika Arora opens up about her single life, her bond with son Arhaan, and why she's finally done with relationship speculation.
Read more about: malaika arora rumours
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X