"ದಾಳಿ, ಕಿಡ್ನ್ಯಾಪ್, ಅತ್ಯಾಚಾರ, ಭಯವಾಗ್ತಿದೆ.. ಪಾಕಿಸ್ತಾನದಲ್ಲಿ ನರಕ ನೋಡ್ತಿದ್ದೀನಿ": ಪಾಕ್ ನಟಿ ಆಯೇಷಾ ಒಮರ್
ಪಾಕಿಸ್ತಾನದ ನಟಿ ಆಯೇಶಾ ಒಮರ್ ತಮ್ಮ ದೇಶದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. "ಸ್ವಾತಂತ್ರ್ಯ ಮತ್ತು ಸುರಕ್ಷತೆಯು ಇಲ್ಲಿಲ್ಲದ ಮಾನವನ ಮೂಲಭೂತ ಅವಶ್ಯಕತೆಯಾಗಿದೆ. ಆದರೆ ಅದು ಇಲ್ಲಿ ಸಿಗುತ್ತಿಲ್ಲ ಎಂದಿದ್ದಾರೆ. ಈ ಬಗ್ಗೆ ಜಿಯೋ ನ್ಯೂಸ್ ವರದಿ ಮಾಡಿದೆ.
"ನನಗೆ ಇಲ್ಲಿ ಸುರಕ್ಷಿತವಾಗಿದ್ದೇನೆ ಎನ್ನುವ ಭಾವನೆ ಬರುತ್ತಿಲ್ಲ. ನಾನು ರಸ್ತೆಯಲ್ಲಿ ನಡೆಯಲು ಆರಾಮಾಗಿ ಓಡಾಡಲು ಬಯಸುತ್ತೇನೆ. ಏಕೆಂದರೆ ಪ್ರತಿಯೊಬ್ಬ ಮನುಷ್ಯನು ಶುದ್ಧ ಗಾಳಿಗಾಗಿ ಹೊರಗೆ ಹೋಗಬೇಕು. ನಾನು ರಸ್ತೆಗಳಲ್ಲಿ ಸೈಕಲ್ ತುಳಿಯಲು ಬಯಸುತ್ತೇನೆ. ಆದರೆ ಅದನ್ನೆಲ್ಲಾ ನಾನಿಲ್ಲಿ ಏಕೆ ಮಾಡಬಾರದು?" ಎಂದು ಆಯೇಷಾ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡುವಾಗ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಮಹಿಳೆಯರು ಎಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಇಲ್ಲಿನ ಪುರುಷರು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಮಹಿಳೆಯರ ಭಯ, ಆತಂಕ ಎಂದಿಗೂ ಗೊತ್ತಾಗಲ್ಲ. ಇಲ್ಲಿರುವ ಮಹಿಳೆಯರು ಪ್ರತಿಕ್ಷಣ ಭಯಪಡುತ್ತಲೇ ಇದ್ದಾರೆ. ಹೆಣ್ಣು ಮಕ್ಕಳ ತಂದೆಗೆ ಅದು ಅರ್ಥವಾಗಬಹುದು" ಎಂದಿದ್ದಾರೆ.
"ನನ್ನ ದೇಶದಲ್ಲಿ ನಾನು ಮುಕ್ತವಾಗಿ ತಿರುಗಾಡುವ ಸಮಯ ಯಾವಾಗ ಬರುತ್ತದೆ? ಅಪಹರಣಕ್ಕೆ ಒಳಗಾಗುವ ಭಯವಿಲ್ಲದೆ, ಅತ್ಯಾಚಾರಕ್ಕೆ ಒಳಗಾಗುವ ಭಯವಿಲ್ಲದೆ, ದಾಳಿಗೆ ಒಳಗಾಗುವ ಭಯವಿಲ್ಲದೆ. ಸ್ವಾತಂತ್ರ್ಯ ಮತ್ತು ಸುರಕ್ಷತೆ ಮಾನವನ ಮೂಲಭೂತ ಅಗತ್ಯವಾಗಿದೆ" ಎಂದು ಆಕೆ ವಿವರಿಸಿದ್ದಾರೆ.
"ಪ್ರಪಂಚದ ಎಲ್ಲಾ ದೇಶಗಳಲ್ಲಿ ಅಪರಾಧಗಳು ನಡೆಯುತ್ತದೆ. ಆದರೆ ಜನರು ಕನಿಷ್ಠ ರಸ್ತೆಯಲ್ಲಿ ಓಡಾಡಬಹುದು. ಆದರೆ ಇಲ್ಲಿ(ಪಾಕಿಸ್ತಾನ) ಹತ್ತು ಜನರು ನಿಮ್ಮನ್ನು ಹಿಂಬಾಲಿಸದೇ ಅಥವಾ ನಿಮ್ಮನ್ನು ಕೆಟ್ಟದಾಗಿ ಮಾತನಾಡದೇ, ರ್ಯಾಗಿಂಗ್ ಮಾಡದೇ ನೀವು ಉದ್ಯಾನವನಕ್ಕೆ ಹೋಗಲು ಸಹ ಸಾಧ್ಯವಿಲ್ಲ. ಅವರು ಕೆಟ್ಟದಾಗಿ ಮಾತನಾಡುತ್ತಾರೆ. ಸ್ಪರ್ಶಿಸಲು ಪ್ರಯತ್ನಿಸುತ್ತಾರೆ. ನೀವೇನು ಮಾಡುವಿರಿ? ಎಂದು ಪಾಕಿಸ್ತಾನ ನಟಿ ಅಸಹಾಯಕತೆಯಿಂದ ಪ್ರಶ್ನಿಸಿದ್ದಾರೆ.
"ನಾವು ಸುತ್ತುವರಿದ ಸ್ಥಳಗಳಿಗೆ ಮಾತ್ರ ಹೋಗಬಹುದು. ಆದರೆ ಪ್ರತಿಯೊಬ್ಬರೂ ಇಂತಹ ಸ್ಥಳಗಳಿಗೆ ಪ್ರವೇಶ ಹೋಗಲು ಸಾಧ್ಯವಿಲ್ಲ. ತಮ್ಮ ನೆರೆಮನೆಯಲ್ಲಿರುವ ಅಡುಗೆ ಮಾಡುವವನು ಕೂಡ ಕೆಟ್ಟದಾಗಿ ತಮ್ಮನ್ನು ಸ್ಪರ್ಶಿಸಲು ಪ್ರಯತ್ನಿಸುತ್ತಾನೆ ಎಂದು ಆಕೆ ವಿವರಿಸಿದ್ದಾರೆ. ದುಬಾರಿ ಏರಿಯಾಗಳಲ್ಲೂ ಕೂಡ ಓಡಾಡಲು ಭಯವಾಗುತ್ತದೆ."
"ಕೋವಿಡ್ ಸಮಯದಲ್ಲಿ ಲಾಕ್‌ಡೌನ್ ಆಗಿದ್ದಾಗ ಮಾತ್ರ ಕೊಂಚಮಟ್ಟಿಗೆ ಧೈರ್ಯವಾಗಿ ನಗರದಲ್ಲಿ ಓಡಾಡಿದ್ದೆ" ಎಂದು ನೆನಪಸಿಕೊಂಡಿದ್ದಾರೆ. "ತನ್ನ ತಾಯಿ ದೇಶವನ್ನು ತೊರೆಯಲು ಮನಸ್ಸು ಮಾಡಿದ್ದಾಳೆ. ಪಾಕಿಸ್ತಾನದಲ್ಲಿ ಹುಟ್ಟಿದ ತನ್ನ ಸಹೋದರ ಈಗ ಡೆನ್ಮಾರ್ಕ್‌ನಲ್ಲಿ ನೆಲೆಸಿದ್ದಾನೆ" ಎಂದು ಆಕೆ ಬಹಿರಂಗಪಡಿಸಿದ್ದಾರೆ.
"ತಾನು ಕಾಲೇಜಿನಲ್ಲಿದ್ದಾಗ ಕರಾಚಿಗಿಂತ ಲಾಹೋರ್‌ನಲ್ಲಿ ಹೆಚ್ಚು ಸುರಕ್ಷಿತವಾಗಿರುದ್ದೆ. ತಾನು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದೆ ಎಂದು ಆಯೇಷಾ ಹೇಳಿದ್ದಾರೆ. ಕರಾಚಿಯಲ್ಲಿನ ತನ್ನ ಅನುಭವಗಳ ಬಗ್ಗೆ ಕೇಳಿದಾಗ, ಆಕೆ ಎರಡು ಬಾರಿ ಸಂಷಕ್ಟಕ್ಕೆ ಸಿಲುಕಿದ್ದಾಗಿ" ಆಕೆ ಹೇಳಿದ್ದಾರೆ.


Click it and Unblock the Notifications











