For Quick Alerts
  ALLOW NOTIFICATIONS  
  For Daily Alerts

  ಅಲ್ಲಿಗೆ ಬಂದರೆ ಭಾರತೀಯರಿಗೆ ತೊಂದರೆಯಾಗುತ್ತೆ: ಮನಗೆದ್ದ ಸೋನು ನಿಗಂ ನಿರ್ಣಯ

  |

  ಕೊರೊನಾ ಭೀತಿ ಎಲ್ಲೆಡೆ ಆವರಿಸಿದ್ದು, ಸೆಲಿಬ್ರಿಟಿಗಳೆಲ್ಲರೂ ಮನೆಗಳಲ್ಲಿ ಬೆಚ್ಚಗೆ ಕುಳಿತು ಬಿಡುವಿನ ಸಮಯ ಕಳೆಯುತ್ತಿದ್ದಾರೆ.

  ವಿದೇಶದಲ್ಲಿ ಮೋಜು ಮಾಡುತ್ತಿದ್ದ ಕೆಲವು ಬಾಲಿವುಡ್ ಸೆಲೆಬ್ರಿಟಿಗಳು ಕೊರೊನಾ ಹಬ್ಬಿದ ಕೂಡಲೇ ತರಾತುರಿಯಲ್ಲಿ ಭಾರತಕ್ಕೆ ಮರಳಿದ್ದಾರೆ.

  ಆದರೆ ಖ್ಯಾತ ಗಾಯಕ ಸೋನು ನಿಗಂ ಮಾತ್ರ ಭಾರತಕ್ಕೆ ಬರುವುದಿಲ್ಲ ಎಂದು ನಿರ್ಣಯ ಕೈಗೊಂಡಿದ್ದಾರೆ. ಅವರ ನಿರ್ಣಯ ಹಲವರ ಮನಗೆದ್ದಿದೆ.

  ಹೌದು, ಕೊರೊನಾ ಪೀಡಿದ ದುಬೈ ನಲ್ಲಿ ಸೋನು ನಿಗಂ ತಮ್ಮ ಕುಟುಂಬದೊಂದಿಗೆ ಸಿಲುಕಿಕೊಂಡಿದ್ದಾರೆ. ಸೋನು ನಿಗಂ, ಮಡದಿ ಮತ್ತು ಮಗು ದುಬೈ ನಲ್ಲಿದ್ದಾರೆ. ಅಲ್ಲಿ ಈಗಾಗಲೇ ಕೊರೊನಾ ಹಬ್ಬಿದೆ.

  ದುಬೈ ನಲ್ಲೇ ವ್ಯಾಸಂಗ ಮಾಡುತ್ತಿರುವ ಸೋನು ನಿಗಂ ಮಗ

  ದುಬೈ ನಲ್ಲೇ ವ್ಯಾಸಂಗ ಮಾಡುತ್ತಿರುವ ಸೋನು ನಿಗಂ ಮಗ

  ಮಾರ್ಚ್ 6 ರಂದು ಮುಂಬೈನಲ್ಲಿದ್ದ ಕಾರ್ಯಕ್ರಮವೊಂದು ರದ್ದಾದ ಕಾರಣದಿಂದ ಸೋನು ನಿಗಂ ದುಬೈ ನಲ್ಲಿದ್ದ ಪತ್ನಿ ಮತ್ತು ಮಗನನ್ನು ಕಾಣಲು ದುಬೈ ಗೆ ತೆರಳಿದ್ದರು. ಸೋನು ನಿಗಂ ಮಗ ಅಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಪತ್ನಿ ಸಹ ಅಲ್ಲಿಯೇ ಇದ್ದಾರೆ.

  ಭಾರತಕ್ಕೆ ಈಗ ಬರುವುದಿಲ್ಲ: ಸೋನು ನಿಗಂ

  ಭಾರತಕ್ಕೆ ಈಗ ಬರುವುದಿಲ್ಲ: ಸೋನು ನಿಗಂ

  ಈಗ ಕೊರೊನಾ ಭೀತಿ ಹೆಚ್ಚಾಗಿದ್ದರೂ ಸಹ ಭಾರತಕ್ಕೆ ತಾವು ಬರುವುದಿಲ್ಲ, ಇನ್ನೂ ಸ್ವಲ್ಪ ದಿನ ಇಲ್ಲಿಯೇ ಉಳಿಯುತ್ತೇನೆ. ಈ ಸಮಯದಲ್ಲಿ ಪ್ರಯಾಣ ಮಾಡಿ ನನ್ನ ಸುತ್ತಲಿನ ಜನರನ್ನು ತೊಂದರೆಗೆ ಸಿಲುಕಿಸುವುದು ನನಗೆ ಇಷ್ಟವಿಲ್ಲ ಎಂದು ಸೋನು ನಿಗಂ ಹೇಳಿದ್ದಾರೆ.

  ಅಪ್ಪನನ್ನು ನೋಡಲು ಬರಬೇಕಿತ್ತು: ಸೋನು ನಿಗಂ

  ಅಪ್ಪನನ್ನು ನೋಡಲು ಬರಬೇಕಿತ್ತು: ಸೋನು ನಿಗಂ

  ಮುಂಬೈನಲ್ಲಿ ಅಪ್ಪ ಮತ್ತು ಸಹೋದರಿ ಇದ್ದಾರೆ. ಅವರನ್ನು ಕಾಣಲು ಬರುವ ಆಸೆ ಇದೆ. ಆದರೆ ಬರುವ ಸಮಯದಲ್ಲಿ ನಾನು ಕೊರೊನಾ ಹೊತ್ತು ಬಂದರೆ ಅದು ಅವರಿಗೆ ತೊಂದರೆ ಕೊಟ್ಟಂತೆ ಆಗುತ್ತದೆ, ಹಾಗಾಗಿ ಇನ್ನೂ ಸ್ವಲ್ಪ ದಿನ ನಾನು ಇಲ್ಲಿಯೇ ಉಳಿಯುತ್ತೇನೆ, ಪರಿಸ್ಥಿತಿ ಸರಿಹೋದ ಬಳಿಕ ವಾಪಸ್ಸಾಗುತ್ತೇನೆ ಎಂದು ಸೋನು ನಿಗಂ ಹೇಳಿದ್ದಾರೆ.

  ಗಾಯಕಿ ಕನ್ನಿಕಾ ಕಪೂರ್ ಗೆ ಕೊರೊನಾ

  ಗಾಯಕಿ ಕನ್ನಿಕಾ ಕಪೂರ್ ಗೆ ಕೊರೊನಾ

  ನಿನ್ನೆಯಷ್ಟೆ ಬಾಲಿವುಡ್ ಖ್ಯಾತ ಗಾಯಕಿ ಕನ್ನಿಕಾ ಕಪೂರ್ ಕೊರೊನಾ ಸೋಂಕಿಗೆ ಗುರಿಯಾಗಿರುವುದು ಬಹಿರಂಗವಾಗಿದೆ. ಆಕೆ ಲಕ್ನೋದಲ್ಲಿ ಪಾರ್ಟಿ ಮಾಡಿದ್ದರು. ಪಾರ್ಟಿಯಲ್ಲಿ ವಸುಂಧರಾ ರಾಜೆ ಉಪಸ್ಥಿತರಿದ್ದರು.

  English summary
  Singer Sonu Nigam said do not want to risk peoples life by coming to India. He is now in Dubai where coronavirus outburst.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X