"15 ದಿನಗಳ ಕಾಲ ನನ್ನ ಮೂತ್ರ ನಾನೇ ಸೇವಿಸಿದೆ"; ನಟ ಪರೇಶ್ ರಾವಲ್

ಬಾಲಿವುಡ್ ನಟ, ಬಿಜೆಪಿ ನಾಯಕ ಪರೇಶ್ ರಾವಲ್ ಚಿರಪರಿಚಿತ ಹೆಸರು. ಸಾಕಷ್ಟು ಸಿನಿಮಾಗಳಲ್ಲಿ ತಮ್ಮ ವಿಭಿನ್ನ ಪಾತ್ರಗಳಿಂದ ಗಮನ ಸೆಳೆದವರು. ಹಿಂದಿ ಮಾತ್ರವಲ್ಲದೇ ತೆಲುಗು ಚಿತ್ರಗಳಲ್ಲಿ ಕೂಡ ಪರೇಶ್ ನಟಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ 'ಶಂಕರ್ ದಾದಾ ಎಂಬಿಬಿಎಸ್' ಚಿತ್ರನಟ ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಇಂಟ್ರೆಸ್ಟಿಂಗ್ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

80ರ ದಶಕದ ಆರಂಭದಲ್ಲೇ ಪರೇಶ್ ರಾವಲ್ ಚಿತ್ರರಂಗ ಪ್ರವೇಶಿಸಿದರು. 240ಕ್ಕೂ ಅಧಿಕ ಸಿನಿಮಾಗಳಲ್ಲಿ ಪೋಷಕ ನಟರಾಗಿ ನಟಿಸಿದ್ದಾರೆ. ತಮ್ಮ ಅದ್ಭುತ ನಟನೆಗೆ ರಾಷ್ಟ್ರಪ್ರಶಸ್ತಿಯನ್ನು ಕೂಡ ಮುಡಿಗೇರಿಸಿಕೊಂಡಿದ್ದಾರೆ. ಚಿತ್ರೀಕರಣದ ವೇಳೆ ಒಮ್ಮೆ ಗಾಯಗೊಂಡಿದ್ದ ಪರೇಶ್ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುವಂತಾಗಿತ್ತು. ಕಾಲಿಗೆ ಪೆಟ್ಟಾಗಿತ್ತು. ಕೊನೆಗೆ ತಮ್ಮ ಮೂತ್ರವನ್ನು ತಾವೇ ಕುಡಿದು ಗಾಯ ವಾಸಿ ಮಾಡಿಕೊಂಡಿದ್ದಾಗಿ ಅವರು ಹೇಳಿದ್ದಾರೆ.

I drank my urine like beer for 15 days says Actor Paresh Rawal

ಅಜಯ್ ದೇವಗನ್ ತಂದೆ ವೀರು ದೇವಗನ್ ತಮಗೆ ಹೀಗೆ ಮೂತ್ರ ಸೇವಿಸುವ ಸಲಹೆ ನೀಡಿದ್ದಾಗಿ ಪರೇಶ್ ರಾವಲ್ ಹೇಳಿದ್ದಾರೆ. ಲಾಲಂಟಾಪ್ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. "ನಾನು ಕಾಲಿಗೆ ಪೆಟ್ಟಾಗಿ ನಾನಾವತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದೆ. ಆಗ ನನ್ನನ್ನು ಭೇಟಿ ಮಾಡಲು ವೀರು ದೇವಗನ್ ಬಂದಿದ್ದರು. ಆಗ ನನ್ನ ಸ್ಥಿತಿ ನೋಡಿ ಒಂದು ಸಲಹೆ ನೀಡಿದ್ದರು. ಪ್ರತಿದಿನ ಬೆಳಗ್ಗೆ ಮೊದಲು ಹುಯ್ಯುವ ಮೂತ್ರವನ್ನು ಕುಡಿಯಲು ಹೇಳಿದ್ದರು. ಆ ರೀತಿ ಮಾಡಿದರೆ ಗಾಯ ಬೇಗ ವಾಸಿ ಆಗುತ್ತದೆ ಎಂದಿದ್ದರು"

"ವೀರು ದೇವಗನ್ ಹೇಳಿದಂತೆ ನಾನು 15 ದಿನ ಮಾಡಿದ್ದೆ. ಆ ಬಳಿಕ ವೈದ್ಯರು ಕಾಲಿನ ಎಕ್ಸ್‌ರೇ ತೆಗೆದು ನೋಡಿ ಶಾಕ್ ಆಗಿದ್ದರು. ಇದು ಹೇಗೆ ಸಾಧ್ಯವಾಯಿತು ಎಂದು ಕೇಳಿದ್ದರು. ನನಗೂ ಎಕ್ಸ್‌ರೇಯಲ್ಲಿ ಒಂದು ಬಿಳಿ ಗೆರೆ ಕಾಣಿಸಿತು. ನಾನು ಹೆಚ್ಚು ಕಮ್ಮಿ ಎರಡೂವರೆ ತಿಂಗಳು ಆಸ್ಪತ್ರೆಯಲ್ಲಿದ್ದು ಡಿಸ್ಚಾರ್ಜ್ ಆಗಬೇಕಿತ್ತು. ಅಚ್ಚರಿ ಎನ್ನುವಂತೆ ಒಂದೂವರೆ ತಿಂಗಳಿಗೆ ಡಿಸ್ಚಾರ್ಜ್ ಆಗಿ ಹೊರ ಬಂದಿದ್ದೆ. ಅದು ನಿಜಕ್ಕೂ ಮ್ಯಾಜಿಕ್" ಎಂದು ಪರೇಶ್ ರಾವಲ್ ತಿಳಿಸಿದ್ದಾರೆ.

1996ರಲ್ಲಿ ಬಂದಿದ್ದ 'ಘಾತಕ್' ಸಿನಿಮಾ ಚಿತ್ರೀಕರಣದ ವೇಳೆ ಈ ಘಟನೆ ನಡೆದಿತ್ತು. ದಿನದ ಮೊದಲ ಮೂತ್ರವನ್ನು ಬಿಯರ್ ಕುಡಿದಂತೆ ಸಿಪ್ ಬೈ ಸಿಪ್ ಕುಡಿದಿದ್ದೆ. ಆ ಸಮಯದಲ್ಲಿ ಆಲ್ಕೋಹಾಲ್, ಮಾಂಸ, ತಂಬಾಕು ತ್ಯಜಿಸುವಂತೆಯೂ ವೀರು ದೇವಗನ್ ಹೇಳಿದ್ದರು. ಅವರು ಹೇಳಿದಂತೆಯೇ ನಾನು ಕೇಳಿದ್ದೆ. ಅಂದಹಾಗೆ ಈ ವಿಚಾರವನ್ನು ಮನೆಯವರಿಗೆ ಹೇಳಿದ್ರಾ? ಎನ್ನುವ ಪ್ರಶ್ನೆಗೆ ಎಲ್ಲಾ ವಿಚಾರವನ್ನು ಮನೆಯವರಿಗೆ ಹೇಳಬೇಕೆಂದು ಇಲ್ಲ ಅಲ್ವಾ? ಎಂದು ಮರುಪ್ರಶ್ನೆ ಹಾಕಿದ್ದಾರೆ.

ಸಹಜ ನಟನೆಯಿಂದ ಪರೇಶ್ ರಾವಲ್ ಚಿತ್ರರಂಗಕ್ಕೆ ಜನಪ್ರಿಯರಾಗಿದ್ದಾರೆ. 1985ರಲ್ಲಿ ಬಂದಿದ್ದ 'ಅರ್ಜುನ್' ಚಿತ್ರದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವಂತಾಯಿತು. ಖಳನಾಗಿ ಆರಂಭದಲ್ಲಿ ಅಬ್ಬರಿಸಿದ್ದ ಪರೇಶ್ ಬಳಿಕ ಪೋಷಕ ಪಾತ್ರಗಳತ್ತ ವಾಲಿದ್ದು. ನಿಧಾನವಾಗಿ ಹಾಸ್ಯ ಕಲಾವಿದರಾಗಿಯೂ ಗುರ್ತಿಸಿಕೊಂಡಿದ್ದರು.

'ರಾಮ್ ಲಖನ್', 'ಕ್ಷಣಂ ಕ್ಷಣಂ', 'ದಿಲ್ವಾಲೆ', 'ನಾಯಕ್', 'ಹಂಗಾಮ', 'ಓ ಮೈ ಗಾಡ್', 'ವೆಲ್‌ಕಮ್ ಬ್ಯಾಕ್', 'ಟೈಗರ್ ಜಿಂದಾಹೈ' ಸೇರಿ ಸಾಕಷ್ಟು ಸಿನಿಮಾಗಳಲ್ಲಿ ಪರೇಶ್ ರಾವಲ್ ಮಿಂಚಿದ್ದಾರೆ. ಇದೇ ವರ್ಷ ಬಂದ 'ದಿ ಸ್ಟೋರಿ ಟೆಲ್ಲರ್' ಚಿತ್ರದ ಲೀಡ್ ರೋಲ್‌ನಲ್ಲಿ ಪರೇಶ್ ನಟಿಸಿದ್ದರು. ದೇಶ ವಿದೇಶದ ಚಿತ್ರೋತ್ಸವಗಳಲ್ಲಿ ಈ ಸಿನಿಮಾ ಪ್ರದರ್ಶನವಾಗಿತ್ತು. ನೇರವಾಗಿ ಸಿನಿಮಾ ಜಿಯೋ ಹಾಟ್‌ಸ್ಟರ್‌ನಲ್ಲಿ ಸ್ಟ್ರೀಮಿಂಗ್ ಆಗಿತ್ತು. ಸದ್ಯ ಏಳೆಂಟು ಚಿತ್ರಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ.

More from Filmibeat

English summary
Bollywood Actor Paresh Rawal reveals I drink my own urine, for recovery from Injury;
Read more about: paresh rawal hindi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X