ಹೃದಯಾಘಾತವಲ್ಲ,ವ್ಯವಸ್ಥಿತ ಸಂಚು ; ಹುಡುಗರು 'ಪಂಕಜಾ' ಸಾವಿನ ಹಿಂದೆ ಕರಾಳ ಶಕ್ತಿ?ಭಯಾನಕ ಸತ್ಯ ಬಿಚ್ಚಿಟ್ಟ ಶೆಫಾಲಿ ಪತಿ

ಅದೃಷ್ಟ.. ದುರಾದೃಷ್ಟಗಳೆಲ್ಲ ಅವರ ಅವರ ನಂಬಿಕೆಗೆ ಬಿಟ್ಟಿದ್ದಾದರೂ, ನವಗ್ರಹಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ. ಆದರೆ.. ಗ್ರಹಗಳ ಮೂಲಕ ಮನುಷ್ಯನ ಕಾರ್ಯಗಳನ್ನು ನಿಯಂತ್ರಿಸಲು ಸಾಧ್ಯ ಎಂಬ ಕಲ್ಪನೆಗೆ ಆಧಾರವೇ ಇಲ್ಲ, ಅದು ಆಧಾರ ರಹಿತವಾದ ನಂಬಿಕೆ ಎನ್ನುವುದು ವಿಜ್ಞಾನಿಗಳ ವಾದ. ಇನ್ನು ಬೆಳಕು ಇದ್ದಲ್ಲಿ ನೆರಳು ಇರುವಂತೆ, ಸಕಾರಾತ್ಮಕ ಶಕ್ತಿ ಇರುವ ಜಾಗದಲ್ಲಿ ನಕರಾತ್ಮಕ..

ಶಕ್ತಿಗಳು ಕೂಡ ಇರುತ್ತವೆ ಎನ್ನುವ ಮಾತನ್ನು ಕೂಡ ಹಲವರು ಆಗಾಗ ಹೇಳುತ್ತಾರೆ. ಮನುಷ್ಯ ತನ್ನ ಬುದ್ದಿವಂತಿಕೆಯಿಂದ ಎಷ್ಟೇ ಎತ್ತರಕ್ಕೆ ಬೆಳೆದರೂ ಕೂಡ ಕೆಲ ಒಮ್ಮೆ ಅಗೋಚರ ಶಕ್ತಿಗಳ ಪ್ರಭಾವದ ಮುಂದೆ ಅಸಹಾಯಕನಾಗುತ್ತಾನೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇಷ್ಟೇ ಅಲ್ಲ ಕೆಲ ಒಮ್ಮೆ ಆಕಸ್ಮಿಕವಾಗಿ ಬದುಕಿನಲ್ಲಿ ನಡೆಯುವ ದುರಂತಗಳ ನಿಗೂಢತೆ ಕಂಡು ಇದರ ಹಿಂದೆ ಕೇವಲ ವೈದ್ಯಕೀಯ ಕಾರಣ ಅಲ್ಲ ಬದಲಿಗೆ ಬೇರೆಯದ್ದೇ ಕಾರಣ ಇದೆ ಎನ್ನುವ ಅನುಮಾನವನ್ನು ವ್ಯಕ್ತಪಡಿಸುತ್ತಾರೆ. ಉದಾಹರಣೆಗೆ ಪರಾಗ್ ತ್ಯಾಗಿ.

I Felt the Evil Parag Tyagi s Bone-Chilling Revelation on the Curse that Took Shefali Jariwala

ಹೌದು, ಪರಾಗ್ ತ್ಯಾಗಿ.. ಕಳೆದ ವರ್ಷ ಇಹಲೋಕ ತ್ಯಜಿಸಿದ ಶೆಫಾಲಿ ಜರಿವಾಲ ಅವರ ಪತಿ. ಕಾಂಟಾ ಲಗಾ ಹಾಡಿನ ಮೂಲಕವೇ ಜನ ಮನ ಗೆದ್ದು ಖ್ಯಾತಿಯ ಶಿಖರಕ್ಕೇರಿದ್ದ ಶೆಫಾಲಿ ಕನ್ನಡದಲ್ಲಿ ಹುಡುಗರು ಚಿತ್ರದ ಪಂಕಜಾ ಹಾಡಿಗೆ ಕೂಡ ಹೆಜ್ಜೆ ಹಾಕಿದ್ದರು. ಕನ್ನಡಿಗರ ಹೃದಯ ಗೆದ್ದಿದ್ದರು.

ಆದರೆ, ವಿಧಿಲಿಖಿತ ಕಳೆದ ವರ್ಷ ಹೃದಯಾಘಾತದಿಂದ ಶೆಫಾಲಿ ಕೇವಲ 42ನೇ ವರ್ಷದಲ್ಲಿ ಕೊನೆಯುಸಿರೆಳೆದರು.ಶೆಫಾಲಿ ದೈಹಿಕವಾಗಿ ಅಗಲಿ ಆರು ತಿಂಗಳಾಗಿವೆ. ಆದರೆ.. ಆ ನೋವು ಮಾತ್ರ ಇವರ ಪತಿ ಪರಾಗ್ ಮನದಲ್ಲಿ ಇನ್ನೂ ಹಾಗೇ ಇದೆ. ದಿನನಿತ್ಯ ಶೆಫಾಲಿ ನೆನಪಿನಲ್ಲಿ ಕಾಲ ದೂಡುತ್ತಿರುವ ಪರಾಗ್ ತಮ್ಮ ಪತ್ನಿ ಶೆಫಾಲಿ ನೆನಪಿಗಾಗಿ ತಮ್ಮ ಎದೆಯ ಮೇಲೆ ಭಾವಚಿತ್ರವನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ.

ಇಂಥಾ ಪರಾಗ್ ತ್ಯಾಗಿ ನನ್ನ ಪತ್ನಿಯದ್ದು ಸಹಜ ಸಾವು ಅಲ್ಲ ಎಂದು ಹೇಳಿದ್ದಾರೆ. ಶೆಫಾಲಿ ನಿಧನಕ್ಕೆ ಬ್ಲ್ಯಾಕ್ ಮ್ಯಾಜಿಕ್ ಕಾರಣವೆಂದು ಹೇಳಿದ್ದಾರೆ. ಈ ಮೂಲಕ ಹೊಸದೊಂದು ಚರ್ಚೆಗೆ ನಾಂದಿ ಹಾಡಿದ್ದಾರೆ. ಈ ಕುರಿತು ಹಿಂದಿ ಬಿಗ್ ಬಾಸ್ ಸೀಸನ್ 13ರ ಸ್ಫರ್ಧಿ ಪರಾಸ್ ಛಾಬ್ರಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪರಾಗ್ ತ್ಯಾಗಿ ಅನೇಕರು ಇಂತಹ ವಿಷಯಗಳನ್ನು ನಂಬದಿದ್ದರೂ ಕೂಡ ನನಗೆ ವ್ಯೆಯಕ್ತಿಕವಾಗಿ ಇಂತಹ ಶಕ್ತಿಗಳ ಅಸ್ತಿತ್ವದ ಬಗ್ಗೆ ದೃಢವಾದ ನಂಬಿಕೆಯಿದೆ ಎಂದು ಹೇಳಿದ್ದಾರೆ.

ಎಲ್ಲಿ ದೇವರಿದ್ದಾನೆ ಅಲ್ಲಿ ನಕಾರಾತ್ಮಕ ಶಕ್ತಿಗಳು ಕೂಡ ಇರುತ್ತವೆ ಎಂದು ಹೇಳಿರುವ ಪರಾಗ್ ತ್ಯಾಗಿ ಇಂದಿನ ಕಾಲದಲ್ಲಿ ಜನ ತಮ್ಮ ತಮ್ಮ ದುಃಖಕ್ಕಿಂತ ಹೆಚ್ಚಾಗಿ ಇತರರ ಸಂತೋಷವನ್ನು ಕಂಡು ದುಃಖ ಪಡುತ್ತಾರೆ ಎಂದು ಹೇಳಿದ್ದಾರೆ. ಇದನ್ನು ಯಾರು ಮಾಡಿದ್ದು ಎಂದು ನಾನು ಹೇಳಲಾರೆ ಆದರೆ ಶೆಫಾಲಿ ಮೇಲೆ ಬ್ಲ್ಯಾಕ್ ಮ್ಯಾಜಿಕ್ ಪ್ರಯೋಗ ಮಾಡಿದ್ದು ಸತ್ಯ ಎಂದು ಹೇಳಿರುವ ಪರಾಗ್ ಈ ಮೊದಲು ಕೂಡ ಒಮ್ಮೆ ಪ್ರಯೋಗ ಮಾಡಲಾಗಿತ್ತು ಆದರೆ ಅದರ ಪರಿಣಾಮ ಹೆಚ್ಚಿರಲಿಲ್ಲ. ಆದರೆ ಎರಡನೇ ಬಾರಿ ಅದರ ತೀವೃತೆ ಹೆಚ್ಚಿತ್ತು ಎಂದು ಹೇಳಿದ್ದಾರೆ. ಮೊದಲ ಬಾರಿ ಈ ಪ್ರಯೋಗ ಮಾಡಿದಾಗ ಶೆಫಾಲಿಯನ್ನು ಮುಟ್ಟಿದಾಗ ನನಗೆ ಅನುಭವಕ್ಕೆ ಬಂದಿತ್ತು. ಆದರೆ ನಾನು ಗಾಢವಾಗಿ ಅದರ ಬಗ್ಗೆ ಯೋಚನೆ ಮಾಡಲಿಲ್ಲ ಎಂದಿದ್ದಾರೆ.

I Felt the Evil Parag Tyagi s Bone-Chilling Revelation on the Curse that Took Shefali Jariwala

ಮುಂದುವರೆದು ನಮ್ಮ ಮನೆಯಲ್ಲಿ ಪಂಚಮುಖಿ ಹನುಮಂತನ ವಿಗ್ರಹ ಇತ್ತು. ಆ ವಿಗ್ರಹಕ್ಕೆ ನಾನು ದಿನನಿತ್ಯ ಪೂಜೆ ಮಾಡುತ್ತಿದ್ದೆ ಎಂದು ಹೇಳಿರುವ ಪರಾಗ್ ತ್ಯಾಗಿ ಅದೊಂದು ದಿನ ನಮ್ಮ ಮನೆಗೆ ಯಾರೋ ಒಬ್ಬರು ಬಂದಿದ್ದರು. ಅವರು ಮನೆಯಲ್ಲಿ ಪಂಚಮುಖಿ ಹನುಮಂತನ ವಿಗ್ರಹ ಇಡಬಾರದು ಎಂದು ಹೇಳಿದರು. ಶೆಫಾಲಿ ನನ್ನ ಮನ ಒಲಿಸಿದಳು ಎಂದು ಹೇಳಿದ್ದಾರೆ.

ಆ ನಂತರ ನಾನು ಆ ಮೂರ್ತಿಯನ್ನು ವಿಸರ್ಜನೆ ಮಾಡಿ ಬಂದೆ ಆದರೆ ದುಃಖ ನನಗೆ ತಡೆಯಲಾಗಲಿಲ್ಲ. ಹೀಗಾಗಿ ಮತ್ತೆ 15 ನಿಮಿಷದ ನಂತರ ನಾನು ಅದೇ ಜಾಗಕ್ಕೆ ಹೋದೆ, ಆದರೆ ಅಲ್ಲಿ ಆ ವಿಗ್ರಹ ಇರಲಿಲ್ಲ ಎಂದು ಹೇಳಿರುವ ಪರಾಗ್ ತ್ಯಾಗಿ ಇದಾದ ಕೆಲವೇ ತಿಂಗಳಿನಲ್ಲಿ ನಾನು ಶೆಫಾಲಿಯನ್ನು ಕಳೆದುಕೊಂಡೆ ಎಂದು ಹೇಳಿದ್ದಾರೆ. ಬ್ಲ್ಯಾಕ್ ಮಾಜಿಕ ಮಾಡುವ ಮೂಲಕ ಶೆಫಾಲಿ ಪ್ರಾಣವನ್ನು ಬಲಿ ಪಡೆದರು ಎಂದಿದ್ದಾರೆ. ಸದ್ಯ ಪರಾಗ್ ತ್ಯಾಗಿ ಅವರ ಈ ಮಾತುಗಳಿಗೆ ಬಗೆ ಬಗೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವರು ಮೂಢನಂಬಿಕೆ ಅಂದರೆ ಇನ್ನೂ ಕೆಲವರು ಪರಾಗ್ ಮಾತುಗಳಿಗೆ ಸಮ್ಮತಿಯನ್ನು ಸೂಚಿಸುತ್ತಿದ್ದಾರೆ.

More from Filmibeat

English summary
Was Shefali Jariwala a victim of a dark ritual? Husband Parag Tyagi makes a sensational claim about the 'evil eye' that led to the 'Kaanta Laga' star’s tragic exit. Discover the unsettling details of his supernatural suspicions.
Read more about: black magic death
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X