ಆ ಚಿತ್ರಕ್ಕೆ ಆ ಇಬ್ಬರ ಎದುರು ನಾನು ವಿವಸ್ತ್ರಳಾಗಿದ್ದೆ- 'ನಗ್ನ' ಸತ್ಯ ಹೇಳಿದ ಖ್ಯಾತ ನಟಿ
ಗೆಲುವು-ಸೋಲು-ವ್ಯಾಪಾರ-ವ್ಯವಹಾರ ಏನೇ ಇರಲಿ ಕೆಲ ಚಿತ್ರಗಳು ಮತ್ತು ಪಾತ್ರಗಳು ಕಲಾವಿದರ ಹೃದಯಕ್ಕೆ ಹತ್ತಿರವಾಗಿರುತ್ತಾವೆ. ಮರೆಯಲಾಗದ ಅನುಭವಕ್ಕೆ ಕಾರಣವಾಗಿರುತ್ತಾವೆ. ಇನ್ನು, ಪಾತ್ರಕ್ಕೆ ನ್ಯಾಯ ಸಲ್ಲಿಸಲು ಸಾಮಾನ್ಯವಾಗಿ ಕಲಾವಿದರು ಅದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳುತ್ತಾರೆ. ಪರಕಾಯ ಪ್ರವೇಶವನ್ನು ಮಾಡುತ್ತಾರೆ. ಮುಜುಗರಕ್ಕೀಡಾಗುವ ಸನ್ನಿವೇಶಗಳಿದ್ದರೂ ಕೂಡ ಪಾತ್ರದ ದೃಷ್ಟಿಯಿಂದ ಅಭಿನಯಿಸುತ್ತಾರೆ. ಅದರಲ್ಲಿಯೂ ನಾಯಕಿಯರು ಕೆಲ ಒಮ್ಮೆ ಅ*ತ್ಯಾಚಾರ ಮತ್ತು ದೌರ್ಜನ್ಯಕ್ಕೊಳಗಾಗುವ ಪಾತ್ರಗಳನ್ನು...
ನಿರ್ವಹಿಸುತ್ತಾರೆ. ಮತ್ತೂ ಕೆಲವರು ಎಲ್ಲರೆದುರೇ ಬೆತ್ತಲಾಗುತ್ತಾರೆ. ಹಾಗಂಥ ಇಂತಹ ಸನ್ನಿವೇಶಗಳಲ್ಲಿ ಅಭಿನಯಿಸುವುದು ಅವರ ಪಾಲಿಗೆ ಸುಲಭ ಆಗಿರುವುದಿಲ್ಲ. ಅದಕ್ಕೆ ಅದ್ರದ್ದೇ ಆದ ಸವಾಲುಗಳಿರುತ್ತಾವೆ. ನಂಬಿಕೆಯ ಪ್ರಶ್ನೆ ಕೂಡ ಇರುತ್ತೆ. ಸದ್ಯ ಇಂತಹದ್ದೇ ಒಂದು ಪ್ರಸಂಗವನ್ನು ಸಯಾನಿ ಗುಪ್ತಾ ನೆನಪು ಮಾಡಿಕೊಂಡಿದ್ದಾರೆ.

ಹೌದು, ಸಯಾನಿ ಗುಪ್ತಾ.. ಪಾತ್ರ ಯಾವುದೇ ಇರಲಿ ಆ ಪಾತ್ರಕ್ಕೆ ತನು-ಮನ ಅರ್ಪಿಸಿ ನ್ಯಾಯ ಸಲ್ಲಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುವ ಕೆಲವೇ ಕೆಲ ಹಿಂದಿ ನಟಿಯರಲ್ಲಿ ಒಬ್ಬರು. ಬಾಲಿವುಡ್‌ನಲ್ಲಿ ಹನ್ನೆರಡು ವರ್ಷಗಳನ್ನು ಪೂರೈಸಿರುವ ಸಯಾಮಿ ಇಲ್ಲಿಯವರೆಗೆ ಭಿನ್ನ ವಿಭಿನ್ನ ಪಾತ್ರಗಳನ್ನು ಮಾಡಿದ್ದಾರೆ.
''ಜಾಲಿ ಎಲ್.ಎಲ್.ಬಿ 2''.. ''ಪಾರ್ಚಡ್''.. ''ಜಗ್ಗಾ ಜಾಸೂಸ್''.. ''ಆರ್ಟಿಕಲ್ 15''.. ''ಮಾರ್ಗರಿಟಾ ವಿತ್ ಎ ಸ್ಟ್ರಾ'' ಪ್ರಮುಖವಾದವು. ಇನ್ನೂ ಕೇವಲ ನಟಿಯಾಗಿ ಅಷ್ಟೇ ಅಲ್ಲ ಗಾಯಕಿಯಾಗಿ ಕೂಡ ಸಯಾನಿ ಗುಪ್ತಾ ಗುರುತಿಸಿಕೊಂಡಿದ್ದಾರೆ. ''ಇನ್‌ಸೈಡ್ ಎಡ್ಜ್''.. ''ಫೋರ್ ಮೋರ್ ಶಾಟ್ಸ್''..''ದೆಹಲಿ ಕ್ರೈಮ್''.. ಸೇರಿ ಹಲವು ಜನ ಮನ ಗೆದ್ದ ವೆಬ್ ಸರಣಿಗಳಲ್ಲಿ ಕೂಡ ಸಯಾನಿ ಮಹತ್ವದ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಇಂಥಾ ಸಯಾನಿ ಗುಪ್ತಾ ಪಾತ್ರಕ್ಕೆ ನ್ಯಾಯ ಸಲ್ಲಿಸಲು ತಾವು ಬೆ*ತ್ತಲೆ ಆಗಿದ್ದಾಗಿ ಹೇಳಿದ್ದಾರೆ. ಈ ಕುರಿತು ''ಫಿಲ್ಮಿಜ್ಞಾನ್''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸಯಾನಿ ಗುಪ್ತಾ ಅದೊಂದು ಚಿತ್ರಕ್ಕೆ ನಾನು ಎರಡು ಕ್ಯಾಮರಾ ಎದುರು ಬೆ*ತ್ತಲೆಯಾಗಿದ್ದೆ ಎಂದು ಹೇಳಿದ್ದಾರೆ.
ಆ ದಿನ.. ಆ ಕ್ಷಣ.. ಅದೊಂದು ಭಯಾನಕ ಅನುಭವ ಆಗಿತ್ತು ಎಂದು ಹೇಳಿರುವ ಸಯಾನಿ, ಅಂದಿನ ಚಿತ್ರೀಕರಣದ ಸಮಯದಲ್ಲಿ ಕೇವಲ ಇಬ್ಬರು ಪುರುಷರು ಮಾತ್ರ ಆ ಕೋಣೆಯಲ್ಲಿದ್ದರು ಎಂದು ಹೇಳಿದ್ದಾರೆ. ನಮ್ಮ ಚಿತ್ರದ ಛಾಯಾಗ್ರಾಹಕ (ಡಿಓಪಿ) ಮತ್ತು ಅವರ ಸಹಾಯಕ ಮಾತ್ರ ಸೆಟ್‌ನಲ್ಲಿ ಇದ್ದರು ಎಂದು ಹೇಳಿರುವ ಸಯಾನಿ ಗುಪ್ತಾ ನನ್ನ ಗೌಪ್ಯತೆಯನ್ನು ಅವರು ಗೌರವಿಸಿದರು ಎಂದು ಹೇಳಿದ್ದಾರೆ. ನನಗೆ ತೊಂದರೆಯಾಗದಂತೆ ನೋಡಿಕೊಂಡರು ಎಂದಿದ್ದಾರೆ. ಆ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ ಸಂಪೂರ್ಣ ಸೆಟ್‌ನ ಮುಚ್ಚಲಾಗಿತ್ತು ಎಂದು ಕೂಡ ಹೇಳಿದ್ದಾರೆ.

ಮುಂದುವರೆದು ಇಬ್ಬರು ಪುರುಷರ ನಾನು ವಿವಸ್ತ್ರಳಾದರೂ ಕೂಡ, ನನ್ನಲ್ಲಿ ಅಸಹಜ ಎಂಬ ಭಾವನೆ ಬರಲಿಲ್ಲ ಎಂದು ಹೇಳಿರುವ ಸಯಾನಿ ನಾನು ಆಗ ನನ್ನ ವ್ಯೆಯಕ್ತಿಕ ವಿಚಾರದ ಕುರಿತು ಆಲೋಚನೆ ಮಾಡಲಿಲ್ಲ ಬದಲಿಗೆ ಆ ದೃಶ್ಯಕ್ಕೆ ನ್ಯಾಯ ಸಲ್ಲಿಸುವುದಷ್ಟೇ ನನ್ನ ಉದ್ದೇಶವಾಗಿತ್ತು, ನಾನು ಆ ಕುರಿತು ಮಾತ್ರ ಯೋಚನೆ ಮಾಡುತ್ತಿದ್ದೆ ಎಂದು ಹೇಳಿದ್ದಾರೆ. ಇಂತಹ ದೃಶ್ಯಗಳು ಕೆಲ ಒಮ್ಮೆ ನಮ್ಮ ವೃತ್ತಿ ಬದುಕಿನಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸುತ್ತಾವೆ, ಆದರೆ.. ನಿರ್ದೇಶಕರ ಮೇಲೆ ಮತ್ತು ಆ ಚಿತ್ರದ ತಂತ್ರಜ್ಞರ ಮೇಲೆ ಸಂಪೂರ್ಣ ನಂಬಿಕೆ ಇದ್ದಾಗ ಮಾತ್ರ ನಾನು ಇಂತಹ ಪಾತ್ರಗಳನ್ನು ಒಪ್ಪಿಕೊಳ್ಳುತ್ತೇನೆ ಎಂದು ಕೂಡ ''ಫಿಲ್ಮಿಜ್ಞಾನ್''ಗೆ ನೀಡಿದ ಸಂದರ್ಶನದಲ್ಲಿ ಸಯಾನಿ ಗುಪ್ತಾ ಹೇಳಿದ್ದಾರೆ. ಸದ್ಯ ಸಯಾನಿ ಗುಪ್ತಾ ಅವರ ಈ ಹೇಳಿಕೆ ಮತ್ತು ಅವರ ಧೈರ್ಯದ ಕುರಿತು ಬಾಲಿವುಡ್‌ನಲ್ಲಿ ಚರ್ಚೆ ನಡೆಯುತ್ತಿದೆ.


Click it and Unblock the Notifications











