ರಾಜ್‌ಕುಮಾರ್ ರಾವ್ ಪತ್ನಿಯ ದೇಹದ 'ತೂಕ'ದ ಬಗ್ಗೆ ಅಸಹ್ಯಕರ ಚರ್ಚೆ- ಬೆಂಕಿಯಾದ ಪತ್ರಲೇಖಾ

ದೇಹದ ಗಾತ್ರದ ಕುರಿತು ಬಣ್ಣದ ಪ್ರಪಂಚದಲ್ಲಿ ಆಗಾಗ ಮಾತು ಕೇಳಿ ಬರುತ್ತಲೇ ಇರುತ್ತೆ. ಅನೇಕ ನಾಯಕಿಯರು ಈ ಬಾಡಿ ಶೇಮಿಂಗ್‌ಗೆ ಚಿತ್ರರಂಗದಲ್ಲಿ ಗುರಿಯಾಗಿದ್ದು ಇದೆ. ದಪ್ಪಗಿದ್ದರೆ ದಪ್ಪ .. ತೆಳ್ಳಗಿದ್ದರೆ ಕಡ್ಡಿ .. ಎಂದು ಅನೇಕ ನಾಯಕಿಯರನ್ನು ಇಲ್ಲಿ ಕೇವಲ ದೇಹದಾಕಾರದ ಮೇಲೆ ಅಳೆಯಲಾಗಿದೆ.

ಕೆಲವೊಮ್ಮೆ ಜೀವನ ಶೈಲಿ, ಆಹಾರ ಕ್ರಮದಲ್ಲಾಗುವ ವ್ಯತ್ಯಾಸ, ಕಾಲ ಕಾಲಕ್ಕೆ ದೇಹದಲ್ಲಿ ಆಗುವ ಹಾರ್ಮೋನ್‌ಗಳ ಏರುಪೇರಿಂದ ದೇಹದ ಸೌಂದರ್ಯದಲ್ಲಿ ವ್ಯತ್ಯಾಸ ಕಾಣಿಸುತ್ತೆ. ಇನ್ನು ತಾಯಿಯಾದ ನಂತರ ಸಾಮಾನ್ಯವಾಗಿ ಅನೇಕರು ದಪ್ಪ ಆಗ್ತಾರೆ. ಅದು ಸಹಜ. ಆದರೆ ಇದನ್ನರಿಯದ ಅನೇಕರು ದೇಹಾಕೃತಿ ಎಂಬ ತೀರಾ ವೈಯಕ್ತಿಕ ವಿಷಯದ ಕುರಿತು ಮಾತನಾಡುವ ಮೂಲಕ ಅನೇಕರನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನಗಳನ್ನು ಮಾಡುತ್ತಾರೆ. ಕುಂತಲ್ಲಿ.. ನಿಂತಲ್ಲಿ.. ದಪ್ಪ ಎಂದು ಹಂಗಿಸುತ್ತಾರೆ. ಪತ್ರಲೇಖಾ ಸದ್ಯ ಇದೇ ವಿಚಾರಕ್ಕೆ ಕೆರಳಿ ಕೆಂಡವಾಗಿದ್ದಾರೆ.

I Gained Weight So What Patralekha Scorches Trolls in Viral Defense of Her Post-Baby Body

ಹೌದು, ಪತ್ರಲೇಖಾ.. ಮೇಘಾಲಯದ ಶಿಲ್ಲಾಂಗ್‌ನ ಚೆಲುವೆ. 2014ರಲ್ಲಿ ಬಿಡುಗಡೆಯಾದ ''ಸಿಟಿ ಲೈಟ್ಸ್'' ಇವರ ಮೊದಲ ಚಿತ್ರ. ಇದೇ ಚಿತ್ರದಲ್ಲಿ ರಾಜ್‌ಕುಮಾರ್ ರಾವ್ ನಾಯಕನ ಪಾತ್ರವನ್ನು ನಿರ್ವಹಿಸಿದ್ದರು. ಈ ಚಿತ್ರಕ್ಕೂ ಮುನ್ನವೇ ಪರಿಚಯ ಇದ್ದ ಇಬ್ಬರು ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಪ್ರೀತಿಯಲ್ಲಿ ಬಿದ್ದರು. ಹನ್ನೊಂದು ವರ್ಷ ಪ್ರೇಮದ ಅಭ್ಯಾಸ ಮಾಡಿ 2021ರಲ್ಲಿ ಮದುವೆಯಾದರು. ''ಲವ್ ಗೇಮ್ಸ್''.. ''ನಾನು ಕಿ ಜಾನು''.. ''ಅರೆಂಜ್ಡ್''.. ಪತ್ರಲೇಖಾ ಅಭಿನಯದ ಕೆಲ ಖ್ಯಾತ ಚಿತ್ರಗಳು.

ಇಂಥಾ ಪತ್ರಲೇಖಾ ಸದ್ಯ ಚಿತ್ರವೊಂದನ್ನು ನಿರ್ಮಾಣ ಮಾಡಿದ್ದಾರೆ. ಆ ಚಿತ್ರದ ಹೆಸರು ''ಟೋಸ್ಟರ್''. ಪತ್ರಲೇಖಾ ಅವರ ಗಂಡ ರಾಜ್‌ಕುಮಾರ್ ರಾವ್ ಈ ಚಿತ್ರದ ನಾಯಕನಾದರೆ ''ದಂಗಲ್'' ಚೆಲುವೆ ಸಾನ್ಯಾ ಮಲ್ಹೋತ್ರಾ ಈ ಚಿತ್ರದ ನಾಯಕಿ. ಸೀದಾ ಓಟಿಟಿಯ ಅಂಗಳಕ್ಕೆ ಬರುತ್ತಿರುವ ಈ ಚಿತ್ರದ ವಿಶೇಷ ಪ್ರದರ್ಶನವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

` `

ಈ ಹಿನ್ನೆಲೆ ಕಾರ್ಯಕ್ರಮಕ್ಕೆ ಬಂದ ಪತ್ರಲೇಖಾ ಸದ್ಯ ಬಾಡಿ ಶೇಮಿಂಗ್‌ಗೆ ಗುರಿಯಾಗಿದ್ದಾರೆ. ಬಳಕುವ ಬಳ್ಳಿಯಂತೆ ಪತ್ರಲೇಖಾ ದಪ್ಪ ಆಗಿರುವುದನ್ನು ಕಂಡು ಹಲವರು ತೀರಾ ಹೊಲಸಾಗಿ ಕೀಳಾಗಿ ಪತ್ರಲೇಖಾ ಅವರನ್ನು ಟ್ರೋಲ್ ಮಾಡಿದ್ದಾರೆ. ತಮ್ಮ ವಿರುದ್ಧ ಕೇಳಿ ಬಂದ ಈ ಮಾತುಗಳನ್ನೆಲ್ಲಾ ಕೇಳಿ ಸದ್ಯ ಪತ್ರಲೇಖಾ ಕೆರಳಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪತ್ರ ಹಂಚಿಕೊಂಡಿದ್ದಾರೆ.

ನನಗೆ ಏನಾಗಿದೆ ಅಂತ ಕೇಳ್ತಿದ್ದೀರಾ..? ನಾನೀಗಷ್ಟೇ ಮಗುವಿಗೆ ಜನ್ಮ ನೀಡಿದ್ದೇನೆ..! ಎಂದು ಹೇಳಿರುವ ಪತ್ರಲೇಖಾ ಹೌದು, ನನ್ನ ತೂಕ ಹೆಚ್ಚಾಗಿದೆ ಎಂದು ಹೇಳಿದ್ಧಾರೆ. ಇದು ನಿಮಗೇನೋ ವಿಚಿತ್ರ ಅಥವಾ ಅಸ್ವಾಭಾವಿಕ ಅನ್ಸುತ್ತಿರಬಹುದು. ಆದರೆ, ನಾನೇನು ಬೆಟ್ಟದಷ್ಟು ಆಹಾರ ತಿಂದು ಹೀಗಾಗಿಲ್ಲ ಎಂದು ಹೇಳಿರುವ ಪತ್ರಲೇಖಾ ಮಗುವಿಗೆ ಜನ್ಮ ನೀಡುವುದರ ಜೊತೆ ಜೊತೆಗೇ ಎರಡು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದೇನೆ. ಇವೆರಡೂ ಸುಲಭದ ಕೆಲಸಗಳಲ್ಲ ಎಂದು ಹೇಳಿದ್ಧಾರೆ. ಗರ್ಭಾವಸ್ಥೆಯ ನಂತರ ನನ್ನ ದೇಹ ಸ್ಪಂದಿಸಿದ ರೀತಿ ಇದು, ದಯಮಾಡಿ ಮನುಷ್ಯತ್ವದಿಂದ ವರ್ತಿಸುವುದನ್ನು ಕಲಿಯಿರಿ ಎಂದು ಕಿಡಿ ಕಾರಿದ್ದಾರೆ.

ಅಂದ್ಹಾಗೇ ಪತ್ರಲೇಖಾ ಮತ್ತು ರಾಜ್ ಕುಮಾರ್ ರಾವ್ ಅವರ ಪ್ರೀತಿಯ ಸಂಕೇತವಾಗಿ ಇವರಿಗೆ ಹೆಣ್ಣು ಮಗಳಿದ್ದಾಳೆ. ಕಳೆದ ನವೆಂಬರ್ 2025 ರಲ್ಲಿ ಹೆಣ್ಣು ಮಗುವಿಗೆ ಪತ್ರಲೇಖಾ ಜನ್ಮ ನೀಡಿದರು. ಇತ್ತೀಚೆಗಷ್ಟೇ ತಮ್ಮ ಮಗಳಿಗೆ ಪಾರ್ವತಿ ಪಾಲ್ ರಾವ್ ಎಂದು ನಾಮಕರಣವನ್ನು ಕೂಡ ಇಬ್ಬರು ಮಾಡಿದ್ದಾರೆ. ಇದೇ ಮಗುವಿನ ಜನನದ ನಂತರದ ದೈಹಿಕ ಬದಲಾವಣೆಯ ಬಗ್ಗೆ ಟ್ರೋಲ್ ಮಾಡಿದವರಿಗೆ ಪತ್ರಲೇಖಾ ಈಗ ತಕ್ಕ ಉತ್ತರ ನೀಡಿದ್ದಾರೆ.

I Gained Weight So What Patralekha Scorches Trolls in Viral Defense of Her Post-Baby Body

English summary
Patralekha shuts down the internet! The actress hits back at trolls mocking her post-pregnancy weight with a viral message on kindness and the reality of motherhood. Read her full "mic-drop" response here.`
Read more about: body viral video rajkumar rao
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X