»   » 500 ರೂಪಾಯಿ ಹಿಡಿದು ಮುಂಬೈಗೆ ಬಂದ ಈ ಬೊಂಬೆ ಇಂದು ಬಾಲಿವುಡ್ ಬಣ್ಣದ ಚಿಟ್ಟೆ!

500 ರೂಪಾಯಿ ಹಿಡಿದು ಮುಂಬೈಗೆ ಬಂದ ಈ ಬೊಂಬೆ ಇಂದು ಬಾಲಿವುಡ್ ಬಣ್ಣದ ಚಿಟ್ಟೆ!

Posted By:
Subscribe to Filmibeat Kannada

ಪುರಿ ಜಗನ್ನಾಥ್ ನಿರ್ದೇಶನದ 'ಲೋಫರ್', ಕ್ಯಾಪ್ಟನ್ ಕೂಲ್ ಧೋನಿ ಅವರ ಜೀವನ ಚರಿತ್ರೆ ಆಧಾರಿತ ಸಿನಿಮಾ 'ಎಂ.ಎಸ್.ಧೋನಿ: ದಿ ಅನ್ ಟೋಲ್ಡ್ ಸ್ಟೋರಿ' ಹಾಗೂ ಕಳೆದ ವಾರವಷ್ಟೇ ತೆರೆಗೆ ಬಂದ 'ಭಾಗಿ-2' ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ದಿಶಾ ಪಟಾನಿ ಪರಿಚಯ ನಿಮಗೆ ಇರಬಹುದು.

ಬಾಲಿವುಡ್ ನಲ್ಲಿ ಈಗೀಗ ನೆಲೆ ಕಂಡುಕೊಳ್ಳುತ್ತಿರುವ ದಿಶಾ ಪಟಾನಿ ಒಂದ್ಕಾಲದಲ್ಲಿ ಅವಕಾಶಗಳಿಗೋಸ್ಕರ ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ. ಇನ್ನೂ ಕಾಲೇಜ್ ನಲ್ಲಿ ಓದುತ್ತಿದ್ದ ದಿಶಾ ಪಟಾನಿಗೆ ಓದಿಗಿಂತ ಗ್ಲಾಮರ್ ಜಗತ್ತು ಆಕರ್ಷಿಸಿತು. ಓದಿಗೆ ಗುಡ್ ಬೈ ಹೇಳಿ ದಿಶಾ ಪಟಾನಿ ಮುಂಬೈಗೆ ಬಂದಿಳಿದಾಗ, ಆಕೆ ಬಳಿ ಇದ್ದದ್ದು ಕೇವಲ 500 ರೂಪಾಯಿ.

ಕುಟುಂಬದ ಸಹಾಯ ಪಡೆಯದೆ, ಮುಂಬೈನಲ್ಲಿ ಪುಟ್ಟ ಮನೆ ಮಾಡಿಕೊಂಡಿದ್ದ ದಿಶಾ ಪಟಾನಿ, ಟಿವಿ ಕಮರ್ಶಿಯಲ್ ಗಳಿಗೆಲ್ಲ ತಪ್ಪದೆ ಆಡಿಷನ್ ನೀಡುತ್ತಿದ್ದರು.

I had just Rs.500 with me when i came to mumbai says Disha Patani

''ಓದು ಬಿಟ್ಟು ಮುಂಬೈಗೆ ಬಂದವಳು ನಾನು. ಕಾಲೇಜಿಗೆ ಹೋಗುವ ಹುಡುಗಿಗೆ ಮುಂಬೈನಲ್ಲಿನ ಜೀವನ ಅಷ್ಟು ಸುಲಭ ಆಗಿರಲಿಲ್ಲ. ಕುಟುಂಬದಿಂದ ನಾನು ಹಣ ಸಹಾಯ ಪಡೆಯಲಿಲ್ಲ. ಮುಂಬೈಗೆ ಬಂದು ಇಳಿದಾಗ ನನ್ನ ಬಳಿ ಇದ್ದದ್ದು ಕೇವಲ 500 ರೂಪಾಯಿ'' ಎಂದು ಸಂದರ್ಶನವೊಂದರಲ್ಲಿ ದಿಶಾ ಪಟಾನಿ ಹೇಳಿದ್ದಾರೆ.

ದಿಶಾ ಪಟಾನಿ ಜೊತೆಗಿನ ಡೇಟಿಂಗ್ ಸೀಕ್ರೇಟ್ ಬಿಚ್ಚಿಟ್ಟ ಟೈಗರ್ ಶ್ರಾಫ್!

''ಟಿವಿ ಕಮರ್ಶಿಯಲ್ ಗಾಗಿ ಆಡಿಷನ್ ನಡೆಯುತ್ತಿದೆ ಅಂತ ಗೊತ್ತಾದಾಗ ತಪ್ಪದೆ ಭಾಗಿಯಾಗುತ್ತಿದೆ. ಪ್ರತಿ ತಿಂಗಳು ನನಗೆ ಕೆಲಸ ಬೇಕಾಗಿತ್ತು. ಕೆಲಸದಿಂದ ಬರುವ ಸಂಬಳದಿಂದ ನಾನು ಜೀವನ ನಡೆಸಬೇಕಾಗಿತ್ತು. ಕೆಲಸ ಸಿಕ್ಕಿಲ್ಲ, ಸಂಬಳ ಬರಲಿಲ್ಲ ಅಂದ್ರೆ ಬಾಡಿಗೆ ಹೇಗೆ ಕಟ್ಟೋದು ಅನ್ನೋದೇ ದೊಡ್ಡ ಚಿಂತೆ ಆಗ್ತಿತ್ತು'' ಅಂತ ತಮ್ಮ ಕಷ್ಟದ ದಿನಗಳ ಬಗ್ಗೆ ದಿಶಾ ಪಟಾನಿ ಮೆಲುಕು ಹಾಕಿದ್ದಾರೆ.

ಊರು ಬಿಟ್ಟು ಮುಂಬೈಗೆ ಬಂದ ದಿಶಾ ಪಟಾನಿ ಇಂದು ಬಾಲಿವುಡ್ ನಲ್ಲಿ ಗುರುತಿಸಿಕೊಂಡಿದ್ದಾರೆ. ದಿಶಾ ಪಟಾನಿ ನಾಯಕಿ ಆಗಿ ಟೈಗರ್ ಶ್ರಾಫ್ ಹೀರೋ ಆಗಿ ಕಾಣಿಸಿಕೊಂಡಿರುವ 'ಭಾಗಿ-2' ಚಿತ್ರ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿರುವುದರಿಂದ ದಿಶಾ ಪಟಾನಿ ಕೂಡ ಖುಷಿಯಾಗಿದ್ದಾರೆ.

English summary
I had just Rs.500 with me when I came to Mumbai says Disha Patani in her recent Interview.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X