ತಮನ್ನಾ ಜೊತೆ ನಾನು ಇರುವ 5000 ಫೋಟೋಗಳು ನನ್ನ ಬಳಿ ಇವೆ ಎಂದ ನಟ..!

ಪ್ರೀತಿಯ ಆಳ ಅಗಲ ಹುಡುಕುವುದು ಅಷ್ಟು ಸುಲಭವಲ್ಲ. ಹುಡುಕಲೂ ಸಹ ಹೋಗಬಾರದು. ಪ್ರೀತಿ ಯಾವ ರೀತಿಯಲ್ಲಿ ಎಲ್ಲಿ ಯಾವಾಗ ಹುಟ್ಟುತ್ತೆ ಎಂದು ಹೇಳುವುದು ತುಂಬಾ ಕಷ್ಟ. ಇದಕ್ಕೆ ವಿಜಯ್ ವರ್ಮಾ ಮತ್ತು ತಮನ್ನಾ ಅತ್ಯುತ್ತಮ ಉದಾಹರಣೆ.

ಹೌದು, ಕಳೆದ ಕೆಲ ದಿನಗಳಿಂದ ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ ಪ್ರೇಮದ ಅಮಲನ್ನೇರಿಸಿಕೊಂಡಿದ್ಧಾರೆ. ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ನಿಜಾ.. ಈ ನೆಮ್ಮದಿಗೆ ಭಂಗ ತರುವ ಕೆಲಸವನ್ನು ಆಗಾಗ ಕೆಲವರು ಮಾಡಿದ್ದಾರೆ. ವಿಜಯ್ ವರ್ಮಾ ಮತ್ತು ತಮನ್ನಾ ನಡುವೆ ಬ್ರೇಕ್‌ ಅಪ್ ಆಗಿದೆ ಎಂದೆಲ್ಲ ಪುಕಾರು ಕೂಡ ಹಬ್ಬಿಸಿದ್ದಾರೆ.

I have 5000 photos featuring Tamannaah and myself says the actor

ಆದರೆ, ವಿಜಯ್ ವರ್ಮಾ ಆಗಲಿ, ತಮನ್ನಾ ಆಗಲಿ ಈ ವಿಚಾರದ ಬಗ್ಗೆ ಹೆಚ್ಚೇನೂ ತಲೆ ಕೆಡಿಸಿಕೊಂಡಿಲ್ಲ. ಯಾಕೆಂದರೆ ಅವರು ಇರುವುದು ಬಣ್ಣದ ಲೋಕದಲ್ಲಿ. ಈ ಲೋಕದಲ್ಲಿ ವದಂತಿಗಳಿಗೆ, ಸುಳ್ಳು ಸುದ್ದಿಗಳಿಗೆ ಹೆಚ್ಚು ಬೆಲೆ ಅನ್ನುವುದು ಇಬ್ಬರಿಗೂ ಗೊತ್ತು.ಇರಲಿ, ವಿಚಾರ ಅದಲ್ಲ. ಸದ್ಯದ ಸಮಾಚಾರ ಏನೆಂದರೆ ವಿಜಯ್ ವರ್ಮಾ ತಮ್ಮ ಮತ್ತು ತಮನ್ನಾ ನಡುವಿನ ಅನುರಾಗದ ಕಥೆಯನ್ನು ಹಂಚಿಕೊಂಡಿದ್ದಾರೆ. ತಾವ್ಯಾಕೇ ಬೇರೆಯವರಂತೆ ಕದ್ದು ಮುಚ್ಚಿ ಲವ್ ಮಾಡಲಿಲ್ಲ ಎನ್ನುವುದಕ್ಕೆ ಉತ್ತರವನ್ನು ನೀಡಿದ್ದಾರೆ.

ಶುಭಾಂಕರ್ ಮಿಶ್ರಾ ಅವರಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ವಿಜಯ್ ವರ್ಮಾ, ಪ್ರೀತಿ ಮಾಡಿದ ನಂತರ ಜಗಕೆ ಯಾಕೆ ಹೆದರಬೇಕು ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಇಬ್ಬರು ಒಪ್ಪಿದ ಮೇಲೆ, ಇಬ್ಬರು ಜೊತೆಯಾಗಿ ಕಾಲ ಕಳೆಯುವ ನಿರ್ಧಾರವನ್ನು ಮಾಡಿದ ಮೇಲೆ, ಕದ್ದು-ಮುಚ್ಚಿ ಓಡಾಡುವುದರಲ್ಲಿ ಅರ್ಥ ಇಲ್ಲ. ಯಾಕೆಂದರೆ ಅದಕ್ಕೆಲ್ಲ ತುಂಬಾ ಶ್ರಮ ಹಾಕಬೇಕಾಗುತ್ತೆ ಎಂದಿರುವ ವಿಜಯ್ ವರ್ಮಾ, ಪ್ರೀತಿಯನ್ನು ಮುಚ್ಚಿಟ್ಟರೆ ಜೊತೆಯಲ್ಲಿ ಇಬ್ಬರು ಹೊರಗೆ ಹೋಗಲು ಸಾಧ್ಯವಾಗುವುದಿಲ್ಲ.ನಮ್ಮಿಬ್ಬರ ಜೊತೆ ಫೋಟೋ ಕ್ಲಿಕ್ ಮಾಡಿಕೊಳ್ಳಬೇಕೆಂಬ ಆಸೆ ನಮ್ಮ ಸ್ನೇಹಿತರಿಗೆ ಇದ್ದರೂ ಅದು ಸಾಧ್ಯವಾಗುವುದಿಲ್ಲ ಎಂದಿದ್ದಾರೆ. ನನಗೆ ಇಂತಹ ನಿರ್ಬಂಧಗಳೆಲ್ಲ ಇಷ್ಟವಾಗುವುದಿಲ್ಲ, ನಾನು ಪಂಜರದ ಗಿಣಿಯಲ್ಲ ಎಂದು ಹೇಳಿದ್ದಾರೆ.

I have 5000 photos featuring Tamannaah and myself says the actor

ಮುಂದುವರೆದು ನಮ್ಮ ಸಂಬಂಧದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೂ ನಾವು ನಮ್ಮ ಸಂಬಂಧದಲ್ಲಿ ಇನ್ನೂ ಖಾಸಗಿತನ ಉಳಿಸಿಕೊಂಡಿದ್ದೇವೆ ಎಂದಿರುವ ವಿಜಯ್ ವರ್ಮಾ ನನ್ನ ಬಳಿ ನಮ್ಮಿಬ್ಬರ 5000ಕ್ಕೂ ಅಧಿಕ ಫೋಟೋಗಳಿವೆ ಅಂದಿದ್ದಾರೆ. ಆದರೂ ನಾನು ಅಥವಾ ತಮನ್ನಾ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಲ್ಲ. ಯಾಕೆಂದರೆ ಅವೆಲ್ಲವೂ ನಮ್ಮ ಹೃದಯಕ್ಕೆ ಹತ್ತಿರವಾದ ಭಾವ ಚಿತ್ರಗಳು, ನೆನಪುಗಳಿಗಾಗಿ ತೆಗೆದಿರುವ ಫೋಟೋಗಳು, ಹಾಗಾಗಿ ಆ ಫೋಟೋಗಳನ್ನು ನಮ್ಮ ಬಳಿಯೇ ಉಳಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ ವಿಜಯ್ ವರ್ಮಾ.

ಇನ್ನೂ ಗಾಸಿಪ್ ಪ್ರಿಯರ ಬಗ್ಗೆಯೂ ಮಾತನಾಡಿರುವ ವಿಜಯ್ ವರ್ಮಾ, ಎಲ್ಲರಿಗೂ ಬೇರೆಯವರ ಜೀವನದಲ್ಲಿ ಏನೆಲ್ಲ ಆಗುತ್ತಿದೆ ಎಂದು ತಿಳಿದುಕೊಳ್ಳುವ ಕುತೂಹಲ ಅದಕ್ಕೆ ನಾವೇನು ಮಾಡಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ. ಜಗತ್ತು ಇರುವುದೇ ಹಾಗೇ, ಕೆಲಸದಲ್ಲಿ ನನ್ನಿಂದ ತಪ್ಪಾದರೆ ಹೇಳಿ ಆಗ ನಾನು ತಿದ್ದಿಕೊಳ್ಳುತ್ತೇನೆ ಎಂದು ಕೂಡ ವಿಜಯ್ ವರ್ಮಾ ಹೇಳಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X