For Quick Alerts
  ALLOW NOTIFICATIONS  
  For Daily Alerts

  'ದಿ ಕಾಶ್ಮೀರ್ ಫೈಲ್ಸ್' ಅನ್ನು ಆಸ್ಕರ್‌ಗೆ ಕಳಿಸಬೇಡಿ 'RRR' ಅನ್ನು ಕಳಿಸಿ: ಅನುರಾಗ್ ಕಶ್ಯಪ್

  |

  ಬಿಡುಗಡೆ ಆದಾಗ ವಿವಾದ, ಚರ್ಚೆ ಹುಟ್ಟುಹಾಕಿದ್ದ 'ದಿ ಕಾಶ್ಮೀರ್ ಫೈಲ್ಸ್' ಈಗಲೂ ವಿವಾದಗಳಿಗೆ ಕಾರಣವಾಗಿದೆ. ಭಾರತದ ಯಾವ ಸಿನಿಮಾ ಆಸ್ಕರ್‌ಗೆ ನಾಮಿನೇಟ್ ಆಗಬೇಕು ಎಂಬ ಚರ್ಚೆ ಶುರುವಾದ ಬೆನ್ನಲ್ಲೆ ಕೆಲವರು 'ದಿ ಕಾಶ್ಮೀರ್ ಫೈಲ್ಸ್' ಹೆಸರು ಹೇಳಿದ್ದರು. ಆದರೆ ಆ ಸಿನಿಮಾವನ್ನು ಆಸ್ಕರ್‌ಗೆ ಕಳಿಸಬೇಡಿ ಎಂದು ಬಾಲಿವುಡ್‌ನ ಹಿರಿಯ ನಿರ್ದೇಶಕ ಅನುರಾಗ್ ಕಶ್ಯಪ್ ಹೇಳಿದ್ದಾರೆ.

  ಸಂದರ್ಶನವೊಂದರಲ್ಲಿ ಮಾತನಾಡಿರುವ ನಿರ್ದೇಶಕ ಅನುರಾಗ್ ಕಶ್ಯಪ್, ''ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ಭಾರತದಿಂದ ಆಸ್ಕರ್‌ಗೆ ಅಧಿಕೃತ ನಾಮಿನೇಟ್ ಮಾಡಬೇಡಿ. ಅದರ ಬದಲಿಗೆ 'RRR' ಸಿನಿಮಾವನ್ನು ಮಾಡಿ ಎಂದಿದ್ದಾರೆ.

  ಯಶ್ ಬಗ್ಗೆ ಬಾಲಿವುಡ್‌ ನಿರ್ದೇಶಕ ಅನುರಾಗ್ ಕಶ್ಯಪ್ ಆಸಕ್ತಿಕರ ಅಭಿಪ್ರಾಯಯಶ್ ಬಗ್ಗೆ ಬಾಲಿವುಡ್‌ ನಿರ್ದೇಶಕ ಅನುರಾಗ್ ಕಶ್ಯಪ್ ಆಸಕ್ತಿಕರ ಅಭಿಪ್ರಾಯ

  'RRR' ಸಿನಿಮಾವು ಆಸ್ಕರ್‌ನ ವಿದೇಶಿ ಸಿನಿಮಾ ವಿಭಾಗದಲ್ಲಿ ಅಂತಿಮ ನಾಲ್ಕು ಸಿನಿಮಾಗಳಲ್ಲಿ ಒಂದಾಗಿ ಸ್ಥಾನ ಪಡೆಯುವ ದಟ್ಟ ಸಾಧ್ಯತೆ ಇದೆ. ನಾನು ವೈಯಕ್ತಿಕವಾಗಿ 'RRR' ಅಭಿಮಾನಿಯಲ್ಲ ಆದರೆ ಆ ಸಿನಿಮಾಕ್ಕೆ ಪ್ರಶಸ್ತಿ ಗೆಲ್ಲುವ ಶಕ್ತಿ ಇದೆ'' ಎಂದಿದ್ದಾರೆ.

  ಸಿನಿಮಾ ವಿರುದ್ಧ ಅಭಿಯಾನ ಎಂದ ವಿವೇಕ್

  ಸಿನಿಮಾ ವಿರುದ್ಧ ಅಭಿಯಾನ ಎಂದ ವಿವೇಕ್

  ಅನುರಾಗ್ ಕಶ್ಯಪ್ ಅವರ ಈ ಮಾತಿಗೆ ಪ್ರತಿಕ್ರಿಯೆ ನೀಡಿರುವ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ''ದುಷ್ಟ, ನರಮೇಧ-ನಿರಾಕರಣೆಯ ಬಾಲಿವುಡ್‌ ವಶೀಲಿಗಾರರು (ಲಾಬಿ) 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಆಸ್ಕರ್‌ಗೆ ಹೋಗಬಾರದೆಂದು ಅಭಿಯಾನ ಆರಂಭಿಸಿದ್ದಾರೆ. ಇದಕ್ಕೆ 'ದೊಬಾರಾ' ಸಿನಿಮಾದ ನಿರ್ದೇಶಕ (ಅನುರಾಗ್ ಕಶ್ಯಪ್) ವಹಿಸಿದ್ದಾರೆ'' ಎಂದಿದ್ದಾರೆ.

  ಅನುರಾಗ್ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ

  ಅನುರಾಗ್ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ

  ಅನುರಾಗ್ ಕಶ್ಯಪ್ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಅನುರಾಗ್ ಕಶ್ಯಪ್ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ''ಮತ್ತೊಂದು ಕೋಮಿನ ಬಗ್ಗೆ ದ್ವೇಷ ಪಸರಿಸುವ ಸಿನಿಮಾವನ್ನು ಆಸ್ಕರ್‌ಗೆ ಕಳಿಸಿದರೆ ಭಾರತದ ಗೌರವಕ್ಕೆ ಅಂತರಾಷ್ಟ್ರೀಯ ವೇದಿಕೆಯಲ್ಲಿ ಧಕ್ಕೆಯಾಗುತ್ತದೆ'' ಎಂದಿದ್ದಾರೆ. ಇನ್ನು ಕೆಲವರು 'ದಿ ಕಾಶ್ಮೀರ್ ಫೈಲ್ಸ್' ಭಾರತದ ಪ್ರದೇಶವೊಂದರಲ್ಲಿ ಹಿಂದುಗಳ ಮೇಲೆ ನಡೆದಿರುವ ಇತಿಹಾಸದ ಚಿತ್ರಣ ಹಾಗಾಗಿ ಅದನ್ನೇ ಆಸ್ಕರ್‌ಗೆ ಕಳಿಸಬೇಕು ಎಂದಿದ್ದಾರೆ.

  'ಕೂಳಂಗಳ್' ಅಧಿಕೃತವಾಗಿ ಆಯ್ಕೆಯಾಗಿತ್ತು

  'ಕೂಳಂಗಳ್' ಅಧಿಕೃತವಾಗಿ ಆಯ್ಕೆಯಾಗಿತ್ತು

  ಒಟ್ಟಾರೆ ಚರ್ಚೆ ಸಾಗುತ್ತಿದೆ. 2023 ರ ಆಸ್ಕರ್‌ಗೆ ಭಾರತದ ಅಧಿಕೃತ ನಾಮಿನೇಶನ್ ಯಾವುದಾಗಲಿದೆ ಕಾದು ನೋಡಬೇಕಿದೆ. ಕಳೆದ ಬಾರಿ ಭಾರತದ ಅಧಿಕೃತ ನಾಮಿನೇಶನ್ ತಮಿಳಿನ 'ಕೂಳಂಗಳ್' ಆಗಿತ್ತು ಆದರೆ ಅದು ಮೊದಲ ಸುತ್ತಿನಲ್ಲೇ ವಾಪಸ್ಸಾಗಿತ್ತು. ಆದರೆ ತಮಿಳಿನ 'ಜೈ ಭೀಮ್' ಎರಡನೇ ಹಂತಕ್ಕೆ ಏರಿತ್ತು, ಆದರೆ ನಾಮಿನೇಟ್ ಹಂತಕ್ಕೆ ಹೋಗುವಲ್ಲಿ ವಿಫಲವಾಯಿತು.

  ಬಾಲಿವುಡ್‌ಗೆ ಬೈದ ಅನುರಾಗ್ ಕಶ್ಯಪ್

  ಬಾಲಿವುಡ್‌ಗೆ ಬೈದ ಅನುರಾಗ್ ಕಶ್ಯಪ್

  ಕೆಲವು ದಿನಗಳ ಹಿಂದಷ್ಟೆ ಬೇರೊಂದು ಸಂದರ್ಶನದಲ್ಲಿ ಮಾತನಾಡಿದ್ದ ಅನುರಾಗ್ ಕಶ್ಯಪ್, ಬಾಲಿವುಡ್‌ನ ಸಿನಿಮಾ ಮೇಕಿಂಗ್ ಅನ್ನು ಕಟುವಾಗಿ ಟೀಕಿಸಿದ್ದರು. ಅದರಲ್ಲೂ ಬಾಲಿವುಡ್‌ನ ಜನಪ್ರಿಯ ಯಶ್‌ ರಾಜ್ ಫಿಲಮ್ಸ್ ಹಾಗೂ ಧರ್ಮಾ ಪ್ರೊಡಕ್ಷನ್ ಅನ್ನು ಸಹ ಟೀಕೆ ಮಾಡಿದ್ದರು. ಬಾಲಿವುಡ್‌ನವರು ತಾವು ಸಿನಿಮಾ ಮಾಡುವ ರೀತಿಯನ್ನು ಬದಲಿಸಿಕೊಳ್ಳಬೇಕು ಎಂದಿದ್ದರು.

  English summary
  Director Anurag Kashyap says I hope The Kashmir Files will not picked as India's official selection for Oscars. The Kashmir Files Maker Vivek Agnihotri lambasted on Anurag Kashyap.
  Thursday, August 18, 2022, 18:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X