ಆ ಸಿನಿಮಾದಲ್ಲಿ ನಟಿಸಿದ್ದರೆ ನಾನು ಸೈಫ್ ಅಲಿ ಖಾನ್ ಅನ್ನು ಮದುವೆಯಾಗುತ್ತಿರಲಿಲ್ಲ: ಕರೀನಾ

ಕರೀನಾ ಕಪೂರ್ ಬಾಲಿವುಡ್‌ನಲ್ಲಿ 20 ವರ್ಷಗಳ ಪ್ರಯಾಣ ಮುಗಿಸಿದ್ದಾರೆ. 2000 ರಲ್ಲಿ ರೆಫ್ಯೂಜಿ ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶಿಸಿದ ಈ ಕಪೂರ್ ಕುವರಿ ಇಷ್ಟು ವರ್ಷಗಳ ನಂತರವೂ ಬೇಡಿಕೆ ಉಳಿಸಿಕೊಂಡಿದ್ದಾರೆ.

Recommended Video

Amir Khan's staff tested corona positive:ಅಮೀರ್ ಖಾನ್ ಸಿಬ್ಬಂದಿಯಲ್ಲಿ ಕೊರೊನಾ ವೈರಸ್ ಪಾಸಿಟಿವ್

ತಮ್ಮ 20 ವರ್ಷದ ಸಿನಿಮಾ ಪಯಣದಲ್ಲಿ ಹಲವಾರು ನೆನಪುಳಿಯುವ ಪಾತ್ರಗಳನ್ನು, ಸಿನಿಮಾಗಳನ್ನು ಮಾಡಿರುವ ಕರೀನಾ ಕಪೂರ್, ತಾವು ರಿಜೆಕ್ಟ್ ಮಾಡಿದ ಸಿನಿಮಾಗಳ ಬಗ್ಗೆಯೂ ಮಾತನಾಡಿದ್ದಾರೆ.

ಹಲವು ಹಿಟ್ ಸಿನಿಮಾಗಳಲ್ಲಿ ನಟಿಸುವ ಅವಕಾಶವನ್ನು ಕರೀನಾ ಕೈಚೆಲ್ಲಿದ್ದಾರೆ. ಇದರಲ್ಲಿ ಕಲ್ ಹೋ ನಾ ಹೋ ಸಹ ಒಂದು. ಈ ಸಿನಿಮಾವನ್ನು ವಿಶೇಷವಾಗಿ ಉಲ್ಲೇಖಿಸಿರುವ ಕರೀನಾ ಕಪೂರ್, ಆ ಸಿನಿಮಾದಲ್ಲಿ ನಟಿಸಿದ್ದರೆ ನಾನು ಸೈಫ್ ಅಲಿ ಖಾನ್ ಅನ್ನು ಮದುವೆ ಆಗಲು ಆಗುತ್ತಿರಲಿಲ್ಲವೇನೋ ಎಂದಿದ್ದಾರೆ.

ಕರೀನಾ ರಿಜೆಕ್ಟ್ ಮಾಡಿದ ಸಿನಿಮಾ ಪಟ್ಟಿ ದೊಡ್ಡದಿದೆ

ಕರೀನಾ ರಿಜೆಕ್ಟ್ ಮಾಡಿದ ಸಿನಿಮಾ ಪಟ್ಟಿ ದೊಡ್ಡದಿದೆ

ಕರೀನಾ ಕಪೂರ್ ರಿಜೆಕ್ಟ್‌ ಮಾಡಿದ ಸಿನಿಮಾಗಳ ಪಟ್ಟಿ ಬಹಳ ದೊಡ್ಡದೇ ಇದೆ. 'ಕಲ್ ಹೋ ನಾ ಹೋ', ರಾಮ್‌ ಲೀಲಾ, ಟ್ವೀನ್, ಫ್ಯಾಷನ್ ಇನ್ನೂ ಹಲವು ಸಿನಿಮಾಗಳನ್ನು ಅವರು ರಿಜೆಕ್ಟ್ ಮಾಡಿದ್ದರಂತೆ, ಆದರೆ ಇವೆಲ್ಲವೂ ಸೂಪರ್ ಡೂಪರ್ ಹಿಟ್ ಸಿನಿಮಾಗಳಾದವು, ನಟಿಸಿದ ನಟಿಯರಿಗೆ ಭಾರಿ ಹೆಸರು, ಪ್ರಶಸ್ತಿ ತಂದುಕೊಟ್ಟವು.

'ಸೈಫ್ ಅಲಿ ಖಾನ್ ಅನ್ನು ಮದುವೆ ಆಗುತ್ತಿರಲಿಲ್ಲವೇನೋ?'

'ಸೈಫ್ ಅಲಿ ಖಾನ್ ಅನ್ನು ಮದುವೆ ಆಗುತ್ತಿರಲಿಲ್ಲವೇನೋ?'

ನಾನು ಬಿಟ್ಟುಬಂದ ಸಿನಿಮಾಗಳ ಬಗ್ಗೆ ಹಿಂದೆ ತಿರುಗಿ ನೋಡುವುದಿಲ್ಲ, ನನಗಾಗಿ ಏನು ಸಿಕ್ಕಿದೆಯೋ ಅದರಲ್ಲಿ ತೃಪ್ತಿ ಇದೆ. ಒಂದು ವೇಳೆ ನಾನು ಕಲ್ ಹೋ ನಾ ಹೋ ಸಿನಿಮಾದಲ್ಲಿ ನಟಿಸಿದ್ದರೆ ಬಹುಷಃ ನಾನು ಸೈಫ್ ಅಲಿ ಖಾನ್ ಅನ್ನು ಮದುವೆ ಆಗುತ್ತಿರಲಿಲ್ಲವೇನೋ ಯಾರಿಗೆ ಗೊತ್ತು? ಎಂದಿದ್ದಾರೆ ಕರೀನಾ.

ಕಲ್ ಹೋ ನಾ ಸಿನಿಮಾದಲ್ಲಿ ಸೈಫ್ ನಟಿಸಿದ್ದರು

ಕಲ್ ಹೋ ನಾ ಸಿನಿಮಾದಲ್ಲಿ ಸೈಫ್ ನಟಿಸಿದ್ದರು

ಕಲ್ ಹೋ ನಾ ಹೋ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದರು. ಸಿನಿಮಾದ ನಾಯಕ ಶಾರುಖ್ ಖಾನ್ ಸಹ ಇದ್ದರು. ಕರೀನಾ ಕಪೂರ್ ಬಿಟ್ಟ ಪಾತ್ರವನ್ನು ಪ್ರೀತಿ ಜಿಂಟಾ ನಿರ್ವಹಿಸಿದರು. ಈ ಸಿನಿಮಾ 2003 ರಲ್ಲಿ ಬಿಡುಗಡೆ ಆಗಿತ್ತು.

2012 ರಲ್ಲಿ ಮದುವೆಯಾದ ಕರೀನಾ-ಸೈಫ್

2012 ರಲ್ಲಿ ಮದುವೆಯಾದ ಕರೀನಾ-ಸೈಫ್

ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ 2012 ರಲ್ಲಿ ಮದುವೆಯಾದರು. ಕಲ್‌ ಹೋ ನಾ ಹೋ ಸಿನಿಮಾ ಬಿಡುಗಡೆ ಸಮಯದಲ್ಲಿ ಕರೀನಾ ಕಪೂರ್ ಶಾಹಿದ್ ಕಪೂರ್ ಜೊತೆ ಪ್ರೇಮದಲ್ಲಿದ್ದರು, ಸೈಫ್ ಅಲಿ ಖಾನ್ ವಿಚ್ಛೇಧನ ಸಹ ಆಗಿರಲಿಲ್ಲ.

More from Filmibeat

English summary
Actress Kareena Kapoor said i may not married to Saif Ali Khan if i acted in Kal Ho Na Ho movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X