ವಿರಾಟ್ ಕೊಹ್ಲಿ ಹಾಗೂ ಜಡೇಜಾರಿಂದ ಡಾನ್ಸ್ ಕಲಿಯಬೇಕಿದೆ ಎಂದ ಶಾರುಖ್ ಖಾನ್!
ಸದ್ಯ ಭಾರತ ಪ್ರವಾಸವನ್ನು ಕೈಗೊಂಡಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಟೀಮ್ ಇಂಡಿಯಾ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಗಳಲ್ಲಿ ನಿರತವಾಗಿದೆ. ಮೊದಲಿಗೆ ಟೆಸ್ಟ್ ಸರಣಿ ಶುರುವಾಗಿದ್ದು, ಮೊದಲ ಟೆಸ್ಟ್ ಪಂದ್ಯ ಫೆಬ್ರವರಿ 9ರಿಂದ ನಾಗ್ಪುರ ಕ್ರೀಡಾಂಗಣದಲ್ಲಿ ನಡೆದಿದ್ದು, ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 132 ರನ್‌ಗಳ ಇನ್ನಿಂಗ್ಸ್ ಜಯವನ್ನು ಸಾಧಿಸಿದೆ. ಈ ಗೆಲುವಿನ ಬೆನ್ನಲ್ಲೇ ಟೀಮ್ ಇಂಡಿಯಾ ಆಟಗಾರರು ಮೈದಾನದಲ್ಲಿ ಸಂಭ್ರಮಿಸಿದ್ದು, ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜ್ ಇತರೆ ಆಟಗಾರರ ಮುಂದೆ ಪಠಾಣ್ ಚಿತ್ರದ ಜೂಮೆ ಜೋ ಪಠಾಣ್ ಹಾಡಿನ ಸ್ಟೆಪ್ ಹಾಕಿದ್ದಾರೆ.
ಈ ವಿಡಿಯೊ ತುಣುಕನ್ನು ನೆಟ್ಟಿಗನೋರ್ವ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿದ್ದು, ಈ ಪಠಾಣ್ ಡಾನ್ಸ್ ಕುರಿತು ಏನು ಹೇಳಲು ಇಚ್ಛಿಸುತ್ತೀರ ಎಂದು ಶಾರುಖ್ ಖಾನ್ ಅವರನ್ನು ಉಲ್ಲೇಖಿಸಿ ಪ್ರಶ್ನಿಸಿದ್ದಾರೆ. ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಶಾರುಖ್ ಖಾನ್ "ಅವರು ನನಗಿಂತ ಚೆನ್ನಾಗಿ ಕುಣಿಯುತ್ತಿದ್ದಾರೆ. ವಿರಾಣ್ ಕೊಹ್ಲಿ ಹಾಗೂ ಜಡೇಜಾರಿಂದ ಡಾನ್ಸ್ ಕಲಿಯಬೇಕಿದೆ!!" ಎಂದು ಬರೆದುಕೊಂಡಿದ್ದಾರೆ.

ಸದ್ಯ ಪಠಾಣ್ ಚಿತ್ರ ಭಾರತ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದು, ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 950 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ್ದು, 1000 ಕೋಟಿ ಕ್ಲಬ್ ಸೇರುವತ್ತ ಮುನ್ನುಗ್ಗುತ್ತಿದೆ. ಈ ಮೂಲಕ ಬಾಯ್‌ಕಟ್ ಟ್ರೆಂಡ್‌ಗೆ ಸಿಲುಕಿ ಕುಗ್ಗಿ ಹೋಗಿದ್ದ ಬಾಲಿವುಡ್‌ಗೆ ಪಠಾಣ್ ಉಸಿರು ನೀಡಿದೆ. ಕಳೆದ ಬಾರಿ ಜೀರೊ ಚಿತ್ರದ ಮೂಲಕ ಹೀನಾಯ ಸೋಲು ಕಂಡಿದ್ದ ಶಾರುಖ್ ಖಾನ್ ಪಠಾಣ್ ಮೂಲಕ ಕಮ್‌ಬ್ಯಾಕ್ ಅನ್ನೂ ಸಹ ಮಾಡಿದ್ದಾರೆ.


Click it and Unblock the Notifications











