ಹೆಂಡ್ತಿ ಮೇಲೆ ನನಗೆ ನಯಾ ಪೈಸಾ ಪ್ರೀತಿ ಇಲ್ಲ, ಮದ್ವೆಯಾದ ತಪ್ಪಿಗೆ ಕರ್ತವ್ಯ ಪೂರೈಸುತ್ತಿದ್ದೇನೆ -ಖ್ಯಾತ ನಟನ ಶಾಕಿಂಗ್ ಹೇಳಿಕೆ

ಮದುವೆಯಾದ ಹೊಸತರಲ್ಲಿ ಹಲವರು ಎರಡು ಹೆಸರು ಒಂದೇ ಉಸಿರು ಎನ್ನುವಂತೆ ಇರುತ್ತಾರೆ. ಆದರೆ.. ಕಾಲ ಕ್ರಮೇಣ ದಾಂಪತ್ಯದಲ್ಲಿನ ಈ ಪ್ರೀತಿ-ಪ್ರಣಯ ನಿಧಾನಕ್ಕೆ ನೇಪಥ್ಯಕ್ಕೆ ಸರಿಯಲು ಶುರು ಮಾಡುತ್ತೆ. ಅಲ್ಲಿಯವರೆಗೆ ಕಾಣದ ಭಿನ್ನಾಭಿಪ್ರಾಯಗಳು ಕಾಣುತ್ತವೆ. ಇನ್ನೂ ಯಾವುದೇ ಸಂಬಂಧವಾದರೂ ಸರಿ, ಅಲ್ಲಿ ಪರಸ್ಪರ ನಂಬಿಕೆ ಇರಬೇಕು.

ಅರೆಂಜ್ ಮ್ಯಾರೇಜ್ ಆಗಿರಲಿ.. ಲವ್ ಮ್ಯಾರೇಜ್ ಆಗಿರಲಿ.. ಸಂಬಂಧದಲ್ಲಿ ಪರಸ್ಪರ ಪ್ರೀತಿ-ವಿಶ್ವಾಸ ಇರಬೇಕು. ಆಗಲೇ ದಾಂಪತ್ಯ ಜೀವನ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯ. ಆದರೆ.. ಬದಲಾದ ಈ ಕಾಲದಲ್ಲಿ. ಬದುಕಲು ದೊರೆತ ಅಸಂಖ್ಯ ಅವಕಾಶಗಳು, ವ್ಯಕ್ತಿ ಸ್ವಾತಂತ್ರ್ಯ .. ಹೊಂದಾಣಿಕೆ ಕೊರತೆ .. ದೈಹಿಕ ಅತೃಪ್ತಿ .. ಪ್ರೀತಿಯ ಕೊರತೆ ..

i-never-loved-her-dinesh-lal-yadav-nirahua-on-his-forced-marriage-and-life-long-duty

ಹೀಗೆ ಮುಂತಾದ ಕಾರಣಗಳಿಂದ ಹಲವರು ಮದುವೆಯ ನಂತರ ಅನೈತಿಕ ಸಂಬಂಧಕ್ಕೆ ಹಾತೊರೆಯುತ್ತಿದ್ದಾರೆ. ವೈವಾಹಿಕ ಸಂಬಂಧದಲ್ಲಿ ಸಿಗದಿದ್ದನ್ನು ಹೊರಗಡೆ ಹುಡುಕುವ ಮನೋಭಾವ ಬೆಳೆಸಿಕೊಳ್ಳುತ್ತಾರೆ . ಮತ್ತೂ ಕೆಲವರ ಸಂಸಾರ ಒಡೆದ ಹಾಲಾದರೂ ಕೂಡ ಸಮಾಜಕ್ಕೆ ಹೆದರಿ, ನೋಡಿದವರು ಏನಂತಾರೆ ..? ಎಂಬ ಭಯದಲ್ಲಿ ನಾಲ್ಕು ಗೋಡೆಗಳ ನಡುವೆ ತಮ್ಮ ಮನಸ್ತಾಪ ಹೂತು ಹಾಕಿ ಮುಖವಾಡದ ಬದುಕು ಬದುಕುತ್ತಾರೆ. ಹೊರಗಡೆ ಆದರ್ಶ ದಂಪತಿಗಳಂತೆ ಫೋಸ್ ನೀಡಿ ಮನೆಯೊಳಗೆ ಕಣ್ಣೀರು ಹಾಕುತ್ತಾರೆ. ಉದಾಹರಣೆಗೆ ದಿನೇಶ್ ಲಾಲ್ ಯಾದವ್.

ಹೌದು, ದಿನೇಶ್ ಲಾಲ್ ಯಾದವ್.. ಭೋಜ್‌ಪುರಿ ಚಿತ್ರರಂಗದ ಸೂಪರ್ ಸ್ಟಾರ್. ಕೇವಲ ಸ್ಟಾರ್ ಮಾತ್ರ ಅಲ್ಲ ಗಾಯಕ ಕೂಡ ಹೌದು. ರಾಜಕೀಯದ ನಾಯಕ ಕೂಡ ಹೌದು. 2022 ರಲ್ಲಿ ಅವರು ಆಜಂಗಢ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸಂಸದರಾಗಿ ಆಯ್ಕೆಯಾದವರು ಇವರು.

2006ರಲ್ಲಿ "ಚಲತ್ ಮುಸಾಫಿರ್ ಮೋಹ ಲಿಯೋ ರೇ" ಚಿತ್ರದ ಮೂಲಕ ಚಿತ್ರರಂಗಕ್ಕೆ ನಾಯಕನಾಗಿ ಬಂದ ದಿನೇಶ್ ಲಾಲ್ ಯಾದವ್ ಅವರ ಬದುಕು 2008ರಲ್ಲಿ ಬಂದ ''ನಿರಹುವಾ ರಿಕ್ಷಾವಾಲಾ'' ಸಂಪೂರ್ಣವಾಗಿ ಬದಲಿಸಿತು. ಆ ನಂತರ ಬಂದ ''ನಿರಹುವಾ ಹಿಂದೂಸ್ತಾನಿ''ಯ ಭಾಗ 1, ಭಾಗ 2 ಮತ್ತು ಭಾಗ 3 ಬ್ಲಾಕ್ ಬಸ್ಟರ್ ಆಗಿ ಹೊರ ಹೊಮ್ಮಿದವು.

ಈ ಫ್ರಾಂಚೈಸಿ ಎಷ್ಟರ ಮಟ್ಟಿಗೆ ಇವರಿಗೆ ಜನಪ್ರಿಯತೆಯನ್ನು ಹೆಚ್ಚಿಸಿತು ಅಂದರೆ ಹಲವರು ಇವರನ್ನು ನಿರಹುವಾ ಎಂಬ ಹೆಸರಿಂದಲೇ ಕರೆಯುತ್ತಾರೆ. ಇನ್ನೂ ಕೆಲವರು ''ಜ್ಯುಬಿಲಿ ಸ್ಟಾರ್'' ಎಂದು ಕೂಡ ಕರೆಯುತ್ತಾರೆ. ''ಬಾರ್ಡರ್''.. ''ಪಾಟ್ನಾ ಸೇ ಪಾಕಿಸ್ತಾನ್''.. ''ಶಿವಶಕ್ತಿ''..''ರಾಮ್ ಲಖನ್''.. ''ಬಾಮ್ ಬಾಮ್ ಬೋಲ್ ರಹಾ ಹೈ ಕಾಶಿ''.. ಇವರ ಕೆಲ ಜನಪ್ರಿಯ ಚಿತ್ರಗಳು.

i-never-loved-her-dinesh-lal-yadav-nirahua-on-his-forced-marriage-and-life-long-duty

ಇಂಥಾ ದಿನೇಶ್ ಲಾಲ್ ಯಾದವ್ ಅಲಿಯಾಸ್ ನಿರಹುವಾ 26 ವರ್ಷದ ಹಿಂದೆ ಮನಶಾ ಯಾದವ್ ಅವರನ್ನು ಮದುವೆಯಾಗಿದ್ದರು. ಇವತ್ತು ಕೂಡ ಮನಶಾ ಯಾದವ್ ಅವರ ಜೊತೆಯಲ್ಲಿಯೇ ಒಂದೇ ಸೂರಿನಡಿ ಬದುಕುತ್ತಿದ್ದಾರೆ. ಅದು ಒಲ್ಲದ ಮನಸಿಂದ ಎನ್ನುವುದೇ ದುರಂತ. ಖುದ್ದು ದಿನೇಶ್ ಲಾಲ್ ಯಾದವ್ ಈ ವಿಚಾರವನ್ನು ಹೇಳಿದ್ದಾರೆ. ಬಣ್ಣದ ಲೋಕದಲ್ಲಿ ಮತ್ತು ತಮ್ಮ ಅಭಿಮಾನಿ ವಲಯದಲ್ಲಿ ತಮ್ಮ ಈ ಹೇಳಿಕೆಯ ಮೂಲಕ ಸಂಚಲನ ಮೂಡಿಸಿದ್ದಾರೆ.

ಹೌದು, ಈ ಕುರಿತು ''ಡಿಜಿಟಲ್ ಕಾಮೆಂಟರಿ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ದಿನೇಶ್ ಲಾಲ್ ಯಾದವ್ ತೀರಾ ಚಿಕ್ಕ ವಯಸ್ಸಿನಲ್ಲಿಯೇ ಬಲವಂತದಿಂದ ನನ್ನ ತಂದೆ ತಾಯಿ ನನ್ನ ಮದುವೆಯನ್ನು ಮನಶಾ ಯಾದವ್ ಅವರ ಜೊತೆ ಮಾಡಿಸಿದರು ಎಂದು ಹೇಳಿದ್ಧಾರೆ.

ನಾನು ಇನ್ನೂ ಎತ್ತರಕ್ಕೆ ಬೆಳೆಯಬೇಕು, ಜೀವನದಲ್ಲಿ ಸಾಧನೆ ಮಾಡಬೇಕು, ಎಂದು ಎಷ್ಟೇ ಗೋಗರೆದರೂ ಕೂಡ ನನ್ನ ಹೆತ್ತವರು ನನ್ನ ಮಾತುಗಳಿಗೆ ಕವಡೆ ಕಾಸಿನ ಕಿಮ್ಮತ್ತು ಕೂಡ ಕೊಡಲಿಲ್ಲ ಎಂದು ಹೇಳಿರುವ ದಿನೇಶ್ ಲಾಲ್ ಯಾದವ್ ನಾವು ಇಬ್ಬರೂ ಒಂದೇ ಮನೆಯಲ್ಲಿದ್ದೇವೆ ಆದರೆ ನಮ್ಮ ನಡುವೆ ಯಾವ ಪ್ರೀತಿ ಕೂಡ ಇಲ್ಲ ಎಂದು ಹೇಳಿದ್ಧಾರೆ.

ಮುಂದುವರೆದು ನಾವು ಪ್ರೀತಿಸುವ ವ್ಯಕ್ತಿಯೇ ನಮ್ಮ ಜೀವನದ ಸಂಗಾತಿಯಾಗಬೇಕು, ಆದರೆ.. ನನ್ನ ದೌರ್ಭಾಗ್ಯ, ನನ್ನ ವಿಷಯದಲ್ಲಿ ಅದು ಆಗಲಿಲ್ಲ ಎಂದು ಹೇಳಿರುವ ದಿನೇಶ್ ಲಾಲ್ ಯಾದವ್ ಮದುವೆಯಾದ ತಪ್ಪಿಗೆ ನಾನು ಗಂಡನಾಗಿ ನನ್ನ ಕರ್ತವ್ಯವನ್ನು ಮಾತ್ರ ನಿರ್ವಹಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಮನಶಾ ಅವರನ್ನು ಮದುವೆಯಾಗಿದ್ದಕ್ಕೆ ನನಗೆ ಇವತ್ತೂ ಕೂಡ ಪಶ್ಚಾತಾಪ ಇದೆ, ಪಾಪಪ್ರಜ್ಞೆ ಕಾಡುತ್ತೆ ಎಂದು ಹೇಳಿದ್ಧಾರೆ.

i-never-loved-her-dinesh-lal-yadav-nirahua-on-his-forced-marriage-and-life-long-duty

ಈ ಎಲ್ಲ ವಿಚಾರವನ್ನು ನಾನು ನನ್ನ ಪತ್ನಿ ಮನಶಾ ಜೊತೆ ಕೂಡ ಮುಕ್ತವಾಗಿ ಮಾತನಾಡಿದ್ದೇನೆ, ನನ್ನ ಮಕ್ಕಳಿಗೆ ಕೂಡ ನಿಮ್ಮ ತಾಯಿಯ ಮೇಲೆ ನನಗೆ ಪ್ರೀತಿ ಇಲ್ಲ ಎಂದು ಹೇಳಿದ್ದೇನೆ ಎಂದು ಹೇಳಿರುವ ದಿನೇಶ್ ಲಾಲ್ ಯಾದವ್ ನನ್ನ ತಂದೆ ತಾಯಿ ಮಾಡಿದ ತಪ್ಪನ್ನು ನಾನು ಮಾಡುವುದಿಲ್ಲ ಎಂದು ಹೇಳಿದ್ಧಾರೆ. ಮದುವೆ ಇರಬಹುದು ಅಥವಾ ಅವರ ಭವಿಷ್ಯ ಇರಬಹುದು ನಾನು ಅವರ ಮೇಲೆ ಒತ್ತಡ ಹಾಕುವುದಿಲ್ಲ ಎಂದಿದ್ಧಾರೆ.

ಅಂದ್ಹಾಗೇ ದಿನೇಶ್ ಲಾಲ್ ಯಾದವ್ ಇಲ್ಲಿಯವರೆಗೆ ನೂರಕ್ಕೂ ಅಧಿಕ ಸಿನಿಮಾ ಮಾಡಿದ್ದಾರೆ. ವಿಶೇಷ ಅಂದರೆ ಈ ನೂರರಲ್ಲಿ ಇವರಿಗೆ 30ಕ್ಕೂ ಅಧಿಕ ಚಿತ್ರಗಳಲ್ಲಿ ಭೋಜ್‌ಪುರಿಯ ಡ್ರೀಮ್ ಗರ್ಲ್ ಆಮ್ರಪಾಲಿ ದುಬೆ ನಾಯಕಿ. ಈ ಮೂಲಕ ಭೋಜ್‌ಪುರಿ ಚಿತ್ರರಂಗದಲ್ಲಿ ಇದೊಂದು ಅಪರೂಪದ ದಾಖಲೆಯನ್ನು ಈ ಜೋಡಿ ಬರೆದಿದೆ. ಇನ್ನೂ ಚಿತ್ರರಂಗದ ಆಚೆ ಹಲವು ಸಭೆ ಸಮಾರಂಭಗಳಲ್ಲಿ ಕೂಡ ಇಬ್ಬರು ಜೊತೆಯಲ್ಲಿ ಭಾಗವಹಿಸಿದ್ದು ಇದೆ. ಈ ಹಿನ್ನೆಲೆ ಇವರ ಸಂಬಂಧದ ಮೇಲೆ ಹಲವರಿಗೆ ಅನುಮಾನ ಇದೆ. ಈ ಅನುಮಾನ ಈಗ ದಿನೇಶ್ ಲಾಲ್ ಅವರ ಸದ್ಯದ ಹೇಳಿಕೆಯಿಂದ ಇನ್ನೂ ಹೆಚ್ಚಾಗಿದೆ.

ಇನ್ನುಳಿದಂತೆ ದಿನೇಶ್ ಲಾಲ್ ಯಾದವ್ ಮತ್ತು ಮನಶಾ ಯಾದವ್ ಅವರಿಗೆ 3 ಜನ ಮಕ್ಕಳಿದ್ದಾರೆ. ಆದಿತ್ಯ ಯಾದವ್, ಅಮಿತ್ ಯಾದವ್, ಮತ್ತು ಅದಿತಿ ಯಾದವ್ ಇವರ ಮಕ್ಕಳ ಹೆಸರು. ಸದ್ಯ ದಿನೇಶ್ ಲಾಲ್ ಯಾದವ್ ತಮ್ಮ ಪತ್ನಿ ಕುರಿತು ನೀಡಿದ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪ್ರೀತಿ ಇಲ್ಲ ಅಂದ ಮೇಲೆ ಈ ಮೂವರ ಮಕ್ಕಳು ಹುಟ್ಟಿದ್ಹೇಗೆ..? ಎಂಬ ಪ್ರಶ್ನೆಯನ್ನು ಕೇಳುತ್ತಿದ್ಧಾರೆ. ನಿರಹುವಾ ಅಲಿಯಾಸ್ ದಿನೇಶ್ ಲಾಲ್ ಯಾದವ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಮನದ ಮಾತುಗಳನ್ನು ಹೇಳಲು ಧೈರ್ಯ ಬೇಕು, ಆ ಧೈರ್ಯದ ಪ್ರದರ್ಶನ ನೀವು ಮಾಡಿದ್ದೀರಾ ಎನ್ನುತ್ತಿದ್ದಾರೆ. ಪ್ರೀತಿ ಇಲ್ಲದಿದ್ದರೆ ವಿಚ್ಚೇದನ ನೀಡಿ ನಿಮ್ಮ ಪತ್ನಿಯನ್ನು ಅವರ ಪಾಡಿಗೆ ಬದುಕಲು ಬಿಡಿ ಎನ್ನುತ್ತಿದ್ಧಾರೆ. ದಿನೇಶ್ ಲಾಲ್ ಯಾದವ್ ಅವರನ್ನು ಮದುವೆಯಾದ ಮನಶಾ ನಿಜಕ್ಕೂ ದುರಾದೃಷ್ಟವಂತೆ ಎಂದು ಮರುಕ ಪಡುತ್ತಿದ್ದಾರೆ.

More from Filmibeat

English summary
"I never loved my wife." In a viral podcast reveal, Nirahua opens up about the burden of a forced marriage and why he chose to tell his children the truth. A heartbreaking look at the superstar's personal life and his promise to break the cycle.
Read more about: affair marriage viral video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X