»   » ನನಗೆ ಮದ್ವೆಯಾಗೋ ಹುಚ್ಚು ಬಿಟ್ಟಿದೆ

ನನಗೆ ಮದ್ವೆಯಾಗೋ ಹುಚ್ಚು ಬಿಟ್ಟಿದೆ

Posted By:
Subscribe to Filmibeat Kannada
ಸಲ್ಮಾನ್ ಖಾನ್ ನನಗೆ 'ಬಿಗ್ ಬ್ರದರ್' ಇದ್ದಂತೆ ಎಂದು ಒಂದು ಕಾಲದ ಪ್ರೇಯಸಿ ಕತ್ರೀನಾ ಕೈಫ್ ಹೇಳಿದ್ದನ್ನು ಸ್ವಲ್ಪ ಅರಗಿಸಿಕೊಳ್ಳಲು ಕಷ್ಟಪಡುತ್ತಿರುವ ಸಲ್ಲೂ ಅಭಿಮಾನಿಗಳಿಗೆ ಮತ್ತೊಂದು ಶಾಕಿಂಗ್ ಸುದ್ದಿ ಕಾದಿದೆ.

ಮೊದಲ ಸುದ್ದಿ: ಡಿ.27ರಂದು ಸಲ್ಮಾನ್ ಖಾನ್ ಹುಟ್ಟುಹಬ್ಬ ಬಹುಶಃ ಜೈಲಿನಲ್ಲಿ ಆದರೂ ಅಚ್ಚರಿಯೇನಿಲ್ಲ.

ಎರಡನೇ ಸುದ್ದಿ: ಕತ್ರೀನಾ ಕೈಕೊಟ್ಟ ಮೇಲೆ ಸಲ್ಮಾನ್ ಖಾನ್ ಗೆ ಮದ್ವೆಯಾಗೋ ಹುಚ್ಚು ಬಿಟ್ಟಿದೆಯಂತೆ

ಹಳೆ ಕೇಸಲ್ಲಿ ತಗಲಾಗಿಕೊಂಡಿರುವ ಸಲ್ಮಾನ್ ಖಾನ್ ಅವರು ಡಿಸೆಂಬರ್ 27 ರಂದು ಕೋರ್ಟಿಗೆ ಹಾಜರಾಗುವ ಸಾಧ್ಯತೆಯಿದೆ.

2002ರಲ್ಲಿ ನಡೆದ ಈ ಘನೆಯಲ್ಲಿ ಒಬ್ಬರು ಮೃತಪಟ್ಟು ನಾಲ್ಕು ಮಂದಿ ಗಾಯಗೊಂಡಿದ್ದರು. ಮುಂಬೈ ಬಾಂದ್ರಾ ಪ್ರದೇಶದ ಬೇಕರಿಯೊಂದರ ಬಳಿ ಫುಟ್ ಪಾತ್ ಮೇಲೆ ಮಲಗಿದ್ದ ಇವರ ಮೇಲೆ ಸಲ್ಲೂ ಅವರ ಐಷಾರಾಮಿ ಲ್ಯಾಂಡ್ ಕ್ರೂಸರ್ ಕಾರು ಹತ್ತಿತ್ತು.

ಈ ಕೇಸಿಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದೆ ಸಲ್ಲೂ 82 ಸಲ ಗೈರು ಹಾಜರಾಗಿ ದಾಖಲೆ ಬರೆದಿದ್ದು ಇದೆ. ಆದರೆ, ಡಿ.3 ರಂದು ಸಮನ್ಸ್ ಜಾರಿಯಾದ ಮೇಲೆ ಕೋರ್ಟಿಗೆ ಕಾಲಿಡಲಿದ್ದಾರೆ.

ನನ್ನ ವಕೀಲರೊಡನೆ ಮಾತನಾಡುತ್ತೇನೆ. ಅವರು ಡಿ.27(ಹುಟ್ಟು ಹಬ್ಬದ ದಿನ) ಕೋರ್ಟಿಗೆ ಹೋಗಲೇ ಬೇಕು ಎಂದರೆ ಹೋಗುತ್ತೇನೆ. ಇಲ್ಲದಿದ್ದರೆ ಸುಮ್ಮನಾಗುತ್ತೇನೆ. ಈ ಬಾರಿ ಹುಟ್ಟುಹಬ್ಬ ಆಚರಣೆ ಬಗ್ಗೆ ಯಾವುದೇ ಯೋಜನೆ ಹಾಕಿಕೊಂಡಿಲ್ಲ ಎಂದಿದ್ದಾರೆ.

ಆದರೆ, ಪ್ರಕರಣದಲ್ಲಿ ಸಲ್ಮಾನ್ ಅವರಿಗೆ ಜೈಲು ಶಿಕ್ಷೆಯಾದರೆ, ಬಹುಶಃ ಜೈಲಿನಲ್ಲೇ ಹುಟ್ಟುಹಬ್ಬ ಆಚರಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಮದ್ವೆ ಆಗೋಲ್ಲ ಕಣ್ರೀ: ಮದುವೆಯಾಗೋ ತನಕ ಹುಚ್ಚು ಬಿಡಲ್ಲ. ಹುಚ್ಚು ಬಿಡೋ ತನಕ ಮದ್ವೆಯಾಗಲ್ಲ ಎಂಬ ಮಾತಿಗೆ ಹೇಳಿ ಮಾಡಿಸಿದಂತೆ ಇರುವ ಸಲ್ಮಾನ್ ಗೆ ಇತ್ತೀಚೆಗೆ ಯಾಕೋ ಸ್ವಲ್ಪ ಜ್ಞಾನೋದಯವಾಗಿದೆ.

ಅನುಪಮಾ ಛೋಪ್ರಾ ಅವರ ಟಾಕ್ ಶೋನಲ್ಲಿ ಮಾತನಾಡಿದ ಸಲ್ಮಾನ್ ಖಾನ್, ನಾನು ಮದುವೆ ಆಗದಿರಲು ನಿರ್ಧರಿಸಿದ್ದೇನೆ. ತುಂಬಾ ಸಮಯದ ಹಿಂದೆ ನಾನು ಮದ್ವೆಯಾಗುವ ಸಂದರ್ಭದ ಬಂದಿತ್ತು. ಆದಾದ ನಂತರ ಮತ್ತೆ ಆ ರೀತಿ ಯಾವುದೇ ಸಂದರ್ಭ ಒದಗಿಲ್ಲ.

ನಾನು ಪಾರ್ಟಿ ಅನಿಮಲ್ ಅಲ್ಲ. ಅದಷ್ಟು ಕಾಲ ನನ್ನ ಕುಟುಂಬದೊಡನೆ ಇರಲು ಯತ್ನಿಸುತ್ತೇನೆ. ನೈಟ್ ಕ್ಲಬ್, ಪಬ್ ಗಳಿಗೆ ಹೋಗುವುದೇ ಇಲ್ಲ. ಮಂದಿರ ಹಾಗೂ ಮಸೀದಿಗೂ ಈ ನಡುವೆ ಹೋಗಲು ಸಮಯ ಸಿಕ್ಕಿಲ್ಲ ಎಂದು ಸಲ್ಮಾನ್ ಹೇಳಿಕೊಂಡಿದ್ದಾರೆ.

ಸಲ್ಮಾನ್ ಈ ಹಿಂದಿನ ಘಟನೆ(ಲವ್ ಫೇಲ್ಯೂರ್ ಗಳು)ಗಳನ್ನು ಇನ್ನೂ ಮರೆತಿಲ್ಲದ್ದಂತೆ ತೋರುತ್ತದೆ. ಸಲ್ಮಾನ್ ಅವರ ಮದುವೆ ಕನಸು ಕನಸಾಗೇ ಉಳಿಯುತ್ತದೆಯೋ ಎಂದು ಅಭಿಮಾನಿಗಳು ಕಂಗಲಾಗಿದ್ದಾರೆ.

English summary
The whole world wants to know when superstar Salman Khan will get married. But it seems that Salman's fan's dream to see him married will remain a dream only, as the actor has no plans of getting married.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada