"ಸ್ನಾನ ಮಾಡುವಾಗ ನನ್ನ ದೇಹದ ಪ್ರತಿಭಾಗವನ್ನು ಮುಟ್ಟಿ ಥ್ಯಾಂಕ್ಸ್ ಹೇಳುತ್ತೇನೆ"; ತಮನ್ನಾ
ಬಿಂದಾಸ್ ಬೆಡಗಿ ತಮನ್ನಾ ಬಾಟಿಯಾ ತನ್ನ ಮಾದಕ ಮೈಮಾಟದಿಂದಲೇ ಸದ್ದು ಮಾಡುತ್ತಿದ್ದಾರೆ. ಮಿಲ್ಕಿ ಬ್ಯೂಟಿ ತನ್ನ ಬಾಡಿ ಶೇಪ್ಸ್, ಡ್ಯಾನ್ಸ್ ಮೂವ್ಸ್‌ನಿಂದ ನೋಡಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಇತ್ತೀಚೆಗೆ ಮಿಲ್ಕಿ ಬ್ಯೂಟಿ ನಾಯಕಿಯಾಗಿ ನಟಿಸುವುದಕ್ಕಿಂತ ಗ್ಲಾಮರ್ ಗೊಂಬೆಯಾಗಿ ಐಟಂ ಸಾಂಗ್‌ಗಳಲ್ಲಿ ಕುಣಿಯುವುದೇ ಹೆಚ್ಚು. ಅದಕ್ಕಾಗಿ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ಧಾರೆ.
ಕ್ರೇಜ್‌ಗೆ ತಕ್ಕಂತೆ ಫಿಲ್ಮ್ ಮೇಕರ್ಸ್ ತಮ್ಮ ಸಿನಿಮಾಗಳಲ್ಲಿ ಆಕೆಯನ್ನು ಕುಣಿಸಲು ಮುಗಿಬಿದ್ದಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರದಲ್ಲೂ ತಮ್ಮ ಅಂದಚಂದ ಪ್ರದರ್ಶಿಸಿ ತಮನ್ನಾ ಮೋಡಿ ಮಾಡಿದ್ದರು. ಆ ಮಾದಕ ಮೈಮಾಟದ ಗುಟ್ಟು ಏನು ಎನ್ನುವುದನ್ನು ತಮನ್ನಾ ಇದೀಗ ಬಹಿರಂಗಪಡಿಸಿದ್ದಾರೆ. ತಮ್ಮ ವಿಚಿತ್ರ ಅಭ್ಯಾಸದ ಬಗ್ಗೆ ಹೇಳಿಕೊಂಡಿದ್ದಾರೆ. ಅದು ಈಗ ಸಖತ್ ವೈರಲ್ ಆಗುತ್ತಿದೆ.

ಸಂದರ್ಶನವೊಂದರಲ್ಲಿ ತಮ್ಮ ದೇಹಾಕೃತಿಯ ಬಗ್ಗೆ ತಮನ್ನಾ ಕ್ರೇಜಿ ಕಾಮೆಂಟ್ಸ್ ಮಾಡಿದ್ದಾರೆ. ನಿಮ್ಮ ದೇಹವನ್ನು ಪ್ರೀತಿಸ್ತೀರಾ ಎನ್ನುವ ಪ್ರಶ್ನೆಗೆ "ಖಂಡಿತ ಪ್ರೀತಿಸ್ತೀನಿ. ನಾನು ಇದನ್ನು ಆರಂಭಿಸಿದ ಬಳಿಕ ನಿಜಕ್ಕೂ ಪ್ರತಿಫಲ ಸಿಕ್ಕಿದೆ. ಇಡೀ ದಿನ ಕೆಲಸ ಮಾಡಿದ ಬಳಿಕ ಸ್ನಾನ ಮಾಡುವಾಗ ದೇಹದ ಪ್ರತಿಭಾಗವನ್ನು ಮುಟ್ಟಿ ಥ್ಯಾಂಕ್ಸ್ ಹೇಳುತ್ತೇನೆ" ಎಂದಿದ್ದಾರೆ.
ಮಾತು ಮುಂದುವರೆಸಿರುವ ಮಿಲ್ಕಿ ಬ್ಯೂಟಿ "ಹೀಗೆ ಹೇಳಿದರೆ ಕ್ರೇಜಿ ಎನಿಸಬಹುದು. ನನ್ನ ದೇಹದ ಪ್ರತಿಭಾಗಕ್ಕೆ ನಾನು ಧನ್ಯವಾದ ಹೇಳ್ತೀನಿ. ಎಲ್ಲವನ್ನು ತಡೆದುಕೊಳ್ಳುತ್ತದೆ. ಅದಕ್ಕಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ದೇಹದ ಭಾಗಗಳಿಗೆ ಇಷ್ಟ ಇದ್ಯೋ ಇಲ್ಲವೋ ಇಡೀ ದಿನ ನನ್ನೊಟ್ಟಿಗೆ ನಿಲ್ಲುತ್ತದೆ. ಇದು ಇತ್ತೀಚೆಗೆ ರೂಢಿ ಆಗಿಹೋಗಿದೆ. ಸ್ನಾನ ಮಾಡುವಾಗ ಇದನ್ನು ಆರಂಭಿಸಿದೆ. ಸುಮ್ಮನೆ ಆರಂಭಿಸಿದೆ. ಅದನ್ನು ಮುಂದುವರೆಸುತ್ತಿದ್ದೀನಿ" ಎಂದಿದ್ದಾರೆ.

ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ತಮನ್ನಾ ಕೊಂಚ ತೆಳ್ಳಗಿದ್ದರು. ಬಳಿಕ ದೇಹದ ತೂಕ ಹೆಚ್ಚಿಸಿಕೊಂಡಿದ್ದರು. ತಮನ್ನಾ ಒಳ್ಳೆ ಡ್ಯಾನ್ಸರ್. ಯೂನಿಕ್ ಡ್ಯಾನ್ಸ್ ಸ್ಟೈಲ್‌ನಿಂದಲೇ ಆಕೆ ಗಮನ ಸೆಳೆಯುತ್ತಾರೆ. ಮುಂಬೈನಲ್ಲಿ ಹುಟ್ಟಿ ಬೆಳೆದ ಚೆಲುವೆಗೆ ದಕ್ಷಿಣದಲ್ಲಿ ಯಶಸ್ಸು ಸಿಕ್ಕಿತ್ತು. ಆರಂಭದಲ್ಲಿ ತಮಿಳು ಸಿನಿಮಾದಲ್ಲಿ ನಟಿಸಿದರು. ಅಲ್ಲಿ ಯಶಸ್ಸು ಸಿಕ್ಕ ಬಳಿಕ ಟಾಲಿವುಡ್ ಹಾಗೂ ಬಾಲಿವುಡ್ ಮಂದಿ ಕರೆದು ಅವಕಾಶ ಕೊಟ್ಟಿದ್ದರು.
ಕನ್ನಡ ಸಿನಿಮಾಗಳಲ್ಲಿ ತಮನ್ನಾ ನಟಿಸಿಲ್ಲ. ಆದರೆ ಎರಡು ಬಿಂದಾಸ್ ಸಾಂಗ್ಸ್‌ಗೆ ಕುಣಿದು ರಂಗೇರಿಸಿದ್ದಾರೆ. 'ಜಾಗ್ವಾರ್' ಚಿತ್ರದ 'ಸಂಪಿಗೆ ಎಣ್ಣೆ' ಹಾಗೂ 'KGF- 1' ಚಿತ್ರದ 'ಜೋಕೆ ನಾನು ಬಳ್ಳಿಯ ಮಿಂಚು' ಹಾಡುಗಳಿಗೆ ಮಾದಕವಾಗಿ ಹೆಜ್ಜೆ ಹಾಕಿ ಮಿಂಚಿದ್ದರು. ಕಳೆದ ವರ್ಷ 'ಸ್ತ್ರೀ-2' ಹಾಗೂ 'ವೇದ' ಚಿತ್ರದ ಹಾಡುಗಳಿಗೆ ತಮನ್ನಾ ಕುಣಿದಿದ್ದರು. 'ಸಿಕಂದರ್ ಕಾ ಮುಖದ್ದರ್' ಚಿತ್ರದಲ್ಲಿ ನಟಿಸಿದ್ದರು. ತೆಲುಗಿನ 'ಓದೆಲಾ'-2 ಸಿನಿಮಾ ಈಗ ಆಕೆ ಕೈಯಲ್ಲಿದೆ.
ಇನ್ನು ತಮನ್ನಾ, ನಟ ವಿಜಯ್ ವರ್ಮಾ ಜೊತೆ ಪ್ರೀತಿಲಿ ಬಿದ್ದಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಮಾತನಾಡಿದ್ದಾರೆ. ಇಬ್ಬರೂ ಪಾರ್ಟಿ, ಪಬ್ ಎಂದು ಸುತ್ತಾಡುತ್ತಿರುತ್ತಾರೆ. 'ಲಸ್ಟ್ ಸ್ಟೋರಿಸ್'-2 ಶೂಟಿಂಗ್ ವೇಳೆ ಶುರುವಾದ ಪರಿಚಯ ಬಳಿಕ ಪ್ರೀತಿಯಾಗಿ ಮಾರ್ಪಟ್ಟಿತ್ತು. ಇಬ್ಬರೂ ಮದುವೆ ಆಗಲಿದ್ದಾರೆ. ನಮ್ಮ ಮನೆಯಲ್ಲಿ ಕೂಡ ಬೇಗ ಮದುವೆ ಆಗು ಎನ್ನುವ ಒತ್ತಡ ಇದೆ. ಅದು ಸಾರ್ವತ್ರಿಕವಾದ ಒತ್ತಡ, ಈಗ ಕೂಡ ಇರುವಂಥದ್ದು ಎಂದು ಇದೇ ಸಂದರ್ಶನದಲ್ಲಿ ಹೇಳಿದ್ದಾರೆ.
'ಅಲ್ಲುಡು ಸೀನು', 'ಸ್ಪೀಡುನ್ನೋಡು', 'ಜೈ ಲವ ಕುಶ', 'ಸರಿಲೇರು ನೀಕೇವ್ವರು', 'ಗಣಿ', 'ಜೈಲರ್' ಹೀಗೆ ಕೆಲ ಸಿನಿಮಾಗಳಲ್ಲಿ ಸ್ಪೆಷಲ್ ಸಾಂಗ್‌ಗಳಿಗೆ ಹೆಜ್ಜೆ ಹಾಕಿ ತಮನ್ನಾ ಕಮಾಲ್ ಮಾಡಿದ್ದರು.


Click it and Unblock the Notifications











