"ಗರ್ಭಪಾತವಾಗಿತ್ತು, ಇನ್ನು ಮಗು ಹೆರಲು ಸಾಧ್ಯವಿಲ್ಲ, ಈ ನರಕ ಯಾರಿಗೂ ಬೇಡ"; ರಾಣಿ ಮುಖರ್ಜಿ
ಇತ್ತೀಚೆಗೆ 46ನೇ ವಸಂತಕ್ಕೆ ಕಾಲಿಟ್ಟ ಬಾಲಿವುಡ್ ನಟಿ ರಾಣಿ ಮುಖರ್ಜಿ ತಮ್ಮ ಜೀವನದ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. 2ನೇ ಮಗು ಪಡೆಯಲು ಪ್ರಯತ್ನಿಸಿ ವಿಫಲವಾಗಿದ್ದ ನೋವನ್ನು ಹಂಚಿಕೊಂಡಿದ್ದಾರೆ. ಸದ್ಯ ಆಕೆಯ ಹೇಳಿಕೆ ವೈರಲ್ ಆಗುತ್ತಿದೆ. ಇನ್ನು ಮಗು ಪಡೆಯಲು ಸಾಧ್ಯವಿಲ್ಲ, ಆ ನರಕ ಯಾರಿಗೂ ಬೇಡ ಎಂದು ಅಲವತ್ತುಕೊಂಡಿದ್ದಾರೆ.
ಸೌತ್ ಸಿನಿರಸಿಕರಿಗೂ ಚಿರಪರಿಚಿತರಾಗಿರುವ ಬಾಲಿವುಡ್ ಕ್ರೇಜಿ ನಟಿಯರಲ್ಲಿ ರಾಣಿ ಮುಖರ್ಜಿ ಕೂಡ ಒಬ್ಬರು. ಒಂದ್ಕಾಲದಲ್ಲಿ ಗ್ಲಾಮರಸ್ ಪಾತ್ರಗಳ ಮೂಲಕ ರಂಜಿಸಿದ ಬೆಡಗಿ ಇತ್ತೀಚೆಗೆ ಹೆಚ್ಚು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 1996ರಲ್ಲಿ 'ಬೈಯರ್ ಫೂಲ್' ಎನ್ನುವ ಬೆಂಗಾಳಿ ಸಿನಿಮಾ ಮೂಲಕ ರಾಣಿ ಬಣ್ಣದ ಲೋಕ ಪ್ರವೇಶಿಸಿದ್ದರು. 'ರಾಜಾ ಕೀ ಆಯೇಗಿ ಬಾರಾತ್' ಬಾಲಿವುಡ್‌ನಲ್ಲಿ ಆಕೆಯ ಚೊಚ್ಚಲ ಸಿನಿಮಾ.

ರಾಣಿ ಮುಖರ್ಜಿ ಬಾಲಿವುಡ್ ಸಿನಿಮಾಗಳಲ್ಲಿ ಹೆಚ್ಚು ಮೆರೆಯಲು ಆದಿತ್ಯಾ ಚೋಪ್ರಾ ಕಾರಣ ಎನ್ನುವವರು ಇದ್ದಾರೆ. ಆಕೆಗೆ ಹೆಚ್ಚು ಅವಕಾಶಗಳು ಸಿಗಲು ನಿರ್ಮಾಪಕರಾಗಿ ಆದಿತ್ಯಾ ಬೆಂಬಲವೂ ಇತ್ತು. 2014ರಲ್ಲಿ ಇಬ್ಬರು ಮದುವೆ ಕೂಡ ಆಗಿದ್ದರು. ಅದಾಗಲೇ ಒಂದು ಮದುವೆಯಾಗಿ ಡಿವೋರ್ಸ್ ಪಡೆದಿದ್ದ ಆದಿತ್ಯ ಜೊತೆ ಇಟಲಿಯಲ್ಲಿ ಮದುವೆ ನಡೆದಿತ್ತು. ದಂಪತಿಗೆ ಒಂದು ಮಗು ಕೂಡ ಇದೆ.
ರಾಣಿ ಮುಖರ್ಜಿ ಮಾತನಾಡುತ್ತಾ "ನನ್ನ ಮಗಳಿಕೆ ವರ್ಷ ತುಂಬುತ್ತಿದ್ದಂತೆ ಮತ್ತೊಂದು ಮಗುವಿಗಾಗಿ ಪ್ರಯತ್ನಿಸಿದೆ. 5 ವರ್ಷಗಳ ನಂತರ 2020 ರಲ್ಲಿ ಮತ್ತೊಮ್ಮೆ ಗರ್ಭಿಣಿ ಆಗಿದ್ದೆ. ಆದರೆ ಆ ಸಂತೋಷ ಹೆಚ್ಚು ದಿನ ನಿಲ್ಲಲಿಲ್ಲ. ಗರ್ಭಪಾತ ಆಯಿತು. ಇದರಿಂದ ಹೊಟ್ಟೆಯಲ್ಲಿಯೇ ಮಗುವನ್ನು ಕಳೆದುಕೊಂಡೆ. ಆ ನರಕವನ್ನು ಹೇಳೋಕೆ ಸಾಧ್ಯವಿಲ್ಲ."
"ನಾನು ಹೊರಗೆ ಕಾಣುವಷ್ಟು ಯಂಗ್ ಅಲ್ಲ. ನನ್ನ ವಯಸ್ಸು ಈಗ 46 ವರ್ಷ. ಈ ವಯಸ್ಸಿನಲ್ಲಿ ನಾನು ಮತ್ತೆ ಮಗುವನ್ನು ಹೆರಲು ಸಾಧ್ಯವಿಲ್ಲ. ನನ್ನ ಮಗಳಿಗೆ ಅಣ್ಣ ಅಥವಾ ತಂಗಿಯನ್ನು ಕೊಡಲು ಆಗುತ್ತಿಲ್ಲ ಎಂಬ ನೋವು ನಮ್ಮ ಜೀವನದುದ್ದಕ್ಕೂ ಇರುತ್ತದೆ. ನನ್ನ ಮಗಳು ಅಧಿರಾ ನನ್ನ ಪ್ರಪಂಚ. ಆಕೆಯಿಂದಲೇ ನಾನು ಸಂತೋಷವಾಗಿರಲು ಸಾಧ್ಯವಾಯಿತು. ಈಗ ನಾನು ಮಗುವನ್ನು ಹೆರುವ ವಯಸ್ಸನ್ನು ಮೀರಿದ್ದೇನೆ. ಇರುವುದರಲ್ಲೇ ಸುಖ ಕಾಣಬೇಕು" ಎಂದು ರಾಣಿ ಮುಖರ್ಜಿ ಭಾವುಕರಾದರು.
"ನನಗೆ ಅದಿರಾ ನಿಜಕ್ಕೂ ಪವಾಡ ಎನಿಸುತ್ತಾಳೆ. ನಾನು ಅವಳನ್ನು ಪಡೆದಿರುವುದಕ್ಕೆ ನಿಜವಾಗಿಯೂ ಸಂತೋಷವಾಗಿದೆ. ಏಕೆಂದರೆ ನಾನು ಒಂದು ಮಗುವನ್ನು ಹೊಂದಲು ಹೆಣಗಾಡುತ್ತಿರುವ ಪೋಷಕರನ್ನು ನೋಡುತ್ತಿದ್ದೇನೆ. ಹಾಗಾಗಿ ನನ್ನಲ್ಲಿರುವದ್ದಕ್ಕೆ ನಾನು ಕೃತಜ್ಞರಾಗಿರಬೇಕು ಎಂದು ನಾನು ಭಾವಿಸುತ್ತೇನೆ. ಇದು ಒಂದು ಮಾತಿದೆ. ನಿಮ್ಮಲ್ಲಿರುವದಕ್ಕೆ ನೀವು ಕೃತಜ್ಞರಾಗಿರಬೇಕು ಎಂದು. ಇರುವುದರಲ್ಲೇ ತೃಪ್ತರಾಗಿರಲು ಧೈರ್ಯಬೇಕು. ನಾನು ಆ ದಿಶೆಯಲ್ಲಿ ಮುನ್ನಡೆದಿದ್ದೇನೆ. ಹೌದು, ಅದಿರಾ ಸಾಕು ಎಂದು ನಾನೇ ಹೇಳಿಕೊಳ್ಳುತ್ತಿದ್ದೇನೆ" ಎಂದು ರಾಣಿ ವಿವರಿಸಿದ್ದಾರೆ.

'ಕಭಿ ಖುಷಿ ಕಭೀ ಗಮ್', 'ವೀರ್-ಜಾರಾ', 'ತಲಾಶ್', 'ಬಂಟಿ ಔರ್ ಬಬ್ಲಿ', 'ಕುಚ್ ಕುಚ್ ಹೋತಾ ಹೈ' ಸೇರಿದಂತೆ ಹಲವು ಸಿನಿಮಾಗಳಲ್ಲಿ ರಾಣಿ ಮುಖರ್ಜಿ ನಟಿಸಿದ್ದಾರೆ. ಮದುವೆ ಬಳಿಕ 'ಐಯ್ಯಾ' ಚಿತ್ರದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ನಟಿಸಿ ಎಲ್ಲರ ಹುಬ್ಬೇರಿಸಿದ್ದರು. 'ಮರ್ದಾನಿ' ಮಹಿಳಾ ಪ್ರಧಾನ ಚಿತ್ರದಲ್ಲಿ ಪವರ್‌ಫುಲ್ ರೋಲ್ ಪ್ಲೇ ಮಾಡಿದ್ದರು. ಕಳೆದ ವರ್ಷ ಬಂದ 'ಮಿ. ಚಟರ್ಜಿ Vs ನಾರ್ವೆ' ಆಕೆ ನಟಿಅಇದ ಕೊನೆಯ ಸಿನಿಮಾ.


Click it and Unblock the Notifications











