ಬೇರೆ ನಟರ ಜೊತೆ ನನ್ನ ಪತ್ನಿ ಕರೀನಾನ ನೋಡಿದಾಗ ಮೈಯೆಲ್ಲ ಉರಿಯುತ್ತಿತ್ತು- ಸೈಫ್ ಅಲಿ ಖಾನ್

ಬಾಲಿವುಡ್‌ನ ಪವರ್ ಕಪಲ್‌ಗಳಲ್ಲಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಜೋಡಿ ಕೂಡ ಒಂದು. ಇವರಿಬ್ಬರ ಜೋಡಿ ಅಂದಿಗೂ ಇಂದಿಗೂ ಸದಾ ಸುದ್ದಿಯಲ್ಲಿ ಇರುತ್ತದೆ. ಸಿನಿಮೀಯ ಶೈಲಿಯಲ್ಲೇ ಸೈಫ್ ಮತ್ತು ಕರೀನಾ ಪ್ರೀತಿ ಬೆಳೆದಿತ್ತು. ಆರಂಭದಲ್ಲಿ ಇವರಿಬ್ಬರ ಡೇಟಿಂಗ್ ವಿಚಾರ ತುಂಬಾನೇ ಕುತೂಹಲ ಮೂಡಿಸಿತ್ತು. ಸಿನಿಮಾ ಸೆಟ್‌ನಲ್ಲಿ ಚಿಗುರಿದ ಪ್ರೇಮ ಇಂದು ಸುಂದರ ಸಂಸಾರವಾಗಿ ಮಾರ್ಪಟ್ಟಿದೆ.

ಇವರ ನಡುವಿನ ವಯಸ್ಸಿನ ಅಂತರದ ಬಗ್ಗೆಯೂ ಕೂಡ ಆಗ ಸಾಕಷ್ಟು ಚರ್ಚೆಗಳು ನಡೆದಿದ್ದವು. ಆದರೆ ಈಗ ಇವರಂತೆ ಆದರ್ಶ ದಂಪತಿಗಳಂತೆ ಬದುಕುವುದು ಹೇಗೆ ಎನ್ನುವ ಚರ್ಚೆ ಆಗಾಗ ನಡೆಯುತ್ತೆ. ಹೀಗಿರುವಾಗ ಸೈಫ್ ಅಲಿ ಖಾನ್ ಇದೀಗ ತಮ್ಮ ವೈಯಕ್ತಿಕ ಜೀವನದ ಕುರಿತು ಮುಕ್ತವಾಗಿ ಮಾತನಾಡುತ್ತಾರೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ. ತಮ್ಮ ಡೇಟಿಂಗ್ ದಿನಗಳ ಒಂದು ರಹಸ್ಯವನ್ನು ಅವರು ಬಿಚ್ಚಿಟ್ಟಿದ್ದಾರೆ.

I Was a Bit Jealous Saif Ali Khan Opens Up About Early Dating Days With Kareena Kapoor

ಶೂಟಿಂಗ್ ಸೆಟ್‌ನಲ್ಲಿ ಶುರುವಾದ ಅನುಬಂಧ...

ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಮೊದಲು ಹತ್ತಿರವಾಗಿದ್ದು 'ತಶನ್' ಸಿನಿಮಾದ ಶೂಟಿಂಗ್ ಸಮಯದಲ್ಲಿ. ಅದಕ್ಕಿಂತ ಮೊದಲು ಇಬ್ಬರಿಗೂ ಪರಿಚಯವಿತ್ತು. ಆದರೆ ಆ ಚಿತ್ರದ ಸೆಟ್‌ನಲ್ಲಿ ಇಬ್ಬರ ನಡುವೆ ಸ್ನೇಹ ಬೆಳೆದು ಅದು ಪ್ರೀತಿಗೆ ತಿರುಗಿತು. ಆಗಲೇ ಸೈಫ್ ಅವರು ಕರೀನಾ ಅವರ ವ್ಯಕ್ತಿತ್ವಕ್ಕೆ ಮಾರು ಹೋಗಿದ್ದರು.

ಕರೀನಾ ಕಪೂರ್ ಆಗಲೇ ಬಾಲಿವುಡ್‌ನ ಬೇಬೋ ಆಗಿ ಮಿಂಚುತ್ತಿದ್ದರು. ಅವರ ಸೌಂದರ್ಯ ಮತ್ತು ನಟನೆಗೆ ಕೋಟ್ಯಂತರ ಅಭಿಮಾನಿಗಳಿದ್ದರು. ಇಂತಹ ಸಮಯದಲ್ಲಿ ಸೈಫ್ ಅವರಿಗೆ ಕರೀನಾ ಮೇಲೆ ವಿಶೇಷ ಕಾಳಜಿ ಉಂಟಾಗಿತ್ತು. ಸದಾ ಅವರ ಜೊತೆ ಇರಲು ಸೈಫ್ ಬಯಸುತ್ತಿದ್ದರು.

ನವಾಬನಿಗೆ ಕಾಡಿದ್ದ ಆ 'ಮತ್ಸರ'ದ ಭಾವನೆ

ಈ ಕುರಿತು ''ದಿ ಹಾಲಿವುಡ್‌ ರಿಪೋರ್ಟರ್‌ ಇಂಡಿಯಾ''ಗೆ ನೀಡಿದ ಸಂದರ್ಶನದಲ್ಲಿ ಸೈಫ್ ಅಲಿ ಖಾನ್ ಮಾತನಾಡಿದ್ದು, ಆ ದಿನಗಳನ್ನು ಮೆಲುಕು ಹಾಕಿದ್ದಾರೆ. ತಮ್ಮ ಪ್ರೇಮಕಥೆ ಆಸಕ್ತಿದಾಯಕ ವಿಷಯ ಹಂಚಿಕೊಂಡಿದ್ದಾರೆ. ಡೇಟಿಂಗ್ ಆರಂಭಿಸಿದ ಸಮಯದಲ್ಲಿ ಅವರಿಗೆ ಒಂದು ರೀತಿಯ ಮತ್ಸರ ಕಾಡುತ್ತಿತ್ತಂತೆ. ಇದಕ್ಕೆ ಕಾರಣ ಕರೀನಾ ಕಪೂರ್ ವೃತ್ತಿಜೀವನದ ವೇಗ. ಎಲ್ಲರಿಗೆ ಗೊತ್ತಿರುವಂತೆ ಆ ಸಮಯದಲ್ಲಿ ಕರೀನಾ ತುಂಬಾ ಬ್ಯುಸಿಯಾಗಿದ್ದ ನಟಿ.

ಕರೀನಾ ಕಪೂರ್ ಶೂಟಿಂಗ್ ಮುಗಿಸಿ ಮರಳುವಾಗ ಸೈಫ್ ಅವರಿಗೆ ಸ್ವಲ್ಪ ಅಸೂಯೆ ಆಗುತ್ತಿತ್ತಂತೆ. "ನಾನು ಮನೆಯಲ್ಲಿ ಸುಮ್ಮನೆ ಕುಳಿತಿರುತ್ತಿದ್ದೆ. ಆದರೆ ಕರೀನಾ ದೊಡ್ಡ ಸ್ಟಾರ್‌ಗಳ ಜೊತೆ ಕೆಲಸ ಮಾಡುತ್ತಿದ್ದರು. ಆಗ ನನಗೆ ಸ್ವಲ್ಪ ಹೊಟ್ಟೆಕಿಚ್ಚು ಆಗುತ್ತಿತ್ತು ಎಂದು ಸೈಫ್ ಅಲಿ ಖಾನ್ ಹೇಳಿದ್ದಾರೆ. ಇದು ಅವರ ನಡುವಿನ ಪ್ರೀತಿಯ ಒಂದು ಭಾಗವಾಗಿತ್ತು ಎಂದಿದ್ದಾರೆ.

I Was a Bit Jealous Saif Ali Khan Opens Up About Early Dating Days With Kareena Kapoor

ಮುಂದುವರೆದು ಮದುವೆಯ ಆರಂಭದ ದಿನಗಳಲ್ಲಿ ನಾನು ಅಷ್ಟೊಂದು ಪ್ರಬುದ್ಧನಾಗಿರಲಿಲ್ಲ ಎಂದು ಹೇಳಿರುವ ಸೈಫ್ ಅಲಿ ಖಾನ್, ಕರೀನಾ ಕಪೂರ್ ಬೇರೆ ನಟರ ಜೊತೆ ಕೆಲಸ ಮಾಡುವುದನ್ನು ನೋಡಿದಾಗ ನನಗೆ ಅಸೂಯೆಯಾಗುತ್ತಿತ್ತು, ಹೊಟ್ಟೆಕಿಚ್ಚಾಗುತ್ತಿತ್ತು, ಮೈಯೆಲ್ಲಾ ಉರಿಯುತ್ತಿತ್ತು ಎಂದು ಹೇಳಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಸಿನಿಮಾ ರಂಗದಲ್ಲಿ ನನ್ನ ಎದುರಾಳಿಗಳಾಗಿದ್ದವರ ಜೊತೆಯೇ ಆಕೆ ನಟಿಸುತ್ತಿದ್ದಳು. ಅವರೆಲ್ಲ ಆಕೆಗೆ ಆಪ್ತರಾಗುತ್ತಿದ್ದರು, ಇದನ್ನು ಸಹಿಸಿಕೊಳ್ಳುವುದು ನನಗೆ ಕಷ್ಟವಾಗುತ್ತಿತ್ತು ಎಂದು ಸೈಫ್ ಅಲಿ ಖಾನ್ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.

ಸಂಬಂಧವನ್ನು ಗಟ್ಟಿಗೊಳಿಸಿದ ಪ್ರಾಮಾಣಿಕತೆ

ಸೈಫ್ ಅಲಿ ಖಾನ್ ಈ ಮುಕ್ತ ಮಾತುಗಳು ಅಭಿಮಾನಿಗಳಿಗೆ ಇಷ್ಟವಾಗಿದೆ. ಯಾವುದೇ ಮುಚ್ಚುಮರೆ ಇಲ್ಲದೆ ತಮ್ಮ ಮನಸ್ಸಿನ ಭಾವನೆಯನ್ನು ಅವರು ಹಂಚಿಕೊಂಡಿದ್ದಾರೆ. ಪ್ರೀತಿಯಲ್ಲಿ ಇಂತಹ ಸಣ್ಣ ಪುಟ್ಟ ಅಸೂಯೆಗಳು ಇರುವುದು ಸಹಜ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇಂದು ಇಬ್ಬರೂ ತಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನವಾಗಿ ನಿಭಾಯಿಸುತ್ತಿದ್ದಾರೆ. ಸೈಫ್ ಮತ್ತು ಕರೀನಾ ಅವರಿಗೆ ತೈಮೂರ್ ಮತ್ತು ಜೆಹಾಂಗೀರ್ ಎಂಬ ಇಬ್ಬರು ಮಕ್ಕಳಿದ್ದಾರೆ. ಬಾಲಿವುಡ್‌ನ ಮಾದರಿ ದಂಪತಿಗಳಲ್ಲಿ ಇವರು ಕೂಡ ಒಬ್ಬರು ಎನ್ನುವುದರಲ್ಲಿ ಸಂಶಯವಿಲ್ಲ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X