ಅಶ್ಲೀಲ ವೆಬ್‌ಸೈಟ್‌ನಲ್ಲಿ ನನ್ನ ಫೋಟೋ ನೋಡಿದ್ದೆ ; ಆ ದಿನ.. ಆ ಕ್ಷಣ.. ಬಿಕ್ಕಿದ ಶ್ರೀದೇವಿಯ ಮುದ್ದಿನ ಮಗಳು ಜಾಹ್ನವಿ
ಆರಂಭದಲ್ಲಿ ಮನರಂಜನೆ ದೃಷ್ಟಿಯಿಂದ ಹುಟ್ಟಿಕೊಂಡ ಡೀಪ್ ಫೇಕ್ ಇದೀಗ ಚಾರಿತ್ರ್ಯ ಹರಣಕ್ಕೆ, ರಾಜಕೀಯ ಅಪಪ್ರಚಾರಕ್ಕೆ ಹಾಗೂ ಬ್ಲಾಕ್ ಮೇಲ್ ಮಾಡೋದಕ್ಕೂ ಬಳಕೆ ಆಗ್ತಿದೆ. ಅಸಲಿ ವಿಡಿಯೋಗಳನ್ನೇ ಮೀರಿಸುವಷ್ಟು ಅತ್ಯುತ್ತಮ ಗುಣಮಟ್ಟವನ್ನ ಹೊಂದಿರುವ ಈ ನಕಲಿ ವಿಡಿಯೋಗಳಿಂದ ಅನೇಕರು ಹೈರಾಣಾಗಿದ್ದಾರೆ. ದೂರು ಕೊಟ್ಟು ಸೆಲೆಬ್ರಿಟಿಗಳು ಸುಸ್ತಾಗಿದ್ದಾರೆ.
ಇನ್ನೂ ಈ ಡೀಪ್ ಫೇಕ್ ಜನ್ಮ ಪಡೆದಿದ್ದು ಇಂದು ನಿನ್ನೆಯಲ್ಲ. ಪುರಾತನ ಕಾಲದಿಂದಲೂ ಇದು ಇದೆ. ತಂತ್ರಜ್ಞಾನ ಬೆಳೆದಂತೆ ಅದರ ಹೆಸರು ಬದಲಾಗಿದೆ ಅಷ್ಟೇ. ಕಾನೂನಿನ ಭಯ ಇಲ್ಲದೇ ಹೆಣ್ಣು ಮಕ್ಕಳಿಗೆ ಇಲ್ಲಿ ಥರ ಥರದಲ್ಲಿ ಹಿಂದೆಯೂ ಕಾಡಿದ್ದರು. ಹೆಣ್ಣು ಮಕ್ಕಳ ಫೋಟೊಗಳನ್ನೂ ದುರ್ಬಳಕೆ ಮಾಡಿಕೊಂಡಿದ್ದರು. ತಮಗಾದ ಇಂತಹದ್ದೇ ಒಂದು ಕಹಿ ಅನುಭವವನ್ನು ಜಾಹ್ನವಿ ಕಪೂರ್ ಈಗ ಇನ್ನೊಮ್ಮೆ ನೆನಪು ಮಾಡಿಕೊಂಡಿದ್ಧಾರೆ.

ಹೌದು, ಜಾಹ್ನವಿ ಕಪೂರ್.. ಅತಿಲೋಕ ಸುಂದರಿ ಶ್ರೀದೇವಿ ಅವರ ಮುದ್ದಿನ ಮಗಳು. ತಮ್ಮ ತಂದೆ ತಾಯಿಯ ನೆರಳಿನಾಚೆ ತಮ್ಮದೇ ಅಸ್ತಿತ್ವದ ಹುಡುಕಾಟದಲ್ಲಿರುವ ಜಾಹ್ನವಿ ಚಿತ್ರರಂಗಕ್ಕೆ ಬಂದು 8 ವರ್ಷಗಳಾಗಿವೆ.
ಆದರೆ ಈ 8 ವರ್ಷದಲ್ಲಿ ಇವರ ಯಾವ ಚಿತ್ರ ಕೂಡ ಹೇಳಿಕೊಳ್ಳುವ ಗೆಲ್ಲುವನ್ನು ಕಂಡಿಲ್ಲ. ಹಾಗಂಥ ಅವಕಾಶಗಳು ಕಡಿಮೆಯಾಗಿವೆ ಅಂತೇನು ಇಲ್ಲ. ಕರಣ್ ಜೋಹರ್ ಕೃಪೆಯಿಂದ ಇವರಿಗೆ ಹಲವು ಚಿತ್ರಗಳು ಸಿಗುತ್ತಲೇ ಇವೆ. ಆದರೆ ಈಗ ಅದಕ್ಕೂ ಬ್ರೇಕ್ ಬಿದ್ದಿದೆ.
ಯಾಕೆಂದರೆ ಕರಣ್ ಜೊತೆ ತಮ್ಮ ಸಂಬಂಧವನ್ನು ಕಡಿದುಕೊಂಡಿದ್ಧಾರೆ. ಕರಣ್ ಜೋಹರ್ ಟ್ಯಾಲೆಂಟ್ ಏಜೆನ್ಸಿಯಿಂದ ಹೊರ ಬಂದಿದ್ದಾರೆ.
ಇಂಥಾ ಜಾಹ್ನವಿ ಕಪೂರ್ ತಮ್ಮ ಹದಿಹರೆಯದಲ್ಲಿ ಅಶ್ಲೀಲ ವೆಬ್‌ಸೈಟ್‌ನಲ್ಲಿ ತಮ್ಮದೇ ಆದ 'ಮಾರ್ಫ್' (ತಿರುಚಿದ) ಚಿತ್ರಗಳನ್ನು ನೋಡಿ ಆಘಾತಕ್ಕೊಳಗಾಗಿದ್ದೆ ಎಂದು ಹೇಳಿದ್ದಾರೆ.

''ರಾಜ್ ಶಮಾನಿ''ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರಿವ ಜಾಹ್ನವಿ ಕಪೂರ್ ನನಗೆ ಆಗಿನ್ನೂ 15 ವರ್ಷ. ನಮ್ಮ ಶಾಲೆಯಲ್ಲಿ ಐಟಿ ಕ್ಲಾಸ್ ನಡೆಯುತ್ತಿತ್ತು. ಆಗ ಕೆಲವು ಹುಡುಗರು ತಮಾಷೆಗಾಗಿ ಅಶ್ಲೀಲ ವೆಬ್‌ಸೈಟ್‌ಗಳನ್ನು ನೋಡುತ್ತಿದ್ದರು. ಆ ಸಮಯದಲ್ಲಿ ಆ ಸೈಟ್‌ನಲ್ಲಿ ನನ್ನದೇ ಫೋಟೋ ಇರುವುದನ್ನು ನಾನು ನೋಡಿದೆ ಎಂದು ಹೇಳಿದ್ದಾರೆ. ಅದು ಬಹುಶಃ ಈಗಿನ ಡೀಪ್‌ಫೇಕ್ ತಂತ್ರಜ್ಞಾನದಂತೆಯೇ ಇತ್ತು. ನನ್ನ ಫೋಟೊವನ್ನು ಅಲ್ಲಿ ನೋಡಿ ನನಗೆ ತೀವೃ ಆಘಾತವಾಗಿತ್ತು ಎಂದು ಹೇಳಿದ್ದಾರೆ.
ಒಂದು ಹಂತದಲ್ಲಿ ನಾನು ಸೆಲೆಬ್ರಿಟಿ ಆಗಿರುವುದಕ್ಕೆ ನಾವು ತೆರಬೇಕಾದ ಬೆಲೆ ಇದು ಅಂದುಕೊಂಡೆ ಎಂದಿರುವ ಜಾಹ್ನವಿ ಕಪೂರ್ ಈ ಸೋಶಿಯಲ್ ಮೀಡಿಯಾ ಕಾಲದಲ್ಲಿ ನೈತಿಕತೆ ಮರೆಯಾಗಿದೆ ಎಂದು ಹೇಳಿದ್ದಾರೆ.
ಮುಂದುವರೆದು ನನ್ನ ತಿರುಚಿದ ಆ ಫೋಟೋ ಇನ್ನೂ ಇಂಟರ್ನೆಟ್‌ನಲ್ಲಿದೆ ಎಂದು ಹೇಳಿರುವ ಜಾಹ್ನವಿ ಕಪೂರ್ ಈ ತರಹದ ವಿಷಯಗಳು ಮನದ ಮೇಲೆ ತುಂಬಾ ಪರಿಣಾಮ ಬೀರುತ್ತಾವೆ ಎಂದಿದ್ದಾರೆ. ನಾನು ಆ ರೀತಿಯ ಫೋಟೋವನ್ನು ಯಾವತ್ತು ತೆಗೆಸಿಕೊಂಡಿಲ್ಲ, ಆ ತರಹದ ಬಟ್ಟೆಗಳನ್ನು ಕೂಡ ಹಾಕಿಕೊಂಡಿಲ್ಲ ಎಂದಿದ್ದಾರೆ
ಈ ತರಹದ ಕೆಲಸಗಳನ್ನು ಕೆಲವರು ಅವ್ಯಾಹತವಾಗಿ ಮಾಡುವದರಿಂದ ವೃತ್ತಿಯ ಮೇಲೂ ಪರಿಣಾಮ ಬೀರುತ್ತೆ ಎಂದು ಹೇಳಿರುವ ಜಾಹ್ನವಿ ಕಪೂರ್ ನಾನು ಈ ತರಹದ ಬಟ್ಟೆ ಹಾಕಲ್ಲ ಎಂದು ಹೇಳಿದರೆ ಆಗ ಚಿತ್ರದ ನಿರ್ದೇಶಕರು ಆ ಫೋಟೊ ತೋರಿಸಿ ನೀವು ಈಗಾಗಲೇ ಈ ತರಹದ ಬಟ್ಟೆ ಹಾಕಿದ್ದೀರಲ್ಲಾ ಎಂದು ಪ್ರಶ್ನೆ ಮಾಡಬಹುದು ಎಂದು ಹೇಳಿದ್ದಾರೆ. ಇವತ್ತು ಕೂಡ ನನಗೆ ಆ ವಿಚಾರದಲ್ಲಿ ಅಸಹನೆ ಅಸಮಾಧಾನ ಇದೆ ಎಂದು ಹೇಳಿರುವ ಜಾಹ್ನವಿ ದೂರು ನೀಡಬಹುದು ಆದರೆ ಹೋರಾಡುವ ಧೈರ್ಯ, ಆ ಮನೋಭಾವ ನನ್ನಲ್ಲಿ ಇಲ್ಲ ಎಂದಿದ್ದಾರೆ.


Click it and Unblock the Notifications











