16 ರ ವಯಸ್ಸಿನಲ್ಲೇ ಭೂಗತ ಮಾಫಿಯಾ ಕೈಗೆ ಸಿಲುಕಿಕೊಂಡಿದ್ದೆ: ಕಂಗನಾ

ನಟಿ ಕಂಗನಾ ರಣೌತ್ ಇಂದು ಬಾಲಿವುಡ್‌ನ ಸ್ಟಾರ್ ನಟಿಯರಲ್ಲೊಬ್ಬರು. ಎರಡು ರಾಷ್ಟ್ರಪ್ರಶಸ್ತಿಗಳನ್ನು ಗೆದ್ದಿರುವ ಕಂಗನಾ ನಿಸ್ಸಂದೇಹವಾಗಿ ಪ್ರತಿಭಾವಂತ ನಟಿ. ಆದರೆ ಕಂಗನಾ ನಟಿಯಾದ ಹಾದಿ ಅಷ್ಟು ಸುಲಭವಾಗಿರಲಿಲ್ಲ, ಬಹಳಷ್ಟು ಕಷ್ಟಗಳನ್ನು ಎದುರಿಸಿ ತಮ್ಮ ಕನಸು ಪೂರೈಸಿಕೊಂಡಿದ್ದಾರೆ ಅವರು.

ನಟಿಯಾಗಬೇಕೆಂದು ಬಹು ಸಣ್ಣ ವಯಸ್ಸಿಗೆ ಕನಸು ಕಂಡಿದ್ದ ಕಂಗನಾ ರಣೌತ್, ಮನೆಯವರು, ಸಂಬಂಧಿಕರ ಸ್ವಂತ ತಂದೆಯ ವಿರೋಧ ಕಟ್ಟಿಕೊಂಡು ರಾತ್ರೋರಾತ್ರಿ ಮನೆ ಬಿಟ್ಟು ಮುಂಬೈಗೆ ಓಡಿ ಬಂದಿದ್ದರು ಆಗ ಅವರ ಇನ್ನೂ 15.

ಮುಂಬೈನಲ್ಲಿ ತಿನ್ನಲು ಕಷ್ಟಪಡುತ್ತಿದ್ದ ಸಮಯದಲ್ಲಿ ಕಂಗನಾರ ತಂದೆ ಸಹಾಯ ಮಾಡುವುದಿಲ್ಲ ಎಂದುಬಿಟ್ಟಿದ್ದರಂತೆ, ಸಂಬಧಿಗಳೂ ಸಹ ಯಾರೂ ಕಂಗನಾ ಸಹಾಯಕ್ಕೆ ಬರಲಿಲ್ಲ. ಹೀಗೆಂದು ಸ್ವತಃ ಅವರೇ ಟ್ವೀಟ್‌ ನಲ್ಲಿ ಬರೆದುಕೊಂಡಿದ್ದಾರೆ.

'16ನೇ ವಯಸ್ಸಿಗೆ ಭೂಗತಲೋಕದ ಮಾಫಿಯಾ ಕೈಗೆ ಸಿಕ್ಕಿಬಿದ್ದಿದ್ದೆ'

'16ನೇ ವಯಸ್ಸಿಗೆ ಭೂಗತಲೋಕದ ಮಾಫಿಯಾ ಕೈಗೆ ಸಿಕ್ಕಿಬಿದ್ದಿದ್ದೆ'

ಅವಕಾಶಕ್ಕಾಗಿ ಮುಂಬೈನಲ್ಲಿ ಅಲೆಯುತ್ತಿದ್ದ ಕಂಗನಾ ರಣೌತ್ ತಮ್ಮ 16ನೇ ವಯಸ್ಸಿಗೆ ಭೂಗತಲೋಕದ ಮಾಫಿಯಾ ಕೈಗೆ ಸಿಕ್ಕಿ ಹಾಕಿಕೊಂಡರಂತೆ. ಈ ಬಗ್ಗೆ ಹಿಂದೆ ವಿಡಿಯೋ ಒಂದರಲ್ಲಿ ಮಾತನಾಡಿದ್ದರು ಕಂಗನಾ, 'ಸೌದಿ ದೊರೆಗಳಿಗೆ ನನ್ನನ್ನು ಮಾರಲು ಯತ್ನಿಸಿದ್ದರು. ಒಬ್ಬ ವ್ಯಕ್ತಿ ನನ್ನನ್ನು ಕೂಡಿ ಹಾಕಿ ಲೈಂಗಿಕವಾಗಿ, ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ಕೊಟ್ಟಿದ್ದ' ಎಂದು ಆರೋಪಿಸಿದ್ದರು.

21 ನೇ ವಯಸ್ಸಿಗೆ ಮುಂಬೈನಲ್ಲಿ ಮನೆ ಖರೀದಿಸಿದ್ದೆ: ಕಂಗನಾ

21 ನೇ ವಯಸ್ಸಿಗೆ ಮುಂಬೈನಲ್ಲಿ ಮನೆ ಖರೀದಿಸಿದ್ದೆ: ಕಂಗನಾ

'ನನ್ನ 21 ವಯಸ್ಸಿಗಾಗಲೇ ನಾನು ನನ್ನ ಜೀವನದ ವಿಲನ್‌ಗಳನ್ನು ಮುಗಿಸಿ ಆಗಿತ್ತು. ಆ ನಂತರ ಕೇವಲ 21 ನೇ ವಯಸ್ಸಿಗೆ ಮೊದಲ ನ್ಯಾಷನಲ್ ಅವಾರ್ಡ್ ಸಹ ಪಡೆದು ಕೊಂಡರು ಕಂಗನಾ. ಅದೇ ಸಮಯದಲ್ಲಿ ಮುಂಬೈನಲ್ಲಿ ಮೊದಲ ಬಾರಿಗೆ ಕನಸಿನ ಮನೆಯನ್ನು ಸಹ ಖರೀದಿ ಮಾಡಿದರು.

ಮೂರು ರಾಷ್ಟ್ರಪ್ರಶಸ್ತಿ ಪಡೆದಿರುವ ನಟಿ

ಮೂರು ರಾಷ್ಟ್ರಪ್ರಶಸ್ತಿ ಪಡೆದಿರುವ ನಟಿ

ಕಂಗನಾ ರಣೌತ್ ಈ ವರೆಗೆ ಮೂರು ರಾಷ್ಟ್ರಪ್ರಶಸ್ತಿಗಳನ್ನು ಅಭಿನಯಕ್ಕಾಗಿ ಪಡೆದಿದ್ದಾರೆ. ಮೊದಲ ಬಾರಿಗೆ 'ಫ್ಯಾಷನ್' ಸಿನಿಮಾಕ್ಕೆ ಅತ್ಯುತ್ತಮ ಪೋಷಕನಟಿ ಪ್ರಶಸ್ತಿ, ನಂತರ ಕ್ವೀನ್ ಸಿನಿಮಾಕ್ಕೆ ಅತ್ಯುತ್ತಮ ನಟಿ ಪ್ರಶಸ್‌ಸತಿ ಮತ್ತು ತನ್ನು ವೆಡ್ಸ್ ಮನ್ನು ಸಿನಿಮಾಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಕಂಗನಾ ಪಡೆದುಕೊಂಡಿದ್ದಾರೆ.

Recommended Video

ದರ್ಶನ್ ಹುಟ್ಟುಹಬ್ಬಕ್ಕೆ BC ಪಾಟೀಲ್ ಕೊಟ್ಟ ಉಡುಗೊರೆ ಇದು | Filmibeat Kannada
ತಮ್ಮ ಟ್ವೀಟ್‌ಗಳಿಂದಾಗಿ ವಿವಾದದಲ್ಲಿರುವ ನಟಿ

ತಮ್ಮ ಟ್ವೀಟ್‌ಗಳಿಂದಾಗಿ ವಿವಾದದಲ್ಲಿರುವ ನಟಿ

ಕಂಗನಾ ತಮ್ಮ ಸ್ವ-ಪರಿಶ್ರಮದಿಂದ ಅತ್ಯಂತ ಬೇಗ ಹಣ ಹಾಗೂ ಖ್ಯಾತಿ ಗಳಿಸಿದರು. ಆದರೆ ಇತ್ತೀಚೆಗೆ ತಮ್ಮ ಟ್ವೀಟ್‌ಗಳಿಂದಾಗಿ ಅವರು ಸದಾ ವಿವಾದದ ಕೇಂದ್ರದಲ್ಲಿರುತ್ತಾರೆ. ಸಹ ನಟ-ನಟಿಯರನ್ನು ಕೆಟ್ಟದಾಗಿ ಬೈಯ್ಯುವುದು, ರೈತರನ್ನು ಭಯೋತ್ಪಾದಕರೆನ್ನುವುದು, ಸರ್ಕಾರ ಅಥವಾ ಬಿಜೆಪಿಯ ಎಲ್ಲದನ್ನೂ ಡಿಫೆಂಡ್ ಮಾಡುವ ಕಾರ್ಯ ಹಲವರಿಗೆ ಅಸಹ್ಯ ತರಿಸಿದೆ.

More from Filmibeat

English summary
I was captured by underworld mafia in the age of 16 said Kangana Ranaut. She tweeted about her struggles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X