ದರ್ಶನ್ 'ಶೌರ್ಯ' ಚಿತ್ರದ ನಟಿ ಎದುರು ಅಸಭ್ಯ ಬೇಡಿಕೆ ಇಟ್ಟ ಖ್ಯಾತ ನಿರ್ದೇಶಕ ; ಬಾಗಿಲು ಎಲ್ಲಿದೆ ಎಂದು ಕೇಳಿದ ಬೆಡಗಿ
ಪುರುಷ ಪ್ರಧಾನ ಚಿತ್ರರಂಗದಲ್ಲಿ ಅನೇಕ ಹೆಣ್ಣು ಮಕ್ಕಳು ನಾನಾ ರೀತಿಯಲ್ಲಿ ನರಳಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ.. ಬಣ್ಣದ ಬಣ್ಣದ ಈ ಪ್ರಪಂಚದಲ್ಲಿ ನಡೆದ ಬಗೆ ಬಗೆಯ ಲೈಂ*ಗಿಕ ಪ್ರಕರಣ, ಕಿರುಕುಳ, ದೌರ್ಜನ್ಯ ಕುರಿತ ಸುದ್ದಿಗಳನ್ನೂ ನಾವೆಲ್ಲರೂ ಕೇಳುತ್ತಲೇ ಇರುತ್ತೇವೆ. ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತೇವೆ. ಆದರೆ ಹೀಗೆ ನಡೆದ ಸಾಕಷ್ಟು ಲೈಂ*ಗಿಕ ಪ್ರಕರಣಗಳು ಹೇಳ ಹೆಸರಿಲ್ಲದೇ ಕಾಣದಂತಾಗುತ್ತವೆ.
ಕೆಲವೊಮ್ಮೆ ಪ್ರಜ್ಞಾವಂತ ನಾಯಕಿಯರು ತಮ್ಮ ಛಲದಿಂದ ತೆರೆಮರೆಯ ಕಳ್ಳಾಟ ಬಹಿರಂಗ ಪಡಿಸಿದ್ದಾರೆ. ಕಾಮುಕರ ಮುಖವಾಡ ಕಳಚಿದ್ದಾರೆ. ಒಂದರ್ಥದಲ್ಲಿ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬುದು ಬಟ್ಟೆ ಬದಲಿಸಿದಷ್ಟೇ ಸಾಮಾನ್ಯವಾಗಿದೆ. ಪ್ರತಿಯೊಬ್ಬ ನಟಿಮಣಿಯರೂ ಒಂದಿಲ್ಲೊಂದು ಸಂದರ್ಭಗಳಲ್ಲಿ ಇಂತಹ ಸನ್ನಿವೇಶಗಳಲ್ಲಿ ನಲುಗಿದವರೇ ಆಗಿರುತ್ತಾರೆ.

ಇನ್ನು ಮಲಯಾಳಂ ಚಿತ್ರರಂಗದಲ್ಲಿನ ಕಾ*ಮಕಾಂಡದ ಕುರಿತು ಕಳೆದ ವರ್ಷ ಹೇಮಾ ಆಯೋಗ ವರದಿ ನೀಡಿದ ಬೆನ್ನಲ್ಲಿ ಇನ್ನೊಮ್ಮೆ ಈ ಪಾತ್ರಕ್ಕಾಗಿ ಪಲ್ಲಂಗದ ಬಿರುಗಾಳಿ ಎದ್ದಿದೆ. ಕೇವಲ ಮಲಯಾಳಂನಲ್ಲಿ ಅಷ್ಟೇ ಅಲ್ಲ ಭಾರತದ ಬೇರೆ ಬೇರೆ ಭಾಷೆಯಲ್ಲಿ ಕೂಡ ಕಾ*ಮುಕರು ತುಂಬಿ ತುಳುಕುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಬೇರೆ ಬೇರೆ ಭಾಷೆಯಲ್ಲಿನ ನಟಿಯರು ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಬಿಕ್ಕಿದ್ದಾರೆ. ಪಾತ್ರದ ಹೆಸರಿನಲ್ಲಿ ತಮ್ಮನ್ನು ಮಂಚಕ್ಕೆ ಕರೆದ ವ್ಯಕ್ತಿಗಳ ಜನ್ಮವನ್ನೂ ಜಾಲಾಡಿದ್ದಾರೆ. ಈ ಸಾಲಿನಲ್ಲಿ ಈಗ ಮದಾಲಸಾ ಶರ್ಮಾ ಸೇರಿಕೊಂಡಿದ್ದಾರೆ.
ಹೌದು, ಮದಾಲಸಾ ಶರ್ಮಾ.. ಹಿಂದಿ ಉದ್ಯಮದ ನಟಿ ಶೀಲಾ ಶರ್ಮಾ ಮತ್ತು ಸುಭಾಶ್ ಶರ್ಮಾ ಅವರ ಮುದ್ದಿನ ಮಗಳು. ತೆಲುಗಿನ ''ಫಿಟ್ಟಿಂಗ್ ಮಾಸ್ಟರ್'' ಚಿತ್ರದ ಮೂಲಕ ತಮ್ಮ ವೃತ್ತಿ ಬದುಕು ಶುರು ಮಾಡಿದ ಮದಾಲಸಾ ಶರ್ಮಾ ಕನ್ನಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ನಾಯಕಿಯಾಗಿದ್ದರು. ''ಶೌರ್ಯ'' ಚಿತ್ರದಲ್ಲಿ ಅಭಿನಯಿಸಿದ್ದರು. ''ಡವ್'' ಇವರ ಅಭಿನಯದ ಮತ್ತೊಂದು ಕನ್ನಡ ಸಿನಿಮಾ.
ಹಿಂದಿಯಲ್ಲಿ ''ಏಜೆಂಲ್''.. ''ಸಾಮ್ರಾಟ್ & ಕೋ''.. ''ದಿಲ್ ಸಾಲಾ ಸಂಕೀ'' ಚಿತ್ರವನ್ನು ಮಾಡಿರುವ ಮದಾಲಸಾ, ಜರ್ಮನ್ ಭಾಷೆಯ ಚಿತ್ರದಲ್ಲಿ ಕೂಡ ಅಭಿನಯಿಸಿದ್ದಾರೆ. ಪಂಜಾಬಿ ಚಿತ್ರರಂಗದಲ್ಲಿ ಕೂಡ ಮಿಂಚಿದ್ದಾರೆ.
ಕೇವಲ ಬೆಳ್ಳಿತೆರೆ ಮಾತ್ರವಲ್ಲ ಕಿರುತೆರೆಯಲ್ಲಿಯೂ ತಮ್ಮ ಅಭಿನಯದ ಮೂಲಕ ಜನ ಮನ ಗೆದ್ದ ಮದಾಲಸಾ, ಅನುಪಮಾ ಧಾರಾವಾಹಿಯಲ್ಲಿ ವಿಲನ್ ಪಾತ್ರವನ್ನು ನಿರ್ವಹಿಸಿದ್ದರು. ಅನೇಕರು ಇವರನ್ನು ಈ ಧಾರಾವಾಹಿಯ ಕಾವ್ಯಾ ಶಾ ಪಾತ್ರದ ಮೂಲಕವೇ ಗುರುತಿಸುತ್ತಾರೆ.

ಇಂಥಾ ಮದಾಲಸಾ ಶರ್ಮಾ ತಮ್ಮ ಕಹಿ ಅನುಭವ ಹಂಚಿಕೊಂಡಿದ್ಧಾರೆ. ಖ್ಯಾತ ನಿರ್ದೇಶಕನೊಬ್ಬ ಬಿಕಿನಿಯಲ್ಲಿ ನನ್ನನ್ನೂ ನೋಡಲು ಬಯಸಿದ್ದ ಎಂದಿದ್ದಾರೆ.
ಈ ಕುರಿತು ''ಹೌಟರ್ ಫ್ಲೈ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮದಾಲಸಾ, ನನಗೆ ಆಗಿನ್ನೂ 19 ವರ್ಷ, ಅವಕಾಶವನ್ನು ಎದುರು ನೋಡುತ್ತಿದ್ದ ದಿನಗಳವು ಎಂದು ಹೇಳಿದ್ದಾರೆ. ಆ ಸಮಯದಲ್ಲಿ ನನಗೊಂದು ಅವಕಾಶ ಬಂದಿತ್ತು. ಖ್ಯಾತ ನಿರ್ದೇಶಕನ ಚಿತ್ರ ಅದು ಎಂದು ಹೇಳಿರುವ ಮದಾಲಸಾ ಈ ಹಿನ್ನೆಲೆ ನಾನು ಅವರನ್ನು ಭೇಟಿಯಾಗಲು ಹೋಗಿದ್ದೆ ಎಂದು ಹೇಳಿದ್ಧಾರೆ.
ಭೇಟಿಯಾದ ಸಂದರ್ಭದಲ್ಲಿ ನಾನು ನಿಮ್ಮ ಬಾಡಿ ಲ್ಯಾಂಗ್ವೇಜ್ ನೋಡಲು ಬಯಸುತ್ತೇನೆ, ಹೀಗಾಗಿ ನೀವು ಈಗ ಇಲ್ಲೇ ಬಿಕಿನಿ ಹಾಕಿಕೊಳ್ಳಿ ಎಂದು ನಿರ್ದೇಶಕ ನನಗೆ ಹೇಳಿದ ಎಂದಿರುವ ಮದಲಸಾ, ನೀವು ಈಗ ಬಿಕಿನಿ ಹಾಕಿಕೊಂಡರೆ ಕ್ಯಾಮರಾ ಮುಂದೆ ನೀವು ಹೇಗೆ ಅಭಿನಯಿಸುತ್ತೀರಾ ಎಂದು ನನಗೆ ಅರ್ಥವಾಗುತ್ತೆ ಎಂದು ಆತ ಹೇಳಿದ ಎಂದಿದ್ದಾರೆ.
ಆರಂಭದಲ್ಲಿ ನನಗೆ ಅವರು ಹೇಳಿದ್ದರಲ್ಲಿ ತಪ್ಪೇನೂ ಇಲ್ಲ ಎಂಬ ಭಾವನೆ ಬಂತು. ಆದರೆ ನಾನು ತುಸು ಹೆಚ್ಚೇ ಬುದ್ದಿವಂತೆ, ಈ ಕಾರಣಕ್ಕೆ ಬಿಕಿನಿ ಇರಲಿ.. ಸೀರೆ, ಲೆಹೆಂಗಾ ಇರಲಿ.. ಅಥವಾ ಬೇರೆ ಯಾವುದೇ ಉಡುಪು ಇರಲಿ, ಕಥೆಗೆ ಪೂರಕವಾಗಿದ್ದರೆ ಕ್ಯಾಮರಾ ಮುಂದೆ ಧರಿಸಲು ನನಗೆ ಯಾವ ಅಭ್ಯಂತರ ಇಲ್ಲ, ಹಿಂಜರಿಕೆ ಇಲ್ಲ, ನಾನು ರೆಡಿಯಾಗಿದ್ದೇನೆ ಎಂದು ಹೇಳಿದೆ ಎಂದು ಹೇಳಿರುವ ಮದಾಲಸಾ, ನಿಮ್ಮೆದುರು ನಾನು ಇಲ್ಲಿ ಬಿಕಿನಿ ಹಾಕಲಾರೆ ಯಾಕೆಂದರೆ ಇದು ನನ್ನ ಕೆಲಸದ ಭಾಗ ಅಲ್ಲ ಎಂದು ನಾನು ಹೇಳಿದೆ ಎಂದಿದ್ದಾರೆ. ನನ್ನಲ್ಲಿನ ಪ್ರತಿಭೆಗೆ ಮಣೆ ಹಾಕಿ ಅದರ ಆಧಾರದ ಮೇಲೆ ಅವಕಾಶ ನೀಡಿದರೆ ಸಂತೋಷ , ಬಿಕಿನಿ ಹಾಕಿದರೆ ಮಾತ್ರ ಅವಕಾಶ ಎಂದು ನೀವು ಅಂದುಕೊಂಡಿದ್ದರೆ, ನಾನು ಹಾಗೇ ಮಾಡುವುದಿಲ್ಲ ಎಂದು ಹೇಳಿದ್ದೇ ಎಂದಿದ್ದಾರೆ.
ಮುಂದುವರೆದು ಇಲ್ಲಿ ಪ್ರತಿಭೆಗೆ ಬೆಲೆ ಇಲ್ಲ ಎಂದು ಹೇಳಿದರೆ ಬಾಗಿಲು ಎಲ್ಲಿದೆ ಎನ್ನುವುದು ನನಗೆ ಗೊತ್ತು ಎಂದು ಹೇಳಿ ನಾನು ಅಲ್ಲಿಂದ ಹೊರ ಬಂದೆ ಎಂದು ಹೇಳಿರುವ ಮದಾಲಸಾ ಶರ್ಮಾ, ಕೆಲ ದಿನಗಳ ನಂತರ ನಾನು ಮಾಡಬೇಕಿದ್ದ ಆ ಪಾತ್ರ ಬೇರೆಯವರ ಪಾಲಾಗಿತ್ತು ಎಂದು ಹೇಳಿದ್ದಾರೆ. ವಿಶೇಷ ಅಂದರೆ ಹೀಗೆ ಆಯ್ಕೆ ಆದ ಆ ನಟಿಯ ಜೊತೆ ಆ ನಿರ್ದೇಶಕ ಡೇಟಿಂಗ್ ಮಾಡಲು ಶುರು ಮಾಡಿದ್ದ ಎಂದಿದ್ದಾರೆ. ಈ ವಿಚಾರ ನನಗೆ ಆಮೇಲೆ ಗೊತ್ತಾಗಿ ಆಶ್ಚರ್ಯವಾಯ್ತು ಎಂದಿದ್ದಾರೆ.
ಅಂದ್ಹಾಗೇ ಮದಾಲಸಾ ಶರ್ಮಾ ಭಾರತದ ದಿಗ್ಗಜ ಮಿಥುನ್ ಚಕ್ರವರ್ತಿ ಅವರ ಸೊಸೆ. 2018ರಲ್ಲಿ ಮಿಥುನ್ ಚಕ್ರವರ್ತಿಯವರ ದೊಡ್ಡ ಮಗ ಮಹಾಕ್ಷಯ್ ಚಕ್ರವರ್ತಿ (ಮಿಮೋ) ಜೊತೆ ಮದುವೆಯಾದರು. ಊಟಿಯಲ್ಲಿ ಇವರಿಬ್ಬರ ಮದುವೆ ಅದ್ಧೂರಿಯಾಗಿ ನಡೆದಿತ್ತು.


Click it and Unblock the Notifications