ಪಬ್ಲಿಸಿಟಿ ಸಿಗುವುದಾದರೆ ನಾನು ಬೇಕಾದರೂ ಮಾಡುತ್ತೇನೆ: ಬೋಲ್ಡ್ ನಟಿ ಪೂನಂ ಪಾಂಡೆ

ಬಾಲಿವುಡ್ ಎಂದರೆ ಒಂದು ಮಾಯಾಲೋಕ, ಇದರೊಳಗೆ ಪ್ರವೇಶ ಮಾಡಲು ಅನೇಕರು, ಅನೇಕ ತರದ ಸಾಹಸಗಳನ್ನು ಮಾಡುತ್ತಾರೆ. ಇದರೊಳಗೆ ಪ್ರವೇಶ ಮಾಡುವುದು ಅಷ್ಟೊಂದು ಸುಲಭವಲ್ಲ. ಒಂದುವೇಳೆ ಪ್ರವೇಶ ಸಿಕ್ಕಿದರೂ ಕೂಡಾ ನೆಲೆ ಕಾಣುವುದು ಮತ್ತಷ್ಟು ಕಠಿಣ. ನಿತ್ಯ ದೇಶದ ವಿವಿಧ ಭಾಗಗಳಿಂದ ಹುಡುಗ-ಹುಡುಗಿಯರು ಮಾಡೆಲ್‌ಗಳು ಮುಂಬೈನ ಸಿನಿ ನಿರ್ಮಾಪಕ ಮತ್ತು ನಿರ್ದೇಶಕರು ಆಫೀಸುಗಳಿಗೆ ಅಲೆಯುತ್ತಿರುತ್ತಾರೆ. "ಒಂದು ಅವಕಾಶ....' ಅಂತ ದೈನೇಸಿ ಯಿಂದ ಬೇಡಿಕೊಳ್ಳುತ್ತಿರುವ ದೃಶ್ಯಗಳು ಇಲ್ಲೆಲ್ಲ ಸರ್ವೇಸಾಮಾನ್ಯ ಹೀಗೆ ಅವಕಾಶಕ್ಕಾಗಿ ಅಲೆಯುವ ಇಂತಹ ತರುಣ-ತರುಣಿಯರನ್ನು ಬಾಲಿವುಡ್ ತನ್ನದೇ ಆದ ರೀತಿಯಲ್ಲಿ ಬಳಸಿಕೊಳ್ಳಲು ನೋಡುತ್ತದೆ, ಎಷ್ಟು ಸಲ ಬಳಸಿಕೊಂಡು ಬಿಸಾಡುತ್ತದೆ. ಇಂತಹ ಬಾಲಿವುಡ್ನಲ್ಲಿ ಧೀಡೀರ್ ಹೆಸರು ಕಾಣಬೇಕಾದರೆ ಒಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡಬೇಕು ಇಲ್ಲ ವಿವಾದಾತ್ಮಕವಾದ ರೀತಿಯಲ್ಲಿ ಬದುಕಬೇಕು. ಎಲ್ಲಿ ವಿವಾದಗಳು ಇರುತ್ತದೋ ಅಲ್ಲಿ ಬಾಲಿವುಡ್ ಗಾಸಿಪ್ ಕೆಲಸ ಮಾಡುತ್ತದೆ. ಎಲ್ಲಿ ಗಾಸಿಪ್ ವರ್ಕೌಟ್ ಆಗುತ್ತದೆ ಅಲ್ಲಿ ಮಾರ್ಕೆಟ್ ಹುಟ್ಟುತ್ತದೆ.

ಬಾಲಿವುಡ್ ಪಬ್ಲಿಸಿಟಿಗಾಗಿ ಹಪಾಹಪಿಸುತ್ತದೆ

ಬಾಲಿವುಡ್ ಪಬ್ಲಿಸಿಟಿಗಾಗಿ ಹಪಾಹಪಿಸುತ್ತದೆ

ಬಾಲಿವುಡ್ ಪಬ್ಲಿಸಿಟಿಗಾಗಿ ಹಪಾಹಪಿಸುತ್ತದೆ. ಅದರಲ್ಲೂ ಸೂಕ್ಷ್ಮ ವಿಚಾರಗಳ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಹೆಚ್ಚಿನ ಪಬ್ಲಿಸಿಟಿ ಪಡೆಯುವ ಗಿಮಿಕ್ ಬಾಲಿವುಡ್ನಲ್ಲಿ ಸರ್ವೇಸಾಮಾನ್ಯ. ಸರಿಯಾಗಿ ಅವರ ಚಿತ್ರಗಳ ಬಿಡುಗಡೆಯ ಸಮಯದಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾರೆ. ಅಮೀರ್ ಖಾನ್, ಶಾರುಖ್ ಖಾನ್ ಅಂತಹ ನಟರು ಕೂಡ ತಮ್ಮ ಚಿತ್ರಗಳು ಬಿಡುಗಡೆಯ ಸಮಯದಲ್ಲಿ ದೇಶಬಿಟ್ಟು ಹೋಗುವ ಅಥವಾ ಅಸಹಿಷ್ಣುತೆಯ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಇನ್ನು ನಟಿ ದೀಪಿಕಾ ಪಡುಕೋಣೆ ತಮ್ಮ ಚಿತ್ರ 'ಚಪಕ್' ಬಿಡುಗಡೆಯ ಸಮಯದಲ್ಲಿ ಪಬ್ಲಿಸಿಟಿ ನಿಮಿತ್ತವಾಗಿ JNU ಗೆ ಭೇಟಿ ನೀಡಿ ಪ್ರತಿಭಟನೆಗೆ ಬೆಂಬಲಿಸಿದ್ದರು. ಇದರಿಂದ ಸಹಜವಾಗಿಯೇ ದೊಡ್ಡ ವಿವಾದದ ಕಿಡಿ ಹತ್ತಿಕೊಂಡಿತ್ತು. ಇದೇ ಸಮಯದಲ್ಲಿ ಬಿಡುಗಡೆಯಾದ 'ಚಪಕ್' ಚಿತ್ರ ಹೀನಾಯವಾಗಿ ಸೋಲು ಕಂಡಿತು. ಈಗಲೂ ಸೋನಂ ಕಪೂರ್, ತಾಪ್ಸೀ ಪನ್ನು ಅಂತಹ ನಟಿಯರು ಆಗಾಗ ವಿವಾದಾತ್ಮಕ ವಿಚಾರಗಳನ್ನು ತಮ್ಮ ಟ್ವೀಟ್‌ಗಳ ಮೂಲಕ ಕೆಣಕಿ ವಿವಾದವನ್ನು ಮಾಡುತ್ತಲೇ ಬರುತ್ತಾರೆ.

ರಾಖಿ ಸಾವಂತ್ ಎಂಬ ವಿವಾದಾತ್ಮಕ ನಟಿ

ರಾಖಿ ಸಾವಂತ್ ಎಂಬ ವಿವಾದಾತ್ಮಕ ನಟಿ

ವಿವಾದ ವಿಚಾರಗಳು ಕೇವಲ ಬಾಲಿವುಡ್ ಟಾಪ್ ನಟ-ನಟಿಯರಿಗೆ ಸೀಮಿತವಾಗಿಲ್ಲ. ಅದರಲ್ಲೂ ಯಾವುದೇ ಗಾಡ್ ಫಾದರ್ ಗಳ ಸಹಾಯವಿಲ್ಲದೆ ಬಾಲಿವುಡ್ ಗಲ್ಲಿಗಳು ಗೊತ್ತಿಲ್ಲದೆ ಮೇಲೆ ಬಂದಂತವರು ಸಹ ವಿವಾದಗಳನ್ನು ಸೃಷ್ಟಿಸಿ ಅವರ ಮೂಲಕವೇ ಜನಪ್ರಿಯರಾಗಿದ್ದಾರೆ. ಇದರಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವುದು ನಟಿ ರಾಖಿ ಸಾವಂತ್. ರಾಖಿ ಬೋಲ್ಡ್ ನಟಿ ಮಾತ್ರವಲ್ಲ ಬದಲಾಗಿ ಬೋಲ್ಡ್ ಆಗಿ ಹೇಳಿಕೆಗಳನ್ನು ನೀಡುವ ವಿವಾದಾತ್ಮಕ ನಟಿ. ವಿವಾದಗಳು ಎಲ್ಲಿ ಇರುತ್ತದೋ ಅಲ್ಲಿ ರಾಖಿರುತ್ತಾರೆ ಅಥವಾ ರಾಖಿ ಎಲ್ಲಿರುತ್ತಾರೋ ಅಲ್ಲಿ ವಿವಾದಗಳು ತಾನೆ ಸೃಷ್ಟಿಯಾಗುತ್ತದೆ. 2006ರಲ್ಲೇ ಮಿಕಾಸಿಂಗ್, ರಾಖಿಯನ್ನು ಅವಳ ಬರ್ತಡೆ ಯಲ್ಲಿ ಕಿಸ್ ಮಾಡುವ ಮೂಲಕ ಉಂಟಾದ ವಿವಾದದಿಂದ ಮುನ್ನೆಲೆಗೆ ಬಂದಳು.ಒಂದಾನೊಂದು ಸಂದರ್ಭದಲ್ಲಿ ಸನ್ನಿ ಲಿಯೋನ್ ಅವರನ್ನು ಭಾರತದಲ್ಲಿ ಸಿನಿಮಾಗಳು ಮಾಡದಂತೆ ನಿರ್ಬಂಧ ಹೇರುವಂತೆ ರಾಖಿ ಸ್ಟೇಟ್ಮೆಂಟ್ ಕೊಟ್ಟಿದ್ದಳು. ಒಂದು ವೇಳೆ ಸನ್ನಿ ಭಾರತದಲ್ಲಿ ಕೆಲಸ ಮಾಡಬೇಕಾದರೆ ಮೈತುಂಬ ಬಟ್ಟೆ ಹಾಕಿಕೊಂಡು ಕೆಲಸ ಮಾಡಬೇಕು ಅಂತ ಹೇಳಿದ್ದಳು.ಇನ್ನೊಂದು ಸಂದರ್ಭದಲ್ಲಿ ಸೀಲಿಂಗ್ ಫ್ಯಾನ್ ಗಳನ್ನು ನಿಷೇಧಿಸುವಂತೆ ಆಗ್ರಹ ವ್ಯಕ್ತಪಡಿಸಿದ್ದಳು, ಇದರಿಂದ ಸೂಸೈಡ್ ಹೆಚ್ಚಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಸಾರ್ವಜನಿಕರಿಂದ ಟೀಕೆಗಳಿಗೆ ಗುರಿಯಾಗಿದ್ದಳು. ರಿತೇಶ್ ಸಿಂಗ್ ಜೊತೆ ಒಂದಷ್ಟು ಕಾಲ ಡೇಟಿಂಗ್ ಮಾಡಿದ ರಾಖಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದ್ದಾಳೆ.

ಪಡ್ಡೆಗಳ ಹೃದಯಗಳಿಗೆ ಕೊಳ್ಳಿ ಇಟ್ಟಳು

ಪಡ್ಡೆಗಳ ಹೃದಯಗಳಿಗೆ ಕೊಳ್ಳಿ ಇಟ್ಟಳು

ಬಾಲಿವುಡ್ ನಲ್ಲಿ ಒಂದೇ ಒಂದು ಹೇಳಿಕೆಯ ಮೂಲಕ ಇಡೀ ದೇಶವನ್ನು ತನ್ನಡೆಗೆ ತಿರುಗಿಸಿಕೊಂಡ ನಟಿ ಪೂನಂ ಪಾಂಡೆ. ಒಂದು ಹೇಳಿಕೆಯಿಂದಲೇ ಪೂನಂಪಾಂಡೆ ದೇಶದಾದ್ಯಂತ ಪಡ್ಡೆಗಳ ಹೃದಯಗಳಿಗೆ ಕೊಳ್ಳಿ ಇಟ್ಟಳು. ಆಗಷ್ಟೇ ಮಾಡೆಲ್ ಆಗಿ ಗುರುತಿಸಿಕೊಂಡಿದ್ದ ಪೂನಂಪಾಂಡೆ 2011ರ ವಿಶ್ವಕಪ್ ಸಮಯದಲ್ಲಿ ನೀಡಿದ ಒಂದು ಸ್ಟೇಟ್ಮೆಂಟ್ ಆಕೆಯನ್ನು ಜನಪ್ರಿಯತೆಯ ಉತ್ತುಂಗಕ್ಕೆ ಏರಿಸಿಬಿಟ್ಟಿತ್ತು. ಪೂನಂ ಪಾಂಡೆ ಆಗಷ್ಟೆ ಮಾಡೆಲ್ ಆಗಿ ಗುರುತಿಸಿಕೊಂಡಿದ್ದ ಸಮಯ 2011ರ ವಿಶ್ವಕಪ್ ಸಮಯದಲ್ಲಿ 'ಭಾರತ ಈ ಬಾರಿಯ ವಿಶ್ವಕಪ್ ಗೆದ್ದರೆ ಮುಂಬೈನ ಗಲ್ಲಿಗಳಲ್ಲಿ ಬೆತ್ತಲೆಯಾಗಿ ತಿರುಗಾಡುವುದಾಗಿ'ಹೇಳಿಕೆಯನ್ನು ಕೊಟ್ಟಳು. ಪೂನಂ ಹೇಳಿಕೆ ಆ ಸಮಯದಲ್ಲಿ ಪಡ್ಡೆಗಳ ಹೃದಯಕ್ಕೆ ಕೊಳ್ಳಿ ಇಟ್ಟರೆ, ಇನ್ನೊಂದು ಕಡೆ ಅದೊಂದು ವಿವಾದದ ವಿಷಯವಾಗಿ ಕೋರ್ಟ್ ಮೆಟ್ಟಲು ಕೂಡ ಕೆಲವರು ಏರಿದರು, ಆಕೆಯ ವಿರುದ್ಧ ವಿಚಾರಣೆಗೆ ಆದೇಶ ಮಾಡಲಾಯಿತು. ಭಾರತ ವಿಶ್ವಕಪ್ ಗೆದ್ದರೂ ಪೂನಂ ಪಾಂಡೆ ಬೆತ್ತಲೆಯಾಗಿ ಓಡಾಡಲಿಲ್ಲ, ಆದರೆ ವಿವಾದದಿಂದ ಆಕೆ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಳು.

ಪೂನಂ ಪಾಂಡೆ ಅಂದರೆ ಗಿಮಿಕ್ಕುಗಳು

ಪೂನಂ ಪಾಂಡೆ ಅಂದರೆ ಗಿಮಿಕ್ಕುಗಳು

ಪೂನಂ ಪಾಂಡೆ ಅಂದರೆ ಗಿಮಿಕ್ಕುಗಳು, ಆಕೆ ಪ್ರಚಾರಕ್ಕಾಗಿ ಅನೇಕ ತರದ ಪಬ್ಲಿಸಿಟಿ ಗಿಮಿಕ್ ಗಳನ್ನು ಮಾಡಿಕೊಂಡೇ ಬಂದಿದ್ದಾಳೆ ಈ ಬಾಲಿವುಡ್ ಬೋಲ್ಡ್ ಬ್ಯೂಟಿ. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಪೂನಂ 'ತಾನು ಪ್ರಚಾರಕ್ಕಾಗಿ ಏನೇ ಬೇಕಾದರೂ ಮಾಡುತ್ತೇನೆ ಎಂದು ಬಹಿರಂಗಪಡಿಸಿದ್ದಾಳೆ. ತನ್ನ ವಿವಾದಾತ್ಮಕ ಹೇಳಿಕೆಗಳಲ್ಲಾ ಪ್ರಚಾರದ ಸ್ಟಂಟ್‌ನ ಭಾಗವಾಗಿದೆ' ಎಂದು ಹೇಳುವ ಪೂನಂ 'ಆದರೆ ಈಗ ಅದೆಲ್ಲ ವಿಫಲವಾಗುತ್ತಿದೆ'ಅಂತ ಹೇಳಿದ್ದಾರೆ.

''ನಾನು 17ನೇ ವಯಸ್ಸಿನಲ್ಲಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟೆ. ಆಗ ನನಗೆ ಉದ್ಯಮದ ಬಗ್ಗೆ ತಿಳುವಳಿಕೆ ಇರಲಿಲ್ಲ. ಹಾಗಾಗಿ ನಾನು ಎಲ್ಲರಿಗಿಂತ ಭಿನ್ನವಾಗಿರಲು ಬಯಸಿದ್ದೆ. ಅದರ ಭಾಗವಾಗಿ ಮಾಧ್ಯಮಗಳ ಗಮನ ಸೆಳೆಯಲು ಅನೇಕ ಬಾರಿ ವಿವಾದಾತ್ಮಕ ಕಾಮೆಂಟ್ಗಳನ್ನು ಮಾಡಿದ್ದೆ. ಅದರಲ್ಲೂ ಭಾರತ ವಿಶ್ವಕಪ್ ಗೆದ್ದರೆ ಬೆತ್ತಲೆಯಾಗಿ ಓಡುವುದಾಗಿ ಹೇಳಿದ್ದ ಆ ಹೇಳಿಕೆ ನಿಜಕ್ಕೂ ಕೂಡ ವಿಷಾದನೀಯ. ಆದರೆ ಈಗ ಇಂತಹ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ನನಗೆ ತುಂಬಾ ವಿಷಾದವಿದೆ. ಇಲ್ಲಿಯವರೆಗೆ ನನ್ನ ಸಿನಿ ಕೆರಿಯರ್ ಬಗ್ಗೆ ನನ್ನ ತಂದೆ-ತಾಯಿ ಕೂಡ ಸಂತೋಷವಾಗಿಲ್ಲ. ನಾನು ಆಯ್ಕೆ ಮಾಡಿಕೊಂಡ ಪಾತ್ರಗಳ ಬಗ್ಗೆ ನನ್ನ ಹೆತ್ತವರಿಗೆ ತಿಳಿದಿತ್ತು ಮತ್ತು ಕೆಲವೊಮ್ಮೆ ಅವರು ಇವುಗಳ ಬಗ್ಗೆ ಋಣಾತ್ಮಕವಾಗಿ ಮಾತನಾಡಿದ್ದು ಇದೆ. ಇದೀಗ ನನಗೆ ಒಳ್ಳೆಯ ಅವಕಾಶಗಳು ಬರುತ್ತಿವೆ. ವಿವಾದಕ್ಕೆ ಅಂತ್ಯ ಹಾಕಿ ಕೆಲಸದ ಕಡೆ ಗಮನ ಕೊಡುತ್ತೇನೆ '' ಎಂದಿದ್ದಾರೆ ಪೂನಂ ಪಾಂಡೆ.
ಬೋಲ್ಡ್ ಅಲ್ಲ ಗಂಭೀರವಾದ ಪಾತ್ರಗಳು ಬೇಕು

ಬೋಲ್ಡ್ ಅಲ್ಲ ಗಂಭೀರವಾದ ಪಾತ್ರಗಳು ಬೇಕು

ಬೋಲ್ಡ್ ನಟಿ ಪೂನಂ ಪಾಂಡೆ ಈಗ ತಮ್ಮ ಬೋಲ್ಡ್ ಮತ್ತು ಗ್ಲಾಮರ್ ಇಮೇಜ್‌ಗಿಂತ ಗಂಭೀರ ಪಾತ್ರಗಳಿಗಾಗಿ ಹುಡುಕುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಸಿನಿಮಾಗಳಲ್ಲಿ ತಾಯಿ-ತಂಗಿಯಂತಹ ಪಾತ್ರಗಳನ್ನು ಮಾಡಿ ಅಭಿಮಾನಿಗಳಿಗೆ ತಮ್ಮ ನಟನಾ ಚಾತುರ್ಯವನ್ನು ತೋರಿಸಬೇಕೆಂಬ ಆಸೆ. ತಮ್ಮ ಭವಿಷ್ಯದ ಯೋಜನೆಗಳ ಕುರಿತು ಮಾತನಾಡಿರುವ ಪೂನಂ ಅವರು "ಗ್ಲಾಮರ್ ಗೊಂಬೆಯಾಗಿ ಚಿತ್ರರಂಗದಲ್ಲಿ ಹೆಸರು ಮಾಡಿದ್ದೇನೆ. ಆದರೆ ಈಗ ಗಂಭೀರ ಪಾತ್ರಗಳನ್ನು ಮಾಡಲು ಆಲೋಚಿಸುತ್ತಿದ್ದೇನೆ. ಸಿನಿಮಾಗಳಲ್ಲಿ ತಾಯಿ ಅಥವಾ ತಂಗಿಯಾಗಿ ನಟಿಸಲು ನನ್ನ ಅಭ್ಯಂತರವಿಲ್ಲ" ಎಂದ ಅವರು, "ಅವಕಾಶ ಸಿಕ್ಕರೆ ಖಂಡಿತಾ ಆ ಪಾತ್ರಗಳನ್ನು ಮಾಡಲು ಇಷ್ಟಪಡುತ್ತೇನೆ' ಎಂದಿದ್ದಾರೆ. ಮತ್ತು ಪೂನಂ ಪಾಂಡೆಗೆ ತಾಯಿ ಅಥವಾ ಸಹೋದರಿಯ ಪಾತ್ರಗಳು ಸಿಗುತ್ತವೆಯೇ ಎಂಬುದನ್ನು ಕಾದುನೋಡಬೇಕಾಗಿದೆ.

More from Filmibeat

English summary
I will do anything to get publicity: bold actress Poonam Pandey. however she accepted that promising her fans to strip down naked if the India cricket team wins the world cup in 2011 was a publicity stunt.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X