For Quick Alerts
  ALLOW NOTIFICATIONS  
  For Daily Alerts

  ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆ ಯಾವಾಗ?

  |

  ಬಾಲಿವುಡ್‌ನಲ್ಲಿ ಈಗ ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ಲವ್ ಸ್ಟೋರಿ ಭಾರಿ ಸುದ್ದಿ ಮಾಡುತ್ತಿದೆ. ಇವರಿಬ್ಬರು ಪ್ರೀತಿಯಲ್ಲಿ ಬಿದ್ದಿರೊದು, ಪದೇ ಪದೇ ಒಟ್ಟಿಗೆ ಕಾಣಿಸಿಕೊಂಡಿರೋದು ಇವೆಲ್ಲವನ್ನು ಗಮನಿಸಿದ ಹಲವರು ಕ್ಯಾಟ್ ಮತ್ತು ವಿಕ್ಕಿ ಎಂಗೇಜ್‌ಮೆಂಟ್ ಕೂಡ ಮಾಡಿಕೊಂಡಿದ್ದಾರೆ ಎಂದು ಸುದ್ದಿ ಮಾಡಿದ್ದರು. ಈಗ ಇದಕ್ಕೆ ಸ್ವತಃ ವಿಕ್ಕಿ ಕೌಶಲ್ ಪ್ರತಿಕ್ರೀಯೆ ನೀಡಿದ್ದಾರೆ.

  ಬಾಲಿವುಡ್‌ನಲ್ಲಿ ದೀಪಿಕಾ ರಣ್‌ವೀರ್ ಸಿಂಗ್, ಅನುಷ್ಕಾ ವಿರಾಟ್, ಮದುವೆ ನಂತರ ಮತ್ತೊಂದು ಮದುವೆಗೆ ಸಜ್ಜಾಗುತ್ತಿದೆ. ಬಾಲಿವುಡ್‌ನಲ್ಲಿ ಈಗಾಗಲೇ ಪ್ರಣಯ ಪಕ್ಷಿಗಳೆಂದು ಗುರುತಿಸಿಕೊಂಡಿರುವ ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ಈಗ ಮದುವೆ ಆಗೋದಕ್ಕೆ ಸಜ್ಜಾಗಿದ್ದಾರೆ. ಆದರೆ ಇದಕ್ಕೂ ಮುಂಚಿತವಾಗಿ ಇವರಿಬ್ಬರ ಬಗ್ಗೆ ಗಾಸಿಪ್ ಒಂದು ಓಡಾಡುತ್ತಿದ್ದು, ಅದಕ್ಕೆ ಉತ್ತರಿಸಿದ್ದಾರೆ ವಿಕ್ಕಿ ಕೌಶಲ್.

  ಹೌದು, ಇವರಿಬ್ಬರ ಪ್ರೀತಿ ವಿಚಾರ ಯಾವಾಗ ಹೊರಬಿದ್ದಿತ್ತೊ ಆಗಿನಿಂದಲೂ ಒಂದಲ್ಲ ಒಂದು ವಿಚಾರ ಇವರಿಬ್ಬರ ನಡುವೆ ಸುತ್ತಿಕೊಳ್ಳುತ್ತಿದೆ. ಕೆಲ ದಿನಗಳ ಹಿಂದೆ ಕೂಡ ಕ್ಯಾಟ್ ಮತ್ತು ವಿಕ್ಕಿ ಗುಟ್ಟಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ, ನಿಶ್ಚಿತಾರ್ಥ ಮಾಡಿಕೊಂಡಿರೋ ವಿಚಾರವನ್ನು ಆಪ್ತರಿಗಷ್ಟೆ ತಿಳಿಸಿದ್ದಾರೆ ಎಂದೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದಕ್ಕೆ ಕತ್ರೀನಾ ಆಗಲೀ ವಿಕ್ಕಿ ಆಗಲಿ ಪ್ರತಿಕ್ರೀಯೆ ನೀಡಿರಲಿಲ್ಲ. ಈಗ ವಿಕ್ಕಿ ಕೌಶಲ್ ನಾವಿಬ್ಬರು ಇನ್ನು ಎಂಗೇಜ್‌ಮೆಂಟ್ ಮಾಡಿಕೊಂಡಿಲ್ಲ, ಸಿನಿಮಾ ಶೂಟಿಂಗ್‌ ಮುಗಿದ ನಂತರ ಸಮಯ ಮಾಡಿಕೊಂಡು ಎಲ್ಲರಿಗೂ ತಿಳಿಸಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತೇವೆ ಎಂದು ಸುಳ್ಳು ಸುದ್ದಿ ಹಬ್ಬಿದವರಿಗೆ ಸರಿಯಾಗೆ ಉತ್ತರಿಸಿದ್ದಾರೆ.

  ಇತ್ತೀಚೆಗೆ ಪತ್ರಕರ್ತರೊಂದಿಗೆ ಮಾತಿಗೆ ಸಿಕ್ಕಿದ್ದ ವಿಕ್ಕಿಯನ್ನು ಎಂಗೇಜ್‌ಮೆಂಟ್‌ಬಗ್ಗೆ ಪ್ರಶ್ನೆ ಕೇಳಿದಾಗ ಹೀಗೆ ಉತ್ತರಿಸಿರೋ ವಿಕ್ಕಿ ಕೌಶಲ್, ಮಾತು ಮುಂದುವರೆಸಿ ಮದುವೆ ಬಗ್ಗೆ ಕೇಳಿದ ಪ್ರಶ್ನೆಗೂ ಉತ್ತರಿಸಿದ್ದಾರೆ. ಎಂಗೇಜ್‌ಮೆಂಟ್ ಬಳಿಕ ಕೆಲವೆ ದಿನಗಳಲ್ಲಿ ನಾವು ಮದುವೆ ಕೂಡ ಆಗಲಿದ್ದು, ಸದ್ಯ ಇಬ್ಬರ ಕೈನಲ್ಲೂ ಸಾಕಷ್ಟು ಸಿನಿಮಾ ಇದೆ. ಅದೆಲ್ಲವನ್ನು ಮುಗಿಸೊ ಕರ್ತವ್ಯ ಇರೋದ್ರಿಂದ ಈಗ ಸದ್ಯ ಸಿನಿಮಾ ಕಡೆ ಗಮನ ಕೊಟ್ಟಿದ್ದೇವೆ ಅಷ್ಟೆ. ಆದಷ್ಟು ಬೇಗ ಮದುವೆ ಬಗ್ಗೆ ಸುದ್ದಿ ನೀಡುತ್ತೇವೆ ಎಂದಿದ್ದಾರೆ.

  ಇಷ್ಟು ದಿನ ವಿಕ್ಕಿ ಮತ್ತು ಕ್ಯಾಟ್ ಬಗ್ಗೆ ಸಾಕಷ್ಟು ಗಾಸಿಪ್‌ಗಳು ಗಿರಕಿ ಹೊಡಿತಿದ್ದವು. ಈಗ ಇವೆಲ್ಲಕ್ಕು ಉತ್ತರ ಸಿಕ್ಕಿದ್ದು, ಸ್ವತಃ ವಿಕ್ಕಿ ಈ ಎಲ್ಲಾ ಗೊಂದಲಗಳಿಗೆ ತೆರೆಎಳೆದಿದ್ದಾರೆ. ಈ ಮೂಲಕ ಅಧಿಕೃತವಾಗಿ ನಾವಿಬ್ಬರು ಪ್ರೇಮಿಗಳು ಮತ್ತು ಆದಷ್ಟು ಬೇಗ ಮದುವೆ ಆಗುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಈ ವಿಚಾರ ತಿಳಿದು ಕತ್ರೀನಾ ಮತ್ತು ವಿಕ್ಕಿ ಕೌಶಲ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದು, ಮದುವೆ ಯಾವಾಗ ಆಗಬಹುದು, ಎಷ್ಟು ಗ್ರ್ಯಾಂಡ್ ಆಗಿ ಮಾಡಿಕೊಳ್ಳಬಹುದು ಎಂಬೆಲ್ಲ ಲೆಕ್ಕಾಚಾರಗಳನ್ನು ಹಾಕತೊಡಗಿದ್ದಾರೆ.

  English summary
  Vicky Kaushal reveals how he reacted to the reports of his engagement rumours with Katrina Kaif.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X