ಇಸ್ಲಾಂನಲ್ಲಿ ನಂಬಿಕೆ ಇಲ್ಲ, ಮುಸ್ಲಿಂ ಹುಡುಗನ ಮದುವೆ ಆಗಲ್ಲ: ನಟಿ ಉರ್ಫಿ ಜಾವೇದ್

ತಮ್ಮ ಚಿತ್ರ ವಿಚಿತ್ರ ಆದರೆ ಗ್ಲಾಮರಸ್ ಉಡುಪುಗಳಿಂದ ಸುದ್ದಿಗೆ ಬರುತ್ತಲೇ ಇರುವ ನಟಿ, ಮಾಜಿ ಬಿಗ್‌ಬಾಸ್ ಸ್ಪರ್ಧಿ ಉರ್ಫಿ ಜಾವೇದ್ ಇದೀಗ ಧರ್ಮದ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದಾರೆ.

ಮುಸ್ಲಿಂ ಯುವತಿ ಆಗಿರುವ ಉರ್ಫಿ ಜಾವೇದ್ ತಾವು ಯಾವುದೇ ಕಾರಣಕ್ಕೂ ಮುಸ್ಲಿಂ ಯುವಕನನ್ನು ವಿವಾಹವಾಗುವುದಿಲ್ಲ ಎಂದಿದ್ದಾರೆ. ಅದಕ್ಕೆ ಕಾರಣವನ್ನೂ ನೀಡಿದ್ದಾರೆ.

ಡಿಜಿಟಲ್ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಉರ್ಫಿ ಜಾವೇದ್, ''ನಾನು ಯಾವುದೇ ಕಾರಣಕ್ಕೂ ಮುಸ್ಲಿಂ ಹುಡುಗನನ್ನು ವಿವಾಹವಾಗುವುದಿಲ್ಲ. ನನಗೆ ಇಸ್ಲಾಂ ಧರ್ಮದಲ್ಲಿ ನಂಬಿಕೆ ಇಲ್ಲ. ನಾನು ಯಾವ ಧರ್ಮವನ್ನೂ ಸಹ ಪಾಲಿಸುವುದಿಲ್ಲ. ನಾನು ಧರ್ಮವನ್ನು ನೋಡಿಕೊಂಡು ಪ್ರೀತಿ ಮಾಡುವುದಿಲ್ಲ. ನಮಗೆ ಇಷ್ಟ ಬಂದವರೊಂದಿಗೆ ನಾವು ಮದುವೆ ಆಗುಬೇಕು ಅದುವೇ ಸರಿ'' ಎಂದಿದ್ದಾರೆ.

I Will Never Marry A Muslim Guy: Actress Urfi Javed

''ನಾನು ಮುಸ್ಲಿಂ ಯುವತಿ ಆದರೆ ನನ್ನ ಸಾಮಾಜಿಕ ಜಾಲತಾಣ ಪೋಸ್ಟ್‌ಗಳಿಗೆ ಅತಿ ಹೆಚ್ಚು ದ್ವೇಷ ಕಮೆಂಟ್‌ಗಳು ಬರುವುದು ಮುಸ್ಲಿಂ ಯುವಕರಿಂದ. ನಾನು ಇಸ್ಲಾಂ ಧರ್ಮಕ್ಕೆ ಕಪ್ಪು ಚುಕ್ಕೆ ಎಂದೆಲ್ಲ ನಿಂದಿಸುತ್ತಾರೆ. ಅವರು ಬೈಯ್ಯಲು ಕಾರಣ, ಮುಸ್ಲಿಂ ಯುವಕರಿಗೆ ತಮ್ಮ ಪತ್ನಿಯರು ತಾವು ಬಯಸಿದಂತೆಯೇ ಇರಬೇಕು, ವರ್ತಿಸಬೇಕು ಎಂಬ ಆಸೆ ಇರುತ್ತದೆ. ಇಡೀಯ ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳ ಮೇಲೆ ನಿಯಂತ್ರಣ ಹೇರಲು ಸದಾ ಮುಸ್ಲಿಂ ಪುರುಷರು ಸದಾ ಯತ್ನಿಸುತ್ತಿರುತ್ತಾರೆ. ಹಾಗಾಗಿಯೇ ನನಗೆ ಇಸ್ಲಾಂ ಧರ್ಮದಲ್ಲಿ ನಂಬಿಕೆ ಇಲ್ಲ. ಇಸ್ಲಾಂ ಧರ್ಮೀಯಳಾಗಿ ಅವರು ನಿರೀಕ್ಷಿಸಿದಂತೆ ನಾನು ಇರಲಾರೆ'' ಎಂದಿದ್ದಾರೆ ಉರ್ಫಿ.

''ನಾನು ಚಿಕ್ಕವಳಾಗಿದ್ದಾಗ ಬಹಳ ಶಿಸ್ತಿನ ಜೀವನ ಮಾಡಿದ್ದೇನೆ. ನನ್ನ ತಂದೆ ಧರ್ಮಭಿರುಗಳಾಗಿದ್ದರು. ಮನೆಯಲ್ಲಿ ಹೆಣ್ಣುಮಕ್ಕಳ ಮೇಲೆ ನಿಯಂತ್ರಣಗಳನ್ನು, ನಿಯಮಗಳನ್ನು ಹೇರಿದ್ದರು. ಆದರೆ ನಾನು ಸ್ವತಂತ್ರ್ಯಳಾದ ಮೇಲೆ ನನ್ನ ಮರ್ಜಿಯಂತೆ ನಾನು ಬದುಕುತ್ತಿದ್ದೇನೆ. ನನಗೆ ಮತ್ತೆ ನನ್ನ ಹಳೆಯ ಜೀವನಕ್ಕೆ ಹೋಗಲು ಇಷ್ಟವಿಲ್ಲ'' ಎಂದು ಹಿಂದೊಂದು ಸಂದರ್ಶನದಲ್ಲಿ ಉರ್ಫಿ ಜಾವೇದ್ ಹೇಳಿಕೊಂಡಿದ್ದರು.

ಉರ್ಫಿ ಜಾವೇದ್, ಕರಣ್ ಜೋಹರ್ ನಡೆಸಿಕೊಟ್ಟ ಬಿಗ್‌ಬಾಸ್ ಒಟಿಟಿಯಲ್ಲಿ ಪಾಲ್ಗೊಂಡಿದ್ದರು. ಆ ರಿಯಾಲಿಟಿ ಶೋನಲ್ಲಿ ಹಲವರ ಗಮನ ಸೆಳೆದರು. ಉರ್ಫಿ ಧರಿಸುವ ಗ್ಲಾಮರಸ್ ಹಾಗೂ ಚಿತ್ರ-ವಿಚಿತ್ರ ರೀತಿಯ ಉಡುಪುಗಳಿಂದಾಗಿ ಅವರು ಇತ್ತೀಚೆಗೆ ಬಹಳ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ.

More from Filmibeat

English summary
Actress, Model Urfi Javed said I will never marry a Muslim Guy. I do not have faith in Islam. Muslim men wanted to control their women.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X