ನನ್ನ ಆರೋಪ ಸುಳ್ಳಾದರೆ ಪದ್ಮಶ್ರೀ ಪ್ರಶಸ್ತಿ ಹಿಂತಿರುಗಿಸುತ್ತೇನೆ: ಕಂಗನಾ ಸವಾಲು
ನಟಿ ಕಂಗನಾ ರಣಾವತ್ ಭಾರಿ ಸಿಟ್ಟಾಗಿದ್ದಾರೆ. ಅದರಲ್ಲಿಯೂ ಸುಶಾಂತ್ ಸಾವಿನ ಬಗ್ಗೆ ತಾವಾಡಿದ ಮಾತುಗಳು ಸುಳ್ಳು ಎಂದು ಕೆಲವರು ಹೇಳಿರುವುದು ಅವರ ಸಿಟ್ಟಿಗೆ ಕಾರಣವಾಗಿದೆ.
Recommended Video
ಸುಶಾಂತ್ ಸಿಂಗ್ ಅವರದ್ದು ಕೊಲೆ ಎಂದು ಕಂಗನಾ ಹೇಳಿದ್ದರು. ಸುಶಾಂತ್ ಅವರ ಸಾವಿಗೆ ಬಾಲಿವುಡ್‌ನ 'ಮೂವಿ ಮಾಫಿಯಾ' ಕಾರಣ, ಹಾಗೂ ಕೆಲವು ಮಾಧ್ಯಮಗಳು ಕಾರಣ ಎಂದು ಕಂಗನಾ ರಣಾವತ್ ಆರೋಪಿಸಿದ್ದರು.
ಸುಶಾಂತ್ ಸಿಂಗ್ ಸಾವಿನ ಬಗ್ಗೆ ಸುಳ್ಳು ಸುದ್ದಿ ಹರಡಿದ್ದಾರೆ ಎಂಬ ಆರೋಪದ ಮೇಲೆ ಪೊಲೀಸರು ಕಂಗನಾ ರಣೌತ್ ಅವರಿಗೆ ಸಮನ್ಸ್ ಸಹ ನೀಡಿದ್ದು, ಕಂಗನಾ ವಿಚಾರಣೆಗೆ ಹಾಜರಾಗಬೇಕಿದೆ.

ಪದ್ಮಶ್ರೀ ಪ್ರಶಸ್ತಿ ವಾಪಸ್ ನೀಡುತ್ತೇನೆ: ಕಂಗನಾ ಸವಾಲು
ಸುಶಾಂತ್ ಸಿಂಗ್ ಸಾವಿನ ಬಗ್ಗೆ ನಾನು ಹೇಳಿದ ಮಾತುಗಳು ಸುಳ್ಳು ಎಂದು ನಿರೂಪಿತವಾದರೆ, ನನಗೆ ಬಂದಿರುವ ಗೌರವಾನ್ವಿತ ಪ್ರಶಸ್ತಿ 'ಪದ್ಮಶ್ರೀ'ಯನ್ನು ಸರ್ಕಾರಕ್ಕೆ ವಾಪಸ್ ನೀಡಿಬಿಡುತ್ತೇನೆ ಎಂದು ಕಂಗನಾ ನಿನ್ನೆ ನಡೆದ ಮಾಧ್ಯಮದೊಂದಿಗೆ ಸಂದರ್ಶನದಲ್ಲಿ ಹೇಳಿದ್ದಾರೆ.

ಸುಶಾಂತ್‌ನದ್ದು ಯೋಜಿತ ಕೊಲೆ: ಕಂಗನಾ ಆರೋಪ
ಸುಶಾಂತ್ ಸಾವನ್ನಪ್ಪಿದ್ದಾಗ ಕಂಗನಾ ರಣೌತ್ ತೀವ್ರ ಬೇಸರ ವ್ಯಕ್ತಪಡಿಸಿದ್ದರು, ಬಾಲಿವುಡ್‌ನ ಗುಂಪುಗಾರಿಕೆ, ಸ್ವಜನಪಕ್ಷಪಾತವೇ ಸುಶಾಂತ್ ಸಾವಿಗೆ ಕಾರಣ ಎಂದು ಆರೋಪಿಸಿದ್ದರು. ಸುಶಾಂತ್ ಸಿಂಗ್ ಅವರದ್ದು ಆತ್ಮಹತ್ಯೆಯಲ್ಲಿ ಯೋಜಿತ ಕೊಲೆ ಎಂದಿದ್ದರು ಕಂಗನಾ.

ಮಾಧ್ಯಮಗಳ ಮೇಲೆ ಹರಿಹಾಯ್ದಿದ್ದ ಕಂಗನಾ
ಮಾಧ್ಯಮಗಳ ಮೇಲೆ ಸಹ ಅವರು ಹರಿಹಾಯ್ದಿದ್ದ ಕಂಗನಾ, ಕೆಲವು ಬಾಲಿವುಡ್ ದೊಡ್ಡ ಮಂದಿ ಕೆಲವು ಮಾಧ್ಯಮಗಳನ್ನು ಸಾಕಿಕೊಂಡಿವೆ, ಅವರಿಗಾಗದೇ ಇರುವವರ ಸಿನಿಮಾಗಳ ಬಗ್ಗೆ, ವೈಯಕ್ತಿಕ ಜೀವನದ ಬಗ್ಗೆ ಅವರು ಬರೆಸುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದರು.

ಪೊಲೀಸರಿಂದ ಕಂಗನಾಗೆ ಸಮನ್ಸ್
ಕಂಗನಾ ಅವರು ವಿಡಿಯೋದಲ್ಲಿ ಗಲ್ಲಿ ಬಾಯ್ ಸಿನಿಮಾ, ಸಂಜಯ್ ದತ್ ಅವರ ವ್ಯಸನ ಹೀಗೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದರು. ಅವರ ವಿಡಿಯೋ ಭಾರಿ ವೈರಲ್ ಆಗಿತ್ತು. ಈಗ ಅದಕ್ಕೆ ಸಂಬಂಧಿಸಿದಂತೆ ಕಂಗನಾ ಅವರಿಗೆ ಪೊಲೀಸ್ ಸಮನ್ಸ್ ನಿಡಲಾಗಿದ್ದು, ಪೊಲೀಸರಿಗೆ ಕಂಗನಾ ಉತ್ತರ ನೀಡಬೇಕಿದೆ.


Click it and Unblock the Notifications











