ಬೋಳು ತಲೆ ಹುಡುಗ ಸಿಕ್ಕರೂ ಮದುವೆ ಆಗುವೆ ಎಂದ ಯಾಮಿ ಗೌತಮ್
''ನೀವು ಮದುವೆ ಆಗುವ ಹುಡುಗ ಹೇಗಿರಬೇಕು.?'' ಅಂತ ಯಾರಾದರೂ ಕೇಳಿದರೆ ''ಸ್ಮಾರ್ಟ್ ಆಗಿರಬೇಕು, ಎತ್ತರವಾಗಿರಬೇಕು, ಹ್ಯಾಂಡ್ಸಮ್ ಆಗಿ ಕಾಣಬೇಕು, ಒಳ್ಳೆ ಪ್ರತಿಭೆ ಹೊಂದಿರಬೇಕು'' ಅಂತೆಲ್ಲಾ ನಟಿಯರು ಮಾತ್ರ ಅಲ್ಲ ಸಾಮಾನ್ಯ ಹುಡುಗಿಯರೂ ಕೂಡ ಹೇಳ್ತಾರೆ. ಹೀಗಿರುವಾಗ ಬೋಳು ತಲೆ ಹೊಂದಿರುವ ಹುಡುಗರ ಕಡೆ ಯಾರು ತಾನೆ ತಿರುಗಿ ನೋಡ್ತಾರೆ ಹೇಳಿ.?
ಬೊಕ್ಕ ತಲೆ ಹುಡುಗರ ಸಂಕಷ್ಟದ ಕುರಿತು ಕನ್ನಡದಲ್ಲಿ 'ಒಂದು ಮೊಟ್ಟೆಯ ಕಥೆ' ಸಿನಿಮಾ ತೆರೆಗೆ ಬಂದಿತ್ತು. ಅದೇ ರೀತಿ ಹಿಂದಿಯಲ್ಲಿ 'ಬಾಲ' ಚಿತ್ರ ಇದೀಗ ತೆರೆಕಂಡಿದೆ. ಈ ಚಿತ್ರದಲ್ಲಿ ಯಾಮಿ ಗೌತಮ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. 'ಬಾಲ' ಚಿತ್ರದಲ್ಲಿ ತನ್ನ ಪತಿಗೆ ಬೋಳು ತಲೆ ಇದೆ ಅಂತ ಗೊತ್ತಾಗುತ್ತಿದ್ದಂತೆಯೇ, ಯಾಮಿ ಗೌತಮ್ ರೊಚ್ಚಿಗೇಳುತ್ತಾರೆ. ಅದೇ ರೀತಿ ನಿಜ ಜೀವನದಲ್ಲೂ ಮಾಡ್ತಾರಾ.? ತಲೆಕೂದಲು ಇಲ್ಲದ ಹುಡುಗರನ್ನ ಕಂಡ್ರೆ ಯಾಮಿ ಗೌತಮ್ ಗೆ ಇರುವ ಅಭಿಪ್ರಾಯವೇನು ಅಂತ ಕೇಳಿದರೆ ''ಸಿಕ್ಕಾಪಟ್ಟೆ ಕೂಲ್'' ಎಂಬ ಉತ್ತರ ಯಾಮಿ ಗೌತಮ್ ಕಡೆಯಿಂದ ಬರುತ್ತದೆ.
''ಬೊಕ್ಕ ತಲೆ ಹೊಂದಿರುವ ವ್ಯಕ್ತಿಯನ್ನು ಮದುವೆ ಆಗಲು ನನಗೆ ಯಾವುದೇ ಅಭ್ಯಂತರ ಇಲ್ಲ'' ಎಂದು ಸಂದರ್ಶನವೊಂದರಲ್ಲಿ ಯಾಮಿ ಗೌತಮ್ ಹೇಳಿದ್ದಾರೆ. ಜೊತೆಗೆ ''ಬೋಳು ತಲೆಯ ಹುಡುಗರು ಸಿಕ್ಕಾಪಟ್ಟೆ ಕೂಲ್ ಆಗಿ ಕಾಣುತ್ತಾರೆ'' ಎಂದಿದ್ದಾರೆ ಯಾಮಿ ಗೌತಮ್.

ನಾವು ಹೇಗೆ ಇದ್ದರೂ, ನಮ್ಮನ್ನ ನಾವು ಪ್ರೀತಿಸಬೇಕು. ಆಗಲೇ ಇನ್ನೊಬ್ಬರು ನಮ್ಮನ್ನ ಪ್ರೀತಿಸುವುದು ಎಂಬುದನ್ನು 'ಬಾಲ' ಚಿತ್ರ ಸಾರುತ್ತದೆ. ಈ ಚಿತ್ರದಲ್ಲಿ ಬೋಳು ತಲೆ ಹೊಂದಿರುವ ವ್ಯಕ್ತಿಯಾಗಿ ಆಯುಷ್ಮಾನ್ ಖುರಾನಾ ಅಭಿನಯಿಸಿದ್ದಾರೆ. ಅಮರ್ ಕೌಶಿಕ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಬಿಡುಗಡೆ ಆದ ನಾಲ್ಕು ದಿನಗಳಲ್ಲಿ 'ಬಾಲ' ಚಿತ್ರ 52.21 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಎಲ್ಲೆಡೆ 'ಬಾಲ' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.


Click it and Unblock the Notifications











