Just In
Don't Miss!
- Sports
ಅಂಡರ್ಟೇಕರ್ vs ಬ್ರಾಕ್ ಲೆಸ್ನರ್, ರೋಮಾಂಚನಕಾರಿ ಕಾಳಗ: ವೀಡಿಯೋ
- News
ಯೋಗೀಶ್ವರ್ ಕೊಟ್ಟ ಸೀರೆಯನ್ನು ಬೀದಿಗೆ ಬಿಸಾಕಿದರು: ಜಿ.ಟಿ.ದೇವೇಗೌಡ
- Finance
ಚಿನ್ನದ ಮೇಲೆ ಹೂಡಿಕೆ ಮಾಡಲು ಬೊಂಬಾಟ್ ಐಡಿಯಾಗಳು
- Education
IAF ನೇಮಕಾತಿ: ದ್ವಿತೀಯ ಪಿಯುಸಿ ಪಾಸ್ ?... ತಿಂಗಳಿಗೆ 33,000/-ರೂ ವೇತನ ಪಡೆಯುವ ಅವಕಾಶ
- Lifestyle
ಮೇಕಪ್ ಹಚ್ಚಿದಾಗ ಎಂದಿಗೂ ಈ ಕೆಲಸಗಳನ್ನು ಮಾಡಲೇಬೇಡಿ
- Automobiles
ಡಿ.21ರಂದು ಬಿಡುಗಡೆಯಾಗಲಿರುವ ಹೋಂಡಾ ಆಕ್ಟಿವಾ 6ಜಿ ಸ್ಪೆಷಲ್ ಏನು?
- Technology
ಟಿಕ್ಟಾಕ್ ಫಾಲೋವರ್ಸ್ ಹೆಚ್ಚಿಸಿಕೊಳ್ಳಬೇಕೆ?..ಹಾಗಿದ್ರೆ ಈ ಟಿಪ್ಸ್ ಮರೆಯದೆ ಬಳಸಿ!
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಬೋಳು ತಲೆ ಹುಡುಗ ಸಿಕ್ಕರೂ ಮದುವೆ ಆಗುವೆ ಎಂದ ಯಾಮಿ ಗೌತಮ್
''ನೀವು ಮದುವೆ ಆಗುವ ಹುಡುಗ ಹೇಗಿರಬೇಕು.?'' ಅಂತ ಯಾರಾದರೂ ಕೇಳಿದರೆ ''ಸ್ಮಾರ್ಟ್ ಆಗಿರಬೇಕು, ಎತ್ತರವಾಗಿರಬೇಕು, ಹ್ಯಾಂಡ್ಸಮ್ ಆಗಿ ಕಾಣಬೇಕು, ಒಳ್ಳೆ ಪ್ರತಿಭೆ ಹೊಂದಿರಬೇಕು'' ಅಂತೆಲ್ಲಾ ನಟಿಯರು ಮಾತ್ರ ಅಲ್ಲ ಸಾಮಾನ್ಯ ಹುಡುಗಿಯರೂ ಕೂಡ ಹೇಳ್ತಾರೆ. ಹೀಗಿರುವಾಗ ಬೋಳು ತಲೆ ಹೊಂದಿರುವ ಹುಡುಗರ ಕಡೆ ಯಾರು ತಾನೆ ತಿರುಗಿ ನೋಡ್ತಾರೆ ಹೇಳಿ.?
ಬೊಕ್ಕ ತಲೆ ಹುಡುಗರ ಸಂಕಷ್ಟದ ಕುರಿತು ಕನ್ನಡದಲ್ಲಿ 'ಒಂದು ಮೊಟ್ಟೆಯ ಕಥೆ' ಸಿನಿಮಾ ತೆರೆಗೆ ಬಂದಿತ್ತು. ಅದೇ ರೀತಿ ಹಿಂದಿಯಲ್ಲಿ 'ಬಾಲ' ಚಿತ್ರ ಇದೀಗ ತೆರೆಕಂಡಿದೆ. ಈ ಚಿತ್ರದಲ್ಲಿ ಯಾಮಿ ಗೌತಮ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. 'ಬಾಲ' ಚಿತ್ರದಲ್ಲಿ ತನ್ನ ಪತಿಗೆ ಬೋಳು ತಲೆ ಇದೆ ಅಂತ ಗೊತ್ತಾಗುತ್ತಿದ್ದಂತೆಯೇ, ಯಾಮಿ ಗೌತಮ್ ರೊಚ್ಚಿಗೇಳುತ್ತಾರೆ. ಅದೇ ರೀತಿ ನಿಜ ಜೀವನದಲ್ಲೂ ಮಾಡ್ತಾರಾ.? ತಲೆಕೂದಲು ಇಲ್ಲದ ಹುಡುಗರನ್ನ ಕಂಡ್ರೆ ಯಾಮಿ ಗೌತಮ್ ಗೆ ಇರುವ ಅಭಿಪ್ರಾಯವೇನು ಅಂತ ಕೇಳಿದರೆ ''ಸಿಕ್ಕಾಪಟ್ಟೆ ಕೂಲ್'' ಎಂಬ ಉತ್ತರ ಯಾಮಿ ಗೌತಮ್ ಕಡೆಯಿಂದ ಬರುತ್ತದೆ.
ಫೇರ್ ಅಂಡ್ ಲವ್ಲೀ ಸುಂದರಿಗೆ ಕಿಚ್ಚನ ಜೊತೆ ನಟಿಸುವ ಆಸೆಯಂತೆ!
''ಬೊಕ್ಕ ತಲೆ ಹೊಂದಿರುವ ವ್ಯಕ್ತಿಯನ್ನು ಮದುವೆ ಆಗಲು ನನಗೆ ಯಾವುದೇ ಅಭ್ಯಂತರ ಇಲ್ಲ'' ಎಂದು ಸಂದರ್ಶನವೊಂದರಲ್ಲಿ ಯಾಮಿ ಗೌತಮ್ ಹೇಳಿದ್ದಾರೆ. ಜೊತೆಗೆ ''ಬೋಳು ತಲೆಯ ಹುಡುಗರು ಸಿಕ್ಕಾಪಟ್ಟೆ ಕೂಲ್ ಆಗಿ ಕಾಣುತ್ತಾರೆ'' ಎಂದಿದ್ದಾರೆ ಯಾಮಿ ಗೌತಮ್.
ನಾವು ಹೇಗೆ ಇದ್ದರೂ, ನಮ್ಮನ್ನ ನಾವು ಪ್ರೀತಿಸಬೇಕು. ಆಗಲೇ ಇನ್ನೊಬ್ಬರು ನಮ್ಮನ್ನ ಪ್ರೀತಿಸುವುದು ಎಂಬುದನ್ನು 'ಬಾಲ' ಚಿತ್ರ ಸಾರುತ್ತದೆ. ಈ ಚಿತ್ರದಲ್ಲಿ ಬೋಳು ತಲೆ ಹೊಂದಿರುವ ವ್ಯಕ್ತಿಯಾಗಿ ಆಯುಷ್ಮಾನ್ ಖುರಾನಾ ಅಭಿನಯಿಸಿದ್ದಾರೆ. ಅಮರ್ ಕೌಶಿಕ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಬಿಡುಗಡೆ ಆದ ನಾಲ್ಕು ದಿನಗಳಲ್ಲಿ 'ಬಾಲ' ಚಿತ್ರ 52.21 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಎಲ್ಲೆಡೆ 'ಬಾಲ' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.