ಕ್ಯಾಮರಾದಿಂದ ತಪ್ಪಿಸಿಕೊಳ್ಳಲು ಪ್ರೇಯಸಿಯನ್ನು ದೂರ ತಳ್ಳಿದ ಸೈಫ್ ಅಲಿ ಖಾನ್ ಮಗ ? ಇಬ್ರಾಹಿಂ ವರ್ತನೆಗೆ ಸಿಡಿಮಿಡಿಗೊಂಡ ಜನ
ಸೆಲೆಬ್ರಿಟಿಗಳ ಖಾಸಗಿ ಬದುಕು, ಮನರಂಜನೆಯ ಸರಕು ಆಗಿ ಬದಲಾಗಿದ್ದು ಇಂದು ನಿನ್ನೆಯಲ್ಲ. ಅನೇಕ ವರ್ಷದ ಹಿಂದೆಯೇ .. ಬಣ್ಣದ ಪ್ರಪಂಚಲ್ಲಿರುವ ಜನ ಹೋದಲ್ಲಿ .. ಬಂದಲ್ಲಿ .. ಕ್ಯಾಮರಾಗಳನ್ನ ಕರೆಸಿಕೊಳ್ಳುವ ಮೂಲಕ ತಮ್ಮ ಕೈಯಾರೆ ತಮ್ಮ ಖಾಸಗಿತನಕ್ಕೆ ಕೊಳ್ಳಿ ಇಟ್ಟಿದ್ದಾರೆ. ಆದರೆ ಅದರ ತೀವ್ರತೆ ಈಗೀಗ ಕೆಲವರ ಅನುಭವಕ್ಕೆ ಬರುತ್ತಿದೆ.
ಹೌದು, ನೀವು ನೋಡಿರಬಹುದು. ಮನೆಯ ಬೆಡ್ ರೂಮ್ ವೊಂದನ್ನ ಹೊರತು ಪಡಿಸಿದರೆ, ಬಾಲಿವುಡ್ ಸ್ಟಾರ್‌ಗಳ ದಿನ ನಿತ್ಯದ ಚಲನ-ವಲನ, ಹಾವ-ಭಾವ, ಎಲ್ಲವೂ ಕ್ಯಾಮರಾದಲ್ಲಿ ಸೆರೆ ಹಿಡಿಯುವ ಪಾಪರಾಜಿಗಳಿಂದ ಹಿಂದಿ ಚಿತ್ರರಂಗದ ತಾರೆಯರ ನೆಮ್ಮದಿಯೇ ಭಂಗವಾಗಿದೆ. ಎಲ್ಲಿ ಹೋದರು ನೆರಳಿನಂತೆ ಹಿಂಬಾಲಿಸುವ ಇವರು, ಬೇಡ .. ಬೇಡವೆಂದರೂ ಕೆಲವೊಮ್ಮೆ ಫೋಟೋಗಳನ್ನು ಕ್ಲಿಕಿಸುತ್ತಾರೆ. ಮಾನಸಿಕ ಕಿರಿಕಿರಿಯನ್ನುಂಟು ಮಾಡುವುದಲ್ಲದೇ ಮುಜುಗರಕ್ಕೀಡು ಮಾಡುತ್ತಾರೆ.

ವಿಪರ್ಯಾಸ ಅಂದರೆ ತಾವು ಓಡಾಡುವ ಜಾಗದಿಂದ ಹಿಡಿದು, ಓಲಾಡುವ ಜಾಗದವರೆಗಿನ ಮಾಹಿತಿ ಇದೇ ಸೆಲೆಬ್ರಿಟಿಗಳು ಕ್ಯಾಮರಾಗೆ ಮಾಹಿತಿಯನ್ನು ಮೊದಲೇ ನೀಡಿರುತ್ತಾರೆ. ತಾವು ಇದ್ದಲ್ಲಿ ಕ್ಯಾಮರಾ ಬರಬೇಕೆಂದು ದುಡ್ಡನ್ನು ಕೂಡ ನೀಡಿರುತ್ತಾರೆ. ಆದರೆ ಆ ನಂತರ ಕಣ್ಣೇದುರು ಕ್ಯಾಮರಾ ಬಂದಾಗ ತಮಗೇನು ಗೊತ್ತೇ ಇಲ್ಲ ಎನ್ನುವಂತೆ ಡ್ರಾಮಾ ಮಾಡುತ್ತಾರೆ. ಉದಾಹರಣೆಗೆ ಸೈಫ್ ಅಲಿ ಖಾನ್ ಮಗ ಇಬ್ರಾಹಿಂ ಅಲಿ ಖಾನ್ ಅವರನ್ನೇ ತೆಗೆದುಕೊಳ್ಳಿ.
ಹೌದು, ಇಬ್ರಾಹಿಂ ಅಲಿ ಖಾನ್.. ಸೈಫ್ ಅಲಿ ಖಾನ್ ಮುದ್ದಿನ ಮಗ. ತಂದೆಯ ಜಾಡು ಹಿಡಿದು ಚಿತ್ರರಂಗಕ್ಕೆ ಬಂದಿರುವ ಇಬ್ರಾಹಿಂ ಅಲಿ ಖಾನ್ ಇಲ್ಲಿಯವರೆಗೆ ಎರಡು ಸಿನಿಮಾಗಳಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದರೆ ಈ ಚಿತ್ರಗಳು ಚಿತ್ರಮಂದಿರಕ್ಕೆ ಬಂದಿಲ್ಲ. ಬದಲಿಗೆ ಓಟಿಟಿಯಲ್ಲಿ ಪ್ರಸಾರವಾಗಿವೆ.
ಆದರೆ, ಎರಡು ಚಿತ್ರಕ್ಕೆ ಪ್ರೇಕ್ಷಕರ ಪ್ರೀತಿ ಮಾತ್ರ ಸಿಕ್ಕಿಲ್ಲ. ಇಬ್ರಾಹಿಂ ಅಲಿ ಖಾನ್ ಅಭಿನಯಕ್ಕೆ ಕೂಡ ಯಾರು ಇಂಪ್ರೆಸ್ ಆಗಿಲ್ಲ. ಇಂಥಾ ಇಬ್ರಾಹಿಂ ಅಲಿ ಖಾನ್ ಕಳೆದ ಕೆಲ ವರ್ಷಗಳಿಂದ ಪಲಕ್ ತಿವಾರಿ ಹಿಂದೆ ಸುತ್ತಾಡುತ್ತಿದ್ದಾರೆ. ಈ ಪಲಕ್ ತಿವಾರಿ ಬೇರೆ ಯಾರು ಅಲ್ಲ ಬದಲಿಗೆ ಒಂದ್ಕಾಲದಲ್ಲಿ 'ಕಸೌತಿ ಜಿಂದಗಿ ಕೇ' ಎಂಬ ಧಾರಾವಾಹಿ ಮೂಲಕ ಜನ ಮನ ಗೆದ್ದ ಶ್ವೇತಾ ತಿವಾರಿಯ ಮುದ್ದಿನ ಮಗಳು.
ಅಮ್ಮನ ಹೆಜ್ಜೆಯ ಜಾಡನ್ನು ಹಿಡಿದು ಚಿತ್ರರಂಗದಲ್ಲಿ ಈಗಷ್ಟೇ ಅಂಬೆಗಾಲು ಇಡ್ತಿರುವ ಪಲಕ್, ಸೈಫ್ ಅಲಿ ಖಾನ್ ಮಗ ಇಬ್ರಾಹಿಂ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಸುದ್ದಿಯನ್ನೇ ಹಲವರಿಗೆ ಅರಗಿಸಿಕೊಳ್ಳಲು ಇನ್ನೂ ಸಾಧ್ಯವಾಗುತ್ತಿಲ್ಲ. ಯಾಕೆಂದರೆ..ಶ್ವೇತಾ ಅವರ ಮಗಳು ಪಲಕ್ ಆಗಲಿ ಅಥವಾ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಆಗಲಿ, ಚಿತ್ರರಂಗದಲ್ಲಿ ಇನ್ನೂ ಏನೂ ಸಾಧಿಸಿ ಭೇದಿಸಿಲ್ಲ.

ನಿಜಾ. ಪ್ರೇಮ ಕುರುಡು. ಆದರೂ.. ಶ್ವೇತಾ ತಿವಾರಿ ಮತ್ತು ಸೈಫ್ ಅಲಿ ಖಾನ್ ಆಸ್ತಿಯನ್ನು ತಕ್ಕಡಿಯಲ್ಲಿ ತೂಗಿ ಹಾಕಿದರೆ, ಸೈಫ್ ಅಲಿ ಖಾನ್ ಸಂಪತ್ತು ಹೆಚ್ಚು ತೂಗುತ್ತೆ. ಹೀಗಾಗಿಯೇ ಅನೇಕರು ಈಗ ಪಲಕ್ ತಿವಾರಿ ಮತ್ತು ಇಬ್ರಾಹಿಂ ಅಲಿ ಖಾನ್ ಅವರ ದುಂಬಾಲು ಬಿದ್ದಿದ್ದಾರೆ. ಇಬ್ಬರ ಹಾವ-ಭಾವ-ನಡೆಯ ಮೇಲೆ ಕಣ್ಣಿಟ್ಟಿದ್ಧಾರೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ಕುರಿತು ಚರ್ಚೆಯನ್ನು ಮಾಡುತ್ತಿದ್ದಾರೆ.
ಹೀಗಿರುವಾಗ ಇಬ್ಬರು ಮತ್ತೊಮ್ಮೆ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ಧಾರೆ. ಆದರೆ ಈ ಬಾರಿ ಇಬ್ರಾಹಿಂ ಅಲಿ ಖಾನ್ ಅವರ ವರ್ತನೆ ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಹೌದು, ಅಸಲಿಗೆ ಪಲಕ್ ಮತ್ತು ಇಬ್ರಾಹಿಂ ಅಲಿ ಖಾನ್ ಮಲ್ಟಿಪ್ಲೆಕ್ಸ್‌ನಲ್ಲಿ ಯಾವುದೋ ಸಿನಿಮಾ ನೋಡಲು ತೆರಳಿದ್ದಾರೆ.
ಇನ್ನೂ ಆರಂಭದಲ್ಲಿಯೇ ಹೇಳಿದಂತೆ ಲೈಮ್ ಲೈಟ್‌ನಲ್ಲಿರಲು ಹಲವರು ಕಾಸು ಚೆಲ್ಲಿ ಪಾಪರಾಜಿಗಳನ್ನು ಕರೆಸಿಕೊಳ್ತಾರೆ. ಆಮೇಲೆ ಡ್ರಾಮಾ ಮಾಡ್ತಾರೆ. ಇಬ್ರಾಹಿಂ ಅಲಿ ಖಾನ್ ಕೂಡ ಈ ಕೆಟಗರಿಗೆ ಸೇರಿದವರಾ ಗೊತ್ತಿಲ್ಲ. ಆದರೆ ಕ್ಯಾಮರಾ ಕಂಡು ಬೆಚ್ಚಿ ಬಿದ್ದಂತೆ ವರ್ತಿಸಿದ್ದಾರೆ. ಆ ನಂತರ ಕ್ಯಾಮರಾದಲ್ಲಿ ಪಲಕ್ ಸೆರೆಯಾಗಬಾರದೆಂಬ ಉದ್ದೇಶದಿಂದ ಪಲಕ್ ಅವರನ್ನು ತಳ್ಳಿದ್ದಾರೆ.
ಇಬ್ರಾಹಿಂನ ಈ ನಡೆಯಿಂದ ಪಲಕ್ ಅಪ್ಸೆಟ್ ಆದಂತೆ ಕಂಡು ಬಂದಿದ್ದಾರೆ. ಆಗ ಇಬ್ರಾಹಿಂ ಅಲಿ ಖಾನ್ ಬೇಸ್ಮೆಂಟ್‌ದಿಂದ ಹೋಗುವಂತೆ ಪಲಕ್‌ಗೆ ಹೇಳಿದ್ದಾರೆ. ಆದರೆ ಇಬ್ರಾಹಿಂ ಪಲಕ್‌ನನ್ನೇನೋ ಹಿಂದೆ ತಳ್ಳಿದ್ದರೂ ಕೂಡ ಕ್ಯಾಮರಾದವರನ್ನು ತಳ್ಳಲು ಆಗಲಿಲ್ಲ. ತಡೆಯಲು ಆಗಲಿಲ್ಲ. ಒಳಗಡೆ ನುಗ್ಗಿ ಕೋಪದಲ್ಲಿ ನಿಂತಂತೆ ಇದ್ದ ಪಲಕ್‌ನ ತಮ್ಮ ಕ್ಯಾಮರಾದಲ್ಲಿ ಪಾಪರಾಜಿಗಳು ಸೆರೆ ಹಿಡಿದಿದ್ಧಾರೆ. ಇದರಿಂದ ಮುಜುಗರಕ್ಕೊಳಗಾಗುವ ಪಲಕ್ ಅಲ್ಲಿಂದ ಕೆಳಗಡೆ ಇಳಿದು ಹೊರಡುತ್ತಾರೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಲವರು ಪಲಕ್ ಅವರನ್ನು ತಳ್ಳಿದ್ದಕ್ಕೆ ಇಬ್ರಾಹಿಂ ಅಲಿ ಖಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರೀತಿ ಮಾಡಿದ ಮೇಲೆ ಯಾಕೆ ಹೆದರಬೇಕು..? ತನ್ನ ಪ್ರೀತಿ ವಿಷಯವನ್ನು ಮುಚ್ಚಿಡುತ್ತಿರುವುದಾದರೂ ಯಾಕೆ..? ಪಲಕ್ ಜೊತೆ ಲವ್ವಿ ಡವ್ವಿ ಶುರುವಾಗಿರುವ ವಿಚಾರ ಎಲ್ಲರಿಗೆ ಗೊತ್ತು, ಹೀಗಿರುವಾಗ ತನ್ನ ಪ್ರೇಯಸಿಯನ್ನು ಹೀಗೆ ತಳ್ಳುವುದು ಎಷ್ಟು ಸರಿ..? ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ.
ಕೆಲವರು ಲವ್ ಜಿಹಾದ್ ಆಂಗಲ್‌ನಲ್ಲಿಯೂ ಕೂಡ ಚರ್ಚೆ ಮಾಡುತ್ತಿದ್ದಾರೆ. ಇನ್ನು ಕೆಲವರು ಪಾಪರಾಜಿಗಳ ವಿರುದ್ಧ ಕಿಡಿ ಕಾರುತ್ತಿದ್ದು ಪ್ರೈವೆಸಿಗೆ ಧಕ್ಕೆ ತರ್ತಿದ್ದಾರೆ. ಸೆಲೆಬ್ರಿಟಿಗಳಿಗೂ ಸ್ವಂತ ಸ್ಪೇಸ್ ಇರಬೇಕಲ್ವಾ... ಏನಿದು, ಎಲ್ಲ ಕಡೆ ಕ್ಯಾಮೆರಾ ಹಿಡ್ಕೊಂಡು ನಿಂತಿರ್ತಾರೆ ಅಂತ ಆಕ್ರೋಶ ವ್ಯಕ್ತಪಡಿಸುತ್ತಿದ್ಧಾರೆ.


Click it and Unblock the Notifications