For Quick Alerts
  ALLOW NOTIFICATIONS  
  For Daily Alerts

  ಶಾರೂಖ್ ಖಾನ್ ಬರ್ತಡೇಗೆ ಸರ್ಪ್ರೈಸ್ ನೀಡಿದ ಬುರ್ಜ್ ಖಲೀಫಾ

  |

  ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ತಮ್ಮ 55ನೇ ಹುಟ್ಟುಹಬ್ಬವನ್ನು ಸೋಮವಾರ (ನವೆಂಬರ್ 2) ಆಚರಿಸಿಕೊಂಡಿದ್ದರು. ಸೂಪರ್ ಸ್ಟಾರ್ ಶಾರೂಖ್ ಸದ್ಯ ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಬ್ಯುಸಿ ಇದ್ದಾರೆ.

  ಹೀಗಾಗಿ, ತಮ್ಮ ಹುಟ್ಟುಹಬ್ಬವನ್ನು ಪತ್ನಿ ಹಾಗೂ ಮಕ್ಕಳ ಜೊತೆ ದುಬೈನಲ್ಲೇ ಸಂಭ್ರಮಿಸಿದ್ದಾರೆ.

  ಶಾರುಖ್ ಖಾನ್ ಹುಟ್ಟುಹಬ್ಬಕ್ಕೆ ಒಳ್ಳೆಯ ಉಡುಗೊರೆ ನೀಡಿದ ಜೂಹಿ ಚಾವ್ಲಾಶಾರುಖ್ ಖಾನ್ ಹುಟ್ಟುಹಬ್ಬಕ್ಕೆ ಒಳ್ಳೆಯ ಉಡುಗೊರೆ ನೀಡಿದ ಜೂಹಿ ಚಾವ್ಲಾ

  'ಕಿಂಗ್ ಆಫ್ ರೋಮ್ಯಾನ್ಸ್' ಎಂದು ಗುರುತಿಸಿಕೊಂಡಿರುವ ಶಾರೂಖ್‌ಗೆ ಅಭಿಮಾನಿಗಳು ಪ್ರೀತಿಯಿಂದ ಶುಭಕೋರಿದ್ದಾರೆ. ಈ ನಡುವೆ ದುಬೈನ ಐತಿಹಾಸಿಕ ಕಟ್ಟದ ಬುರ್ಜ್ ಖಲೀಫಾದ ಅಧಿಕಾರಿಗಳು ಶಾರೂಖ್ ಖಾನ್‌ಗೆ ವಿಶೇಷವಾದ ಗೌರವ ಅರ್ಪಿಸಿದ್ದಾರೆ.

  ವಿಶ್ವ ಖ್ಯಾತ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಬೆಳಕಿನ ಮೂಲಕ ಶಾರೂಖ್ ಖಾನ್ ಅವರ ಭಾವಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಹುಟ್ಟುಹಬ್ಬಕ್ಕೆ ವಿಶ್ ಮಾಡಲಾಗಿದೆ.

  ಬುರ್ಜ್ ಖಲೀಫಾ ಕಟ್ಟಡದ ಮುಂಭಾಗದಲ್ಲಿ ನಿಂತಿರುವಂತಹ ಫೋಟೋ ಕ್ಲಿಕ್ ಮಾಡಿರುವ ಶಾರೂಖ್, ಆ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.

  Iconic Burj Khalifa in Dubai honoured ShahRukh Khan

  ''ವಿಶ್ವದ ಅತಿದೊಡ್ಡ ಮತ್ತು ಎತ್ತರದ ಪರದೆಯಲ್ಲಿ ನನ್ನನ್ನು ನೋಡುವುದು ಸಂತೋಷವಾಗಿದೆ. ಇದರಿಂದ ನನ್ನ ಮಕ್ಕಳು ಪ್ರಭಾವಿತರಾಗಿದ್ದಾರೆ. ಇದನ್ನು ನಾನು ಇಷ್ಟಪಡುತ್ತೇನೆ'' ಎಂದು ಬರೆದುಕೊಂಡಿದ್ದಾರೆ.

  ACT 1978 : 60 ಲಕ್ಷದ ಸೆಟ್ ಹಾಕಿದ್ದು ನೋಡಿ ಪುನೀತ್ ರಾಜ್ ಕುಮಾರ್ ಖುಷಿ ಪಟ್ಟಿದ್ರು | Sanchari Vijay | Puneeth

  ಶಾರೂಖ್ ಖಾನ್ ಭಾವಚಿತ್ರಗಳೊಂದಿಗೆ ಸುಂದರವಾಗಿ ಬೆಳಗಿದ ಬುರ್ಜ್ ಖಲೀಫಾ ಜೊತೆ ಸುಹಾನಾ ತನ್ನ ತಂದೆಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಅದನ್ನು ಹಂಚಿಕೊಂಡಿದ್ದಾರೆ.

  English summary
  On ShahRukh Khan's 55th birthday, the iconic Burj Khalifa in Dubai honoured the superstar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X