ಸ್ಟಾರ್‌ ನಟರು ಮಧ್ಯರಾತ್ರಿ ಮನೆಗೆ ಕರೆಯುತ್ತಾರೆ: ಬಾಲಿವುಡ್‌ನ ಕರಾಳ ಮುಖ ಬಿಚ್ಚಿಟ್ಟ ಮಲ್ಲಿಕಾ ಶೆರಾವತ್

ಮಲ್ಲಿಕಾ ಶೆರಾವತ್, ಬಾಲಿವುಡ್ ಹಾಟ್ ನಾಯಕಿಯರಲ್ಲಿ ಒಬ್ಬರು. 'ಮರ್ಡರ್' ಸಿನಿಮಾದಲ್ಲಿ ಮಲ್ಲಿಕಾ ಶೆರಾವತ್ ತೋರಿಸಿದ್ದ ಗ್ಲಾಮರನ್ ಅನ್ನು ಸಿನಿಪ್ರೇಮಿಗಳು ಮರೆತಿರಲಿಕ್ಕಿಲ್ಲ.

ಗ್ಲಾಮರಸ್ ಅಪಿಯರೆನ್ಸ್‌ನಿಂದಲೇ ಹಲವು ಅವಕಾಶಗಳನ್ನು ಗಳಿಸಿಕೊಂಡ ಮಲ್ಲಿಕಾ ಶೆರಾವತ್ ಆ ಬಳಿಕ ಹಾಲಿವುಡ್ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡರು. ಆ ನಂತರ ಒಮ್ಮೆಲೆ ಬಾಲಿವುಡ್‌ನಿಂದ ಮರೆಯಾದರು ಸಹ.

ಇದೀಗ ಆಗೊಮ್ಮೆ ಈಗೊಮ್ಮೆ ಹಿಂದಿ ಸಿನಿಮಾ ವೆಬ್ ಸರಣಿಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಮಲ್ಲಿಕಾ ಶೆರಾವತ್ ಅಚಾನಕ್ಕಾಗಿ ಬಾಲಿವುಡ್‌ ಎ ಗ್ರೇಡ್ ನಟರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 'ಬಾಲಿವುಡ್ ನಟರು, ನಟಿಯರನ್ನು ಮಧ್ಯರಾತ್ರಿ ಮನೆಗೆ ಕರೆಯುತ್ತಾರೆ' ಎಂದಿದ್ದಾರೆ.

''ಹಲವು ನಟರು ನನ್ನೊಟ್ಟಿಗೆ ನಟಿಸಲು ನಿರಾಕರಿಸಿದರು''

''ಹಲವು ನಟರು ನನ್ನೊಟ್ಟಿಗೆ ನಟಿಸಲು ನಿರಾಕರಿಸಿದರು''

ಮಲ್ಲಿಕಾ ಶೆರಾವತ್ ನಟಿಸಿರುವ 'ಆರ್‌ಕೆ/ಆರ್ಕೆ' ಸಿನಿಮಾ ಬಿಡುಗಡೆ ಆಗಲಿದ್ದು, ಈ ಸಂಬಂಧ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಮಲ್ಲಿಕಾ ಶೆರಾವತ್, ''ಎಲ್ಲ ಎ ಗ್ರೇಡ್ ನಟರು ನನ್ನೊಟ್ಟಿಗೆ ನಟಿಸಲು ನಿರಾಕರಿಸಿದರು ಕಾರಣ ನಾನು ಕಾಂಪ್ರಮೈಸ್ ಮಾಡಿಕೊಳ್ಳಲಿಲ್ಲ. ನಟರಿಗೆ ಅವರು ನಿಯಂತ್ರಿಸಬಲ್ಲ ನಟಿಯರ ಬೇಕು. ಅವರು ಹೇಳಿದಂತೆ ಕೇಳಬೇಕು, ಅವರೊಟ್ಟಿಗೆ ಕಾಂಪ್ರಮೈಸ್ ಮಾಡಿಕೊಳ್ಳಬೇಕು ಆದರೆ ನಾನು ಅದಕ್ಕೆ ತಯಾರಿರಲಿಲ್ಲ, ನನ್ನ ವ್ಯಕ್ತಿತ್ವ ಅಂಥಹುದ್ದಲ್ಲ'' ಎಂದಿದ್ದಾರೆ ಮಲ್ಲಿಕಾ.

ಮಧ್ಯ ರಾತ್ರಿ ಕರೆ ಮಾಡಿದರೆ ಹೋಗಬೇಕು: ಮಲ್ಲಿಕಾ

ಮಧ್ಯ ರಾತ್ರಿ ಕರೆ ಮಾಡಿದರೆ ಹೋಗಬೇಕು: ಮಲ್ಲಿಕಾ

'ಕಾಂಪ್ರಮೈಸ್' ಎಂದರೆ ಅರ್ಥವೇನು ವಿವರಿಸಿ ಹೇಳಿ ಎಂಬ ಪ್ರಶ್ನೆಗೆ ಉತ್ತರಿಸಿರುವ ಮಲ್ಲಿಕಾ, 'ಕಾಂಪ್ರಮೈಸ್ ಎಂದರೆ ಎಲ್ಲವೂ ಅವರು ಹೇಳಿದಂತೆ ಕೇಳುವುದು ನಡೆದುಕೊಳ್ಳುವುದು. ಅಷ್ಟೇ ಅಲ್ಲ, ನಾಯಕ ಮಧ್ಯ ರಾತ್ರಿ 3 ಗಂಟೆಗೆ ಕರೆ ಮಾಡಿ ಮನೆಗೆ ಬಾ ಎಂದರೆ ಹೋಗಬೇಕು. ನೀವು ಆತನೊಟ್ಟಿಗೆ ಸಿನಿಮಾ ಮಾಡುತ್ತಿದ್ದರೆ ನೀವು ಅವನು ಕರೆದಲ್ಲಿಗೆ ಹೋಗಲೇ ಬೇಕು ಇಲ್ಲವಾದರೆ ನಟಿಯನ್ನು ಸಿನಿಮಾದಿಂದ ಹೊರಗೆ ಹಾಕಲಾಗುತ್ತದೆ'' ಎಂದಿದ್ದಾರೆ ಮಲ್ಲಿಕಾ.

ಕೆಲವು ಕೆಟ್ಟ ನಿರ್ಣಯಗಳನ್ನು ಮಾಡಿದ್ದೇನೆ: ಮಲ್ಲಿಕಾ ಶೆರಾವತ್

ಕೆಲವು ಕೆಟ್ಟ ನಿರ್ಣಯಗಳನ್ನು ಮಾಡಿದ್ದೇನೆ: ಮಲ್ಲಿಕಾ ಶೆರಾವತ್

ಬಾಲಿವುಡ್‌ನಲ್ಲಿ ಹೆಚ್ಚು ತೊಡಗಿಸಿಕೊಳ್ಳದೆ ಇರುವ ಬಗ್ಗೆಯೂ ಮಾತನಾಡಿರುವ ಮಲ್ಲಿಕಾ ಶೆರಾವತ್, ''ನಾನು ನನಗೆ ಸಾಧ್ಯವಾದ ಮಟ್ಟಿಗೆ ಹೆಚ್ಚು ನಟಿಸಲು ಪ್ರಯತ್ನಿಸಿದ್ದೇನೆ. ಕೆಲವು ಒಳ್ಳೆಯ ಸಿನಿಮಾಗಳನ್ನು ಮಾಡಿದ್ದೇನೆ. ಕೆಲವು ಕೆಟ್ಟ ಸಿನಿಮಾಗಳನ್ನು ಸಹ ಮಾಡಿದ್ದೇನೆ. ಎಲ್ಲ ನಟ-ನಟಿಯರಂತೆ ನಾನೂ ಸಹ ತಪ್ಪುಗಳನ್ನು ಮಾಡಿದ್ದೇನೆ. ಕೆಲವು ಒಳ್ಳೆಯ ಪಾತ್ರಗಳನ್ನು ಆಯ್ಕೆ ಮಾಡಿದ್ದೇನೆ, ಕೆಲವು ಕೆಟ್ಟ ಪಾತ್ರಗಳಲ್ಲಿಯೂ ನಟಿಸಿದ್ದೇನೆ. ಸಿನಿಮಾ ನಟಿಯ ಜೀವನದಲ್ಲಿ ಇದು ಸಾಮಾನ್ಯ. ಆದರೆ ಒಟ್ಟಾರೆ ನನ್ನ ಜರ್ನಿ ಬಗ್ಗೆ ನನಗೆ ತೃಪ್ತಿಯಿದೆ'' ಎಂದಿದ್ದಾರೆ.

''ಜಾಕಿ ಚಾನ್ ಜೊತೆ ನಟಿಸಿದೆ, ಎರಡು ಬಾರಿ ಒಬಾಮಾ ಭೇಟಿ ಮಾಡಿದೆ''

''ಜಾಕಿ ಚಾನ್ ಜೊತೆ ನಟಿಸಿದೆ, ಎರಡು ಬಾರಿ ಒಬಾಮಾ ಭೇಟಿ ಮಾಡಿದೆ''

''ನಾನು ಹರ್ಯಾಣ ಮೂಲದವಳು, ನಾನು 'ಮರ್ಡರ್' ಸಿನಿಮಾ ಮಾಡಿದ ಬಳಿಕ ಜಾಕಿ ಚಾನ್ ನನ್ನನ್ನು ತಮ್ಮ ಸಿನಿಮಾದಲ್ಲಿ ಹಾಕಿಕೊಂಡರು. ನಾನು ಎರಡು ಬಾರಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಭೇಟಿ ಮಾಡಿದೆ. ಎರಡು ದಶಕಗಳಿಂದ ನಾನು ಮನೊರಂಜನಾ ಉದ್ಯಮದಲ್ಲಿದ್ದೇನೆ. ಈ ಅವಧಿಯಲ್ಲಿ ನನ್ನನ್ನು ಹುಡುಕಿ ಬಂದ ಅವಕಾಶಗಳ ಬಗ್ಗೆ ನನಗೆ ಖುಷಿ ಇದೆ'' ಎಂದಿದ್ದಾರೆ. ಮಲ್ಲಿಕಾ ಶೆರಾವತ್, ಹಾಲಿವುಡ್ ಸಿನಿಮಾಗಳಾದ 'ದಿ ಮಿತ್', 'ಹಿಸ್', 'ಪಾಲಿಟಿಕ್ಸ್ ಆಫ್ ಲವ್', 'ಟೈಮ್ ರೈಡರ್ಸ್' ಸಿನಿಮಾಗಳಲ್ಲಿ ನಟಿಸಿದ್ದಾರೆ.

More from Filmibeat

English summary
Bollywood actress Mallika Sherawat said If hero calls heroine at mid night and ask to come to his home heroine should go.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X