Don't Miss!
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- News
ಭಾರತ್ ಜೋಡೋ ಯಾತ್ರೆ: ಸಂಭ್ರಮಾಚರಣೆಯ ಉತ್ಸಾಹ ಕುಗ್ಗುವ ಸಾಧ್ಯತೆ
- Technology
ಬೆಸ್ಟ್ ಕ್ಯಾಮೆರಾ ಫೋನ್ ಖರೀದಿಸಬೇಕೆ?..ಹಾಗಿದ್ರೆ, ಸ್ವಲ್ಪ ಕಾಯುವುದು ಉತ್ತಮ!
- Sports
BGT 2023: ಭಾರತದ ಸ್ಪಿನ್ ದಾಳಿ ಭಯ: ಆಸ್ಟ್ರೇಲಿಯಾ ಆಟಗಾರರು ಮಾಡ್ತಿರೋದೇನು?
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ಟೈಗರ್ ಶ್ರಾಫ್ ಜೊತೆ ಡೇಟಿಂಗ್.. ಪ್ರಭಾಸ್ ಜೊತೆ ಮದುವೆ": ಕೃತಿ ಸನೂನ್ ಹೇಳಿಕೆ ವೈರಲ್
ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಹಾಗೂ ಬಾಲಿವುಡ್ ನಟಿ ಕೃತಿ ಸನೂನ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿ ಕೆಲ ದಿನಗಳ ಹಿಂದೆ ಭಾರೀ ಸದ್ದು ಮಾಡಿತ್ತು. ಇದೀಗ ನಟಿ ಕೃತಿ ಒಂದು ವೇಳೆ ಅವಕಾಶ ಸಿಕ್ಕಿರೆ ಪ್ರಭಾಸ್ ಜೊತೆ ಮದುವೆ ಆಗ್ತೀನಿ ಎಂದಿದ್ದಾರೆ.
ಪ್ರಭಾಸ್ ಹಾಗೂ ಕೃತಿ 'ಆದಿಪುರುಷ್' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಹಾಗಾಗಿ ಈ ಹಿಂದೆ ಕೃತಿ ಸನೂನ್ ಮಾತನಾಡಿದ್ದ ವಿಡಿಯೋವೊಂದು ಈಗ ವೈರಲ್ ಆಗುತ್ತಿದೆ. ಸದ್ಯ 'ಬೇಡಿಯಾ' ಸಿನಿಮಾ ಪ್ರಮೋಷನ್ನಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಈ ವಾರ ಹಾರರ್ ಕಾಮಿಡಿ 'ಬೇಡಿಯಾ' ಸಿನಿಮಾ ಬಿಡುಗಡೆಯಾಗಿದೆ. ಚಿತ್ರದಲ್ಲಿ ವರುಣ್ ಧವನ್ ಜೊತೆ ಕೃತಿ ಸನೂನ್ ಮಿಂಚಿದ್ದಾರೆ. ಅಮರ್ ಕೌಶಿಕ್ ನಿರ್ದೇಶನದ ಈ ಚಿತ್ರವನ್ನು ಮಡೋಕ್ ಫಿಲ್ಮ್ಸ್ ಹಾಗೂ ಜಿಯೋ ಸ್ಟುಡಿಯೋ ಸಂಸ್ಥೆ ಜಂಟಿಯಾಗಿ ನಿರ್ಮಿಸಿದೆ.
"ನಾನು
ಕತೆ
ಬರೆಯುವುದಿಲ್ಲ..
ಕದಿಯುತ್ತೇನೆ":
ರಾಜಮೌಳಿ
ತಂದೆ
ವಿಜಯೇಂದ್ರ
ಪ್ರಸಾದ್
ಹೇಳಿಕೆ
ವೈರಲ್
ಕೆಲ ದಿನಗಳ ಹಿಂದ ಪ್ರಭಾಸ್ ಹಾಗೂ ಕೃತಿ ಸನೂನ್ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಗುಸುಗುಸು ಬಿಟೌನ್ ಗಲ್ಲಿಗಳಲ್ಲಿ ಕೇಳಿಬಂದಿತ್ತು. ಇದು ಬರೀ ಗಾಸಿಪ್ ಎಂದು ಪ್ರಭಾಸ್ ಅಭಿಮಾನಿಗಳು ಆರೋಪಿಸಿದ್ದರು. ಬೇಕು ಅಂತಲೇ ಬಾಲಿವುಡ್ ಮಂದಿ ಚೀಪ್ ಪ್ರಮೋಷನ್ ಗಿಮಿಕ್ ಮಾಡುತ್ತಿದ್ದಾರೆ ಎಂದಿದ್ದರು.

ಪ್ರಭಾಸ್ನ ಮದುವೆ ಆಗ್ತೀನಿ!
ಈ ತಿಂಗಳ ಹಿಂದೆ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಅವಕಾಶ ಸಿಕ್ಕರೆ ಪ್ರಭಾಸ್ ಜೊತೆ ಮದುವೆ ಆಗುತ್ತೀನಿ ಎಂದು ಕೃತಿ ಸನೂನ್ ಹೇಳಿದ್ದರು. ನಿರೂಪಕಿ ಒಂದು ವೇಳೆ ಅವಕಾಶ ಸಿಕ್ಕರೆ ಟೈಗರ್ ಶ್ರಾಫ್, ಪ್ರಭಾಸ್, ಕಾರ್ತಿಕ್ ಮೂವರಲ್ಲಿ ಯಾರನ್ನು ಮದುವೆ ಆಗ್ತೀರಾ? ಯಾರಯ ಜೊತೆ ಡೇಟಿಂಗ್ ಹೋಗ್ತಿರಾ? ಯಾರೊಟ್ಟಿಗೆ ಫ್ಲರ್ಟ್ ಮಾಡ್ತೀರಾ?" ಎನ್ನುವ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಕೃತಿ "ಕಾರ್ತಿಕ್ ಆರ್ಯನ್ ಜೊಯೆ ಫ್ಲರ್ಟ್, ಟೈಗರ್ ಶ್ರಾಫ್ ಜೊತೆ ಡೇಟಿಂಗ್ ಮಾಡ್ತೀನಿ, ಪ್ರಭಾಸ್ನ ಮದುವೆ ಆಗ್ತೀನಿ" ಎಂದಿದ್ದರು. ಆ ವಿಡಿಯೋ ಈಗ ಮತ್ತೊಮ್ಮೆ ವೈರಲ್ ಆಗಿದೆ.

ರಾಮ-ಸೀತೆಯಾಗಿ ನಟನೆ
ಓಂ ರಾವುತ್ ನಿರ್ದೇಶನದ 'ಆದಿಪುರುಷ್' ಚಿತ್ರದಲ್ಲಿ ಪ್ರಭಾಸ್ ಹಾಗೂ ಕೃತಿ ಸನೂನ್ ಒಟ್ಟೊಗೆ ನಟಿಸಿದ್ದಾರೆ. ರಾಮಾಯಣ ಕಾವ್ಯ ಆಧರಿಸಿ ಈ ಸಿನಿಮಾ ನಿರ್ಮಾಣವಾಗಿದೆ. ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಂಡರೆ ಕೃತಿ ಸೀತಾದೇವಿ ಆಗಿ ಮಿಂಚಿದ್ದಾರೆ. ಸೈಫ್ ಅಲಿ ಖಾನ್ ರಾವಣಾಸುರನಾಗಿ ಅಬ್ಬರಿಸಿದ್ದಾರೆ. ಕಾರಣಾಂತರಗಳಿಂದ ಈ ಸಿನಿಮಾ ರಿಲೀಸ್ ಡೇಟ್ ಪದೇ ಪದೇ ಪೋಸ್ಟ್ಪೋನ್ ಆಗುತ್ತಿದೆ.

'ಆದಿಪುರುಷ್' ತಡವಾಗಲು ಕಾರಣ ಏನು?
ಇನ್ನು 'ಆದಿಪುರುಷ್' ಸಿನಿಮಾ ರಿಲೀಸ್ ತಡವಾಗಲು ಕಾರಣ ಏನು ಎನ್ನುವುದನ್ನು ಕೃತಿ ಸನೂನ್ ಹೇಳಿದ್ದಾರೆ. "ಆದಿಪುರುಷ್' ಸಿನಿಮಾ ಔಟ್ಫುಟ್ ಬಗ್ಗೆ ಚಿತ್ರತಂಡಕ್ಕೆ ಬಹಳ ಹೆಮ್ಮೆ ಇದೆ. ಇದು ಬಹಳ ಶ್ರೇಷ್ಠವಾದ ಸಿನಿಮಾ. ಇದು ನಾವೆಲ್ಲರೂ ಗರ್ವಪಡುವಂತಹ ಕಥೆ. ನಮ್ಮ ಚರಿತ್ರೆಯ ಭಾಗ. ಹಾಗಾಗಿ ಈ ಚಿತ್ರವನ್ನು ಸಾಧ್ಯವಾದಷ್ಟು ಉತ್ತಮವಾಗಿ ತೆರೆಗೆ ತರಬೇಕು ಎನ್ನುವ ಕಾರಣಕ್ಕೆ ಸಿನಿಮಾ ರಿಲೀಸ್ ಡೇಟ್ ಪೋಸ್ಟ್ಪೋನ್ ಆಗಿದೆ" ಎಂದು ನಟಿ ವಿವರಿಸಿದ್ದಾರೆ.

ಜೂನ್ 12ಕ್ಕೆ 'ಆದಿಪುರುಷ್' ರಿಲೀಸ್
ಕೆಲ ದಿನಗಳ ಹಿಂದೆ ರಿಲೀಸ್ ಆಗಿದ್ದ 'ಆದಿಪುರುಷ್' ಸಿನಿಮಾ ಟೀಸರ್ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಚಿತ್ರದ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತವಾಗಿತ್ತು. ಚಿತ್ರದಲ್ಲಿ ಪಾತ್ರಗಳನ್ನು ತಪ್ಪಾಗಿ ಬಿಂಬಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು.ಈ ಕುರಿತು ದೂರು ಕೂಡ ದಾಖಲಾಗಿತ್ತು. ಅದೇ ಕಾರಣಕ್ಕೆ ಚಿತ್ರವನ್ನು ರೀಶೂಟ್ ಮಾಡಿ ರೀ ವರ್ಕ್ ಮಾಡಿ ತಿದ್ದಿ ತೀಡಿ ಪ್ರೇಕ್ಷಕರು ಮೆಚ್ಚುವಂತೆ ಕಟ್ಟಿಕೊಡುವ ಪ್ರಯತ್ನ ನಡೀತಿದೆ. ಜೂನ್ 12ಕ್ಕೆ ಸಿನಿಮಾ ತೆರೆಗೆ ತರುವುದಾಗಿ ತಂಡ ಘೋಷಿಸಿದೆ.

100 ಮಿಲಿಯನ್ ವೀವ್ಸ್ ಸಾಧಿಸಿದ್ದ ಟೀಸರ್
'ಆದಿಪುರುಷ್' ಟೀಸರ್ ಸಿಕ್ಕಾಪಟ್ಟೆ ಟ್ರೋಲ್ ಆದರೂ ಕೂಡ ಅಭಿಮಾನಿಗಳು ಮುಗಿಬಿದ್ದು ಟೀಸರ್ ನೋಡಿದ್ದರು. ಬರೀ ಹಿಂದಿ ಟೀಸರ್ ಕೆಲವೇ ದಿನಗಳಲ್ಲಿ 10 ಕೋಟಿ ವೀವ್ಸ್ ಸಾಧಿಸಿ ದಾಖಲೆ ಬರೆದಿದೆ. ಪ್ರಭಾಸ್ ಕ್ರೇಜ್ ಏನು ಎನ್ನುವುದನ್ನು ಸಾಬೀತು ಮಾಡಿದೆ. ಇದೇ ಕಾರಣಕ್ಕೆ ಮತ್ತಷ್ಟು ವೆಚ್ಚ ಆದರೂ ಪರವಾಗಿಲ್ಲ, ಎಂದು ಸಿನಿಮಾ ರೀಶೂಟ್ ಮಾಡಲಾಗುತ್ತಿದೆ.