For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಗೆ ಜಾಮೀನು ಸಿಕ್ಕಿಲ್ಲ ಅಂದ್ರೆ 800 ಕೋಟಿ ನಷ್ಟ.! ಎಲ್ಲಿಂದ ಎಷ್ಟು ಕೋಟಿ.?

  By Bharath Kumar
  |

  ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗೆ ಐದು ವರ್ಷ ಜೈಲು ಶಿಕ್ಷೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಲ್ಲು ಪರ ವಕೀಲರು ಜೋಧ್ ಫುರ್ ನ್ಯಾಯಾಲಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್ ತೀರ್ಪನ್ನ ನಾಳೆಗೆ ಕಾಯ್ದಿರಿಸಿದೆ.

  ಈಗ ಎಲ್ಲರ ಚಿತ್ತ ನಾಳೆ ಕೊರ್ಟ್ ನೀಡಲಿರುವ ತೀರ್ಪಿನ ಮೇಲೆ ಇದೆ. ಈ ಮಧ್ಯೆ ಬಾಲಿವುಡ್ ನಿರ್ಮಾಪಕರಿಗೆ ದೊಡ್ಡ ತಲೆನೋವು ಉಂಟಾಗಿದೆ. ಸಲ್ಲುಗೆ ಜಾಮೀನು ಸಿಗುತ್ತಾ...? ಇಲ್ವಾ...? ಎಂಬ ಆತಂಕ ಕಾಡುತ್ತಿದೆ.

  ಯಾಕಂದ್ರೆ, ಸಲ್ಲು ಮೇಲೆ ಕೋಟಿ ಕೊಟಿ ಬಂಡವಾಳ ಹಾಕಿ ಕುಳಿತರುವ ನಿರ್ಮಾಪಕರು ದಾರಿ ಕಾಣದಂತಾಗಿದ್ದಾರೆ. ಹಿಂದಿಯ ಖ್ಯಾತ ವಿಶ್ಲೇಷಕ ಕೋಮಲ್ ನೆಹ್ತಾ ಅವರು ಹೇಳಿರುವ ಪ್ರಕಾರ ಸಲ್ಮಾನ್ ಗೆ ಜಾಮೀನು ಸಿಗದೇ ಹೋದ್ರೆ ಸುಮಾರು 800 ಕೋಟಿ ನಷ್ಟವಾಗಲಿದೆ ಎಂದಿದ್ದಾರೆ. ಹಾಗಿದ್ರೆ, ಯಾವ ಚಿತ್ರದಿಂದ ಎಷ್ಟು ಕೋಟಿ ನಷ್ಟವಾಗಲಿದೆ ಎಂಬುದನ್ನ ತಿಳಿಯಲು ಮುಂದೆ ಓದಿ....

  125 ಕೋಟಿಯ 'ರೇಸ್ -3'

  125 ಕೋಟಿಯ 'ರೇಸ್ -3'

  ಸಲ್ಮಾನ್ ಖಾನ್ ಅಭಿನಯದ 'ರೇಸ್ -3' ಸಿನಿಮಾ ಬಹುತೇಕ ಶೂಟಿಂಗ್ ಮುಗಿದಿದೆ. ಇನ್ನು ನಾಲ್ಕೈದು ದಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಜೂನ್ 14 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಚಿತ್ರದ ಬಜೆಟ್ ಸುಮಾರು 125 ಕೋಟಿ. ಒಂದು ವೇಳೆ ಸಲ್ಲು ಜೈಲಿನಲ್ಲೇ ಇದ್ರೆ ಈ ಸಿನಿಮಾ ಗತಿಯೇನು ಎಂಬುದು ಚಿಂತೆಯಾಗಿದೆ.

  ಸಲ್ಮಾನ್ ಖಾನ್ ಪರ ನಿಂತ ನಟಿ ಜಯಾಬಚ್ಚನ್ಸಲ್ಮಾನ್ ಖಾನ್ ಪರ ನಿಂತ ನಟಿ ಜಯಾಬಚ್ಚನ್

  250 ಕೋಟಿಯ 'ಭಾರತ್'

  250 ಕೋಟಿಯ 'ಭಾರತ್'

  ಸಲ್ಮಾನ್ ಖಾನ್ ಸಂಬಂಧಿ ಅತುಲ್ ಅಗ್ನೋತ್ರಿ ನಿರ್ಮಾಣದಲ್ಲಿ 'ಭಾರತ್' ಎಂಬ ಚಿತ್ರವನ್ನ ಸಲ್ಲು ಒಪ್ಪಿಕೊಂಡಿದ್ದಾರೆ. ಈ ಚಿತ್ರದ ಬಜೆಟ್ 250 ಕೋಟಿ. ಇದು ಜೂನ್ ತಿಂಗಳಲ್ಲಿ ಸೆಟ್ಟೇರಬೇಕಿದೆ. ಕೊರಿಯನ್ ಹಿಟ್ ಸಿನಿಮಾ 'ಓಡ್ ಟು ಮೈ ಫಾದರ್' ಚಿತ್ರದ ರೀಮೇಕ್ ಎನ್ನಲಾಗಿದೆ.

  ಸಲ್ಲುಗೆ 5 ವರ್ಷ ಜೈಲು: ನಿರ್ಮಾಪಕರಿಗೆ ಎಷ್ಟು ನಷ್ಟ.? ಸಲ್ಲುಗೆ 5 ವರ್ಷ ಜೈಲು: ನಿರ್ಮಾಪಕರಿಗೆ ಎಷ್ಟು ನಷ್ಟ.?

  100 ಕೋಟಿಯ 'ಕಿಕ್-2' ಸೀಕ್ವೆಲ್

  100 ಕೋಟಿಯ 'ಕಿಕ್-2' ಸೀಕ್ವೆಲ್

  'ಕಿಕ್-2' ಚಿತ್ರದ ಸೀಕ್ವೆಲ್ ಗೆ ಸಲ್ಲು ಸಜ್ಜಾಗಿದ್ದಾರೆ. 100 ಕೋಟಿ ಬಜೆಟ್ ನಲ್ಲಿ ಈ ಸಿನಿಮಾ ಮಾಡಲು ಪ್ಲಾನ್ ಮಾಡಿದ್ದಾರೆ. 2019ರ ಜನವರಿಯಲ್ಲಿ ಆರಂಭಿಸಿ, ಕ್ರಿಸ್ ಮಸ್ ವೇಳೆ ಈ ಚಿತ್ರವನ್ನ ಬಿಡುಗಡೆ ಮಾಡುವ ಪ್ಲಾನ್ ಮಾಡುತ್ತಿದ್ದಾರೆ.

  'ದಬಾಂಗ್-3' ಚಿತ್ರಕ್ಕೆ ನಡೆದಿದೆ ಸಿದ್ದತೆ.!

  'ದಬಾಂಗ್-3' ಚಿತ್ರಕ್ಕೆ ನಡೆದಿದೆ ಸಿದ್ದತೆ.!

  ಇನ್ನು 'ದಬಾಂಗ್' ಚಿತ್ರತಂಡದಿಂದ 'ದಬಾಂಗ್-3' ಸಿನಿಮಾ ಮಾಡಲಾಗುತ್ತಿದ್ದು, ಈಗಾಗಲೇ ಪ್ರಿ-ಪ್ರಡೊಕ್ಷನ್ ಕೆಲಸ ಜರುಗುತ್ತಿದೆ. ಅರ್ಬಾಜ್ ಖಾನ್ ಈ ಚಿತ್ರಕ್ಕೆ ದುಡ್ಡು ಹಾಕುತ್ತಿದ್ದು, ರಿಲೀಸ್ ಡೇಟ್ ಘೋಷಣೆ ಮಾಡಿಲ್ಲ. ಪ್ರಭುದೇವ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು, ಈದ್ ಹಬ್ಬಕ್ಕೆ ಸಿನಿಮಾ ಸೆಟ್ಟೇರಬೇಕಿದೆ.

  ಸಲ್ಮಾನ್ ಕೃಷ್ಣಮೃಗ ಬೇಟೆಯಾಡಲು ಪ್ರಚೋದನೆ ನೀಡಿದ್ದೇ ಈ ನಟಿಯಂತೆ.!ಸಲ್ಮಾನ್ ಕೃಷ್ಣಮೃಗ ಬೇಟೆಯಾಡಲು ಪ್ರಚೋದನೆ ನೀಡಿದ್ದೇ ಈ ನಟಿಯಂತೆ.!

  ತಂಗಿ ಪತಿಗಾಗಿ ಸಿನಿಮಾ

  ತಂಗಿ ಪತಿಗಾಗಿ ಸಿನಿಮಾ

  ಇನ್ನು ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಅವರ ಪತಿ ಆಯುಶ್ ಶರ್ಮಾ ಅವರನ್ನ ಲಾಂಚ್ ಮಾಡಲು ಸಲ್ಲು ನಿರ್ಧರಿಸಿದ್ದು, 'ಲವ್ ರಾತ್ರಿ' ಎಂಬ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಚಿತ್ರವೂ ಇದೇ ವರ್ಷ ಸೆಟ್ಟೇರಬೇಕಿದೆ.

  ಸಲ್ಮಾನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಅಂತ್ಯ: ನಾಳೆ ತೀರ್ಪು ಸಲ್ಮಾನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಅಂತ್ಯ: ನಾಳೆ ತೀರ್ಪು

  78 ಕೋಟಿ ಟಿವಿ ಶೋ

  78 ಕೋಟಿ ಟಿವಿ ಶೋ

  ಧಮ್ ಕ ದಸ್ ಎಂಬ ಕಿರುತೆರೆ ಶೋ ಒಪ್ಪಿಕೊಂಡಿರುವ ಸಲ್ಮಾನ್ ಖಾನ್ 20 ಎಪಿಸೋಡ್ ಗೆ 78 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ. ಇದಾದ ನಂತರ ಬಿಗ್ ಬಾಸ್ ಆರಂಭವಾಗಲಿದೆ.

  232 ಕೋಟಿ ವ್ಯವಹಾರ

  232 ಕೋಟಿ ವ್ಯವಹಾರ

  ಇನ್ನು 2017ನೇ ಸಾಲಿನಲ್ಲಿ ವಿವಿಧ ಉದ್ಯಮಗಳಿಂದ ಸುಮಾರು 232 ಕೋಟಿ ಆದಾಯ ಗಳಿಸಿದ್ದರು. ಅಂದ್ರೆ, ಈ ವರ್ಷದ ಆದಾಯದ ಮೇಲೆ ಇದು ಪರಿಣಾಮ ಬೀರಲಿದೆ ಎಂಬುದನ್ನ ವಿಶ್ಲೇಷಕ ಕೋಮಲ್ ನೆಹ್ತಾ ಅಭಿಪ್ರಾಯ ಪಟ್ಟಿದ್ದಾರೆ.

  English summary
  If salman khan doesn't get bail in Blackbuck poaching case, it'll be a huge loss. There are only a few superstars who guarantee not just success, but big success," said Bollywood trade analyst Komal Nahta.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X