IIFA 2025 ; ಯಾರಿಗೆ ಒಲಿಯಲಿದೆ ಈ ಬಾರಿ ಐಫಾ ಪ್ರಶಸ್ತಿ, ಇಲ್ಲಿದೆ ಸಂಪೂರ್ಣ ಮಾಹಿತಿ...!
ಹಾಲಿವುಡ್‌ನವರಿಗೆ ಆಸ್ಕರ್ ಹೇಗೋ ಬಾಲಿವುಡ್‌ನವರಿಗೆ ಐಫಾ ಮತ್ತು ಸೈಮಾ ಪ್ರಶಸ್ತಿ ಸಮಾರಂಭಗಳು ಹಾಗೇ. ಆಸ್ಕರ್ ಗೆಲ್ಲದೇ ಇದ್ದರೂ ಪರವಾಗಿಲ್ಲ ಕೊನೆ ಪಕ್ಷ ಸೈಮಾ ಅಥವಾ ಐಫಾದಲ್ಲಿ ಒಂದು ಗೆದ್ದರೆ ಬದುಕು ಸಾರ್ಥಕ ಎಂದುಕೊಂಡ ಅನೇಕ ತಾರೆಯರು ಹಿಂದಿ ಉದ್ಯಮದಲ್ಲಿ ಇದ್ದಾರೆ.
ಈ ಎರಡು ಕಾರ್ಯಕ್ರಮಗಳ ಆಯೋಜಕರಿಗೆ ಈ ವಿಚಾರ ಚೆನ್ನಾಗಿಯೇ ಗೊತ್ತಿದೆ. ಹೀಗಾಗಿಯೇ ಪ್ರತೀ ವರ್ಷ ಬೇರೆಬೇರೆ ದೇಶಕ್ಕೆ ಕರೆದುಕೊಂಡು ಹೋಗುವ ಇವರು ದೊಡ್ಡ ದೊಡ್ಡ ಸ್ಟಾರ್‌ಗಳಿಂದ ಕುಣಿಸುತ್ತಾರೆ. ಸೂಪರ್ ಸ್ಟಾರ್‌ಗಳಿಂದ ಕಾರ್ಯಕ್ರಮದ ನಿರೂಪಣೆಯನ್ನು ಕೂಡ ಮಾಡಿಸುತ್ತಾರೆ. ಸದ್ಯ ಈ ವರ್ಷ ಈ ವೈಭವ ಈಗ ಮರುಸೃಷ್ಟಿಯಾಗಲಿದೆ. ಈ ವರ್ಷದ ನಾಮ ನಿರ್ದೇಶನದ ಪಟ್ಟಿ ಹೊರ ಬಿದ್ದಿದೆ.

ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಅಭಿನಯ ಹೀಗೆ ಹತ್ತು ವಿಭಾಗಗಳಲ್ಲಿ ನೀಡಲಾಗುವ ಈ ಪ್ರಶಸ್ತಿ ಸಮಾರಂಭ ಈ ಬಾರಿ ಜೈಪುರದಲ್ಲಿ ನಡೆಯಲಿದೆ. ಇನ್ನು, ಐಫಾ ಪ್ರಶಸ್ತಿ ಸಮಾರಂಭಕ್ಕೆ ಈಗ 25ರ ಹರೆಯ. 2000ನೇ ಇಸ್ವಿಯಲ್ಲಿ ಮೊದಲ ಬಾರಿ ಲಂಡನ್‌ನಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಈ ಹಿನ್ನೆಲೆ 25ನೇ ವರ್ಷದ ಸಂಭ್ರಮಾಚರಣೆಯನ್ನು ಸ್ಮರಣಿಯವನ್ನಾಗಿಸಲು ಹಲವು ಸ್ಟಾರ್‌ಗಳಿಂದ ಡ್ಯಾನ್ಸ್ ಮಾಡಿಸಲಿದೆ. ಕರಣ್ ಜೋಹರ್ ಮತ್ತು ಕಾರ್ತಿಕ್ ಆರ್ಯನ್‌ಗೆ ನಿರೂಪಣೆಯ ಜವಾಬ್ದಾರಿಯನ್ನು ವಹಿಸಿದೆ.
ಇನ್ನು ನಾಮ ನಿರ್ದೇಶನದ ವಿಚಾರಕ್ಕೆ ಬಂದರೆ ಕಳೆದ ವರ್ಷ ಬಿಡುಗಡೆಯಾಗಿದ್ದ ಲಾಪತಾ ಲೇಡೀಸ್, ಸ್ತ್ರೀ 2 ಮತ್ತು ಭೂಲ್ ಭೂಲಯ್ಯ 3 ಅತೀ ಹೆಚ್ಚು ವಿಭಾಗಗಳಲ್ಲಿ ನಾಮಿನೇಟ ಆಗಿವೆ. ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಲಾಪತಾ ಲೇಡೀಸ್, ಸ್ತ್ರೀ 2 ಮತ್ತು ಭೂಲ್ ಭೂಲಯ್ಯ ಆಯ್ಕೆಯಾಗಿದ್ದು ಈ ಮೂರು ಚಿತ್ರಗಳ ಜೊತೆ ಕಿಲ್, ಆರ್ಟಿಕಲ್ 370, ಮತ್ತು ಶೈತಾನ್ ಚಿತ್ರಗಳು ಕೂಡ ರೇಸ್‌ನಲ್ಲಿವೆ.
ಅತ್ಯುತ್ತಮ ನಿರ್ದೇಶಕ ವಿಭಾಗದಲ್ಲಿ ಲಾಪತಾ ಲೇಡೀಸ್ ಚಿತ್ರದ ನಿರ್ದೇಶನಕ್ಕೆ ಕಿರ ಣ್ ರಾವ್ ಇದ್ದು ಇವರಿಗೆ ಕಿಲ್ ಚಿತ್ರದ ನಿಖಿಲ್ ನಾಗೇಶ್ ಭಟ್, ಸ್ತ್ರೀ 2 ಚಿತ್ರದ ಅಮರ್ ಕೌಶಿಕ್, ಫೈಟರ್ ಚಿತ್ರದ ಸಿದ್ಧಾರ್ಥ್ ಆನಂದ್, ಭೂಲ್ ಭೂಲಯ್ಯ 3 ಚಿತ್ರದ ನಿರ್ದೇಶಕ ಅನೀಸ್ ಬಜ್ಮಿ, ಆರ್ಟಿಕಲ್ 370 ಚಿತ್ರದ ಆದಿತ್ಯ ಜಂಬಾಳೆ ಸ್ಫರ್ಧೆಯನ್ನೊಡ್ಡಲಿದ್ದಾರೆ.
ಇನ್ನು ಅತ್ಯುತ್ತಮ ನಟಿ ವಿಭಾಗದಲ್ಲಿ ಲಾಪತಾ ಲೇಡಿಸ್ ಚಿತ್ರದಲ್ಲಿನ ಅಭಿನಯಕ್ಕೆ ನಿಶಾಂತಿ ಗೋಯೆಲ್, ಜಿಗ್ರಾ ಚಿತ್ರದ ಅಭಿನಯಕ್ಕೆ ಆಲಿಯಾ ಭಟ್, ಆರ್ಟಿಕಲ್ 370 ಚಿತ್ರದಲ್ಲಿನ ಅಭಿನಯಕ್ಕಾಗಿ ಯಾಮಿ ಗೌತಮಿ, ಮೇರಿ ಕ್ರಿಸ್ಮಸ್ ಚಿತ್ರದಲ್ಲಿನ ಅಭಿನಯಕ್ಕಾಗಿ ಕತ್ರೀನಾ ಕೈಫ್ ಮತ್ತು ಸ್ತ್ರೀ 2 ಚಿತ್ರದ ಅಭಿನಯಕ್ಕೆ ಶ್ರದ್ಧಾ ಕಪೂರ್ ಅವರನ್ನು ಆಯ್ಕೆ ಮಾಡಲಾಗಿದೆ.
ಬೆಸ್ಟ್ ಆಕ್ಟರ್ ಕೆಟಗರಿಯಲ್ಲಿ ಲಾಪತಾ ಲೇಡಿಸ್ ಚಿತ್ರದಿಂದ ಸ್ಪರ್ಶ ಶ್ರೀವಾಸ್ತವ್, ಸ್ತ್ರೀ 2 ಚಿತ್ರದಿಂದ ರಾಜ್ ಕುಮಾರ್ ರಾವ್, ಭೂಲ್ ಭೂಲಯ್ಯ 3 ಚಿತ್ರದಿಂದ ಕಾರ್ತಿಕ್ ಆರ್ಯನ್, ಶೈತಾನ್ ಚಿತ್ರದಿಂದ ಅಜಯ್ ದೇವಗನ್ ಮತ್ತು ಐ ವಾಂಟ್ ಟು ಟಾಕ್ ಚಿತ್ರದಿಂದ ಅಭಿಷೇಕ್ ಬಚ್ಚನ್ ಅವರನ್ನು ಕಣಕ್ಕಿಳಿಸಲಾಗಿದೆ. ಇನ್ನುಳಿದ ನಾಮಿನೇಶನ್ ಲಿಸ್ಟ್ ಈ ಕೆಳಗಿನಂತೆ ಇದೆ.
ಅತ್ಯುತ್ತಮ ಪೋಷಕ ಕಲಾವಿದೆ.
ಛಾಯಾ ಕದಮ್ - ಲಾಪತಾ ಲೇಡಿಸ್
ವಿದ್ಯಾ ಬಾಲನ್ - ಭೂಲ್ ಭೂಲಯ್ಯ 3
ಜಾನಕಿ ಬೋಡಿವಾಲಾ ಮತ್ತು ಜ್ಯೋತಿಕಾ - ಶೈತಾನ್
ಪ್ರಿಯಾಮಣಿ - ಆರ್ಟಿಕಲ್ 370
ಅತ್ಯುತ್ತಮ ಪೋಷಕ ಕಲಾವಿದ
ರವಿಕಿಶನ್ - ಲಾಪತಾ ಲೇಡಿಸ್
ರಾಜ್‌ಪಾಲ್ ಯಾದವ್ - ಭೂಲ್ ಭೂಲಯ್ಯ 3
ಅಭಿಷೇಕ್ ಬ್ಯಾನರ್ಜಿ - ಸ್ತ್ರೀ 2
ಫರ್ದಿನ್ ಖಾನ್ - ಖೇಲ್ ಖೇಲ್ ಮೇ
ಮನೋಜ್ ಪಹ್ವಾ - ಜಿಗ್ರಾ


Click it and Unblock the Notifications











