ಐಫಾ 2019: ರಣ್ವೀರ್ ಸಿಂಗ್ ಅತ್ಯುತ್ತಮ ನಟ, ಅಲಿಯಾ ಭಟ್ ಅತ್ಯುತ್ತಮ ನಟಿ

Recommended Video

IIFA 2019 : ಪ್ರಶಸ್ತಿ ಮುಡಿಗೇರಿಸಿಕೊಂಡ ರನ್ವೇರ್ ಹಾಗು ಆಲಿಯಾ | FILMIBEAT KANNADA

IIFA (ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್) 20ನೇ ಆವೃತ್ತಿಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ವಾಣಿಜ್ಯ ನಗರಿ ಮುಂಬೈನಲ್ಲಿ ಅದ್ದೂರಿಯಾಗಿ ನಡೆಯಿತು. ಗ್ರ್ಯಾಂಡ್ ಈವೆಂಟ್ ನಲ್ಲಿ ಬಾಲಿವುಡ್ ಸ್ಟಾರ್ ಪ್ರಶಸ್ತಿಗೆ ಮುತ್ತಿಟ್ಟು ಬಿಂಕದಿಂದ ಬೀಗಿದ್ರು.

ಈ ಬಾರಿಯ ಐಫಾ ಅತ್ಯುತ್ತಮ ನಟ ಪ್ರಶಸ್ತಿ ರಣ್ವೀರ್ ಸಿಂಗ್ ಪಾಲಾಗಿದೆ. ಅತ್ಯುತ್ತಮ ನಟಿ ಪ್ರಶಸ್ತಿ ಅಲಿಯಾ ಭಟ್ ಗೆ ಲಭಿಸಿದೆ. ಬೇರೆ ಬೇರೆ ವಿಭಾಗದಲ್ಲಿ ಸಾಕಷ್ಟು ಕಲಾವಿದರು ಪ್ರಶಸ್ತಿ ಗೆದ್ದು ಬೀಗಿದ್ದಾರೆ. ಇಡೀ ಬಾಲಿವುಡ್ ಗೆ ಬಾಲಿವುಡೇ ಐಫಾ ಅವಾರ್ಡ್ ಕಾರ್ಯಕ್ರಮದಲ್ಲಿ ಹಾಜರಿತ್ತು.

ಅತ್ಯುತ್ತಮ ನಟಿ ಅಲಿಯಾ ಭಟ್

ಅತ್ಯುತ್ತಮ ನಟಿ ಅಲಿಯಾ ಭಟ್

ಅತ್ಯುತ್ತಮ ನಟ ಪ್ರಶಸ್ತಿ ರಣ್ವೀರ್ ಸಿಂಗ್ ಪಾಲಾಗಿದೆ. ಪದ್ಮಾವತ್ ಚಿತ್ರದಲ್ಲಿ ಉತ್ತಮ ಅಭಿನಯಕ್ಕಾಗಿ ರಣ್ವೀರ್ ಸಿಂಗ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಇನ್ನು ರಾಝಿ ಚಿತ್ರದ ಉತ್ತಮ ಅಭಿನಯಕ್ಕಾಗಿ ಅಲಿಯಾ ಭಟ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಉತ್ಯುತ್ತಮ ಸಿನಿಮಾ ರಾಝಿ

ಉತ್ಯುತ್ತಮ ಸಿನಿಮಾ ರಾಝಿ

ಅಲಿಯಾ ಭಟ್ ಮತ್ತು ವಿಕ್ಕಿ ಕೌಸಲ್ ಅಭಿನಯದ ರಾಝಿ ಸಿನಿಮಾಗೆ ಅತ್ಯುತ್ತಮ ಸಿನಿಮಾ ಅವಾರ್ಡ್ ಲಭಿಸಿದೆ. ಮೇಘನಾ ಗುಲ್ಜರ್ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾ ರಾಝಿ. ಇನ್ನು ಅಂಧಾದುನ್ ಚಿತ್ರದ ನಿರ್ದೇಶಕ ಶ್ರೀರಾಮ್ ರಾಘವಾನ್ ಉತ್ಯುತ್ತಮ ನಿರ್ದೇಶಕ ಪ್ರಶಸ್ತಿ ಬಾಚಿಕೊಂಡಿದ್ದಾರೆ.

ವಿಕ್ಕಿ ಕೌಸಲ್ ಅತ್ಯುತ್ತಮ ಪೋಷಕ ನಟ

ವಿಕ್ಕಿ ಕೌಸಲ್ ಅತ್ಯುತ್ತಮ ಪೋಷಕ ನಟ

'ಸಂಜು' ಚಿತ್ರದ ಉತ್ತಮ ನಟನೆಗಾಗಿ ನಟ ವಿಕ್ಕಿ ಕೌಸಲ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದಾರೆ. ಇನ್ನು ಪದ್ಮಾವತ್ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಅದಿತಿ ರಾವ್ ಹೈದರಿ ಮುಡಿಗೇರಿಸಿಕೊಂಡಿದ್ದಾರೆ.

ಉಳಿದ ವಿಭಾಗ

ಉಳಿದ ವಿಭಾಗ

ಉಳಿದಂತೆ ಉದಯೋನ್ಮುಕ ನಟಿ ಪ್ರಶಸ್ತಿಯನ್ನು ಸಾರಾ ಅಲಿ ಖಾನ್ ಪಡೆದುಕೊಂಡರೆ, ಉದಯೋನ್ಮುಕ ನಟ ಪ್ರಶಸ್ತಿಯನ್ನು ಇಶಾನ್ ಖಟ್ಟರ್ ಪಡೆದುಕೊಂಡಿದ್ದಾರೆ. ಚೆನ್ನೈ ಎಕ್ಸ್ ಪ್ರೆಸ್ ಚಿತ್ರಕ್ಕಾಗಿ ನಟಿ ದೀಪಿಕಾ ಪಡುಕೋಣೆಗೆ ವಿಶೇಷ ಪ್ರಶಸ್ತಿ ಲಭಿಸಿದೆ. ಮತ್ತು ನಟ ರಣಬೀರ್ ಕಪೂರ್ ವಿಶೇಷ ಅವಾರ್ಡ್ ಪಡೆದುಕೊಂಡಿದ್ದಾರೆ.

More from Filmibeat

English summary
IIFa Award 2019: Bollywood actress Alia Bhatt won best actress award. Ranveer Singh won best actor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X