'ಐಫಾ 2018' ಪ್ರಶಸ್ತಿ ಗೆದ್ದ ಅದೃಷ್ಟವಂತರ ಪಟ್ಟಿ

By Bharath Kumar

Recommended Video

IIFA ಪ್ರಶಸ್ತಿ ಮುಡಿಗೇರಿಸಿಕೊಂಡವರು ಯಾರ್ಯಾರು..!!? | Filmibeat Kannada

ಕಳೆದ ಮೂರು ದಿನಗಳಿಂದ ಬಾಲಿವುಡ್ ನಲ್ಲಿ IIFA ಅವಾರ್ಡ್ ಸಂಭ್ರಮ ಜೋರಾಗಿದೆ. ಜೂನ್ 22 ರಿಂದ ನಡೆಯುತ್ತಿರುವ ಐಫಾ ಸಮಾರಂಭದಲ್ಲಿ ಇಡೀ ಬಾಲಿವುಡ್ ಭಾಗವಹಿಸಿದೆ.

ಹಿಂದಿ ಚಿತ್ರರಂಗದ ದಿಗ್ಗಜ ನಟ, ನಟಿಯರು ಸೇರಿದಂತೆ ಅನಿಲ್ ಕಪೂರ್, ವರುಣ್ ಧವನ್, ಕರಣ್ ಜೋಹರ್, ರಿತೇಶ್ ದೇಶ್ ಮುಖ್, ಶ್ರದ್ಧಾ ಕಪೂರ್, ಕೃತಿ ಸನೋನ್, ಕರಣ್ ಜೋಹರ್ ಎಲ್ಲರೂ ರೆಡ್ ಕಾರ್ಪೆಟ್ ನಲ್ಲಿ ಮಿಂಚಿದ್ದಾರೆ.

ಇದೀಗ, ಐಫಾ 2018ನೇ ಪ್ರಶಸ್ತಿ ಯಾರೆಲ್ಲ ಗೆದ್ದಿದ್ದಾರೆ ಎಂಬುದು ಬಹಿರಂಗವಾಗಿದೆ. ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಸಿನಿಮಾ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಹಾಗಿದ್ರೆ, ಯಾರಿಗೆ ಯಾವ ಪ್ರಶಸ್ತಿ ಸಿಕ್ಕಿದೆ .? ಮುಂದೆ ಓದಿ.....

ಶ್ರೀದೇವಿ ಮುಡಿಗೆ ಅತ್ಯುತ್ತಮ ಗರಿ

ಶ್ರೀದೇವಿ ಮುಡಿಗೆ ಅತ್ಯುತ್ತಮ ಗರಿ

'ಮಾಮ್' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದ ದಿವಂಗತ ನಟಿ ಶ್ರೀದೇವಿ, ಐಫಾ 2018ರಲ್ಲೂ ಅತ್ಯುತ್ತಮ ನಟಿ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.

ಇರ್ಫಾನ್ ಗೆ ಒಲಿದೆ ಪ್ರಶಸ್ತಿ

ಇರ್ಫಾನ್ ಗೆ ಒಲಿದೆ ಪ್ರಶಸ್ತಿ

ಬಾಲಿವುಡ್ ಸ್ಟಾರ್ ನಟ ಇರ್ಫಾನ್ ಖಾನ್ ಗೆ ಐಫಾ 2018ರಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. 'ಹಿಂದಿ ಮೀಡಿಯಂ' ಚಿತ್ರದ ಅಭಿನಯಕ್ಕಾಗಿ ಈ ಅವಾರ್ಡ್ ಲಭಿಸಿದೆ. ಅನಾರೋಗ್ಯದ ಕಾರಣ ವಿದೇಶದಲ್ಲಿರುವ ಇರ್ಫಾನ್ ಖಾನ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ.

ವಿದ್ಯಾಬಾಲನ್ ಚಿತ್ರಕ್ಕೆ ಬೆಸ್ಟ್ ಅವಾರ್ಡ್

ವಿದ್ಯಾಬಾಲನ್ ಚಿತ್ರಕ್ಕೆ ಬೆಸ್ಟ್ ಅವಾರ್ಡ್

ಐಫಾ 2018ರ ಅತ್ಯುತ್ತಮ ಚಿತ್ರ ಪ್ರಶಸ್ತಿ ನಟಿ ವಿದ್ಯಾಬಾಲನ್ ಅಭಿನಯಿಸಿದ್ದ 'ತುಮಾರಿ ಸುಲು' ಚಿತ್ರಕ್ಕೆ ಲಭಿಸಿದೆ. ಈ ಅವಾರ್ಡ್ ನ್ನ ಚಿತ್ರದ ನಿರ್ದೇಶಕ ಪಡೆದುಕೊಂಡರು.

'ನ್ಯೂಟನ್' ಚಿತ್ರದ ಕಥೆಗೆ ಪ್ರಶಸ್ತಿ

'ನ್ಯೂಟನ್' ಚಿತ್ರದ ಕಥೆಗೆ ಪ್ರಶಸ್ತಿ

ರಾಜ್ ಕುಮಾರ್ ರಾವ್ ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾ 'ನ್ಯೂಟನ್' ಚಿತ್ರಕ್ಕೆ ಅತ್ಯುತ್ತಮ ಕಥೆ ಪ್ರಶಸ್ತಿ ದೊರೆಯಿತು. ಈ ಪ್ರಶಸ್ತಿಯನ್ನ ಅಮಿತ್ ಮಸುರ್ಕರ್ ಸ್ವೀಕರಿಸಿದರು.

'ಹಿಂದಿ ಮೀಡಿಯಂ' ಚಿತ್ರಕ್ಕೆ ಅವಾರ್ಡ್

'ಹಿಂದಿ ಮೀಡಿಯಂ' ಚಿತ್ರಕ್ಕೆ ಅವಾರ್ಡ್

ನಟ ಇರ್ಫಾನ್ ಖಾನ್ ಅಭಿನಯಿಸಿದ್ದ 'ಹಿಂದಿ ಮೀಡಿಯಂ' ಚಿತ್ರದ ನಿರ್ದೇಶನಕ್ಕಾಗಿ ಸಾಕೇತ್ ಚೌಧರಿಗೆ ಅತ್ಯುತ್ತಮ ನಿರ್ದೇಶಕ ಐಫಾ ಪ್ರಶಸ್ತಿ ಸಿಕ್ಕಿದೆ.

ಜೀವನಶ್ರೇಷ್ಠ ಪ್ರಶಸ್ತಿ

ಜೀವನಶ್ರೇಷ್ಠ ಪ್ರಶಸ್ತಿ

ಭಾರತೀಯ ಚಿತ್ರರಂಗದಲ್ಲಿ ವಿಶೇಷ ಸಾಧನೆ ಮಾಡಿರುವ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅವರಿಗೆ ಐಫಾ 2018ರಲ್ಲಿ ಜೀವನಶ್ರೇಷ್ಠ ಸಾಧನೆಗಾಗಿ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಸಂಗೀತ ನಿರ್ದೇಶಕ ಪ್ರಶಸ್ತಿ

ಸಂಗೀತ ನಿರ್ದೇಶಕ ಪ್ರಶಸ್ತಿ

'ಬದ್ರಿನಾಥ್ ಕಿ ದುಲ್ಹಾನಿಯಾ' ಚಿತ್ರದ ಸಂಗೀತಕ್ಕಾಗಿ ಅಮಾಲ್ ಮಲ್ಲಿಕ್, ಅಖಿಲ್ ಸಚ್ದೇವ್, ತನಿಷ್ಕ್ ಬಾಗ್ಚಿ ಅವರು ಅತ್ಯುತ್ತುಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನ ಹಂಚಿಕೊಂಡಿದ್ದಾರೆ.

ಸ್ಟೈಲಿಶ್ ಐಕಾನ್

ಸ್ಟೈಲಿಶ್ ಐಕಾನ್

ಇನ್ನು ವರ್ಷದ ಸ್ಟೈಲಿಶ್ ಐಕಾನ್ ಪ್ರಶಸ್ತಿ ನಟಿ ಕೃತಿ ಸನನ್ ಮುಡಿಗೇರಿಸಿಕೊಂಡಿದ್ದಾರೆ. ಬಾಲಿವುಡ್ ನಲ್ಲಿ ಸದ್ಯ ತನ್ನ ಗ್ಲಾಮರ್ ಮೂಲಕ ಹೆಚ್ಚು ಗಮನ ಸೆಳೆಯುತ್ತಿರುವ ಕೃತಿ ಪ್ರಶಸ್ತಿಗೆ ಅರ್ಹರು ಎಂಬ ಅಭಿಪ್ರಾಯಿದೆ

ಇನ್ನುಳಿದಂತೆ ಯಾರಿಗೆ ಪ್ರಶಸ್ತಿ

ಇನ್ನುಳಿದಂತೆ ಯಾರಿಗೆ ಪ್ರಶಸ್ತಿ

ಇನ್ನುಳಿದಂತೆ 'ಸೀಕ್ರೆಟ್ ಸೂಪರ್ ಸ್ಟಾರ್' ಚಿತ್ರದ ಪೋಷಕ ನಟನೆಗಾಗಿ ಮೆಹರ್ ವಿಜ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ, 'ಮಾಮ್' ಚಿತ್ರದ ನಟನೆಗಾಗಿ ನವಾಜುದ್ದೀನ್ ಸಿದ್ದಿಕಿ ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿಯನ್ನ ಕೊಂಕಣ ಸೆನ್ ಶರ್ಮಾ, ಮೇಘನಾ ಮಿಶ್ರಾ ಅತ್ಯುತ್ತಮ ಹಿನ್ನಲೆ ಗಾಯಕಿ, ಅರ್ಜಿತ್ ಸಿಂಗ್ ಕಿಟ್ಟಿ ಅತ್ಯುತ್ತಮ ಹಿನ್ನಲೆ ಗಾಯಕ, ಮನೋಜ್ ಮುಂತಾಶಿರ್ ಅತ್ಯುತ್ತಮ ಚಿತ್ರ ಸಾಹಿತಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

More from Filmibeat

English summary
The much-awaited IIFA Awards 2018 is happening at Siam Niramit Theatre in Bangkok, Thailand. IIFA Awards 2018 Winners List Revealed. Sridevi's Posthumous Win, Irrfan Khan Bags Best Actor Award.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X