IIFA Awards 2025 Full List of Winners ; 'ಐಫಾ'ದಲ್ಲಿ ಅಮೀರ್ ಖಾನ್ ಮಾಜಿ ಪತ್ನಿಯ ಅಬ್ಬರ,ಇಲ್ಲಿದೆ ಲಿಸ್ಟ್?

ಹಾಲಿವುಡ್‌ನವರಿಗೆ ಆಸ್ಕರ್ ಹೇಗೋ ಬಾಲಿವುಡ್‌ನವರಿಗೆ ಐಫಾ ಮತ್ತು ಸೈಮಾ ಪ್ರಶಸ್ತಿ ಸಮಾರಂಭಗಳು ಹಾಗೇ. ಆಸ್ಕರ್ ಗೆಲ್ಲದೇ ಇದ್ದರೂ ಪರವಾಗಿಲ್ಲ ಕೊನೆ ಪಕ್ಷ ಸೈಮಾ ಅಥವಾ ಐಫಾದಲ್ಲಿ ಒಂದು ಗೆದ್ದರೆ ಬದುಕು ಸಾರ್ಥಕ ಎಂದುಕೊಂಡ ಅನೇಕ ತಾರೆಯರು ಹಿಂದಿ ಉದ್ಯಮದಲ್ಲಿ ಇದ್ದಾರೆ.

ಈ ಎರಡು ಕಾರ್ಯಕ್ರಮಗಳ ಆಯೋಜಕರಿಗೆ ಈ ವಿಚಾರ ಚೆನ್ನಾಗಿಯೇ ಗೊತ್ತಿದೆ. ಹೀಗಾಗಿಯೇ ಪ್ರತೀ ವರ್ಷ ಬೇರೆಬೇರೆ ದೇಶಕ್ಕೆ ಕರೆದುಕೊಂಡು ಹೋಗುವ ಇವರು ದೊಡ್ಡ ದೊಡ್ಡ ಸ್ಟಾರ್‌ಗಳಿಂದ ಕುಣಿಸುತ್ತಾರೆ. ಸೂಪರ್ ಸ್ಟಾರ್‌ಗಳಿಂದ ಕಾರ್ಯಕ್ರಮದ ನಿರೂಪಣೆಯನ್ನು ಕೂಡ ಮಾಡಿಸುತ್ತಾರೆ. ಸದ್ಯ ಈ ವರ್ಷ ಕೂಡ ಜೈಪುರದಲ್ಲಿ ಅದ್ಧೂರಿಯಾಗಿ ನಡೆದಿದೆ. ಹತ್ತು ಹಲವು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗಿದೆ.

IIFA Awards 2025 Full List of Winners Laapataa Ladies Sweeps Most Major Awards Kartik Aaryan Wins

ಹಾಗಿದ್ದರೆ ನಿನ್ನೆ ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವರು ಯಾರು ಯಾರು ? ಅತ್ಯುತ್ತಮ ನಟ ಮತ್ತು ನಟಿಯ ಪ್ರಶಸ್ತಿ ಯಾರ ಪಾಲಾಯ್ತು ? ಎಂದು ತಿಳಿಯಲು ಮುಂದೆ ಓದಿ.

ಪ್ರಶಸ್ತಿ ಗೆದ್ದವರ ಪಟ್ಟಿ

ಅತ್ಯುತ್ತಮ ಚಿತ್ರ - ಲಾಪತಾ ಲೇಡೀಸ್

ಅತ್ಯುತ್ತಮ ನಟ - ಕಾರ್ತಿಕ್ ಆರ್ಯನ್ { ಭೂಲ್ ಭೂಲಯ್ಯಾ 3 }

ಅತ್ಯುತ್ತಮ ನಟಿ - ನಿಶಾಂತಿ ಗೋಯಲ್ { ಲಾಪತಾ ಲೇಡೀಸ್ }

ಅತ್ಯುತ್ತಮ ನಿರ್ದೇಶಕಿ - ಕಿರಣ್ ರಾವ್ { ಲಾಪತಾ ಲೇಡೀಸ್ }

ಅತ್ಯುತ್ತಮ ಖಳನಾಯಕ - ರಾಘವ್ ಜುಯೆಲ್ { ಕಿಲ್ }

ಅತ್ಯುತ್ತಮ ಪೋಷಕ ನಟ - ರವಿಕಿಶನ್ { ಲಾಪತಾ ಲೇಡೀಸ್ }

ಅತ್ಯುತ್ತಮ ಪೋಷಕ ನಟಿ - ಜಾನಕಿ ಬೋಡಿವಾಲಾ { ಶೈತಾನ್ }

ಅತ್ಯುತ್ತಮ ನಿರ್ದೇಶಕ { ಚೊಚ್ಚಲ ನಿರ್ದೇಶನ } - ಕುನಾಲ್ ಖೆಮು { ಮಡ್ಗಾಂವ್ ಎಕ್ಸ್‌ಫ್ರೆಸ್ }

ಅತ್ಯುತ್ತಮ ನಟಿ { ಚೊಚ್ಚಲ ಚಿತ್ರ } - ಪ್ರತಿಭಾ ರಂತ { ಲಾಪತಾ ಲೇಡೀಸ್ }

ಅತ್ಯುತ್ತಮ ನಟ { ಚೊಚ್ಚಲ ಚಿತ್ರ } - ಲಕ್ಷ್ಯ { ಕಿಲ್ }

ಅತ್ಯುತ್ತಮ ಹಿನ್ನೆಲೆ ಗಾಯಕಿ - ಶ್ರೇಯಾ ಘೊಷಾಲ್

ಅತ್ಯುತ್ತಮ ಹಿನ್ನೆಲೆ ಗಾಯಕ - ಜುಬಿನ್ ನೌಟಿಯಲ್

ಅತ್ಯುತ್ತಮ ಸಂಗೀತ ನಿರ್ದೇಶಕ - ರಾಮ್ ಸಂಪತ್ { ಲಾಪತಾ ಲೇಡೀಸ್ }

ಅತ್ಯುತ್ತಮ ಸಾಹಿತ್ಯ - ಪ್ರಶಾಂತ್ ಪಾಂಡೆ { ಲಾಪತಾ ಲೇಡೀಸ್ }

ಅತ್ಯುತ್ತಮ ಮೂಲ ಕಥೆ - ಬಿಪ್ಲಬ್ ಗೋಸ್ವಾಮಿ { ಲಾಪತಾ ಲೇಡೀಸ್ }

ಅತ್ಯುತ್ತಮ ಕಥೆ { ಅಡಾಪ್ಟೆಡ್ } - ಶ್ರೀರಾಮ್ ರಾಘವನ್, ಅರಿಜಿತ್ ಬಿಸ್ವಾಸ್, ಪೂಜಾ ಲದಾ ಸೂರ್ತಿ, ಅನುಕೃತಿ ಪಾಂಡೆ { ಲಾಪತಾ ಲೇಡೀಸ್ }

ಅತ್ಯುತ್ತಮ ವಿಎಫ್‌ಎಕ್ಸ್ - ರೆಡ್ ಚಿಲ್ಲೀಸ್ { ಭೂಲ್ ಭೂಲಯ್ಯ 3 }

ಅತ್ಯುತ್ತಮ ಸಂಕಲನ - ಜಬೀನ್ ಮರ್ಚೆಂಟ್ { ಲಾಪತಾ ಲೇಡೀಸ್ }

ಅತ್ಯುತ್ತಮ ನೃತ್ಯ ನಿರ್ದೇಶನ - ಬಾಸ್ಕೋ - ಸೀಸರ್ { ಬ್ಯಾಡ್ ನ್ಯೂಸ್- ತೌಬಾ ತೌಬಾ ಹಾಡು }

ಅತ್ಯುತ್ತಮ ಛಾಯಾಗ್ರಹಣ - ರಫೇ ಮಹಮೂದ್ { ಕಿಲ್ }

ಅತ್ಯುತ್ತಮ ಸಂಭಾಷಣೆ - ಅರ್ಜುನ್ ಧವನ್, ಆದಿತ್ಯ ಧರ್, ಆದಿತ್ಯ ಸುಹಾಸ್ ಝಂಬಾಲೆ, ಮೋನಾಲ್ ಥಾಕರ್ { ಆರ್ಟಿಕಲ್ 370 }

ಅತ್ಯುತ್ತಮ ಚಿತ್ರ ಕಥೆ- ಸ್ನೇಹ ದಸಾ { ಲಾಪತಾ ಲೇಡೀಸ್ }

ಅತ್ಯುತ್ತಮ ಸೌಂಡ್ ಮಿಕ್ಸಿಂಗ್ - ಸುಭಾಷ್ ಸಾಹೂ, ಭೊಲೊಯ್ ಕುಮಾರ್ ಡೊಲೊಯ್, ರಾಹುಲ್ ಕರ್ಪೆ { ಕಿಲ್ }

ಅತ್ಯುತ್ತಮ ಧ್ವನಿ ವಿನ್ಯಾಸ - ಸುಭಾಷ್ ಸಾಹೂ { ಕಿಲ್ }

ಭಾರತೀಯ ಚಿತ್ರರಂಗದಲ್ಲಿ ಅತ್ಯುತ್ತಮ ಸಾಧನೆ ಪ್ರಶಸ್ತಿ - ರಾಕೇಶ್ ರೋಷನ್

ಇನ್ನು, ಐಫಾ ಪ್ರಶಸ್ತಿ ಸಮಾರಂಭಕ್ಕೆ ಈಗ 25ರ ಹರೆಯ. 2000ನೇ ಇಸ್ವಿಯಲ್ಲಿ ಮೊದಲ ಬಾರಿ ಲಂಡನ್‌ನಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಈ ಹಿನ್ನೆಲೆ 25ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಶಾರುಖ್ ಖಾನ್ ಐಫಾ ಆಯೋಜಕರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ಧಾರೆ.

ಹೀಗೆ ನಾನಾ ವಿಭಾಗಗಳಲ್ಲಿ ನಿನ್ನೆ ಪ್ರಶಸ್ತಿಗಳನ್ನು ನೀಡಲಾಗಿದೆ. ಇನ್ನು ಈ ಪ್ರಶಸ್ತಿ ಸಮಾರಂಭದಲ್ಲಿ ಶಾರುಖ್ ಖಾನ್ ಮತ್ತು ಮಾಧುರಿ ದೀಕ್ಷಿತ್ ತಮ್ಮ ದಿಲ್ ತೋ ಪಾಗಲ್ ಚಿತ್ರದ ಹಾಡಿಗೆ ವೇದಿಕೆ ಮೇಲೆ ಹೆಜ್ಜೆ ಹಾಕಿದ್ದು ಒಂದು ವಿಶೇಷವಾದರೆ ಕರೀನಾ ಕಪೂರ್ ತಮ್ಮ ತಾತಾ ರಾಜ್ ಕಪೂರ್ ಅವರ ಸವಿ ನೆನಪಿಗೆ ಶ್ರೀ 420 ಚಿತ್ರದ ಪ್ರಸಿದ್ಧ ಹಾಡು ಮೇರಾ ಜೂತಾ ಹೈ ಜಪಾನಿ ಹಾಡಿಗೆ ಹೆಜ್ಜೆ ಹಾಕಿದ್ದು ಈ ಮೂಲಕ ಗೌರವವನ್ನು ಸಲ್ಲಿಸಿದ್ದು ಮತ್ತೊಂದು ವಿಶೇಷ.

More from Filmibeat

Read more about: iifa awards filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X