ವಿದೇಶಿಗನ ಜೊತೆಗಿನ ಇಲಿಯಾನಾ ದಾಂಪತ್ಯ ಹಳ್ಳ ಹಿಡಿದ ಗುಟ್ಟು ಈಗ ರಟ್ಟು.!

Recommended Video

ಇಲಿಯಾನ ದಾಂಪತ್ಯ ಹಳ್ಳ ಹಿಡಿದ ಗುಟ್ಟು ರಟ್ಟು | FILMIBEAT kannada

ಅದು ಎರಡು ವರ್ಷಗಳ ಹಿಂದಿನ ಮಾತು.. ಕ್ರಿಸ್ಮಸ್ ಹಬ್ಬದಂದು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಇಲಿಯನಾ ಪೋಸ್ಟ್ ಮಾಡಿದ್ದ ಒಂದು ಫೋಟೋ ಹಾಗೂ ಅದಕ್ಕೆ ಕೊಟ್ಟ ಕ್ಯಾಪ್ಷನ್ ಎಲ್ಲರ ಕಣ್ಣರಳಿಸುವಂತೆ ಮಾಡಿತ್ತು. ಆ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ''ಫೋಟೋ ಬೈ ಹಬ್ಬಿ'' ಅಂತ ಇಲಿಯಾನಾ ಬರೆದುಕೊಂಡಿದ್ದನ್ನ ನೋಡಿ ಇಲಿಯಾನಾ ಗುಟ್ಟಾಗಿ ಮದುವೆ ಮಾಡಿಕೊಂಡಿದ್ದಾರೆ ಅಂತಲೇ ಎಲ್ಲರೂ ಭಾವಿಸಿದ್ದರು.

ಅದಾದ ಮೇಲೆ ಮದುವೆ ಬಗ್ಗೆ ಪ್ರಶ್ನೆಗಳ ಸುರಿಮಳೆಯೇ ಆದರೂ ಇಲಿಯಾನಾ ಮಾತ್ರ ಯಾವುದಕ್ಕೂ ತುಟಿ ಎರಡು ಮಾಡುತ್ತಿರಲಿಲ್ಲ. ಈ ಗ್ಯಾಪ್ ನಲ್ಲಿ ಗರ್ಭಿಣಿ ಅಂತ ಗುಸು ಗುಸು ಹಬ್ಬಿದರೂ ಇಲಿಯಾನಾ ಗಪ್ ಚುಪ್ ಅಂತ ಸುಮ್ನಿದ್ದರು.

ಹೀಗಿರುವಾಗಲೇ, ಇಲಿಯಾನಾ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಬ್ರೇಕಿಂಗ್ ನ್ಯೂಸ್ ಸಿಕ್ಕಿದೆ. ಆಸ್ಟ್ರೇಲಿಯಾದ ಫೋಟೋಗ್ರಾಫರ್ ಆಂಡ್ರ್ಯೂ ನೀಬೋನ್ ನಿಂದ ಇಲಿಯಾನಾ ದೂರಾಗಿದ್ದಾರೆ.

ಆಂಡ್ರ್ಯೂ ನೀಬೋನ್ ಬಗ್ಗೆ ಎಲ್ಲೂ ತುಟಿಕ್ ಪಿಟಿಕ್ ಎನ್ನದ ಇಲಿಯಾನಾ ಬ್ರೇಕಪ್ ಬಗ್ಗೆ ಮಾತ್ರ ಬಹಿರಂಗ ಪಡಿಸಿದ್ದಾರೆ. ತಮ್ಮ ದಾಂಪತ್ಯ ಹಳ್ಳ ಹಿಡಿದಿದ್ದು ಯಾಕೆ ಅಂತ ಇಲಿಯಾನಾ ಬಾಯಿಬಿಟ್ಟಿದ್ದಾರೆ. ಮುಂದೆ ಓದಿರಿ...

ಮದುವೆ ಆಗಿದ್ರಾ ಇಲಿಯಾನಾ.?

ಮದುವೆ ಆಗಿದ್ರಾ ಇಲಿಯಾನಾ.?

33 ವರ್ಷದ ಇಲಿಯಾನಾ.. ಆಸ್ಟ್ರೇಲಿಯಾದ ಫೋಟೋಗ್ರಾಫರ್ ಆಂಡ್ರ್ಯೂ ನೀಬೋನ್ ಎನ್ನುವವರನ್ನು ಮದುವೆ ಆಗಿದ್ರಾ.? ಕ್ಲಾರಿಟಿ ಇಲ್ಲ. ಆದ್ರೆ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಆಂಡ್ರ್ಯೂ ನೀಬೋನ್ ಫೋಟೋದೊಂದಿಗೆ 'ಬೆಸ್ಟ್ ಹಬ್ಬಿ (ಪತಿ) ಅಂತೆಲ್ಲಾ ಇಲಿಯಾನಾ ಬರೆದುಕೊಂಡಿದ್ದರು. ಈಗ ನೋಡಿದ್ರೆ, ಅದೇ ಆಂಡ್ರ್ಯೂ ನೀಬೋನ್ ನಿಂದ ಇಲಿಯಾನಾ ದೂರ ಸರಿದಿದ್ದಾರೆ.

ಬ್ರೇಕಪ್ ಆಗಿದ್ದು ಯಾಕೆ.?

ಬ್ರೇಕಪ್ ಆಗಿದ್ದು ಯಾಕೆ.?

ವರದಿಗಳ ಪ್ರಕಾರ, ಆಂಡ್ರ್ಯೂ ನೀಬೋನ್ ಮತ್ತು ಇಲಿಯಾನಾ ನಡುವೆ ಹೊಂದಾಣಿಕೆ ಆಗಿಲ್ಲ. ಹಲವು ವಿಷಯಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಇತ್ತು. ಮನಸ್ತಾಪ ತಾರಕಕ್ಕೆ ಏರಿದ ಮೇಲೆ ಬ್ರೇಕಪ್ ಮಾಡಿಕೊಳ್ಳಲು ಇಲಿಯಾನಾ ಮತ್ತು ಆಂಡ್ರ್ಯೂ ನೀಬೋನ್ ನಿರ್ಧರಿಸಿದರು ಎನ್ನಲಾಗಿದೆ. ಬ್ರೇಕಪ್ ಆಗುತ್ತಿದ್ದಂತೆಯೇ, ಆಂಡ್ರ್ಯೂ ನೀಬೋನ್ ಜೊತೆಗೆ ಕ್ಲಿಕ್ ಮಾಡಿಕೊಂಡಿದ್ದ ಎಲ್ಲಾ ಫೋಟೋಗಳನ್ನೂ ಸೋಷಿಯಲ್ ಮೀಡಿಯಾದಲ್ಲಿ ಇಲಿಯಾನಾ ಡಿಲೀಟ್ ಮಾಡಿದ್ದಾರೆ.

ಕುಟುಂಬದ ಮೌಲ್ಯ ತಿಳಿಯಿತು.!

ಕುಟುಂಬದ ಮೌಲ್ಯ ತಿಳಿಯಿತು.!

''ಇಂತಹ ಪರಿಸ್ಥಿತಿಯಲ್ಲೇ ಕುಟುಂಬದ ಬೆಲೆ ಏನು ಅಂತ ಗೊತ್ತಾಗುತ್ತದೆ. ಮಾನಸಿಕವಾಗಿ ನೊಂದಿರುವ ನನಗೆ ಕುಟುಂಬ ಮತ್ತು ಕ್ಲೋಸ್ ಫ್ರೆಂಡ್ಸ್ ತುಂಬಾ ಸಪೋರ್ಟ್ ಮಾಡಿದ್ದಾರೆ'' ಅಂತ ಸಂದರ್ಶನವೊಂದರಲ್ಲಿ ಇಲಿಯಾನಾ ಹೇಳಿದ್ದಾರೆ.

ಸಿನಿಮಾಗಳಲ್ಲಿ ಇಲಿಯಾನಾ ಬಿಜಿ

ಸಿನಿಮಾಗಳಲ್ಲಿ ಇಲಿಯಾನಾ ಬಿಜಿ

'ಅಮರ್ ಅಕ್ಬರ್ ಆಂಥೋನಿ' ಚಿತ್ರದಲ್ಲಿ ನಟಿಸಿದ್ದ ಇಲಿಯಾನಾ ಸದ್ಯ ಬಾಲಿವುಡ್ ನ 'ಪಾಗಲ್ಪಂತಿ' ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅಪ್ಪಟ ಕಾಮಿಡಿ ಚಿತ್ರವಾಗಿರುವ 'ಪಾಗಲ್ಪಂತಿ'ಗೆ ಅನೀಸ್ ಬಝ್ಮಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದಲ್ಲಿ ಇಲಿಯಾನಾ ಜೊತೆಗೆ ಜಾನ್ ಅಬ್ರಹಾಂ ಮತ್ತು ಫುಲ್ಕಿತ್ ಸಾಮ್ರಾಟ್ ನಟಿಸುತ್ತಿದ್ದಾರೆ.

More from Filmibeat

English summary
Actress Ileana D Cruz breaks her silence on parting ways with Andrew Kneebone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X