ವಿದೇಶಿ ಬಾಯ್ ಫ್ರೆಂಡ್ ಜೊತೆ ಸಂಬಂಧ ಮುರಿದುಕೊಂಡ್ರಾ ಇಲಿಯಾನಾ?

ವಿದೇಶಿ ಫೋಟೋಗ್ರಫರ್ ಜೊತೆ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದರು ಎಂದು ಹೇಳಲಾಗುತ್ತಿದ್ದ ನಟಿ ಇಲಿಯಾನಾ, ಈಗ ಆ ಸಂಬಂಧವನ್ನ ಮುರಿದುಕೊಂಡಿದ್ದಾರಂತೆ. ಇನ್ಸ್ಟಾಗ್ರಾಂನಲ್ಲಿ ತನ್ನ ಬಾಯ್ ಫ್ರೆಂಡ್ ಆಂಡ್ರ್ಯೂ ಅವರ ಎಲ್ಲ ಫೋಟೋಗಳನ್ನ ಡಿಲೀಟ್ ಮಾಡಿರುವ ಇಲಿಯಾನಾ ಅನ್ ಫಾಲೋ ಮಾಡಿದ್ದಾರೆ.

ಆಂಡ್ರ್ಯೂ ಕೂಡ ಇಲಿಯಾನಾ ಅವರನ್ನ ಅನ್ ಫಾಲೋ ಮಾಡಿದ್ದಾರೆ. ಈ ಬೆಳವಣಿಗೆಯನ್ನ ಗಮನಿಸಿದ ಬಾಲಿವುಡ್ ಮಾಧ್ಯಮಗಳು ಇಲಿಯಾನಾ ಮತ್ತು ಆಂಡ್ರ್ಯೂ ಅವರ ರಿಲೇಶನ್ ಶಿಪ್ ಬ್ರೇಕ್ ಅಪ್ ಆಗಿದೆ ಎಂದು ವರದಿ ಮಾಡಿವೆ.

ಇದುವರೆಗೂ ಇಲಿಯಾನಾ ಎಲ್ಲಿಯೂ ತಮ್ಮ ಖಾಸಗಿ ಜೀವನದ ಬಗ್ಗೆ ಬಹಿರಂಗವಾಗಿ ಮಾತನಾಡಿಲ್ಲ. ಆದರೆ, ಇನ್ಸ್ಟಾಗ್ರಾಂನಲ್ಲಿ ಆಂಡ್ರ್ಯೂ ಜೊತೆಗಿನ ಫೋಟೋಗಳನ್ನ ಹಂಚಿಕೊಂಡು, ಅದಕ್ಕೆ ವಿಶೇಷವಾದ ಕ್ಯಾಪ್ಷನ್ ಹಾಕುತ್ತಿದ್ದರು. ಈ ಕ್ಯಾಪ್ಷನ್ ನೋಡಿದ್ರೆ ಇವರಿಬ್ಬರು ಪ್ರೀತಿಸುತ್ತಿರುವುದು ಪಕ್ಕಾ ಎನ್ನುವಷ್ಟು ಅರ್ಥ ನೀಡುವಂತೆ ಪೋಸ್ಟ್ ಇರುತ್ತಿತ್ತು.

Ileana Dcruz And Andrew kneebone Love Breakup

ಹೀಗೆ ಒಮ್ಮೆ ಆಂಡ್ರ್ಯೂ ಜೊತೆಗಿನ ಫೋಟೋ ಶೇರ್ ಮಾಡಿದಾಗ ''Best Hubby ever'' ಎಂದು ಪೋಕಿರಿ ಹುಡುಗಿ ಸ್ಟೇಟಸ್ ಹಾಕಿದ್ದರು. ಅಲ್ಲಿಗೆ ಆಂಡ್ರ್ಯೂ ಜೊತೆ ಸಹಜೀವನ ನಡೆಸುತ್ತಿರುವ ಬಗ್ಗೆ ಇಲಿಯಾನ ಅಧಿಕೃತವಾಗಿ ಸುಳಿವು ನೀಡಿದ್ದಂತಿತ್ತು.

ಮದುವೆ ಆಗಿದ್ದೀರಾ ಅಂತ ಕೇಳಿದ್ದಕ್ಕೆ ನಟಿ ಇಲಿಯಾನಾ ಹೀಗಾ ಹೇಳೋದು?!

ಇನ್ನು ಒಂದು ಹಂತ ಮುಂದಕ್ಕೆ ಹೋಗಿದ್ದ ಇವರಿಬ್ಬರ ಸಂಬಂಧದ ಪರಿಣಾಮ, ಮದುವೆಗೆ ಮುನ್ನವೇ ಇಲಿಯಾನಾ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆಮೇಲೆ ಸಿನಿಮಾಗಳನ್ನ ಮಾಡಿದ ಇಲಿಯಾನಾ ಇದೆಲ್ಲವೂ ವದಂತಿ ಎಂದು ಹೇಳಿದ್ದರು.

ಹೀಗೆ, ಕಳೆದ ಕೆಲವು ವರ್ಷಗಳಿಂದ ಆಂಡ್ರ್ಯೂ ಜೊತೆ ಪ್ರೀತಿಯಲ್ಲಿದ್ದ ಇಲಿಯಾನಾ ಈಗ ದಿಢೀರ್ ಅಂತ ಯಾಕೆ ಫೋಟೋಗಳನ್ನ ಡಿಲೀಟ್ ಮಾಡಿದ್ರು ಎಂಬುದು ಕುತೂಹಲ ಮೂಡಿಸಿದೆ. ಸ್ವತಃ ಇಲಿಯಾನಾ ಅವರೇ ಆಂಡ್ರ್ಯೂ ಅವರಿಗೆ ಏರ್ ಪೋರ್ಟ್ ನಲ್ಲಿ ಗುಡ್ ಬೈ ಹೇಳಿ ಬಂದಿದ್ದಾರೆ. ಅಲ್ಲಿಂದ ಬಂದ ನಂತರ ಇಬ್ಬರು ಪರಸ್ಪರ ಸೋಶಿಯಲ್ ಮೀಡಿಯಾದಲ್ಲಿ ಅನ್ ಫಾಲೋ ಮಾಡಿದ್ದಾರೆ ಎನ್ನಲಾಗಿದೆ.

More from Filmibeat

English summary
Indian actress ileana d'cruz break up with boyfriend and andrew kneebone?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X