"ತಂದೆ ಯಾರು?" ಎಂದವರ ವಿರುದ್ಧ ಆಕ್ರೋಶ: "ಕರಣ್ ಜೋಹರ್ ಬಗ್ಗೆ ಯಾಕೆ ಮಾತಾಡಿಲ್ಲ?" ನೆಟ್ಟಿಗರ ಕಿಡಿ!

By ಫಿಲ್ಮಿಬೀಟ್ ಡೆಸ್ಕ್

ಕಳೆದೆರಡು ದಿನಗಳಿಂದ ಗೋವಾ ಬೇಬಿ ಇಲಿಯಾನಾ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ದಿಢೀರನೇ ತಾಯಿ ಆಗುತ್ತಿರುವ ವಿಷಯವನ್ನು ಘೋಷಿಸಿ ಸೋಶಿಯಲ್ ಮೀಡಿಯಾಗಳಲ್ಲಿ ಹಲ್‌ಚಲ್ ಎಬ್ಬಿಸಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಇಲಿಯಾನಾ ಅಭಿಮಾನಿಗಳು ಶಾಕ್ ಆಗಿದ್ದಾರೆ.

ನಿನ್ನೆ (ಏಪ್ರಿಲ್ 18) ನಟಿ ಇಲಿಯಾನಾ ತನ್ನ ಇನ್‌ಸ್ಟಾಗ್ರಾಂನಲ್ಲಿ ಚಿಕ್ಕ ಮಗುನಿನ ಟೀಶರ್ಟ್, ಕತ್ತಿನಲ್ಲಿ 'ಮಾಮಾ'(ಅಮ್ಮ) ಅನ್ನೋ ಲಾಕೆಟ್ ಇರುವ ಫೋಟೊಗಳನ್ನು ಶೇರ್ ಮಾಡಿದ್ದರು. ಅದೇ ಟೀ ಶರ್ಟ್‌ನಲ್ಲಿ 'ಅಂಡ್ ಸೋ ದಿ ಅಡ್ವೆಂಚರ್ ಬಿಗಿನ್ಸ್' ಎಂದು ಬರೆದಿತ್ತು. ಅದೇ ಫೋಟೊಗಳು ನೋಡುತ್ತಿದ್ದಂತೆ ಫ್ಯಾನ್ಸ್ ಶಾಕ್ ಆಗಿದ್ರೆ, ಇನ್ನೊಂದು ಕಡೆ ಕೆಲವರು ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದರು.

Ileana DCruz badly trolled after announcing her pregnancy: supporters dig Karan Johar parenthood

ಇಲಿಯಾನಾರನ್ನು ನಿನ್ನೆಯಿಂದ್ಲೇ (ಏಪ್ರಿಲ್ 18) ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಇಲಿಯಾನಾಗೆ ಮಗುವಿನ ತಂದೆ ಯಾರು? ಅಂತ ಪ್ರಶ್ನೆ ಮಾಡಲು ಶುರು ಮಾಡಿದ್ದಾರೆ. ಒಂದ್ಕಡೆ ಕಿಡಿಗೇಡಿಗಳು ಇಲಿಯಾನಾರನ್ನು ಕೆಟ್ಟದಾಗಿ ಟ್ರೋಲ್ ಮಾಡುತ್ತಿದ್ದರೆ, ಇನ್ನೊಂದ್ಕಡೆ ನೆಟ್ಟಿಗರು ಇಲಿಯಾನಾ ಬೆಂಬಲಕ್ಕೆ ನಿಂತಿದ್ದಾರೆ.

ಇಲಿಯಾನಾ ಫುಲ್ ಟ್ರೋಲ್

ಇಲಿಯಾನಾ ನಿನ್ನೆ (ಏಪ್ರಿಲ್ 18) " ನಿರೀಕ್ಷೆಯಲ್ಲಿ.. ನನ್ನ ಲಿಟಲ್ ಡಾರ್ಲಿಂಗ್ ಅನ್ನು ಭೇಟಿ ಮಾಡುವುದಕ್ಕೆ ಕಾಯುತ್ತಿದ್ದೇನೆ" ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಆ ಬಳಿಕ ನೆಟ್ಟಿಗರು ಇಲಿಯಾನಾ ಗರ್ಭಿಣಿಯಾಗಿದ್ದಾರೆ ಅನ್ನೋ ವಿಷಯದ ಬಗ್ಗೆನೇ ಚರ್ಚೆ ಮಾಡುತ್ತಿದ್ದಾರೆ. ಕೆಲವರು ಇಲಿಯಾನಾ ಪ್ರೆಗ್ನೆನ್ಸಿ ವಿಷಯವನ್ನಿಟ್ಟುಕೊಂಡು ಕೆಟ್ಟದಾಗಿ ಟ್ರೋಲ್ ಮಾಡುತ್ತಿದ್ದಾರೆ.

ಒಬ್ಬರು " ತಂದೆ ಯಾರು?" ಅಂತ ಕಮೆಂಟ್ ಮಾಡಿದ್ದಾರೆ. ಅದೇ ಮತ್ತೊಬ್ಬರು " ಈಕೆ ಮದುವೆ ಆಗಿದ್ದು ಯಾವಾಗ?, ಆಕೆ ತನ್ನ ಪತಿ ಯಾರು ಅನ್ನೋದನ್ನೇ ರಿವೀಲ್ ಮಾಡಿಲ್ಲ. ಇನ್ನೊಬ್ಬರು " ಇಲ್ಲಿ ತಂದೆಯ ಪಾತ್ರವನ್ನು ಮಾಡುತ್ತಿರುವವರು ಯಾರು?" ಎಂದು ಕಮೆಂಟ್ ಮಾಡಿದ್ರೆ, ಮಗದೊಬ್ಬ "ಮದುವೆ ಆಗದೇನೆ.. ವ್ಹಾವ್" ಎಂದು ನೆಗೆಟಿವ್ ಆಗಿ ಕಮೆಂಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

Ileana DCruz badly trolled after announcing her pregnancy: supporters dig Karan Johar parenthood

ಇಲ್ಲಿ ತಂದೆ ಹೆಸರು ಮುಖ್ಯವೇ?

ಇಲಿಯಾನಾ ಮದುವೆ ಆಗದೇನೆ ಗರ್ಭಿಣಿಯಾಗಬಹುದು. ಮಗುವನ್ನು ದತ್ತು ಪಡೆಯಬಹುದು. ಇಲ್ಲಾ IVF ಮೂಲಕ ಇಲ್ಲವೇ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದುಕೊಳ್ಳಬಹುದು. ಇದು ಅವಳ ಆಯ್ಕೆ. ಸಿಂಗಲ್ ಮದರ್ ಅನ್ನು ಭಾರತದ ಕಾನೂನೇ ರಕ್ಷಣೆ ಮಾಡುತ್ತೆ. ಮಹಿಳೆ ಮದುವೆಗೂ ಗರ್ಭಿಣಿಯಾದರೆ ಟೀಕೆ ಮಾಡುತ್ತಾರೆ. ಮದುವೆ ಆಗದ ಮಹಿಳೆ ಮಗುವನ್ನು ದತ್ತು ತೆಗೆದುಕೊಂಡರೂ ಟೀಕೆಗಳಾಗುತ್ತೆ. ಈ ಕಾರಣಕ್ಕೆ ಕೆಲವರು ಇಲಿಯಾನಾ ಬೆಂಬಲಕ್ಕೆ ಬಂದಿದ್ದಾರೆ.

ಕೆಲವರು ಕೆಟ್ಟದಾಗಿ ಟೀಕೆ ಮಾಡುತ್ತಿದ್ದರೆ, ಮತ್ತೆ ಕೆಲವರು ಮಗುವಿನ ತಂದೆಯ ಹೆಸರು ಹೇಳಿವುದು ಅಥವಾ ಬಿಡುವುದು, ಮದುವೆಗೂ ಮುನ್ನ ಮಗುವನ್ನು ಪಡೆಯುವುದು ಇಲಿಯಾನಾ ಆಯ್ಕೆ ಎನ್ನುತ್ತಾರೆ. ಇಂತಹ ಸಂದರ್ಭದಲ್ಲಿ ಕರಣ್ ಜೋಹರ್, ತುಷಾರ್ ಕಪೂರ್ ಅವರನ್ನು ಯಾಕೆ ಪ್ರಶ್ನೆ ಮಾಡುತ್ತಿಲ್ಲ ಎಂದು ಹೇಳುತ್ತಿದ್ದಾರೆ.

ಕರಣ್ ಜೋಹರ್‌ಗೆ ಯಾಕೆ ಪ್ರಶ್ನೆ ಮಾಡಿಲ್ಲ

ಇಲಿಯಾನಾ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದಾರೆ ಅನ್ನೋ ವಿಷಯ ಚರ್ಚೆಯಾಗುತ್ತಿರುವಾಗಲೇ, ಆಕೆಯ ಬೆಂಬಲಿಗರು ಕರಣ್ ಜೋಹರ್ ಹೆಸರನ್ನು ಎಳೆದು ತಂದಿದ್ದಾರೆ. ಅಸಲಿಗೆ ಇಲ್ಲಿ ಕರಣ್ ಜೋಹರ್ ಹೆಸರು ಯಾಕೆ ಬಂತು ಅಂದ್ರೆ, ಕೆಲವು ವರ್ಷಗಳ ಹಿಂದೆ ಕರಣ್ ಜೋಹರ್ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದಿದ್ದರು.

ಕರಣ್ ಜೋಹರ್ ಬಳಿಕ ಮತ್ತೊಬ್ಬ ಬಾಲಿವುಡ್ ನಟ ತುಷಾರ್ ಕಪೂರ್ ಕೂಡ ಬಾಡಿಗೆ ತಾಯ್ತನದ ಮೂಲಕವೇ ಮಗುವನ್ನು ಪಡೆದಿದ್ದರು. ಈ ಬಗ್ಗೆ ಯಾಕೆ ಪ್ರಶ್ನೆ ಮಾಡಿಲ್ಲ? ಇದೂ ತಪ್ಪಲ್ಲವೇ ಎಂದು ನೆಟ್ಟಿಗರು ಕಮೆಂಟ್ ಮಾಡಿ, ಇಲಿಯಾನಾ ಬೆಂಬಲಕ್ಕೆ ನಿಂತಿದ್ದಾರೆ.

More from Filmibeat

English summary
Ileana D'Cruz badly trolled after announcing her pregnancy: Supports dig Karan Johar and tusshar Kapoor parenthood, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X